ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ

“ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ”ಯು ಸಭೆಸೇರಿ SCST ಸಮುದಾಯದ ಹಣವನ್ನು ಗ್ಯಾರೆಂಟಿ ಈಡೇರಿಕೆಗೆ ಬಳಸಿ ಅನ್ಯಾಯ ಎಸಗುತ್ತಿರುವುದರ ವಿರುದ್ಧ ಸಂವಿಧಾನ ಬದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸಿದ ಮಾಹಿತಿ ತಿಳಿದ ಕೆಲವೇ ಗಂಟೆಯೊಳಗೆ ಖುದ್ದು ಮಾನ್ಯ ಮುಖ್ಯಮಂತ್ರಿಗಳೇ ಈ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ..!

ಆದರೆ ಇಲ್ಲಿ, SCSP/TSP ಹಣದಲ್ಲಿ 11000 ಕೋಟಿ ಯನ್ನು ಪರಿಶಿಷ್ಟರ ಗ್ಯಾರೆಂಟಿ ಯೋಜನೆಗೆ ಬಳಸುತ್ತಿದೆ ಎಂಬುದನ್ನು “ಇದು ಬಿಜೆಪಿ ನೀಡುತ್ತಿರುವ ತಪ್ಪು ಮಾಹಿತಿ” ಎಂದಿದ್ದಾರೆ. ಇದು ಸುಳ್ಳು. ಇದು ಬಿಜೆಪಿ ನೀಡಿರುವ ತಪ್ಪು ಮಾಹಿತಿಯಲ್ಲ.! ಸ್ವತಃ ಅವರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಎಚ್.ಸಿ.ಮಹದೇವಪ್ಪನವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಸಭೆಯಲ್ಲಿಯೇ ಮಾದ್ಯಮಗಳ ಮುಂದೆ ನೀಡಿರುವ ಸ್ಪಷ್ಟ ಮಾಹಿತಿ..!

ಮತ್ತು ಇದನ್ನು ಮೊದಲು ವಿರೋಧಿಸಿದ್ದು ಬಿಜೆಪಿಯಲ್ಲ ಬದಲಿಗೆ SCST ಸಮುದಾಯದ ಅಂಬೇಡ್ಕರ್ ಅನುಯಾಯಿಗಳು..! ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಬೇಕಾದರೆ ಬಹಳ ಜಾಣತನದಿಂದ ಬಿಜೆಪಿ ಹೆಸರು ಬಳಸಿದ್ದಾರೆ..! ಆದರೆ ಹಣದುರ್ಬಳಕೆಯನ್ನು ನಾಡಿನಾದ್ಯಂತ ಕೆಲ ಅಂಬೇಡ್ಕರ್ ವಾದೀ ಚಿಂತಕರಲ್ಲದೆ, ಬಿಜೆಪಿ ಸರಿಯಿಲ್ಲವೆಂದು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿಸಿದ ಸ್ವತಃ ಕಾಂಗ್ರೆಸ್ ಪಕ್ಷದ ಪರವಿದ್ದವರೂ ಇದನ್ನು ವಿರೋಧಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳ ಈ ಸ್ಪಷ್ಡನೆ ಬಿಜೆಪಿಯವರಿಗಲ್ಲ “ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ” ಗೆ ಎಂಬುದು ಇಲ್ಲಿ ಸುಸ್ಪಷ್ಟ..!

ಅಲ್ಲದೆ ಈ SCSP/TSP ಹಣದ ದುರ್ಬಳಕೆ ಬಗ್ಗೆ BJPಯವರಿಗೆ ಮಾತಾಡುವ ಯಾವ ನೈತಿಕತೆಯೂ ಇಲ್ಲ. ಯಾಕೆಂದರೆ ಈ ರೀತಿ SCST ಸಮುದಾಯದ ಹಣವನ್ನು 7D ನೆಪವೊಡ್ಡಿ BJPಯೂ ತನ್ನಾಳ್ವಿಕೆಯಲ್ಲಿ ದುರ್ಬಳಕೆ ಮಾಡಿದೆ..! ಬಿಜೆಪಿ ಹೊಸಕಳ್ಳ ಮತ್ತು ಕಾಂಗ್ರೆಸ್ ಹಳೆ‌ಕಳ್ಳ..!

ಸ್ಪಷ್ಟನೆ ಏನೇ ಇರಲಿ. SCSP/TSP ಹಣ ಮೀಸಲಿರುವುದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳಿಗೆ ಪೂರೈಸಲು ಅಲ್ಲ..! ಅದು SCSTಗಳಿಗೇ ಗ್ಯಾರೆಂಟಿ ಪೂರೈಸಲು ಆದರೂ ಅದು ಅನ್ಯಾಯ..! ಆ ಹಣವು ಸಂಪೂರ್ಣವಾಗಿ SCSTಗಳ ಆರ್ಥಿಕಾಭಿವೃದ್ಧಿಗಾಗಿ ಮಾತ್ರ ಅಂದರೆ SCST ಸಮುದಾಯಗಳಿಗೆ ಭೂಮಿ ಹಾಗು ವಸತಿ ನೀಡಲು, ಉದ್ಯೋಗ ನೀಡಲು, ಉದ್ಯಮಿಗಳನ್ನು ಸೃಷ್ಟಿಸಲು, ಉನ್ನತ ಶಿಕ್ಷಣ ಉತ್ತಮ ಆರೋಗ್ಯ ನೀಡಲು ಬಳಕೆಯಾಗಬೇಕೋ‌ ಹೊರತು ಇನ್ಯಾವುದೋ ಚಿಲ್ಲರೆ ನೀಡಿ ಮೂಗಿಗೆ ತುಪ್ಪ ಸವರಲು ಅಲ್ಲ..!

ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ
ಬನ್ನಿ ಪ್ರಜ್ಞಾವಂತರೆಲ್ಲಾ ಕೈಜೋಡಿಸಿ. ಜೈಭೀಮ್

-ಹ.ರಾ‌.ಮಹಿಶ
ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ ಪರವಾಗಿ.