ಫಾತಿಮಾ ಶೇಖ್ ಮಿಥ್
ಖಾಲಿದ್ ಅನೀಸ್ ಅನ್ಸಾರಿ
ಜೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಬಹಳಷ್ಟು ಮಹತ್ವದ ಬರವಣಿಗೆಯನ್ನು ಬಿಟ್ಟುಹೋದರು. ಆದಾಗ್ಯೂ, “ಫಾತಿಮಾ” ಬಗ್ಗೆ ಉಲ್ಲೇಖ, 10 ಅಕ್ಟೋಬರ್ 1856 ರಂದು ಸಾವಿತ್ರಿಮಾಯಿ ತನ್ನ ಪತಿ ಜೋತಿರಾವ್‌ಗೆ ಬರೆದ ಒಂದೇ ಒಂದು ಪತ್ರದಲ್ಲಿ ಮಾತ್ರ ಇದೆ. . : “ನಾನು ಪುಣೆಯಲ್ಲಿ ಇಲ್ಲದ ಕಾರಣ, ಫಾತಿಮಾ ಮೇಲೆ ಕೆಲಸದ ಹೊರೆ ಹೆಚ್ಚಾಗಿದೆ ಎಂದು ನನಗೆ ತಿಳಿದಿದೆ. ಆದರೆ ಅವಳು ಎಂದಿಗೂ ಇಲ್ಲ ಎಂದು ಹೇಳುವುದಿಲ್ಲ.
ಈ ಒಂದು ಉಲ್ಲೇಖವನ್ನು ಹೊರತುಪಡಿಸಿ, ಫುಲೆ ದಂಪತಿಗಳ ಕೃತಿಗಳಲ್ಲಿ “ಫಾತಿಮಾ” ಕುರಿತು ಯಾವುದೇ ಚರ್ಚೆಯಿಲ್ಲ.
1990 ರ ನಂತರದ ನಿರೂಪಣೆಗಳಲ್ಲಿ “ಫಾತಿಮಾ”, “ಶೇಖ್” ಎಂಬ ಉಪನಾಮವನ್ನು ಹೇಗೆ ಪಡೆದುಕೊಂಡರು? ಅವರು ಉಸ್ಮಾನ್ ಶೇಖ್‌ನ ಸಹೋದರಿಯೇ? ಶಿಕ್ಷಕಿಯಾಗಿ, ಶಾಲೆಗಳ ಉಸ್ತುವಾರಿಯಾಗಿ ಅಥವಾ ಮನೆಗೆಲಸದ ಸಹಾಯಕರಾಗಿ ಕೆಲಸ ಮಾಡಿರಬಹುದಾ ? ಆಕೆಯ ಜನನ ಮತ್ತು ಸಾವಿನ ದಿನಾಂಕದ ಮೂಲ ಯಾವುದು? ಆಕೆಯನ್ನು “ಮೊದಲ ಮುಸ್ಲಿಂ ಶಿಕ್ಷಕಿ” ಎಂದು ಏಕೆ ನಿರೂಪಿಸಲಾಗಿದೆ (ನನ್ನ ಸ್ನೇಹಿತ ಅಯಾಜ್ ಅಹ್ಮದ್ ಕೇಳುತ್ತಾರೆ , “ಹಾಗಾದರೆ ಮೊದಲ ಹಿಂದೂ ಶಿಕ್ಷಕ ಯಾರು?)
ನನ್ನ ಸ್ನೇಹಿತ ಕಲೀಂ ಅಜೀಂ (ಪುಣೆ) ಸೂಚಿಸಿದಂತೆ ಫಾತಿಮಾ ಶೇಖ್ ಕುರಿತಾದ ನಿರೂಪಣೆಯು (फातिमा शेख किस का फिक्शन है? ), ಅತ್ಯಂತ ತೆಳುವಾದ ಪ್ರಾಥಮಿಕ (ಸಾಕ್ಷ್ಯಚಿತ್ರ ಅಥವಾ ಮೌಖಿಕ) ಪುರಾವೆಗಳೊಂದಿಗೆ ಪುರಾಣ ನಿರ್ಮಾಣದ ವ್ಯಾಯಾಮವಾಗಿದೆ.
1990 ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗುತ್ತಾ ಕ್ರೋಡೀಕರಣಗೊಂಡ ದಲಿತ-ಮುಸ್ಲಿಂ ಐಕಮತ್ಯದ ರಾಜಕೀಯ ಯೋಜನೆಗಾಗಿ ಫಾತಿಮಾ ಶೇಖ್ ಹುಟ್ಟು ಹಾಕುವುದು ಅಗತ್ಯವಾಗಿತ್ತು. ಹೆಚ್ಚಿನ ಪ್ರಾಬಲ್ಯ ಹೊಂದಿರುವ ಮುಸ್ಲಿಂ ಐಕಾನ್‌ಗಳು, ಬಹುಪಾಲು ಅಶ್ರಫ್ (ಸವರ್ಣ) ಮುಸ್ಲಿಮರು, ಸಂಪೂರ್ಣ ಜಾತಿವಾದಿಯಾಗಿದ್ದು ಅಥವಾ ಜಾತಿ ತಾರತಮ್ಯದ ಬಗ್ಗೆ ತುಟಿ ಮುಚ್ಚಿದ್ದರಿಂದ , ಮೇಲೆ ತಿಳಿಸಿದ ಯೋಜನೆಗಾಗಿ ಐಕಾನ್ ಅನ್ನು ಹುಟ್ಟು ಹಾಕಬೇಕಿತ್ತು. ದಲಿತ-ಮುಸ್ಲಿಂ ರಾಜಕೀಯ ಒಗ್ಗಟ್ಟಿನ ಬೇಡಿಕೆಗಳನ್ನು “ಫಾತಿಮಾ” ದಲ್ಲಿ ಬಿಂಬಿಸಲಾಯಿತು ಮತ್ತು ಎಲ್ಲಾ ಸಂಬಂಧಿತ ಊಹೆಗಳೊಂದಿಗೆ ಅವರನ್ನು # ಫಾತಿಮಾ ಶೇಖ್ ಎಂದು ಮರುಹುಟ್ಟು ಕೊಡಲಾಯಿತು . “ಫಾತಿಮಾ” ಬಗ್ಗೆ ತುಂಬಾ ಕಡಿಮೆ ತಿಳಿದಿದ್ದರಿಂದ , ಏನನ್ನಾದರೂ ತ್ವರಿತವಾಗಿ ಬರೆಯಲು ಅವರು ಸಾಂಕೇತಿಕವಾಗಿ ಖಾಲಿ ಹಾಳೆಯಂತೆ ಉಪಯೋಗಿಸಲ್ಪಟ್ಟರು.
ಮಿಥ್ 101 ಕೋರ್ಸ್‌ಗಳಲ್ಲಿ ಫಾತಿಮಾ ಶೇಖ್ ಅಧ್ಯಯನವನ್ನು ಸೇರಿಸಲೇಬೇಕು .
…………………….
ಖಾಲಿದ್ ಅನೀಸ್ ಅನ್ಸಾರಿ, ಅಸೋಸಿಯೇಟ್ ಪ್ರೊಫೆಸರ್, ಸ್ಕೂಲ್ ಆಫ್ ಆರ್ಟ್ಸ್ & ಸೈನ್ಸಸ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ
ಕನ್ನಡ ಅನುವಾದ : ಶ್ರೀಧರ ಅಘಲಯ
Pic Credit: Kalim Ajeem blog page.