ನಾವು

ಅಂಬೇಡ್ಕರ ಅವರ ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳ ಬೆಳಕಿನಲ್ಲಿ ಸಮಾಜವನ್ನು ಮರು ರೂಪಿಸ ಲು ಜಾಗೃತರಾಗಿ ಕೆಲಸ ಮಾಡಬೇಕಿರುವ ಸಮಯ ಇದು ಹಾಗು ಇದುವೇ ಅಂಬೇಡ್ಕರ್ ಯುಗ ಎಂದು ರೌಂಡ್ ಟೇಬಲ್ ಇಂಡಿಯಾ ನಂಬುತ್ತದೆ. ಆ ಆದರ್ಶಗಳನ್ನು ದಲಿತ ಮತ್ತು ಬಹುಜನ ಸಮುದಾಯ ಸಾಕಾರಗೊಳಿಸುವ ಮತ್ತು ತಿಳುವಳಿಕೆಯ ಅಂಬೇಡ್ಕರ್ ಯುಗಕ್ಕೆ ಕೆಲಸ ಮಾಡುವ ಪ್ರಯತ್ನದಲ್ಲಿ ಅಗತ್ಯವಿರುವ ಮಾಹಿತಿ ಮತ್ತು ಪರಸ್ಪರ ತೊಡಗುವಿಕೆಗಳನ್ನು ತನ್ನದೇ ಆದ ಸಣ್ಣ ರೀತಿಯಲ್ಲಿ ಹುಟ್ಟು ಹಾಕುವ ಅವಳಿ ಉದ್ದೇಶವನ್ನು ಸುದ್ದಿ ಮತ್ತು ಮಾಹಿತಿ ಅಂತರ್ಜಾಲ ಕೇಂದ್ರವಾದ , ರೌಂಡ್ ಟೇಬಲ್ ಹೊಂದಿದೆ.

ಪ್ರಬಲ ಸಾಮಾಜಿಕ ಶಕ್ತಿಗಳಿಗೆ,  ಅಸ್ಪೃಶ್ಯತೆ ಮತ್ತು ಜಾತಿಯ ‘ಅಸ್ತಿತ್ವವನ್ನು ನಿರಾಕರಿಸಲು’ ಮತ್ತು ಅನ್ಯಾಯದ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮತ್ತು ಕಾಪಾಡುವಲ್ಲಿ ‘ತಮ್ಮ ಜವಾಬ್ದಾರಿಯನ್ನು ನಿರಾಕರಿಸುವುದರಲ್ಲಿ’, ಸಹಾಯ ಮಾಡುವಲ್ಲಿ ಭಾರತೀಯ ಮಾಧ್ಯಮವು ಮಹತ್ವದ ಪಾತ್ರ ವಹಿಸಿದೆ ಎಂದು ರೌಂಡ್‌ಟೇಬಲ್ ಗುರುತಿಸುತ್ತದೆ. ಡಾ.ಅಂಬೇಡ್ಕರ್ ಒಮ್ಮೆ ಗಮನಿಸಿದಂತೆ ‘ಹಿಂದೂ ಸಮಸ್ಯೆ’ ಯನ್ನು ‘ದಲಿತ ಸಮಸ್ಯೆ’ ಎಂದು ತಿರುಚುವ ಯೋಜನೆಯನ್ನು ಅದು ನಿರಂತರವಾಗಿ ಉತ್ತೇಜಿಸಿದೆ. ಭಾರತದ ಮುಖ್ಯವಾಹಿನಿ ಮತ್ತು ಪರ್ಯಾಯ ಮಾಧ್ಯಮ ಎಂದು ಕರೆಯಲ್ಪಡುವ ಎರಡೂ ಒಂದೇ ಸಾಮಾಜಿಕ ಶಕ್ತಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಇತರರು ನಿಮಗಾಗಿ ಜಗತ್ತನ್ನು ವ್ಯಾಖ್ಯಾನಿಸಿದಾಗ, ನೀವು ಅದನ್ನು ಬದಲಾಯಿಸಬಹುದೇ?

ರೌಂಡ್‌ಟೇಬಲ್, ಮುಖ್ಯವಾಹಿನಿಯ ಮಾಧ್ಯಮಗಳಿಂದ, ದಲಿತ-ಬಹುಜನ ಜಗತ್ತಿಗೆ ಆಸಕ್ತಿಯಿರುವ ಸಮಾಜ, ರಾಜಕೀಯ ಮತ್ತು ನೀತಿಯ ಪ್ರಸ್ತುತ ಮಾಹಿತಿಯನ್ನು ಒಟ್ಟುಗೂಡಿಸುತ್ತದೆ. ಏಕಕಾಲದಲ್ಲಿ, ರೌಂಡ್‌ಟೇಬಲ್ ಇವೆಲ್ಲಾ  ಮತ್ತು ಇತರ ವಿಷಯಗಳ ಬಗ್ಗೆ ದಲಿತ-ಬಹುಜನ ದೃಷ್ಟಿಕೋನವನ್ನು ಕಂಡುಹಿಡಿಯಲು ಮತ್ತು ಎತ್ತಿ ತೋರಿಸಲು  ಪ್ರಯತ್ನಿಸುತ್ತದೆ: ಪ್ರಪಂಚವನ್ನು ಅರ್ಥೈಸಲು, ಅದನ್ನು ವ್ಯಾಖ್ಯಾನಿಸಲು ಅವರ ಸ್ವಂತ ಪ್ರಯತ್ನಗಳು. ಸಂಕ್ಷಿಪ್ತವಾಗಿ ಹೇಳುವುದಾದರೆ, ರೌಂಡ್‌ಟೇಬಲ್ ಅನನ್ಯವಾಗಿ ದಲಿತ-ಬಹುಜನ ಮಾಧ್ಯಮ ನಟನಾಗಿ ಕಾರ್ಯನಿರ್ವಹಿಸುತ್ತದೆ, ಅದು ಅವರ ಕಣ್ಣು ಮತ್ತು ಕಿವಿಗಳ ಮೂಲಕ ಗ್ರಹಿಸುತ್ತದೆ ಮತ್ತು ಅವರ ಧ್ವನಿಯ ಮೂಲಕ ಮಾತನಾಡುತ್ತದೆ.

ರೌಂಡ್‌ಟೇಬಲ್ ತನ್ನ ಓದುಗರಿಗೆ ಮತ್ತು ಉಪಯೋಗಿಸುವವರಿಗೆ ಒಂದು ವೇದಿಕೆ, ಸಂಪನ್ಮೂಲ ಮತ್ತು ಸಾಧನವಾಗಿರುತ್ತದೆ . ಒಂದು ವೇದಿಕೆಯಾಗಿ, ಇದು ದಲಿತ-ಬಹುಜನ ಧ್ವನಿಗಳ ವಿಶಾಲ ಅಭಿವ್ಯಕ್ತಿಗಾಗಿ ಸಂಯೋಜಿತ ಅಂತರ್ಜಾಲ ಜಾಗವನ್ನು  ನೀಡುತ್ತದೆ. ಸುದ್ದಿ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ನಿಯಮಿತ ಅಂಕಣಗಳು , ಬ್ಲಾಗ್‌ಗಳು, ಮಲ್ಟಿಮೀಡಿಯಾ ಅಭಿವ್ಯಕ್ತಿ ಮತ್ತು ಸಾಹಿತ್ಯಿಕ ಆಸಕ್ತಿಯ ವಿಷಯಗಳ ಬಗ್ಗೆ ಸೃಜನಶೀಲ ಕವನ, ಸಣ್ಣ ಕಥೆ ಮತ್ತು ವಿಮರ್ಶೆಯನ್ನು ಪ್ರಕಟಿಸುತ್ತದೆ.

ತಮ್ಮದೇ  ಹಿನ್ನೆಲೆಯ ಬುದ್ಧಿಜೀವಿಗಳು, ಬರಹಗಾರರು ಮತ್ತು ಕಾರ್ಯಕರ್ತರ   ಜ್ಞಾನ ಮತ್ತು ಅನುಭವ ಪಡೆಯಲು ಹುಡುಕುತ್ತಿರುವ ಯುವ ದಲಿತ-ಬಹುಜನರಿಗೆ ರೌಂಡ್‌ಟೇಬಲ್ ಸಂಪನ್ಮೂಲ ಮತ್ತು ಒಂದು ರೀತಿಯ ಗ್ರಂಥಾಲಯವಾಗಿ ರುತ್ತದೆ. ಪ್ರಸ್ತುತ ಯುಗವನ್ನು ಸಮರ್ಪಕವಾಗಿ  ಅರ್ಥಮಾಡಿಕೊಳ್ಳಲು ಡಾ.ಅಂಬೇಡ್ಕರ್ ಮತ್ತು ಫುಲೆ ಅವರಂತಹ ಪ್ರವರ್ತಕ ಚಿಂತಕರ ಬರಹಗಳನ್ನು  ಅವರಿಗೆ ಲಭ್ಯವಾಗುವಂತೆ ಮಾಡುತ್ತದೆ ಮತ್ತು ದಲಿತ ಇತಿಹಾಸ, ಘಟನೆಗಳು, ಚಳುವಳಿಗಳು ಮತ್ತು ವ್ಯಕ್ತಿತ್ವಗಳನ್ನು ಪರಿಶೀಲಿಸಲು ಅವರಿಗೆ ಸಹಾಯ ಮಾಡುತ್ತದೆ.

ಕೊನೆಯದಾಗಿ, ಯುವ ದಲಿತರು ಪರಸ್ಪರ ಸಂವಹನ ನಡೆಸಲು ರೌಂಡ್‌ಟೇಬಲ್ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ: ಪರಸ್ಪರ ಸಂಪರ್ಕ ಸಾಧಿಸಲು ಅವರ ಆಸಕ್ತಿಯ ಅನುಗುಣವಾಗಿ ಸಂವಾದ  ಮತ್ತು ಚರ್ಚೆಗೆ ಅನುಕೂಲ ಮಾಡಿಕೊಡುತ್ತದೆ.