kannada

ಆಶ್ರಯಾನ್ವೇಷಣೆ: ಒಂದು ಮುಂದೂಡಲ್ಪಟ್ಟ ಕನಸು

    ಸುಮಾ ಪ್ರಿಯದರ್ಶಿನಿ ಬಿ ಕೆ ದಲಿತರು ಹಾಗು ಅಸಮಾನತೆ ಎನ್ನುವುದು ತಲತಲಾಂತರಗಳಿಂದ ನಡೆದುಕೊಂಡೇ ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಅಸ್ಪೃಶ್ಯತೆಯಿನ್ನೂ ಹಾಗೆ ಉಳಿದುಕೊಂಡಿದೆ ಮತ್ತು ನಾನಾ ರೀತಿಗಳಲ್ಲಿ ಕಾಣಸಿಗುತ್ತದೆ. ಸಮಾಜದ ಎಲ್ಲಾ ವರ್ಗ, ವಿಷಯ ಮತ್ತು ವಸ್ತುಗಳು ಒಂದೆಡೆಯಾದರೆ ದಲಿತರಿಗೆ ಈ ಯಾವುದರಲ್ಲೂ ಸ್ಥಾನ ಮಾನಗಳಿಲ್ಲ…


ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ

  ಹರ್ಷಕುಮಾರ್ ಕುಗ್ವೆ ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಸರ್ಕಾರವು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಖಂಡಿತವಾಗಿಯೂ ಇದು ಗೌರವ ಸಲ್ಲಿಸುವ ಕೆಲಸ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹೇಗಾಗಿದೆಯೆಂದರೆ ಸರ್ಕಾರಗಳು…


ಮೋದಿಯ ನಾಡಲ್ಲಿ ಸಫಾಯಿ ಕರ್ಮಕಾಂಡಗಳ ಜಾಡು ಹಿಡಿದು….

  ಮಂಜುನಾಥ ನರಗುಂದ (Manjunath Naragund) ಭಿನಾ ಸುಮಾರು 55 ವರ್ಷದ ದಲಿತ ಸಮುದಾಯದ ಡೋಮ ಜಾತಿಗೆ ಸೇರಿದ ವಿಧವೆ, ಕಳೆದ 30 ವರ್ಷಗಳಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹತ್ತಿರವಿರುವ ಸುಂದರಪುರ್ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಭಿನಾಳಂತೆ ಈ ಪ್ರದೇಶದಲ್ಲಿ ಇದೆ ಜಾತಿಗೆ ಸೇರಿದ ಸುಮಾರು 200ಕ್ಕೂ…


ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನಕ್ಕೆ ಅಂಬೇಡ್ಕರ್ ಅವರ ಪ್ರವೇಶವಾಗದ ಕುರಿತು ಕಾಡುವ ಪ್ರಶ್ನೆಗಳು

   ಡಾ.ಎನ್. ಚಿನ್ನಸ್ವಾಮಿ ಸೋಸಲೆ (Chinnaswamy Sosale) ಮೈಸೂರು ಸಂಸ್ಥಾನದ ಇಂದಿನ ಕರ್ನಾಟಕ ಭಾಗಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳು ಪ್ರವೇಶವಾಗುವುದು 1970ರಿಂದೀಚೆಗೆ. ಏಕೆಂದರೆ ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಶಿಕ್ಷಣವಂತರು ಹಾಗೂ ಸಾಹಿತಿಗಳು ಅಂಬೇಡ್ಕರ್ ಅವರ ಜಾಗದಲ್ಲಿ ಗಾಂಧಿಯನ್ನು ಕಾಣುತ್ತಾರೆ. ಅಥವಾ ಗಾಂಧಿ…


ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು

  ಡಾ. ಅರುಣ್ ಜೋಳದಕೂಡ್ಲಿಗಿ (Dr Arun Joladkudligi) ಈಚೆಗೆ ನಾನು ಕೈಗೊಂಡ ಸಂಶೋಧನಾ ಕೃತಿ ‘ಗಂಟಿಚೋರ ಸಮುದಾಯ’ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಸಂಸ್ಥೆಯಿಂದ ಪ್ರಕಟವಾಗುತ್ತಿದೆ. ಈ ಸಂಶೋಧನೆಯ ಸಂಕ್ಷಿಪ್ತ ಫಲಿತಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುವೆ. ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ…


ಎಬಿವಿಪಿ ಭಯೋತ್ಪಾದನೆ: ಪ್ರಸ್ತಾವನೆ

  ಹಾರೋಹಳ್ಳಿರವೀಂದ್ರ (Harohalli Ravindra) ಉಗ್ರ ಹಿಂದುತ್ವವಾದಿ ವಿ.ಡಿ. ಸಾವರ್ಕರ್ “ಯಾರಿಗೆ ಭಾರತ ದೇಶ ಪಿತೃಭೂಮಿಯಷ್ಟೇ ಅಲ್ಲ, ಪುಣ್ಯ ಭೂಮಿಯು ಆಗಿದಿಯೊ ಆತನೇ ಹಿಂದೂ” ಎಂದು ಹೇಳುತ್ತಾರೆ. ಪ್ರಮುಖವಾಗಿ ಮುಸ್ಲಿಮರನ್ನು, ಕ್ರೈಸ್ತರನ್ನು, ಪಾರಸಿ ಹಾಗೂ ಯಹೂದ್ಯರನ್ನು ಹೊರಗಿಡುವುದು ಮತ್ತು ಬೌದ್ಧ, ಜೈನ, ಸಿಖ್ಖರನ್ನು ಒಳತೆಗೆದುಕೊಳ್ಳುವ ಉದ್ದೇಶಗಳು ಇದ್ದವು ಎಂದು…


ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ

  ಸವಿತಾ ಹೊಸಮನಿ (Savita Hosamani)   ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಷ್ಟೇ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮನುಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅರ್ಹಳಲ್ಲ. ಮಹಿಳೆಯರ ಸ್ವಾತಂತ್ರ್ಯ ಹರಣದ ಪ್ರಮುಖ ಭಾಗ ವಿದ್ಯೆಯೇ ಆಗಿತ್ತೆನ್ನಬಹುದು. ಯಾಕೆಂದರೆ ಮಹಿಳೆ ಯಾವತ್ತಿಗೂ ಅಡಿಯಾಳಾಗಿಯೇ ಇರಬೇಕೆಂಬುದು ಮನುವಿನ ಮಸಲತ್ತಾಗಿತ್ತು. ಬಾಲ್ಯದಲ್ಲಿ ತಂದೆಯ,…


ಅರಸು ಎಂಬ ವಿದ್ಯಮಾನ

  ಡಾ. ಸಬಿತಾ ಬನ್ನಾಡಿ (Sabitha Bannadi) ಅದೊಂದು ಬಡವರಿಗೆ ಕೈಗಾಡಿ ವಿತರಿಸುವ ಸಮಾರಂಭ. ರಾಜ್ಯದ ಮುಖ್ಯಮಂತ್ರಿಯೇ ಖುದ್ದಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದಾರೆ. ಬಡವರಿಗೆ ಕೈಗಾಡಿಗಳನ್ನು ವಿತರಿಸಿದ ಅವರು ಆ ಕೈಗಾಡಿಗಳನ್ನು ಬಳಸಿಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಹೇಳುತ್ತಾರೆ. ಹಾಗೆ ಅವರು ಹೇಳುವ ಮಾತುಗಳು ಮಾಮೂಲೀ ರಾಜಕಾರಣಿಯ…


ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು

  Dr ಅರುಣ್ಜೋಳದಕೂಡ್ಲಿಗಿ (Arun Joladkudligi) ಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ…


ದೇವರಾಜ ಅರಸು ಸಮಾಜ ಪರಿವರ್ತಕ ಮುಖ್ಯಮಂತ್ರಿ

  ಶಂಕರ್ ಎನ್ ಎಸ್ ದೇವರಾಜ ಅರಸು ಮೊದಲ ಬಾರಿಗೆ 1972 ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು. 77ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ನಂತರ ಮತ್ತೆ 78ರಲ್ಲಿ ಎರಡನೇ ಬಾರಿ ಅದೇ ಹುದ್ದೆಗೇರಿದರು. 1980ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ಅವರು ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು. ಅಂತೂ…