ದಲಿತ – ಸರಕು ಅಥವಾ ಚಹರೆ? ಭಾಗ – ೧ ಗೌರವ್ ಸೋಮ್ ವಂಶಿ ( Gaurav Somwanshi ) ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya) ನಾನೀಗ ಹೇಳಲು ಹೊರಟಿರುವುದು 2016 ರಲ್ಲಿ ನಾನು ಬರೆದ ಲೇಖನಗಳನ್ನು ಆಧರಿಸಿಕಟ್ಟಿರುವುದು. ಅಲ್ಲದೇ ಇನ್ನಿತರ ವಿಚಾರಗಳ ಮೇಲೂ ನಿರ್ಮಿಸಿದ್ದೇನೆ, ಆದರೆ ಇದರ ಸಾರ ಮುಂಚಿನಂತೆಯೇ ಇದೆ ಹಾಗು ನಾನು ಅವುಗಳಲ್ಲಿ ಹೆಚ್ಚಿನದನ್ನು ಇಲ್ಲಿ ನೇರವಾಗಿ ಉಲ್ಲೇಖಿಸುತ್ತೇನೆ. ಈ ಲೇಖನಗಳನ್ನು ರೋಹಿತ್ ವೇಮುಲ ಸಾಂಸ್ಥಿಕ ಕೊಲೆಯ ನಂತರ ನಡೆದ ಘಟನೆಗಳನ್ನು ಆದ್ಧರಿಸಿ ಬರೆಯಲಾಗಿತ್ತು. ಆಗ ಹಲವಾರು ರೀತಿಯ ಪ್ರತಿಕ್ರಿಯೆಗಳು ಹೊರ ಹಮ್ಮಿದ್ದವು ಹಾಗು ಅವುಗಳಲ್ಲಿ ಒಂದು ರೀತಿಯ ನಿರ್ಧಿಷ್ಟ ಪ್ರವೃತ್ತಿ ಇತ್ತು. ಇದು ನನಗೆ ಪ್ರಚೋದನೆಯಾಗಿತ್ತು, ಅಲ್ಲದೆ ಮುಖ್ಯವಾಹಿನಿ ದಲಿತ ಪದ ಮತ್ತು ಜಾತಿಯ ಬಗ್ಗೆ ಪ್ರಶ್ನೆಗಳಿಗೆ ಸ್ವಾಗತಕ್ಕೆ ಸಿದ್ದವಾಗಿತ್ತು. ನನ್ನ ಬಾಲ್ಯದಲ್ಲಿ ಈ ಪದವನ್ನು ನನ್ನ ಕುಟುಂಬದಲ್ಲಿ ಆತ್ಮ ಚರಿತ್ರೆಯ ಬಗ್ಗೆ ಮಾತನಾಡುತ್ತಿದಾಗ ಮಾತ್ರ ಕೇಳಿದ್ದೆ ಆದರೆ ಹೊರಗೆಲ್ಲೂ ಕೇಳಿರಲಿಲ್ಲ. ಆದರೆ ನಂತರ ಇದು ಸಾರ್ವತ್ರಿಕವಾಯಿತು. ನಾನು ಈ ಪದವನ್ನು ಹೊರಗಡೆ ಕೇಳಿದಷ್ಟು ನನ್ನ ಮನೆಯಲ್ಲಾಗಲಿ ಅಥವಾ ಸಮುದಾಯದಲ್ಲಾಗಲಿ ಕೇಳಿಲ್ಲ. ಇದು ನಾವು ಎದುರುಗೊಂಡಾಗ ಹೇಳುವ ಪದವಲ್ಲ. ನಾವು ಎದುರುಗೊಂಡಾಗ ಹೇಳುವ ಪದ ಜೈ ಭೀಮ್. ಸಾಧಾರಣ ಮನುಷ್ಯರು ಅಂಬೇಡ್ಕರೈಟ್ ಪರಂಪರೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದು. ಹೊರಗಡೆ ದಲಿತ ಎಂದು ಕರೆಯುವುದು ಹೆಚ್ಚಾಗುತ್ತಿತ್ತು. ಹೀಗೆ ಹೊರಹಮ್ಮುತ್ತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಲೇಖನಗಳನ್ನು ಬರೆಯಲಾಗಿತ್ತು. ಹಿಂದೆ ಮಾಡುತ್ತಿದ್ದ ವಾದಗಳನ್ನು ಹೆಚ್ಚಾಗಿ ಸಾರಂಶದೊಂದಿಗೆ ಮುಂದಿಡುತ್ತಿದ್ದೇನೆ. ನಾವೆಲ್ಲರೂ ನೆನಪಿಸಿಕೊಳ್ಳಬೇಕಿದ್ದು…