ಮಂಜುನಾಥ ನರಗುಂದ (Manjunath Naragund) ಕಾರ್ಲ್ ಮಾರ್ಕ್ಸ್ ನ “History repeats itself. First as tragedy, second as farce” ಎನ್ನುವ ಮಾತು ಸದ್ಯ ರೋಹಿತ್ ವೇಮುಲಾ ಮತ್ತು ರಜಿನಿ ಕ್ರಿಷ್ ಅವರ ಸಾಂಸ್ಥಿಕ ಹತ್ಯೆಗಳ ಚಿತ್ರಣಕ್ಕೆ ಸರಿಯಾಗಿ ಅನ್ವಯಿಸುತ್ತದೆ.ಇವರಿಬ್ಬರ ಆತ್ಮಹತ್ಯೆಗಳಿಗೂ ಮುನ್ನ ಇಂತಹವೇ ಹಲವು ಆತ್ಮಹತ್ಯೆಗಳು ವಿವಿಗಳಲ್ಲಿ ನಡೆದಾಗಲೂ ಅವು ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿದ್ದವು. ಆದರೆ, ರೋಹಿತನ ಸಾಂಸ್ಥಿಕ ಹತ್ಯೆ ಎಲ್ಲ ಸೀಮಿತ ಸಂಕೋಲೆಗಳನ್ನು ಕಿತ್ತು ತನ್ನ ಒಳಸಂಕಟದ ಬೇಗುದಿಗಳನ್ನು ಜಗದಗಲ ತೆರೆದಿಟ್ಟಿದ್ದು …
ಸಮಾನತೆ ನಿರಾಕರಿಸಲಾದರೆ, ಎಲ್ಲವೂ ನಿರಾಕರಿಸಿದ ಹಾಗೆ
ಡೆರಿಕ್ ಫ಼್ರಾಂಸಿಸ್ (ಪೆರಿಯಾರ್ ಭೀಮ್ ವೆಮುಳಾ) ಇನ್ನೊಬ್ಬ ದಲಿತ ವಿದ್ವಾಂಸನ ಕ್ರೂರ ಆತ್ಮಹತ್ಯೆ ಜವಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಸೇಲಮ್ ನಿಂದ ದಹಲಿಯ ವರೆಗೆ ತನ್ನ ಸ್ವಂತ ಪ್ರಯತ್ನದಿಂದ ಬಂದ 27 ವಯಸ್ಸಿನ ಮುತ್ತುಕೃಷ್ಣನ್ ಇಂತಹ ಒಂದು ಸ್ಥಿತಿಗೆ ತಳ್ಳಲ್ಪಟ್ಟದ್ದು ನಮಗೆ, ಈ ಭಾರತ ಎನ್ನುವ ಸಾಮ್ರಾಜ್ಯಕ್ಕೆ, ಅವಮಾನಕರ ವಿಶಯ. ಅವನ ಆತ್ಮಹತ್ಯೆಗೆ ಕಾರಣವೇನು? ಮುತ್ತುಕೃಷ್ಣನ್, ತನ್ನ ಸಾವಿನ ಎರಡು ದಿನಗಳ ಮುಂಚೆ Facebookಅಲ್ಲಿ ತನ್ನ ವಿಶ್ವವಿದ್ಯಾಲದಲ್ಲಿರುವ ಅಸಮಾನತೆಯ ಬಗ್ಗೆ ಒಂದು ಸೂಚನೆಯನ್ನು ಬರೆದ್ದಿದ್ದರು. ಆ …