Articles by admin

ಮಲೆಗಳಲ್ಲಿ ಮದುಮಗಳು – ಅನುವಾದಗಳ ಹಿಂದಿರುವ ರಾಜಕಾರಣ

ಮಲೆಗಳಲ್ಲಿ ಮದುಮಗಳು – ಅನುವಾದಗಳ ಹಿಂದಿರುವ ರಾಜಕಾರಣ ವಿ. ಎಲ್. ನರಸಿಂಹಮೂರ್ತಿ ಇಂದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಇಂಗ್ಲಿಷ್ ಅನುವಾದ ಕೃತಿ ‘Bride in the Hills’ ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಡಾ. ವನಮಾಲ ವಿಶ್ವನಾಥ್ ಅವರು ಅನುವಾದಿಸಿರುವ ಈ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಹೊರತಂದಿದೆ. ‘ಮಲೆಗಳಲ್ಲಿ ಮದುಮಗಳು’…


ಇತಿಹಾಸದಲ್ಲಡಗಿರುವ ದೊರೆ ಮಹಿಷಾ

ಇತಿಹಾಸದಲ್ಲಡಗಿರುವ ದೊರೆ ಮಹಿಷಾ ಡಾ. ದಿಲೀಪ್ ನರಸಯ್ಯ ಎಂ ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯ‍ನನ್ನು ಮರೆಮಾಚಲು ಸಾಧ್ಯವಿಲ್ಲ. ಅಂತೇಯೇ  ಮಹಿಷಸೂರನ ಸತ್ಯ ಇತಿಹಾಸವವನ್ನು ಪುರಾಣವೆಂಬ ಸುಳ್ಳಿನಿಂದ ಸದಾ ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ಪ್ರಸ್ತುತದಲ್ಲಿ ಸಾಭೀತಾಗಿದೆ. ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರು ವರ್ಣ, ಧರ್ಮ, ಜಾತಿ, ಲಿಂಗ ಮತ್ತು…


ದಲಿತ –  ಸರಕು ಅಥವಾ ಚಹರೆ?

ದಲಿತ –  ಸರಕು ಅಥವಾ ಚಹರೆ? ಭಾಗ – ೧  ಗೌರವ್ ಸೋಮ್ ವಂಶಿ ( Gaurav Somwanshi ) ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya) ನಾನೀಗ ಹೇಳಲು ಹೊರಟಿರುವುದು 2016 ರಲ್ಲಿ ನಾನು ಬರೆದ ಲೇಖನಗಳನ್ನು ಆಧರಿಸಿಕಟ್ಟಿರುವುದು. ಅಲ್ಲದೇ ಇನ್ನಿತರ ವಿಚಾರಗಳ ಮೇಲೂ ನಿರ್ಮಿಸಿದ್ದೇನೆ, ಆದರೆ ಇದರ ಸಾರ ಮುಂಚಿನಂತೆಯೇ ಇದೆ ಹಾಗು ನಾನು ಅವುಗಳಲ್ಲಿ ಹೆಚ್ಚಿನದನ್ನು ಇಲ್ಲಿ ನೇರವಾಗಿ ಉಲ್ಲೇಖಿಸುತ್ತೇನೆ.   ಈ ಲೇಖನಗಳನ್ನು ರೋಹಿತ್ ವೇಮುಲ ಸಾಂಸ್ಥಿಕ ಕೊಲೆಯ ನಂತರ ನಡೆದ ಘಟನೆಗಳನ್ನು ಆದ್ಧರಿಸಿ ಬರೆಯಲಾಗಿತ್ತು. ಆಗ ಹಲವಾರು ರೀತಿಯ ಪ್ರತಿಕ್ರಿಯೆಗಳು ಹೊರ ಹಮ್ಮಿದ್ದವು  ಹಾಗು ಅವುಗಳಲ್ಲಿ ಒಂದು ರೀತಿಯ ನಿರ್ಧಿಷ್ಟ ಪ್ರವೃತ್ತಿ ಇತ್ತು. ಇದು ನನಗೆ ಪ್ರಚೋದನೆಯಾಗಿತ್ತು, ಅಲ್ಲದೆ ಮುಖ್ಯವಾಹಿನಿ ದಲಿತ ಪದ ಮತ್ತು ಜಾತಿಯ  ಬಗ್ಗೆ ಪ್ರಶ್ನೆಗಳಿಗೆ ಸ್ವಾಗತಕ್ಕೆ ಸಿದ್ದವಾಗಿತ್ತು.  ನನ್ನ ಬಾಲ್ಯದಲ್ಲಿ  ಈ ಪದವನ್ನು ನನ್ನ ಕುಟುಂಬದಲ್ಲಿ ಆತ್ಮ ಚರಿತ್ರೆಯ ಬಗ್ಗೆ ಮಾತನಾಡುತ್ತಿದಾಗ  ಮಾತ್ರ ಕೇಳಿದ್ದೆ ಆದರೆ ಹೊರಗೆಲ್ಲೂ ಕೇಳಿರಲಿಲ್ಲ. ಆದರೆ ನಂತರ ಇದು ಸಾರ್ವತ್ರಿಕವಾಯಿತು.   ನಾನು ಈ ಪದವನ್ನು ಹೊರಗಡೆ ಕೇಳಿದಷ್ಟು ನನ್ನ ಮನೆಯಲ್ಲಾಗಲಿ ಅಥವಾ ಸಮುದಾಯದಲ್ಲಾಗಲಿ ಕೇಳಿಲ್ಲ. ಇದು  ನಾವು ಎದುರುಗೊಂಡಾಗ ಹೇಳುವ ಪದವಲ್ಲ.  ನಾವು ಎದುರುಗೊಂಡಾಗ ಹೇಳುವ ಪದ ಜೈ ಭೀಮ್. ಸಾಧಾರಣ ಮನುಷ್ಯರು ಅಂಬೇಡ್ಕರೈಟ್ ಪರಂಪರೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದು. ಹೊರಗಡೆ ದಲಿತ ಎಂದು ಕರೆಯುವುದು ಹೆಚ್ಚಾಗುತ್ತಿತ್ತು. ಹೀಗೆ ಹೊರಹಮ್ಮುತ್ತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಲೇಖನಗಳನ್ನು ಬರೆಯಲಾಗಿತ್ತು.  ಹಿಂದೆ ಮಾಡುತ್ತಿದ್ದ ವಾದಗಳನ್ನು ಹೆಚ್ಚಾಗಿ ಸಾರಂಶದೊಂದಿಗೆ ಮುಂದಿಡುತ್ತಿದ್ದೇನೆ.   ನಾವೆಲ್ಲರೂ ನೆನಪಿಸಿಕೊಳ್ಳಬೇಕಿದ್ದು…


ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ ******************************** ಡಾ. ನಾಗಭೂಷಣ ಬಗ್ಗನಡು ‘ಒಂದು’ ಕೇಂದ್ರವನ್ನು ನಿರಾಕರಿಸಿ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡಿಸಿಕೊಳ್ಳುವ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಪರಂಪರೆ ಸಂಕಟಗಳ ಸರಮಾಲೆಯನ್ನೇ ನಮ್ಮ ಮುಂದಿಡುತ್ತದೆ. ಒಂದು ಮೂಳೆ ಪ್ರಸಂಗದಿಂದ ಆರಂಭವಾಗುವ ನಾಟಕ…


‘ದಲಿತ್ ಸಿನಿಮಾ, ದಲಿತ ರಂಗಭೂಮಿ’

‘ದಲಿತ್ ಸಿನಿಮಾ, ದಲಿತ ರಂಗಭೂಮಿ’  ವಿ. ಎಲ್. ನರಸಿಂಹಮೂರ್ತಿ ಕಳೆದ ಹತ್ತು ದಿನಗಳಿಂದ ಫೇಸ್‌ಬುಕ್‌ನ ನನ್ನ ಗೆಳೆಯ-ಗೆಳತಿಯರ ವಾಲುಗಳು ‘ತಂಗಲಾನ್’ ಮತ್ತು ‘ವಾಳೈ’ ಸಿನಿಮಾಗಳ ಕುರಿತು ಮೆಚ್ಚುಗೆ, ಪ್ರಶಂಸೆ, ಚರ್ಚೆಗಳಿಂದ ತುಂಬಿಹೋಗಿವೆ. ತಮಿಳಿನ ಪ. ರಂಜಿತ್ ಮತ್ತು ಮಾರಿ ಸೆಲ್ವರಾಜ್ ಸಿನಿಮಾಗಳ ಬಗ್ಗೆ ಯಾಕೆ ಈ ಮಟ್ಟದ ಚರ್ಚೆ ಆಗುತ್ತಿದೆ ಎನ್ನುವುದಕ್ಕೆ…


ಪ್ರಗತಿಪರ ಲಿಬರಲ್ ಗಳ ಸಮಸ್ಯೆ

ಪ್ರಗತಿಪರ ಲಿಬರಲ್ ಗಳ ಸಮಸ್ಯೆ ವಿ. ಎಲ್. ನರಸಿಂಹಮೂರ್ತಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಎದ್ದಾಗ ಜಾತಿ ಪ್ರಾತಿನಿಧ್ಯ ಮತ್ತು ಜಾತಿ ಸೂಕ್ಷ್ಮತೆಯ ಪ್ರಶ್ನೆಗಳನ್ನು ದಲಿತ ಸಮುದಾಯದಿಂದ ಬಂದವರು ಎತ್ತುವುದು ಸಹಜ. ಏಕೆಂದರೆ ರಾಜಕೀಯ ಅಧಿಕಾರವಾಗಲಿ, ಸಾಮಾಜಿಕ ಸ್ಥಾನಮಾನವಾಗಲೀ ಸಾಂಸ್ಕೃತಿಕ ಮಹತ್ವವಾಗಲಿ ದಲಿತರಿಗೆ ನ್ಯಾಯಯುತವಾಗಿ ಸಿಗದೇ ಜಾತಿಯ ಕಾರಣಕ್ಕೆ….


ಜಾಲ್ಗಿರಿ: ಕುಲತೊಂಭತ್ತು ಜಾತಿಗಳ ಕಥನ

ಜಾಲ್ಗಿರಿ: ಕುಲತೊಂಭತ್ತು ಜಾತಿಗಳ ಕಥನ ಡಾ.ರವಿಕುಮಾರ್ ನೀಹ ಕಳೆದ ತೊಂಭತ್ತರ ದಶಕದ ಕೊನೆಯ ಕಾಲ. ನಾನು ಎಂಎ ಓದುತ್ತಿದ್ದಾಗ ಮೊದಲಬಾರಿಗೆ ‘ತುಂಬಾಡಿ ರಾಮಯ್ಯ’ ಅವರ ಹೆಸರು ಕೇಳಿದ್ದೆ. ಮೇಷ್ಟ್ರು ಎಸ್ ಜಿ ಸಿದ್ದರಾಮಯ್ಯ ಮತ್ತು ಡಾ.ರಾಜಪ್ಪ ದಳವಾಯಿ ಯವರು ಪಾಠ ಮಾಡುತ್ತಿದ್ದಾಗ ಆಗತಾನೇ ಬಿಡುಗಡೆಯಾಗಿದ್ದ ‘ಮಣೆಗಾರ’ ಆತ್ಮಕತೆಯ ಬಗೆಗೆ…


ತೊಗಲ ಮಂಟಪ: ಮೊದಲ ಮಾತು

ತೊಗಲ ಮಂಟಪ: ಮೊದಲ ಮಾತು ಬಂಜಗೆರೆ ಜಯಪ್ರಕಾಶ ಕೆ ಬಿ ಸಿದ್ದಯ್ಯನವರು ಈಗ ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಅವರು ನಮ್ಮನ್ನಗಲಿದ್ದಾರೆ. ಆದರೆ ಕವಿ ಕೆ ಬಿ ಸಿದ್ಧಯ್ಯ ನಮ್ಮೊಂದಿಗೇ ಇದ್ದಾರೆ. ಕನ್ನಡ ಕಾವ್ಯ ಚರಿತ್ರೆಯ ಬೆಳವಣಿಗೆಯ ಒಂದು ಮೈಲಿಗಲ್ಲಿನಂತೆ ಅವರು ಕಾವ್ಯಾಸಕ್ತ ತಲೆಮಾರುಗಳೊಂದಿಗೆ ಉಳಿದುಕೊಂಡಿರುತ್ತಾರೆ. ಅವರ ಅಪ್ರಕಟಿತ ನೀಳ್ಗವಿತೆ…


ಬ್ರಾಹ್ಮಣ ಸಮಸ್ಯೆ – ಅನು ರಾಮದಾಸ್

ಬ್ರಾಹ್ಮಣ ಸಮಸ್ಯೆ ಅನು ರಾಮದಾಸ್ (Anu Ramadas) ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya) ಬ್ರಾಹ್ಮಣರ ತಳಹದಿಯ ನಂಬಿಕೆ ವ್ಯವಸ್ಥೆಯು  ತಮ್ಮದೇ ಆದ ಆಧಾರ ಗ್ರಂಥಗಳ ಪ್ರಕಾರ ತಪ್ಪೊಪ್ಪಿಕೊಳ್ಳದ ಮೇಲರಿಮೆಯ  ಪ್ರಾಬಲ್ಯ (Supremacy) ವನ್ನು ಹೊಂದಿದೆ. ಮುಖಾಮುಖಿಯಾದಾಗ, ತರ್ಕಬದ್ಧ ಚಿಂತನೆಯಲ್ಲಿ ಪಾಲನ್ನು ಹೊಂದಿರುವ ಇಂದಿನ ಬ್ರಾಹ್ಮಣರು…


ಬೇಕಿರುವುದು ಹೊಸ ಭಾಷೆಯೋ ಹೊಸ ಪ್ರಶ್ನೆಗಳೋ ?

ಬೇಕಿರುವುದು ಹೊಸ ಭಾಷೆಯೋ ಹೊಸ ಪ್ರಶ್ನೆಗಳೋ ?   ಕೆ. ಪಿ. ಲಕ್ಷ್ಮಣ್, ವಿ. ಎಲ್. ನರಸಿಂಹಮೂರ್ತಿ ಗುರುಪ್ರಸಾದ್ ಕಂಟಲಗೆರೆಯವರು ದಲಿತ ಸಂಘರ್ಷ ಸಮಿತಿ ಹುಟ್ಟಿದ ೫೦ ವರ್ಷದ ನೆನಪಿಗೆ ಬರೆದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದಿರುವ ಕಿರಣ್ ಗಾಜನೂರು ಮತ್ತು ಶ್ರೀನಿವಾಸ್ ಮಣಗಳ್ಳಿ ಅವರ ಲೇಖನ ಕರ್ನಾಟಕದ ದಲಿತ…