ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ

ಕಾಟೇರ – ಮತ್ತೆ ಮತ್ತೆ ನೋಡಬೇಕಿರುವ ಸಿನಿಮಾ

ಕೋಡಿಹಳ್ಳಿ ಸಂತೋಷ್

ಸಿನಿಮಾ ಪಂಡಿತರಿಂದ ಹಿಡಿದು

ಸಾಮಾನ್ಯ ಫ್ಯಾನ್ ಗಳ ತನಕ

ಒಬ್ಬೊಬ್ಬರೂ ಮತ್ತೆ ಮತ್ತೆ ಥಿಯೇಟರ್ ಗೆ ಹೋಗಿ ನೋಡಿ ಸೆಲಬ್ರೇಟ್ ಮಾಡಬೇಕಾದ ಸಿನಿಮಾ ಇದು.

 

ನೀವು ಎದೆಯರಳಿಸಿ ಕೂತರೇ ಈ ಸಿನಿಮಾದ

ಪ್ರತಿ ಫ್ರೇಮ್ ನಿಮ್ಮನ್ನ ಹಿಡಿದಿಡುತ್ತೆ,

ಪ್ರತಿ ಪಾತ್ರವೂ ಕುಲುಮೆಗೆ ಬಿದ್ದು ಕುದಿಯುವುದು ಕಾಣುತ್ತದೆ,

ಪ್ರತಿ ಪಾತ್ರ-ಸನ್ನಿವೇಶಗಳ ಮಾತುಗಳು ನಮ್ಮನ್ನೆ ಹುಡುಕಿ ಬಂದು ನಮ್ಮೆದೆಗಳನ್ನ ನೇರ ಇರಿಯುವುದು

ನಮ್ಮ ಅನುಭವಕ್ಕೆ ಬರುತ್ತದೆ…..

 

ಕನ್ನಡದ ಕಮಷಿ೯ಯಲ್ ಸಿನಿಮಾವೊಂದು ಏರಿರುವ ಎತ್ತರವನ್ನ ಈ ಸಿನಿಮಾ ಮೂಲಕ ಮಾತ್ರ ಮೆಷರ್ ಮಾಡಬಹುದು ಎಂಬಷ್ಟರ ಮಟ್ಟಿಗೆ ಈ ಸಿನಿಮಾ ಬೇರೆಯದೇ ಎತ್ತರದಲ್ಲಿ ನಿಲ್ಲುತ್ತದೆ.

ಇದು 60-70 ರ ದಶಕಗಳ

ಗೇಣಿದಾರ ರೈತರ ಬವಣೆಯ ತೋರುವ

ರೆಟ್ರೋ ಸಿನಿಮಾವಿರಬಹುದು ಅಂತ ಅಂದುಕೊಂಡವರಿಗೆ

ಇದು ಸಮಕಾಲೀನ ಪಿಡುಗಾಗಿರುವ

ಜಾತಿಯೊಳಗಿನ ಕೊಳಕಿನ ಹೂರಣವನ್ನೂ ಮುಲಾಜಿಲ್ಲದೆ ಬಗೆದಿಡುವ ಸಿನಿಮಾವಾಗಿ

ನಿಮ್ಮನ್ನ ಹಲವು ಸೆನ್ಸಿಟಿವ್/ಸರ್ಪ್ರೈಸಿಂಗ್ ಆಯಾಮಗಳತ್ತ ಕರೆದೊಯ್ಯುತ್ತದೆ.

ಇದು ಒಬ್ಬ ಮಾಸ್ ಹಿರೋನ ಬಿಲ್ಡಪ್ ಸಿನಿಮಾ ಇರಬಹುದು ಅಂತ ಅಂದುಕೊಂಡವರಿಗೆ

ಇದು ಎಲ್ಲ ಕ್ಲಾಸ್ ಗಳನ್ನೂ ಎಡತಾಕುವ ಮೂಲಕ

ಈ ನೆಲದ ಎಲ್ಲ ಕತ್ತಲ ಆಯಾಮಗಳನ್ನ ಹುಡುಕಿ-ತಡಕಿ ಅವುಗಳ ಮೇಲೆ ಬೆಳಕು ಚೆಲ್ಲುವ ಅನನ್ಯ ಪ್ರಯತ್ನಗಳಿಗೆ ಈ ಸಿನಿಮಾ ಮುಂದಾಗುತ್ತದೆ.

ಸಿನಿಮಾದ ಕಥೆ-ಚಿತ್ರಕಥೆ-ನಿದೇ೯ಶನ-ಸಂಭಾಷಣೆ,ಬಿಜಿಎಂ ಇನ್ನಿತರ ಟೆಕ್ನಿಕಲ್ ಎಕ್ಸಲೆನ್ಸ್

ಹಾಗೂ ಮಾಸ್ ಹೀರೋ ದಶ೯ನ್ ರ ಬಗ್ಗೆ ಮಾತಾಡುವ ಮುನ್ನ

ಇಷ್ಟೊಂದು ಸೆನ್ಸಿಟಿವ್ ಕಂಟೆಂಟ್ ಇರುವ

ಈ ಸಿನಿಮಾವನ್ನ

‘ಪ್ಯಾಕ್ಡ್ ಕಮಷಿ೯ಯಲ್ ಎಂಟರ್ ಟೇನರ್’

ಜಾನರ್ ನಲ್ಲಿ ನಿಮಿ೯ಸಲು

ಮತ್ತು ತಮ್ಮೆಲ್ಲ ಸ್ಟಾರ್ ಡಂ/ಇಮೇಜ್ ಕಳಚಿ,ಒತ್ತೆಯಿಟ್ಟು ಈ ಸಿನಿಮಾದಲ್ಲಿ ನಟಿಸಲು ಮುಂದಾದವರ ಗುಂಡಿಗೆಗಳು

ಎಷ್ಟು ಗಟ್ಟಿಯಿರಬೇಕು ಎಂಬುದನ್ನ

ಡೀಟೈಲಾಗಿ ಚಚಿ೯ಸುವಾ……

 

ಆದರೆ ಒಂದು ಮಾತಂತೂ ನಿಜ…..

ನಾವುಗಳು ನಿಜಕ್ಕೂ ಅಪ್ಪಟ ಮನುಷ್ಯರಂತೆ

ತೆಪ್ಪಗೆ ಹೋಗಿ ಕೂತು ನೋಡಿದರೇ

ಮೂರು ಗಂಟೆ ಮೂರು ನಿಮಿಷಗಳ ಕಾಲ

ಪ್ರತಿಯೊಬ್ಬರ ಎದೆಗೂ

ಈ ಸಿನಿಮಾ ನಿರಂತರವಾಗಿ ಎದ್ದೆದ್ದು ಒದೆಯುತ್ತದೆ.

 

ಸೋ

ಎಲ್ಲರೂ ಹೋಗಿ

ಸುಮ್ಮನೆ ಎದೆಯೊಡ್ಡುವಂತವರಾಗುವಾ……