Round Table India
You Are Reading
ತಳಸ್ತರ ವೇದಿಕೆಯಿಂದ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಕ್ಷಮಾಪಣೆ ಮತ್ತು ಅಮಾನತು ಬೇಡಿಕೆ
0
Assertion

ತಳಸ್ತರ ವೇದಿಕೆಯಿಂದ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಕ್ಷಮಾಪಣೆ ಮತ್ತು ಅಮಾನತು ಬೇಡಿಕೆ

petition against kiran bedi

 

ತಳಸ್ತರ ವೇದಿಕೆ, ಕರ್ನಾಟಕ

ಅಲೆಮಾರಿ ಬುಡಕಟ್ಟು ಮಹಾಸಭಾ

ದಿನಾಂಕ: 09-08-2016 ಬೆಂಗಳೂರು

ಪತ್ರಿಕಾ ಹೇಳಿಕೆ

ಮಾನ್ಯರೇ,

ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ಬೇಡಿಯವರು ಆಗಸ್ಟ್ 2ನೇ ತಾರೀಕಿನಂದು ಡಿನೋಟಿಫೈಡ್ ಬುಡಕಟ್ಟುಗಳನ್ನು(ವಿಮುಕ್ತ ಜಾತಿಗಳು) ಅಪಮಾನಿಸಿ ನಿಂದಿಸುವ ಒಂದು ಟ್ವೀಟ್ ಮಾಡಿದ್ದಾರೆ.ಅದರಲ್ಲಿ ಅವರು ಹೀಗೆ ಬರೆದಿದ್ದಾರೆ. ‘ಮಾಜಿ ಕ್ರಿಮಿನಲ್ ಟ್ರೈಬ್‍ಗಳು ಅತ್ಯಂತಕ್ರೂರಿಗಳೆಂದೇ ಹೆಸರಾಗಿದ್ದಾರೆ. ಅಪರಾಧಗಳನ್ನು ನಡೆಸುವುದರಲ್ಲಿ ಅವರುನಿಷ್ಣಾತರಾಗಿದ್ದಾರೆ. ಅವರನ್ನು ಹಿಡಿಯುವುದಾಗಲೀ, ಶಿಕ್ಷೆ ನೀಡುವುದಾಗಲೀಆಗುತ್ತಿಲ್ಲ’.

petition against kiran bedi

ಕಿರಣ್ ಬೇಡಿಯವರ ಈ ಮಾತುಗಳು ಈ ದೇಶದಲ್ಲಿ ‘ಕ್ರಿಮಿನಲ್ಬುಡಕಟ್ಟುಗಳೆಂದು ಬ್ರಿಟಿಷರಿಂದ ಹಣೆಪಟ್ಟಿ ಹಚ್ಚಿಸಿಕೊಂಡು, ಬ್ರಿಟಿಷ್ ಮತ್ತುಭಾರತದ ಸರ್ಕಾರಗಳಿಂದ ಅತ್ಯಂತ ಅಮಾನವೀಯವಾಗಿನಡೆಸಿಕೊಳ್ಳಲಾಗುತ್ತಿರುವ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳಮನಸ್ಸಿನಲ್ಲಿ ಅತ್ಯಂತ ನೋವನ್ನುಂಟುಮಾಡುವ ಮಾತುಗಳಾಗಿವೆ. ಕನಿಷ್ಠನಾಗರೀಕ ಪ್ರಜ್ಞೆ ಇರುವ ಯಾರೂ ಇಂತಹ ಮಾತುಗಳನ್ನು ಉಚ್ಚರಿಸಲಾರರು.ಭಾರತದ ಸಂವಿಧಾನವು ಜಾತಿ, ಧರ್ಮ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯಮಾಡಕೂಡದೆಂದು ಹೇಳುತ್ತದೆ. ಆದರೆ ಇಲ್ಲಿ ಕಿರಣ್ ಬೇಡಿಯವರುಬುಡಕಟ್ಟುಗಳನ್ನು ಕ್ರಿಮಿನಲ್‍ಗಳು ಎಂದು ಹೇಳುವ ಮೂಲಕ ಸಂವಿಧಾನದಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಿರಣ್ ಬೇಡಿಯದು ಕೇವಲ ಕ್ಷುಲ್ಲಕರಾಜಕೀಯ ಹೇಳಿಕೆಯಲ್ಲ. ಈ ಹೇಳಿಕೆಯ ಹಿಂದೆ ಜಾತಿವಾದಿ ಮತ್ತು ಅಖಂಡಜನಾಂಗ ದ್ವೇಷಿ ನಿಲುವುಗಳಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಮಾಜಿಪೊಲೀಸ್ ಅಧಿಕಾರಿಯೂ, ಹಾಲಿ ರಾಜಕಾರಣಿಯೂ ಆಗಿರುವ ಕಿರಣ್ ಬೇಡಿಅವರ ಈ ಜಾತಿ ನಿಂದನೆಯ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.ಕಿರಣ್ ಬೇಡಿ ಅವರು ಈ ಕೂಡಲೇ ಈ ಸಮುದಾಯಗಳ ಕ್ಷಮೆ ಯಾಚಿಸಿ ತಮ್ಮಮಾತುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ. ಮಾತ್ರವಲ್ಲದೇ ಒಬ್ಬ ಸಂವಿಧಾನ ಬದ್ಧ ಅಧಿಕಾರ ವಹಿಸಿಕೊಂಡ ಸರ್ಕಾರಿ ನೌಕರರಾಗಿ ಅವರಾಡಿರುವ ಮಾತುಗಳು SCST ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1) (r) ಮತ್ತು ಸೆ.4(2)(g) ಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದಕ್ಕೆ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಬಹುದಾಗಿದೆ.

ಇತ್ತೀಚೆಗೆ ಉತ್ತರಪ್ರದೇಶದ ಬುಲಂದ್ ಶಹರ್‍ನಲ್ಲಿ ಅತ್ಯಾಚಾರ ಪ್ರಕರಣವೊಂದರನೆಪದಲ್ಲಿ ಹೀಗೆ ಡಿನೋಟಿಫೈಡ್ ಸಮದಾಯಗಳ ಬಗೆಗಿನ ಪುರ್ವಾಗ್ರಹಹರಿಬಿಡಲಾಗಿದೆ. ಇಲ್ಲಿ ಒಂದು ಪ್ರಶ್ನೆಯನ್ನು ಕೇಳಲಿಚ್ಛಿಸುತ್ತೇವೆ. ಇದೇಸಮಯದಲ್ಲಿ ಇದೇ ಉತ್ತರಪ್ರದೇಶದ ಮೈಂಪುರಿ ಜಿಲ್ಲೆಯಲ್ಲಿ ಬರೀ 15 ರೂಪಾಯಿವಿಷಯದಲ್ಲಿ ಅಶೋಕ್ ಮಿಶ್ರಾ ಎಂಬಾತ ವೃದ್ಧ ದಲಿತ ದಂಪತಿಳಿಬ್ಬರನ್ನು ಕೊಲೆಮಾಡಿದ. ವ್ಯಕ್ತಿಯೊಬ್ಬ ಕೊಲೆ ಮಾಡಿದ. ಹಾಗಂತ ‘ಮಿಶ್ರಾ’ ಎಂದುಹೆಸರಿಟ್ಟುಕೊಳ್ಳುವ ಸಮುದಾಯದವರೆಲ್ಲರೂ ಕೊಲೆಗಡುರೆಂದುಹೇಳಲಾಯಿತೇ? ಹಾಗೆ ಹೇಳುವುದು ಅವಿವೇಕವೆನಿಸುವುದಿಲ್ಲವೇ?

ಕ್ರಿಮಿನಲ್ ಬುಡಕಟ್ಟುಗಳೆಂದು’ ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿದ್ದುವಸಾಹತು ಆಡಳಿತ. ವಸಾಹತು ಆಡಳಿತ ಈ ಕುರಿತು 1871ರಲ್ಲಿ ಕ್ರಿಮಿನಲ್ಬುಡಕಟ್ಟು ಕಾಯ್ದೆ ರಚಿಸಿ ಜಾರಿಗೆ ತಂದಿತು. ವಸಾಹತು ಆಡಳಿತದ ಸಂದರ್ಭದಲ್ಲಿರೂಪುಗೊಂಡ ಒಂದು ಅಮಾನವೀಯ ಮತ್ತು ಶುದ್ಧ ಸಾಮ್ರಾಜ್ಯಶಾಹಿಮನೋಭಾವದ ಕಾಯ್ದೆ ಇದು. ಈ ಕಾಯ್ದೆಯು ಮುಖ್ಯವಾಗಿ ಭಾರತದವ್ಯವಸಾಯಿ ಸಂಬಂಧಗಳನ್ನು ಬೆಸೆಯುತ್ತಿದ್ದ, ಕುಶಲಕರ್ಮಿ, ಅಲೆಮಾರಿ ಮತ್ತುಆದಿವಾಸಿ ಸಮುದಾಯಗಳನ್ನು ನಿಯಂತ್ರಿಸುವ ಸಲುವಾಗಿ ರೂಪುಗೊಂಡಿತು.ವಸಾಹತು ಆಡಳಿತದ ವಿರುದ್ಧ ತಿರುಗಿ ಬಿದ್ದ ಆದಿವಾಸಿಗಳನ್ನು ಮತ್ತು ಸೇವಕವರ್ಗಕ್ಕೆ ಸೇರಿದ ಸಮುದಾಯಗಳನ್ನು ನಿಯಂತ್ರಿಸಲೆಂದೇ ಈ ಕ್ರಿಮಿನಲ್ ಟ್ರೈಬ್ಸ್ಆಕ್ಟ್‍ನ್ನು ರೂಪಿಸಲಾಗಿತ್ತು ಮತ್ತು ಈ ಕಾಯ್ದೆಯನ್ನು ಮುಂದಿಟ್ಟುಕೊಂಡುವಸಾಹತು ಸೈನ್ಯವು ಈ ಸಮುದಾಯಗಳನ್ನು ಹಿಂಸಾತ್ಮಕವಾಗಿಯೂ ಹತ್ತಿಕ್ಕಿತು.

ವಸಾಹತು ಆಡಳಿತದ ಸಂದರ್ಭದಲ್ಲಿ ಈ ಸಮುದಾಯಗಳಿಗೆ ಕನಿಷ್ಠಮಟ್ಟದನಾಗರಿಕ ಹಕ್ಕುಗಳನ್ನೂ ನಿರಾಕರಿಸಲಾಗಿತ್ತು. ದುರಂತವೆಂದರೆ ಈ ಪಟ್ಟಿಯಲ್ಲಿದ್ದಸಮುದಾಯಗಳನ್ನು ಕಂಪನಿ ಸರಕಾರವು ಜನ್ಮತಃ ಅಪರಾದಿsಗಳು (Born Criminals) ಎಂದು ಪರಿಗಣಿಸಿಬಿಟ್ಟಿತ್ತು. ದುರಂತದ ಸಂಗತಿಯೆಂದರೆ, ಭಾರತಕ್ಕೆಅಧಿಕಾರ ಹಸ್ತಾಂತರವಾದ ನಂತರ 1952ರಲ್ಲಿ ಬ್ರಿಟಿಷರ ಕ್ರಿಮಿನಲ್ ಟ್ರೈಬ್ಸ್ಕಾಯ್ದೆ’ ಭಾರತದಲ್ಲಿ ರದ್ದಾದರೂ ಸಹ ಪೊಲೀಸ್ ತರಬೇತಿಯ ಪಠ್ಯಕ್ರಮದಿಂದ’ಅಪರಾಧಿ ಬುಡಕಟ್ಟು ಕಾಯ್ದೆ’ಯ ಪಾಠಗಳು ತೊಲಗಲಿಲ್ಲ. ಅವರನ್ನು ಸ್ವತಂತ್ರಭಾರತದ ಸರಕಾರವು ‘ಪಾರಂಪರಿಕ ಅಪರಾಧಿ ಕಾಯ್ದೆ’ಯ (Habitual Offender Act ಅಡಿಯಲ್ಲಿ ಗುರುತಿಸಬೇಕೆಂದು ತಮ್ಮ ಪೊಲೀಸರಿಗೆಬೋಧಿಸಲಾಯಿತು. ಈ ಕಾಯ್ದೆ ‘ವ್ಯಕ್ತಿ ಅಥವಾ ಸಮುದಾಯವೊಂದನ್ನುಅಪರಾಧಿ ಎಂದು ಗುರುತಿಸಲು ರೂಪುಗೊಂಡಂತೆ ಕಂಡರೂ, ವಸಾಹತೋತ್ತರಕಾಲಘಟ್ಟದ ನಂತರ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ಮೇಲೂ 127ಡಿನೋಟಿಫೈಡ್ ಸಮುದಾಯಗಳ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡಿತು. ಈಕಾಯ್ದೆಯು ಅಪರಾಧವನ್ನು ಒಂದು ಕಾಯಿಲೆಯೆಂದೂ, ಅಪರಾಧಿಯನ್ನುರೋಗಿಯೆಂದೂ ಪರಿಗಣಿಸಿದೆ.

ಇಲ್ಲಿ ನಮಗೆ ನಿಚ್ಚಳವಾಗುವ ವಿಷಯವೇನೆಂದರೆ ನಾವೀಗ 70ನೇ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮಾಚರಣೆಯ ಹೊಸ್ತಿಲಿನಲ್ಲಿ ನಿಂತಿದ್ದರೂ ಸಹ ಬ್ರಿಟಿಷರುರೂಪಿಸಿದ್ದ ಕರಾಳ ಕಾನೂನುಗಳ ಪ್ರಭಾವದಿಂದ ನಮ್ಮ ಸರ್ಕಾರ, ಪೊಲೀಸ್ವ್ಯವಸ್ಥೆ ಹೊರಕ್ಕೆ ಬಂದಿಲ್ಲ. ಯಾವ ಹಿಂದುಳಿದ, ಆದಿವಾಸಿ, ಅಲೆಮಾರಿಸಮುದಾಯಗಳನ್ನು ಮುಖ್ಯವಾಹಿನಿಯೊಂದಿಗೆ ಕರೆದುಕೊಂಡು ಹೋಗುವಮಾತನಾಡುತ್ತಾ, ಅಭಿವೃದ್ಧಿಯಲ್ಲಿ ಒಳಗೊಳ್ಳುವ ಮಾತನಾಡುತ್ತಿದ್ದೇವೆಯೋ ಅದೇಸಂದರ್ಭದಲ್ಲಿ ಒಬ್ಬ ಹಿರಿಯ ಮಾಜಿ ಪೊಲೀಸ್ ಅಧಿಕಾರಿಯಿಂದ ಇಂತಹಮಾತುಗಳು ಬರುತ್ತಿರುವುದು ವಿಪರ್ಯಾಸ.

ಅದು ಕಿರಣ್ ಬೇಡಿಯವರೇ ಇರಲಿ, ಉತ್ತರ ಪ್ರದೇಶದ ಪೊಲೀಸರೇ ಇರಲಿಯಾರೇ ಇರಲಿ; ಯಾರೋ ಮಾಡಿದ ಅಪರಾಧಕ್ಕೆ ಚಾರಿತ್ರಿಕವಾಗಿ ನೊಂದು, ಬೆಂದುಈ ನಾಗರಿಕ ಜಗತ್ತಿನೊಂದಿಗೆ ಹೊಂದಿಕೊಂಡು ಹೋಗಲು ಹೆಣಗುತ್ತಿರುವತಳಸಮುದಾಯಗಳನ್ನು ‘ಕ್ರಿಮಿನಲ್ ಬುಡಕಟ್ಟುಗಳು’, ‘ಅಪರಾಧಿಗಳು’, ಎಂದೆಲ್ಲಾಅಪಮಾನಿಸುತ್ತಿರುವುದನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತಿದ್ದೇವೆ.

ನಮ್ಮ ಬೇಡಿಕೆಗಳು

1. ಕಿರಣ್ ಬೇಡಿಯವರು ಈ ಕೂಡಲೇ ಇಡೀ ದೇಶದ ಡಿನೋಟಿಪೈಡ್ ಸಮುದಾಯಗಳಿಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಯಾಚಿಸಬೇಕಲ್ಲದೇ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕು. ತಮ್ಮ ಟ್ವಿಟರ್ ಖಾತೆಯಲ್ಲಿರುವ ಈ ಟ್ವೀಟನ್ನು ಕೂಡಲೇ ಡಿಲೀಟ್ ಮಾಡಬೇಕು

2. ಮಾನ್ಯ ರಾಷ್ಟ್ರಪತಿಗಳು ಕಿರಣ್ ಬೇಡಿಯವರು ಸಂವಿಧಾನ ಮತ್ತು ಕಾನೂನು ಉಲ್ಲಂಗನೆ ಮಾಡಿರುವ ಕಿರಣ್ ಬೇಡಿಯವರನ್ನು ಪುದುಚೇರಿಯ ಲೆ.ಗವರ್ನರ್ ಹುದ್ದೆಯಿಂದ ಅಮಾನತುಗೊಳಿಸಬೇಕು.

ಉಪಸ್ಥಿತರು

ಡಾ. ಸಿ ಎಸ್ ದ್ವಾರಕಾನಾಥ್, ಅಧ್ಯಕ್ಷರು ಅಲೆಮಾರಿ ಬುಡಕಟ್ಟು ಮಹಾಸಭಾ

ಡಾ. ಟಿ ಎನ್ ಚಂದ್ರಕಾಂತ್, ವಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರು, ಡಿನೋಟಿಫೈಡ್ ಸಮುದಾಯದ ಪ್ರತಿನಿಧಿ

ಬಿ.ಗೋಪಾಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಹುಜನ್ ಸೋಷಲ್ ಫೌಂಡೇಶನ್

ಹರ್ಷಕುಮಾರ್ ಕುಗ್ವೆ, ತಳಸ್ತರ ವೇದಿಕೆ ಸದಸ್ಯರು

ಡಾ. ಕೃಷ್ಣರಾಜ್, ಪ್ರಾಧ್ಯಾಪಕರು, ಐಸೆಕ್, ಬೆಂಗಳೂರು

ಕಾವೇರಿ ಕೊಡಗು, ತಳಸ್ತರ ವೇದಿಕೆ ಸದಸ್ಯರು

ಸತ್ಯಾ ಎಸ್, ತಳಸ್ತರ ವೇದಿಕೆ ಸದಸ್ಯರು

ಲೋಹಿತಾಕ್ಷ ಸುಡುಗಾಡು ಸಿದ್ದ ಸಮುದಾಯದ ಪ್ರತಿನಿಧಿ

~~~