ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ

ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ

ವಿಜೇತ ವಿ ಜೆ

ನಾನು ಮೊದಲು ‘ಹಳ್ಳಿ  ಮೇಷ್ಟ್ರೆ’ ನಲ್ಲಿ  ಸಿಲ್ಕ್ ಸ್ಮಿತಾಳನ್ನು ನೋಡಿದ್ದು  ಮತ್ತು ಅವಳ ಮುಖವನ್ನು ತೋರಿಸಲು ಸಾಕಷ್ಟು ಸಮಯ  ತೆಗೆದುಕೊಂಡ ಕ್ಯಾಮೆರಾದ ಬಗ್ಗೆ ಅಸಹನೆ ಉಂಟಾಗಿತ್ತು . ದುರದೃಷ್ಟವಶಾತ್, ನಂತರದ ಎಲ್ಲಾ ಹಾಡುಗಳಲ್ಲಿ, ಕ್ಯಾಮೆರಾ ಅದೇ ಆಗಿತ್ತು ಜೊತೆಗೆ ಹಿಂದಿನ ಮನುಷ್ಯ ಕೂಡ. ಅವರಿಗೆ ಅವಳ ಮುಖದ ಮೇಲೆ ಆಸಕ್ತಿ ಅದರ ಜೊತೆಗೆ ನರಳುವ ಶಬ್ದವಿದ್ದಾಗ ಮಾತ್ರ.  ಒಂದಕ್ಕಿಂತ ಹೆಚ್ಚು ವಿಧಗಳಲ್ಲಿ, ಸವರ್ಣ ಸ್ತ್ರೀವಾದಿ ಅಥವಾ ಸೀರೆ-ಬಿಂದಿ  ಸ್ತ್ರೀವಾದಿ (ಇದನ್ನು ಗುರುತಿಸಿದ್ದಕ್ಕೆ  ನಾನು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇನೆ, @Dard-e-Discourse) ಇಂತಹ  ಮನುಷ್ಯನಿಗಿಂತ ಭಿನ್ನವಾಗಿಲ್ಲ.

ಅವರಿಬ್ಬರೂ ತಮಗೆ ಬೇಕೆನಿಸಿದ್ದನ್ನು ನೋಡುತ್ತಾರೆ: ಶುದ್ಧ / ಬಿಳಿಯ  ದೇಹದ ಮೇಲೆ ಎಸಗಲಾಗದ ‘ವಿಕೃತ’ಗಳನ್ನು ಎಸಗಲು  ಒಂದು ಜಾಗದಂತೆ ಅಥವಾ ತಿಳುವಳಿಕೆಯಿಲ್ಲದ  “ಬಡ, ತೀವ್ರ ಕಾಮಾಸಕ್ತಿಯುಳ್ಳ ಕೆಳಜಾತಿಯ ಮಹಿಳೆಯನ್ನು” ರಕ್ಷಿಸುವ ಅವಕಾಶದಂತೆ (ಎರಡನೆಯದರೊಂದಿಗೆ ನನಗೇಕೆ  ಹೆಚ್ಚು ಸಮಸ್ಯೆಯಿದೆ  ಎಂಬುದರ ಬಗ್ಗೆ ನಾನು ವಿವರಿಸಬೇಕಾಗಿಲ್ಲ)

ನಾನು ಏನು  ಹೇಳಬಲ್ಲೆ ಎಂದರೆ, ನೀವು ಲೈಂಗಿಕ  ಕ್ರಿಯೆ  ಮಾಡುತ್ತಿದ್ದರೆ, ಆ ಕ್ಯಾಮೆರಾದ ಹಿಂದಿರುವ ವ್ಯಕ್ತಿ ಅಥವಾ ಸೀರೆ-ಬಿಂದಿ  ಸ್ತ್ರೀವಾದಿ ನಿಮ್ಮ ಸಂತೋಷದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ಬಂದು ಹೋಗುತ್ತಾರೆ.

ಹಾಗಿದ್ದರೆ  ಸಿಲ್ಕ್ ಸ್ಮಿತಾಳನ್ನು ನೋಡುವ ಇನ್ನೊಂದು ಮಾರ್ಗವಿದೆಯೇ? ಇದಕ್ಕೆ ಉತ್ತರಿಸಲು ಅವಳು ಸುಲಭ ಮಾಡುವುದಿಲ್ಲ  ಮತ್ತು ಬಹುಶಃ ಅವಳು ಮಾಡುವ ಅಗತ್ಯವಿಲ್ಲ. ಅವಳು ಇನ್ನೂ ಪರದೆಯ ಮೇಲೆ ತರುತ್ತಿರುವ ಸಾಧ್ಯತೆಯನ್ನು ಎದುರಿಸುವುದು  ಸುಲಭವಲ್ಲ. ದೇಹದ ಸಂತೋಷ ಕ್ಕೆ ಮತ್ತು ಅದನ್ನು ನಾಚಿಕೆಯಿಲ್ಲದ ಸ್ಥಿತಿಗೆ ಒಪ್ಪಿಸುವ ಅವಶ್ಯಕತೆಗೆ   ಅಷ್ಟೊಂದು  ಗಮನ ಕೊಟ್ಟಿರುವ ಮಹಿಳೆಯೊಂದಿಗೆ ನೀವು ಏನು ಮಾಡುತ್ತೀರಿ – ಅವಳು ಅದೇ  ನಡುಕ, ಬಾಗು , ನರಳಿಕೆ  ಭಾವಾಭಿನಯವನ್ನು ಏಕಾಂಗಿಯಾಗಿಲ್ಲದಿದ್ದಾಗ ಮತ್ತು ಕೋಣೆ  ತುಂಬಿರುವ  ಸಿಬ್ಬಂದಿ ಮತ್ತು ಕ್ಯಾಮೆರಾಗಳ ಮುಂದೆ ಅನುಕರಿಸುವಾಗ?

‘ಲವ್ ಮಿ ಅಲ್ಲೊ ಮಿ ಟು ಲವ್ ಯು’  ( Love me allow me to love you ) ಹಾಡಿನ  ಅಂತ್ಯದಲ್ಲಿ ಚಿತ್ರದ ‘ನಿಜವಾದ ನಾಯಕಿ’ ಶಂಕರ್ ನಾಗ್  ಮತ್ತು ಸಿಲ್ಕ್  ಸ್ಮಿತಾ  ಯಾವುದೋ ಉದ್ಯಾನವನದ ಹುಲ್ಲಿನ ಮೇಲೆ ಉರುಳುತ್ತಿರುವುದನ್ನು, ಅಪ್ಪಿಕೊಂಡು ಮುದ್ದಾಡುವುದನ್ನು ನೋಡಿ  ರೊಚ್ಚೆದ್ದು , ಸಿಲ್ಕ್ ಸ್ಮಿತಾಳನ್ನು ‘ ಡರ್ಟಿ ಬಿಚ್’  (dirty bitch)  ಎಂದು ಬೈದು ಕಪಾಳಮೋಕ್ಷ ಮಾಡಿ ಕೊಳಕ್ಕೆ ಎಸೆಯುತ್ತಾಳೆ. ಇದು ಸಿಲ್ಕ್ ಸ್ಮಿತಾ ಅವರ ದುರಂತ ಎಂದು ಹಲವರು ಗಮನ ಸೆಳೆದಿದ್ದಾರೆ – ಪುರುಷರು ಮತ್ತು ಮಹಿಳೆಯರ ಮೇಲೆ ಅವಳು  ಪ್ರಭಾವವನ್ನು ಹೊಂದಿದ್ದರೂ ಸಹ, ಕೊನೆಯಲ್ಲಿ ಒಬ್ಬಂಟಿಯಾಗಿದ್ದಳು . ಅವರು ಇದನ್ನು ಹೇಳುತ್ತಾರೆ  ಆದರೆ ಇದರಲ್ಲಿರುವ  ಜಾತಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಸ್ಥೆಗಳಲ್ಲಿ ಕೊಲೆಯಾದ ದಲಿತ ಮತ್ತು ಬಹುಜನ ವಿದ್ಯಾರ್ಥಿಗಳ ಒಂಟಿತನಕ್ಕಿಂತ ಸಿಲ್ಕ್ ಸ್ಮಿತಾ ಅವರ ಒಂಟಿತನವು ಹೆಚ್ಚು ಭಿನ್ನವಾಗಿರಲಿಲ್ಲ ..

ಆದರೆ ನಾನು ಅವಳನ್ನು ಬೇರೆ ರೀತಿಯಲ್ಲಿ ಕೂಡ ಜೀವಂತವಾಗಿಡಲು ಬಯಸುತ್ತೇನೆ – ಲೈಂಗಿಕ ಕ್ರಿಯೆಯನ್ನು ಉತ್ತಮವಾಗಿ  ಹೇಗೆ ಮಾಡಬೇಕೆಂದು  ಸವರ್ಣ ಜನರಿಗೆ  ಕಲಿಸಿ ಅವರಿಗೆ ಕಿರಿಕಿರಿ ಮಾಡಿ ದ್ದು ಎಂದು ಊಹಿಸಿ ನಂಬುವ ಮೂಲಕ . ಬೇರೆ ಯಾವ ನಟನಿಗೂ  ಸಾಧ್ಯವಾದದ್ದನ್ನು ಸಾಧಿಸಿದ್ದು  ಎಂದು ಒಪ್ಪಿಕೊಳ್ಳುವ ಮೂಲಕ ಹಾಗು  ಸವರ್ಣ ಪುರುಷರ ನಿಷ್ಪ್ರಯೋಜಕತೆಯನ್ನು ಅವಳು ಒಬ್ಬಂಟಿಯಾಗೇ  ಗುರುತಿಸಿದ್ದಾಳೆ ಎನ್ನುವ ಮೂಲಕ.  ರವಿ ಚಂದ್ರನ್, ಕಮಲಹಾಸನ್ , ರಜನಿಕಾಂತ್ ಅಥವಾ ಶಂಕರ್ ನಾಗ್  ಆಗಿರಲಿ – ಅವಳೊಡನೆ  ನಟಿಸಿದ ಎಲ್ಲ ಪುರುಷರು ಒಂದೇ  ರೀತಿ ನೀರಸವಾಗಿದ್ದಾರೆ, ಅವರೆಲ್ಲರನ್ನೊ  ಸುಲಭವಾಗಿ ಪರಸ್ಪರ ಬದಲಾಯಿಸಬಹುದಾಗಿದೆ. ಅವರ ಎಲ್ಲಾ ಹಾಡುಗಳನ್ನು ತೆಗೆದುಕೊಳ್ಳಿ, ಪುರುಷರನ್ನು ಬದಲಾಯಿಸಿ  – ಅದು ಎಳ್ಳಷ್ಟೂ ಬದಲಾವಣೆ ತರುವುದಿಲ್ಲ . ನೀವು ನೋಡುವುದು ಮಾತ್ರ ಪ್ರತೀ ಸಲ ಮಿನುಗುತ್ತಿರುವ  ಸಿಲ್ಕ್  ಸ್ಮಿತಾ.

ವಿಜೇತ ವಿ ಜೆ ( Vijeta Vj ) ಬೆಂಗಳೂರಿನಲ್ಲಿ ಇಂಗ್ಲಿಷ್ ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿದ್ದಾರೆ.

ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya ) 

ಮೂಲ ಇಂಗ್ಲಿಷ್ ಲೇಖನ – S for Silk Smitha

Be the first to comment on "ಕನ್ನಡ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ"

Leave a comment

Your email address will not be published.


*