ಡೆರಿಕ್ ಫ಼್ರಾಂಸಿಸ್ (ಪೆರಿಯಾರ್ ಭೀಮ್ ವೆಮುಳಾ)
ಇನ್ನೊಬ್ಬ ದಲಿತ ವಿದ್ವಾಂಸನ ಕ್ರೂರ ಆತ್ಮಹತ್ಯೆ ಜವಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಸೇಲಮ್ ನಿಂದ ದಹಲಿಯ ವರೆಗೆ ತನ್ನ ಸ್ವಂತ ಪ್ರಯತ್ನದಿಂದ ಬಂದ 27 ವಯಸ್ಸಿನ ಮುತ್ತುಕೃಷ್ಣನ್ ಇಂತಹ ಒಂದು ಸ್ಥಿತಿಗೆ ತಳ್ಳಲ್ಪಟ್ಟದ್ದು ನಮಗೆ, ಈ ಭಾರತ ಎನ್ನುವ ಸಾಮ್ರಾಜ್ಯಕ್ಕೆ, ಅವಮಾನಕರ ವಿಶಯ. ಅವನ ಆತ್ಮಹತ್ಯೆಗೆ ಕಾರಣವೇನು?
ಮುತ್ತುಕೃಷ್ಣನ್, ತನ್ನ ಸಾವಿನ ಎರಡು ದಿನಗಳ ಮುಂಚೆ Facebookಅಲ್ಲಿ ತನ್ನ ವಿಶ್ವವಿದ್ಯಾಲದಲ್ಲಿರುವ ಅಸಮಾನತೆಯ ಬಗ್ಗೆ ಒಂದು ಸೂಚನೆಯನ್ನು ಬರೆದ್ದಿದ್ದರು. ಆ ಸೂಚನೆಯಲ್ಲಿ ಅವರು JNUದಲ್ಲಿ ಸಮಾನತೆಯೆ ಇಲ್ಲ, ಅದರ ಪ್ರವೇಶ ಪ್ರಕ್ರಿಯೆ ಹಾಗು ವಾಚಾ ಅಸಮಾನವಾಗಿದೆ; ಅಂಚಿನಲ್ಲಿರುವವರಿಗೆ ಸಮಾನತೆ ಇಲ್ಲವಂದು ಬರೆದಿದ್ದರು.
ಮುತ್ತುಕೃಷ್ಣನ್ ಅವರ ಸಣ್ಣ ಸೂಚನೆಯನ್ನು ನೋಡುವಾಗ, ನನಗೆ ರೋಹಿತ್ ವೆಮುಳಾ ಬರೆದ ಆತ್ಮಹತ್ಯೆ ಟಿಪ್ಪಣಿ ಜ್ಞಾಪಕಕ್ಕೆ ಬರುತ್ತಿದೆ. ಅದರಲ್ಲಿ ರೋಹಿತ್ “ನನ್ನ ಜನ್ಮ ನನ್ನ ಮಾರಣಾಂತಿಕ ಅಪಘಾತ ಆಗಿದೆ” ಎಂದು ಬೇಸರಿಸಿದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ರೋಹಿತ್, ಅಮೇರಿಕಾದ ಪ್ರಸಿದ್ಧ ವಿಜ್ಞಾನಿ ಕಾರ್ಲ್ ಸೇಗನ್ ಅವರ ಹಾಗೆ ನಕ್ಷತ್ರಗಳು ನೋಡಲು ಮತ್ತು ಬ್ರಹ್ಮಾಂಡವನ್ನು ಪರಿಶೋಧಿಸಲು ಬಯಸಿದರು. ಆ ಆಸೆಯನ್ನು, ಮುತ್ತುಕೃಷ್ಣನ್ ಅವರ ಆಸೆಯನ್ನು ಈ ಅಸಮಾನ ವ್ಯವಸ್ಥೆಯು ಕೊಲೆಮಾಡಿದೆ.
ಸಮಾನತೆ ಕಾಲ್ಪನಿಕ ತತ್ವವಾಗಿದ್ದರು, ಅದನ್ನು ಒಂದು ಆಡಳಿತ ತತ್ವವಾಗಿ ಒಪ್ಪಿಕೊಳ್ಳಬೇಕೆಂದು, ಬಾಬಾಸಾಹೆಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಸಮಾನತೆ ಇಲ್ಲದ ಜೀವನ ಘನತೆಯಿಲ್ಲದ ಜೀವನ. ಆ ಜೀವನ ನಡೆಯಸುವುದು ಕಷ್ಟ. ಇಂತಹ ಜೀವನವನ್ನು ಸಾವಿರಾರು ವರ್ಷಗಳಿಂದ ಬಾಳುತ್ತಿರುವ ದಲಿತರಿಗೆ ಸಮಾನತೆ ದೊರಕಿಸುವುದು ರಾಷ್ಟ್ರಿಯ ಕರ್ತವ್ಯ. ಆದರೆ ಈ ರಾಷ್ಟ್ರ ದಲಿತರನ್ನು ವಿಫಲಗೊಳಿಸಿದೆ. ಸಾವಿರಾರು ವರ್ಷದ ಅಸಮಾನತೆ ಇಂದೂ ನಡೆಯುತ್ತಿದೆ. ಶಿಕ್ಷೆ ಮತ್ತು ಅದರ ಜೊತೆ ಬರುವ ಸೌಲಭ್ಯಗಳನ್ನು ತಲೆಮಾರುಗಳಿಂದ ದಲಿತರಿಗೆ ಸಿಗಲಿಲ್ಲ. ಈ ಸ್ಥಿತಿಯಲ್ಲಿರುವ ದಲಿತರು, ಕಾನೂನಿನ ಪ್ರಕಾರ ಮೀಸಲಾತಿ ವ್ಯವಸ್ಥೆಯಲ್ಲಿ ಉದ್ಯೋಗಗಳನ್ನು ಅಥವಾ ಶಿಕ್ಷೆಯನ್ನು ಪಡೆಯಲು ಪ್ರಯತ್ನಿಸಿದರೆ ಅವರನ್ನು ಸವರ್ಣರು ಛೀಮಾರಿ ಹಾಕುತ್ತಾರೆ. ದಲಿತರು ಇದೆಲ್ಲವನ್ನು ಮೀರಿ ಬಾಳುಬೇಕಾಗಿರುವವರು. ಇಂತಹ ಒಂದು ಸಮಾಜ, ಈ ಬ್ರಾಹ್ಮಣ್ಯ ಸಮಾಜ. ಬ್ರಾಹ್ಮಣ್ಯರ ಅಸಮಾನ ಸಮಾಜ. ಈ ಸಮಾಜದಲ್ಲಿ ಬದುಕಲು ಮುತ್ತುಕೃಷ್ಣನ್ ಅಂತಹ ದಲಿತರಿಗೆ ಬಹಳ ಕಷ್ಟ.
ಅಸಮಾನತೆ ನಾಶವಾಗಲು, ಜಾತಿ ನಾಶವಾಗಬೇಕು. ಅದಿಲ್ಲದೆ ಬೇರೆ ದಾರಿಯೇನು ಇಲ್ಲ. ಸವರ್ಣ ಸಮಾಜ ದಲಿತರ ಮೇಲೆ ಉನ್ನತ ಗುಣಮಟ್ಟಗಳನ್ನು ಹಾಕಿದೆ. ದಲಿತರು ಸವರ್ಣಾರ ಕೆಳಗೆಯೇ ಇರಬೇಕೆನ್ನುವುದು ಒಂದು ಸವರ್ಣ ಗುಂಪಿನ ಅಭಿಪ್ರಾಯ, ಅವರು ದಲಿತರಿಗೆ ಒದಗಿಸಿರುವ ಮೀಸಲಾತಿಯಂತ ಹಿತಗಳನ್ನು ಎದುರಿಸುವವರು. ಅವರ ಮನೋಭಾವ ಸ್ಪಷ್ಟವಾಗಿದೆ. ಅದೇ ರೀತಿ, ಮತ್ತೊಂದು ಸವರ್ಣ ಗುಂಪಿದೆ, ಈ ಗುಂಪು ದಲಿತರ ಪರ ಹೋರಾಡುವ ಗುಂಪಾಗಿದ್ದರು, ಮೀಸಲಾತಿಯೇನೋ ಅವರು ಕೊಟ್ಟ ಭಿಕ್ಷೆಯಂತೆ ದಲಿತರು ಎಷ್ಟೇ ಶಿಕ್ಷೆ ಪಡೆದರು, ಎಷ್ಟೇ ಮುಂದೆ ಬಂದರು, ಆ ಸವರ್ಣರಂತೆ ಕಾರ್ಯಕರ್ತರಾಗಿ ಮಾತ್ರ ಇರಬೇಕು ಎನ್ನುತ್ತಾರೆ. ಅದನ್ನು ಬಿಟ್ಟರೆ ದಲಿತರಿಗೆ ಬೇರೇನು ಕೆಲಸವಿಲ್ಲದ ಹಾಗೆ ಮಾತನಾಡುತ್ತಾರೆ. ದಲಿತರೇನು ಸವರ್ಣರಂತೆ ವಕೀಲರು, ವೈದ್ಯರು, ಶಿಕ್ಷಕರು, ಅಭಿಯಂತ್ರರು ಅಥವಾ ವಿಜ್ಞಾನಿಗಳಾಗಿ ಆಗಬಾರದೇನು? ಮೀಸಲಾತಿಯಿಂದ ಮುಂಬಂದ ಕಾರಣ ಅವರು ಸವರ್ಣರಿಗಿಂತ ಕಡಿಮೆಯೇನು? ಇದು ಅಸಮಾನತೆಯಿಲ್ಲವೇನು?
ಈ ಸವರ್ಣ ಸಮಾಜದಲ್ಲಿ ದಲಿತರು ಸಮೀಕರಿಸಲು ಸವರ್ಣರು ಹಾಕಿರುವ ನಿಯಮಗಳು ಹೆಚ್ಚು. ದಲಿತರ ಸಂಸ್ಕೃತಿ, ತಿನಿಸು, ಉಡುಗೆಯೆಲ್ಲವೂ ಸವರ್ಣರ ಪರೀಕ್ಷೆಗೆ ಒಳಪಟ್ಟಿವೆ. ಬೀಫ್ ತಿನ್ನುವ ದಲಿತ ಒಳ್ಳೆಯ ನಾಗರೀಕರಿಲ್ಲ, ಅಂಗ್ಲ ಭಾಷೆ ಗೊತ್ತಿಲ್ಲದಿರುವ ದಲಿತರು ಬುದ್ಧಿವಂತರಲ್ಲ, ಮೀಸಲಾತಿಯಿಂದ ಬಂದ ದಲಿತರು ಮೈಗಳ್ಳನಾದವರು ಎಂದು ಈ ಸವರ್ಣ ಸಮಾಜ ಪಡಿಯಚ್ಚು ಹಾಕಿದೆ. ಇದು ಕೂಡ ಅಸಮಾನತೆಯ ಒಂದು ಮುಖ.
ಮುತ್ತುಕೃಷ್ಣನ್ ಅವರ ಸಾವು ಈ ಜಾತಿ ತಾರತಮ್ಯದಿಂದ ಹುಟ್ಟಿದ ಅಸಮಾನದ ಫಲ. ರೋಹಿತ್ ಬರೆದಂತೆ, ಮನುಷ್ನ್ಯನ ಮೌಲ್ಯವನ್ನು ತಕ್ಷಣದ ಗುರುತಿಗೆ ಮತ್ತು ಹತ್ತಿರದ ಸಾಧ್ಯತೆಗೆ ಕಡಿಮೆಗೊಳಿಸಿದೆ ಈ ಅಸಮಾನ ಸಮಾಜ. ಈ ಸಮಾಜ ಮುರಿದು, ಬಾಬಾಸಾಹೇಬರು ಕಲ್ಪಿಸಿದ ಸ್ವಾತಂತ್ರ್ಯ, ಸಮಾನತೆ ಹಾಗು ಭ್ರಾತೃತ್ವ ಇರುವ ಸಮಾಜ ಬಂದರೆ ಮಾತ್ರ ಈ ಸಾವುಗಳಿಗೆ ತಡೆಗತ್ತಬಹುದು.
~~~
Periyar Bhim Vemula is the pseudonym of a journalist based out of Bengaluru, who was a student of Communication at St Joseph’s College in the city. Periyar Bhim Vemula is passionate about propagating Dr Ambedkar’s dream of a society based on the ideals of liberty, equality and fraternity.