Redant I want to examine the discourses that have emerged in the wake of Karnataka state government’s decision to establish a Sanskrit university on a 100-acre plot in Magadi close to Bengaluru at a cost of Rs. 320 crores.[i] While the decision to set up this campus was taken by BJP government headed by …
ಆಶ್ರಯಾನ್ವೇಷಣೆ: ಒಂದು ಮುಂದೂಡಲ್ಪಟ್ಟ ಕನಸು
ಸುಮಾ ಪ್ರಿಯದರ್ಶಿನಿ ಬಿ ಕೆ ದಲಿತರು ಹಾಗು ಅಸಮಾನತೆ ಎನ್ನುವುದು ತಲತಲಾಂತರಗಳಿಂದ ನಡೆದುಕೊಂಡೇ ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಅಸ್ಪೃಶ್ಯತೆಯಿನ್ನೂ ಹಾಗೆ ಉಳಿದುಕೊಂಡಿದೆ ಮತ್ತು ನಾನಾ ರೀತಿಗಳಲ್ಲಿ ಕಾಣಸಿಗುತ್ತದೆ. ಸಮಾಜದ ಎಲ್ಲಾ ವರ್ಗ, ವಿಷಯ ಮತ್ತು ವಸ್ತುಗಳು ಒಂದೆಡೆಯಾದರೆ ದಲಿತರಿಗೆ ಈ ಯಾವುದರಲ್ಲೂ ಸ್ಥಾನ ಮಾನಗಳಿಲ್ಲ ಎಂಬುದು ಪದೇ ಪದೇ ಜಗತ್ತಿಗೆ ತಿಳಿಯುತ್ತಲಿದೆ. ಯಾವುದೇ ಕ್ಷೇತ್ರದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅಸ್ಪೃಶ್ಯತೆ ಎಂಬುದು ಬೂದಿಮುಚ್ಚಿದ ಕೆಂಡದಂತಿದೆ. ತುಮಕೂರು ವಿಶ್ವವಿದ್ಯಾನಿಲಯದ Dr. ಅಂಬೇಡ್ಕರ್ ಅಧ್ಯಯನ ವಿಭಾಗದ ಅಡಿಯಲ್ಲಿ …
ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ಸೋಶಿಯಲ್ ಫಿಲಾಸಫಿ
ಹರ್ಷಕುಮಾರ್ ಕುಗ್ ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಸರ್ಕಾರವು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಖಂಡಿತವಾಗಿಯೂ ಇದು ಗೌರವ ಸಲ್ಲಿಸುವ ಕೆಲಸ. ಆದರೆ ದುರದೃಷ್ಟವಶಾತ್ ಪರಿಸ್ಥಿತಿ ಹೇಗಾಗಿದೆಯೆಂದರೆ ಸರ್ಕಾರಗಳು ಜಯಂತಿಗಳನ್ನು ಆಚರಿಸುವುದು ಎಂದರೆ ಆಯಾ ಮಹಾನ್ ವ್ಯಕ್ತಿಗಳು ಹುಟ್ಟಿದ ಜಾತಿಗಳನ್ನು ತುಷ್ಟೀಕರಣ ಮಾಡಲು ಮಾತ್ರ ಎಂಬಂತಾಗಿದೆ. ಬಸವ ಜಯಂತಿ ಲಿಂಗಾಯತರಿಗೆ, ವಾಲ್ಮೀಕಿ ಜಯಂತಿ ವಾಲ್ಮೀಕಿ ನಾಯಕರಿಗೆ, ಕನಕ …
ಮೋದಿಯ ನಾಡಲ್ಲಿ ಸಫಾಯಿ ಕರ್ಮಕಾಂಡಗಳ ಜಾಡು ಹಿಡಿದು….
ಮಂಜುನಾಥ ನರಗುಂದ (Manjunath Naragund) ಭಿನಾ ಸುಮಾರು 55 ವರ್ಷದ ದಲಿತ ಸಮುದಾಯದ ಡೋಮ ಜಾತಿಗೆ ಸೇರಿದ ವಿಧವೆ, ಕಳೆದ 30 ವರ್ಷಗಳಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹತ್ತಿರವಿರುವ ಸುಂದರಪುರ್ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಭಿನಾಳಂತೆ ಈ ಪ್ರದೇಶದಲ್ಲಿ ಇದೆ ಜಾತಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ದಲಿತ ಸಮುದಾಯದ ಜನರು ನೆಲೆಸಿದ್ದಾರೆ.ಭಿನಾ ಪ್ರತಿದಿನ ಒಂದೊಂದು ಪ್ರದೇಶವೆಂಬಂತೆ ಬೆಳಗಿನ 6ಗಂಟೆಯಿಂದ ಮದ್ಯಾಹ್ನ 2 ಅಥವಾ 4ಗಂಟೆಯವರೆಗೆ ವಾರಣಾಸಿಯನ್ನು ಚೊಕ್ಕವಾಗಿಡುವಲ್ಲಿ ದಿನವಿಡಿ ಶ್ರಮವಹಿಸಿ ದುಡಿಯುತ್ತಾಳೆ.ಇವಳ ಈ …
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನಕ್ಕೆ ಅಂಬೇಡ್ಕರ್ ಅವರ ಪ್ರವೇಶವಾಗದ ಕುರಿತು ಕಾಡುವ ಪ್ರಶ್ನೆಗಳು
ಡಾ.ಎನ್. ಚಿನ್ನಸ್ವಾಮಿ ಸೋಸಲೆ (Chinnaswamy Sosale) ಮೈಸೂರು ಸಂಸ್ಥಾನದ ಇಂದಿನ ಕರ್ನಾಟಕ ಭಾಗಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳು ಪ್ರವೇಶವಾಗುವುದು 1970ರಿಂದೀಚೆಗೆ. ಏಕೆಂದರೆ ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಶಿಕ್ಷಣವಂತರು ಹಾಗೂ ಸಾಹಿತಿಗಳು ಅಂಬೇಡ್ಕರ್ ಅವರ ಜಾಗದಲ್ಲಿ ಗಾಂಧಿಯನ್ನು ಕಾಣುತ್ತಾರೆ. ಅಥವಾ ಗಾಂಧಿ ಅವರನ್ನು ಕಾಣುವಂತೆ ಮಾಡಲಾಯಿತು ಎಂದರೆ ನನ್ನ ವಿಷಯ ಮಂಡನೆಗೆ ಹೆಚ್ಚಿನ ಸತ್ವ ದೊರಕಬಹುದಾಗಿದೆ. ಮೊದಲ ತಲೆಮಾರಿನ ದಲಿತರು ಶಿಕ್ಷಣವಂತರಾಗಲು ಪ್ರಮುಖ ಕಾರಣಕರ್ತರು ಮೈಸೂರು ಸಂಸ್ಥಾನದ ಸಮಯ ಸಾಧಕತನದ …
ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ
ಜನರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಿತಿ & ಡಾ. ಎ ಎಸ್ ಪ್ರಭಾಕರ ಆತ್ಮೀಯರೇ, ನಾಡಿನ ತಳಸಮುದಾಯಗಳ ಸಾಕ್ಷಿಪ್ರಜ್ಞೆಯೊಬ್ಬರೆಂದೇ ಹೇಳಬಹುದಾದ *ಜೇನುಕುರುಬರ ಸೋಮಣ್ಣ* ಅವರಿಗೆ ಲಾಭಿಕೋರ, ಭ್ರಷ್ಟವ್ಯವಸ್ಥೆಯು ಅನ್ಯಾಯವೆಸಗಿ, ಅಪಮಾನಿಸಿದೆ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿಯಲ್ಲಿ ಆದಿವಾಸಿ ಸಾಧಕ, ಅವಿರತ ಹೋರಾಟಗಾರ, ಅದ್ಭುತ ಪ್ರತಿಭಾವಂತ ಸೋಮಣ್ಣ ಅವರ ಹೆಸರಿತ್ತು. ಇದನ್ನು ನೋಡಿ ನಾಡಿನ ನೂರಾರು ಪ್ರಜ್ಞಾವಂತ ಮನಸುಗಳು ಸಂತಸಗೊಂಡು ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದವು. ಅದರೆ, ಕಾಣದ ಕೈಗಳು ಇದ್ದಕ್ಕಿದ್ದಂತೆ ಸೋಮಣ್ಣ …
ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು
ಡಾ. ಅರುಣ್ ಜೋಳದಕೂಡ್ಲಿಗಿ (Dr Arun Joladkudligi) ಈಚೆಗೆ ನಾನು ಕೈಗೊಂಡ ಸಂಶೋಧನಾ ಕೃತಿ ‘ಗಂಟಿಚೋರ ಸಮುದಾಯ’ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಸಂಸ್ಥೆಯಿಂದ ಪ್ರಕಟವಾಗುತ್ತಿದೆ. ಈ ಸಂಶೋಧನೆಯ ಸಂಕ್ಷಿಪ್ತ ಫಲಿತಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುವೆ. ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ …
ಎಬಿವಿಪಿ ಭಯೋತ್ಪಾದನೆ: ಪ್ರಸ್ತಾವನೆ
ಹಾರೋಹಳ್ಳಿರವೀಂದ್ರ (Harohalli Ravindra) ಉಗ್ರ ಹಿಂದುತ್ವವಾದಿ ವಿ.ಡಿ. ಸಾವರ್ಕರ್ “ಯಾರಿಗೆ ಭಾರತ ದೇಶ ಪಿತೃಭೂಮಿಯಷ್ಟೇ ಅಲ್ಲ, ಪುಣ್ಯ ಭೂಮಿಯು ಆಗಿದಿಯೊ ಆತನೇ ಹಿಂದೂ” ಎಂದು ಹೇಳುತ್ತಾರೆ. ಪ್ರಮುಖವಾಗಿ ಮುಸ್ಲಿಮರನ್ನು, ಕ್ರೈಸ್ತರನ್ನು, ಪಾರಸಿ ಹಾಗೂ ಯಹೂದ್ಯರನ್ನು ಹೊರಗಿಡುವುದು ಮತ್ತು ಬೌದ್ಧ, ಜೈನ, ಸಿಖ್ಖರನ್ನು ಒಳತೆಗೆದುಕೊಳ್ಳುವ ಉದ್ದೇಶಗಳು ಇದ್ದವು ಎಂದು ಸುರೇಶ್ ಭಟ್ ಬಾಕ್ರಬೈಲು ಅವರ ‘ಕೇಸರಿ ಭಯೋತ್ಪಾದನೆ’ ಕೃತಿಯಲ್ಲಿ ಸಾಕ್ಷೀಕರಿಸಿದ್ದಾರೆ. ಕರ್ಮ ಸಿದ್ಧಾಂತ, ಜಾತಿ ಪದ್ದತಿ ಮತ್ತು ವರ್ಣವ್ಯವಸ್ಥೆಯ ಸಾಮಾಜಿಕ ಸಂರಚನೆಯನ್ನೇ ಹೊಂದಿರುವ ಹಿಂದೂಧರ್ಮ ಸಾವರ್ಕರ್ ಅಂತವರ …
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ
ಸವಿತಾ ಹೊಸಮನಿ (Savita Hosamani) ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಷ್ಟೇ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮನುಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅರ್ಹಳಲ್ಲ. ಮಹಿಳೆಯರ ಸ್ವಾತಂತ್ರ್ಯ ಹರಣದ ಪ್ರಮುಖ ಭಾಗ ವಿದ್ಯೆಯೇ ಆಗಿತ್ತೆನ್ನಬಹುದು. ಯಾಕೆಂದರೆ ಮಹಿಳೆ ಯಾವತ್ತಿಗೂ ಅಡಿಯಾಳಾಗಿಯೇ ಇರಬೇಕೆಂಬುದು ಮನುವಿನ ಮಸಲತ್ತಾಗಿತ್ತು. ಬಾಲ್ಯದಲ್ಲಿ ತಂದೆಯ, ಯೌವ್ವನದಲ್ಲಿ ಗಂಡನ ಮತ್ತು ಮುಪ್ಪಿನಲ್ಲಿ ಮಗ ಅವಳನ್ನು ರಕ್ಷಿಸಬೇಕೆಂಬುದು ಮನುಶಾಸನವಾಗಿತ್ತು. ಹೆಣ್ಣನ್ನು ಅಬಲೆ ಎಂಬ ನೆಪದಲ್ಲಿ ಅವಳನ್ನು ಗುಲಾಮಗಿರಿಗೆ ನೂಕಲಾಗಿತ್ತು. ವೇದಕಾಲದಿಂದಲೂ ವಿದ್ಯೆ ಎನ್ನುವುದು ಕೆಲವೇ ಜನರ …