ಹಾರೋಹಳ್ಳಿರವೀಂದ್ರ (Harohalli Ravindra)
ಲೋಫರ್ ರಾಮ ಎಂಬ ಪದಬಳಕೆಯು ಇಂದು ಬಹಳ ಚಚರ್ಿತ ಪದ ಬಳಕೆಯಾಗಿದೆ. ಈ ಪದ ಬಳಕೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಮಹೇಶ್ ಚಂದ್ರಗುರು ಅವರ ಮೇಲೆ ಬಾಡಿ ವಾರೆಂಟ್ ಜಾರಿಯಾಗಿ 17-06-2016 ರಂದು ಮೈಸೂರಿನ ಸೆಂಟ್ರಲ್ ಜೈಲ್ ಒಂದು ವಾರ ಹಾಕಲಾಯಿತು. ತದನಂತರ ದಿನಾಂಕ 24-06-2016 ರಂದು ಜಾಮೀನು ಸಿಕ್ಕಿ ಹೊರಬಂದರು. ಹಾಗಾದರೆ ಏನಿದು ಪ್ರಕರಣ? ಯಾರು ಈ ಲೋಫರ್ ರಾಮ? ಈ ಪದಬಳಕೆ ಅತಿರೇಖದ ಉಲ್ಲೇಖವೆ? ಎಂಬುದನ್ನು ಪರಿಶೀಲಿಸಬೇಕಿದೆ.
ಜನವರಿ 3, 2015 ರಂದು ಮೈಸೂರು ವಿಶ್ವವಿದ್ಯಾನಿಲಯ ಅಕಾಡೆಮಿಕ್ ಸ್ಟ್ಯಾಫ್ ಮಾನವ ಹಕ್ಕು ಮತ್ತು ಮಾಧ್ಯಮ ಎಂಬ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದರು. ಅದೇ ಕಾರ್ಯಕ್ರಮಕ್ಕೆ ಶ್ರೀಯುತ ಮಹೇಶ್ ಚಂದ್ರಗುರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ರಾಮನೆ ಈ ನೆಲದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡಿದ್ದಾನೆ. ಹಾಗಾಗಿ ಆತ ಒಬ್ಬ ಲೋಫರ್ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಕರುನಾಡ ಸೇನೆ ಎಂಬ ಕನ್ನಡ ಸಂಘಟನೆಯ ನೇತೃತ್ವದಲ್ಲಿ ರವಿಶಂಕರ್ ಎಂಬುವವರು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ನಂತರ ಇವರ ಮೇಲೆ ಮತ್ತೊಂದು ದೂರು ದಾಖಲಾಯಿತು. ಅದು ಯಾವುದೆಂದರೆ 2015 ಫೆಬ್ರವರಿಯಲ್ಲಿ ದಲಿತ್ ವೆಲ್ಫೇರ್ ಟ್ರಸ್ಡ್ನ ಮುಖ್ಯಸ್ಥರಾದ ಶಾಂತರಾಜು ಅವರು ಭಗವದ್ಗೀತೆಗೆ ಸಂಬಂಧಿಸಿದಂತೆ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಕೆ.ಎಸ್.ಭಗವಾನ್ ಹಾಗೂ ಪ್ರೊ.ಮಹೇಶ್ ಚಂದ್ರಗುರು ಸೇರಿದಂತೆ ಹಲವರು ಅತಿಥಿಗಳಾಗಿದ್ದರು. ಆ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಅವರು ಭಗದವ್ಗೀತೆಯಲ್ಲಿ ಶೂದ್ರರು ಮತ್ತು ಸ್ತ್ರೀಯರನ್ನು ನಿಂಧಿಸಿರುವ ಶ್ಲೋಕವನ್ನು ಸುಡಬೇಕು ಎಂದರೆ, ಪ್ರೊ.ಅರವಿಂದ ಮಾಲಗತ್ತಿ ಅವರು ಭಗವದ್ಗೀತೆಯೊಂದು ರೋಗಗ್ರಸ್ಥ ಗ್ರಂಥ ಎಂದು ಕರೆದಿದ್ದರು. ಅದೇ ಕಾರ್ಯಕ್ರಮದಲ್ಲಿ ಪ್ರೊ.ಮಹೇಶ್ ಚಂದ್ರಗುರು ಅವರು ನಿಮ್ಮ ಮನೆಯಲ್ಲಿರುವ ದೇವರ ಫೊಟೊಗಳನ್ನು ಮೋರಿಗೆ ಎಸೆಯಿರಿ ಎಂದು ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿಯೂ ಕೂಡ ಪ್ರೊ.ಮಹೇಶ್ ಚಂದ್ರಗುರು ಅವರ ಮೇಲೆ ಅದೇ ಜಯಲಕ್ಷ್ಮಿಪುರಂನಲ್ಲಿ ಪ್ರಕರಣ ದಾಖಲಾಗಿತ್ತು.
ಹೌದು, ಮಹೇಶ್ ಚಂದ್ರಗುರು ಅವರು ದೇವರ ಫೊಟೊಗಳನ್ನು ಚರಂಡಿಗೆ ಎಸೆಯಿರಿ ಎಂದು ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ. ಬಸವಲಿಂಗಪ್ಪನವರು ಕೂಡ ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗಕ್ಕೆ ಕಾರ್ಯಕ್ರಮಕ್ಕೆಂದು ಬಂದಿದ್ದಾಗ ದೇವರ ಫೋಟೊಗಳನ್ನು ಗಟಾರಕ್ಕೆ ಎಸೆಯಿರಿ ಎಂಬ ಹೇಳಿಕೆ ನೀಡಿದ್ದರು. ಅಷ್ಟೇ ಯಾಕೆ ಶಾಲೆಯ ದಿನಗಳಲ್ಲಿ ನಾನು ಕೂಡ ದೇವರ ಫೋಟೊಗಳನ್ನು ಕಿತ್ತು ಕಕ್ಕ ಮಾಡುವ ತಿಪ್ಪೆ ಗುಂಡಿಗೆ ಹಾಕಿದ್ದೆ, ನಮ್ಮ ಊರಿನ ಹನುಮಂತನ ವಿಗ್ರಹಕ್ಕೆ ಉಚ್ಚೆ ಮಾಡಿದ್ದೆ. ಅದರಲ್ಲಿ ತಪ್ಪೇನಿದೆ. ನಮ್ಮ ಊರಿನಲ್ಲಿ ಜನರು ಎದುರಿಸುತ್ತಿದ್ದರು, ದೇವರನ್ನು ಕೈ ಮುಗಿಯಬೇಕು, ಗೌರವಿಸಬೇಕು, ನೆನೆಯಬೇಕು, ದೇವರನ್ನು ನಿಂದಿಸಿದರೆ ಅಪಮಾನ ಮಾಡಿದರೆ ತೊಂದರೆಯಾಗುತ್ತದೆ ಎಂದು ಹೇಳುತ್ತಿದ್ದರು. ಹಾಗಾಗಿ ದೇವರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲದಿಂದ ತಿಪ್ಪೆಗೆ ದೇವರ ಫೊಟೊ ಎಸೆಯುವುದು, ದೇವರ ವಿಗ್ರಹಕ್ಕೆ ಉಚ್ಚೆ ಉಯ್ಯುವುದು ಮಾಡುತ್ತಿದ್ದೆ. ಅದಾದ ನಂತರ ದೇವರಿಂದ ಯಾವ ಪ್ರತಿಕ್ರಿಯೆಯು ಬರಲಿಲ್ಲ. ಅವಾಗಲೇ ತಿಳಿದಿದ್ದು ದೇವರ ಬಳಿ ಯಾವುದೇ ಶಕ್ತಿಯಿಲ್ಲ ಎಂದು. ಯಾವುದೇ ಶಕ್ತಿ ಇರದ ದೇವರನ್ನು ಇಟ್ಟುಕೊಳ್ಳುವುದರಿಂದ ಯಾವುದಾದರು ಪ್ರಯೋಜನ ಉಂಟೇ? ಹಾಗಾಗಿ ಚರಂಡಿಗೆ ಎಸೆಯಿರಿ ಎಂಬ ಹೇಳಿಕೆಯಲ್ಲಿ ತಪ್ಪೇನಿದೆ?
ಮಹೇಶ್ ಚಂದ್ರಗುರು ಅವರ ನಿಲುವು ಸರಿಯಾಗಿದೆ. ಆದರೆ ಅದನ್ನು ಗ್ರಹಿಸುವ ಸಮಾಜದಲ್ಲಿ ಕೋಮುವಾದಿಗಳು ಹೇಗೆ ಬೇಕೊ ಹಾಗೆ ನೊಡುತ್ತಿದ್ದರೆ. ಆ ಮೂಲಕ ಸಮಾಜದ ಅಭಿವ್ಯಕ್ತಿಯನ್ನು ಧಮನಿಸುವ ಕಾರ್ಯಕ್ಕೆ ನಿಂತಿದ್ದಾರೆ. ರಾಮ ಒಬ್ಬ ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾನೆ ಎಂಬುದು ಸತ್ಯವಾದ ಮಾತು. ಈ ದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿರುವುದೇ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಗ್ರಂಥಗಳಿಂದ. ರಾಮನೇ ಬಹುದೊಡ್ಡ ಮಾನವ ಹಕ್ಕುಗಳ ವಿರೋಧಿ. ಮರದ ಮರೆಯಲ್ಲಿ ನಿಂತು ವಾಲಿಯನ್ನು ಕೊಂದ ರಾಮ, ಒಬ್ಬ ಬ್ರಾಹ್ಮಣನ ಮಾತು ಕೇಳಿ ಶಂಭೂಕನ ತಲೆ ಕಡಿದ ರಾಮ, ಮಾನವ ಹಕ್ಕು ವಿರೋಧಿ ತಾನೆ? ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಈ ದೇಶದಲ್ಲಿನ ಅಪರಾಧಿಗಳ ಸಾಲಿನಲ್ಲಿ ರಾಮನನ್ನು ಸೇರಿಸಬೇಕು. ರಾಮನನ್ನು ಅವಹೇಳನ ಮಾಡಲಾಗಿದೆ ಎಂದು ದೂರು ದಾಖಲಿಸಿ ಜೈಲಿಗೆ ಕಳುಹಿಸಲು ಮುಂದಾಗುತ್ತಾರೆ. ನಿಜ ಹೇಳಬೇಕೆಂದರೆ ರಾಮನನ್ನೆ ಮೊದಲು ಜೈಲಿಗೆ ಕಳುಹಿಸಬೇಕು. ಯಾಕೆಂದರೆ ಆತನೂ ಕೂಡ ಜೀವವಿರೋಧಿ ಕೆಲಸಗಳನ್ನು ಮಾಡಿದ್ದಾನೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮತ್ತೊಂದು ಅಂಶವನ್ನು ಇಲ್ಲಿ ಉಲ್ಲೇಖಿಸಿಬೇಕಾಗಿದೆ. ರಾಮ ಅಯೋಧ್ಯೆಗೆ ತೆರಳಿದ ಮೇಲೆ ರಾಮ ಮಾಡಿದೇನು? ರಾಮ ರಾಜನಾಗುತ್ತಾನೆ, ಸೀತೆ ರಾಣಿಯಾಗುತ್ತಾಳೆ, ಆದರೆ ಅನಂತರ ಸೀತೆ ತನ್ನ ಪಟ್ಟ ಕಳೆದುಕೊಳ್ಳುತ್ತಾಳೆ. ಯಾಕೆಂದರೆ ಸೀತೆ ಗರ್ಭವತಿಯಾದ ನಂತರ ಜನರು ರಾಮನನ್ನು ದೂಷಿಸಲು ಪ್ರಾರಂಭಿಸಸುತ್ತಾರೆ. ಇದರಿಂದ ಪಾರಾಗಲು ರಾಮ ಮಾಡುವ ಉಪಾಯವೇನು? ರಾಮ ಒಂದು ದಿನ ಸೀತೆಯನ್ನು ಏನಾದರು ಬಯಕೆಯೆ ಎಂದು ಕೇಳುತ್ತಾನೆ. ಅದಕ್ಕೆ ಹೌದು ಎನ್ನುತ್ತಾಳೆ, ಅದೇನೆಂದು ರಾಮ ಕೇಳುತ್ತಾನೆ, ಅದಕ್ಕವಳು ಗಂಗಾನದಿಯ ತೀರದಲ್ಲಿರುವ ಆಶ್ರಮದ ಹಣ್ಣು ಮತ್ತು ಗೆಡ್ಡೆಗೆಣಸುಗಳನ್ನು ಸೇವಿಸಿಕೊಂಡು ಒಂದು ರಾತ್ರಿ ಮಟ್ಟಿಗಾದರು ಇರಬೇಕು ಎನ್ನುತ್ತಾಳೆ. ಇದನ್ನೆ ನೆಪ ಮಾಡಿಕೊಂಡು ರಾಮ ನಾಳೆಯೇ ಕಳುಹಿಸುವೆ ಎಂದು ಹೇಳಿ. ಇಂದಿನ ದಿನವೇ ತಮ್ಮರೊಡನೆ ರಹಸ್ಯ ಸಭೆ ಕರೆದು ಕಾಡಿಗಟ್ಟುವ ಕಾರ್ಯಗತವನ್ನು ಯೋಚಿಸುತ್ತಾನೆ. ನಂತರ ಲಕ್ಷ್ಮಣನ ಮೂಲಕ ಒಂದು ರಥ ಸಿದ್ಧ ಮಾಡಿ ಗಂಗಾನದಿಯ ತೀರಕ್ಕೆ ಬಿಟ್ಟು ಬರುವಂತೆ ಆದೇಶಿಸುತ್ತಾನೆ. ಆ ಮೂಲಕ ಆಕೆಯನ್ನು ರಾಜ್ಯದಿಂದ ಹೊರಹಾಕುವ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುವ ಈ ರಾಮ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಮುಖ ಆರೋಪಿ ಎಂದು ಕರೆಯಲೇ ಬೇಕಾಗಿದೆ.
ಸರಿ, ಇನ್ನು ಮಹೇಶ್ ಚಂದ್ರಗುರು ಅವರು ಹೇಳುವ ಲೋಫರ್ ಪದ ಬಳಕೆಗೆ ಬರೋಣ, ಅವರು ಲೋಫರ್ ಎಂದರು ಎಂಬ ಕಾರಣಕ್ಕಾಗಿಯೇ ಪ್ರಕರಣ ದಾಖಲಾಗಿದ್ದು. ಇಷ್ಟಕ್ಕು ಲೋಫರ್ ಎಂದರೆ ಏನು? ಅದರ ಕನ್ನಡಾರ್ಥ ಹೇಗಿದೆ ಎಂದು ನೊಡೊಣ, ಲೋಫರ್ನ ಕನ್ನಾಡರ್ಥಗಳು ಉಂಡಾಡಿ, ಸೊಂಬ, ಮೈಯ್ಗಳ್ಳ, ಪೋಲಿ ತಿರುಗುವವನು, ಕೆಲಸವಿಲ್ಲದೆ ಸುತ್ತಾಡುವವನು, ಅಲೆಮಾರಿ ಹೀಗೆ ಹಲವಾರು ಅರ್ಥಗಳನ್ನು ಸೂಚಿಸುತ್ತದೆ. ರಾಮನ ವನವಾಸವೇ ಸಂಪೂರ್ಣವಾಗಿ ಕೆಲಸವಿಲ್ಲದೆ ಸುತ್ತಾಡುವುದೇ ಆಗಿದೆ. ಹೀಗಿರುವಾಗ ಆತನನ್ನು ಲೋಫರ್ ಎಂದು ಕರೆದಿರುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಸ್ವತಃ ಸೀತೆಯೆ ರಾಮನನ್ನು ಕೆಲಸಕ್ಕೆ ಬಾರದ ಅಯೋಗ್ಯ ಎಂದು ಕರೆದಿದ್ದಾಳೆ, ಅದು ಸಾಲದೇ, ಹೆಂಡತಿಯನ್ನು ಬಾಡಿಗೆ ಕೊಟ್ಟು ಜೀವಿಸುವಂತವನು, ನೀನೊಬ್ಬ ವ್ಯಭಿಚಾರದಿಂದ ಲಾಭಗಳಿಸಬೇಕೆಂದುಕೊಂಡಿದ್ದೀಯ ಎಂದು ರಾಮನನ್ನು ಹಿಗ್ಗಾಮಗ್ಗಾ ಜರಿದಿದ್ದಾಳೆ. ಅಂದ ಮೇಲೆ ಸೀತೆಯ ದೃಷ್ಟಿಯಲ್ಲಿ ರಾಮ ಲೊಫರ್ ತಾನೆ? ಅಂದ ಮೇಲೆ ಪ್ರೊ.ಮಹೇಶ್ ಚಂದ್ರಗುರು ಅವರು ರಾಮ ಒಬ್ಬ ಲೋಫರ್ ಎಂದು ಹೇಳಿರುವುದರಲ್ಲಿ ತಪ್ಪೇನಿದೆ? ಹಾಗಾಗಿ ರಾಮ ಒಬ್ಬ ಲೋಫರ್ ಎನ್ನುವುದನ್ನು ನಾನು ಕೂಡ ಒಪ್ಪುತ್ತೇನೆ.
ದಿನಾಂಕ 24-06-2016 ರಂದು ಮಹೇಶ್ ಚಂದ್ರಗುರು ಅವರಿಗೆ ಜಾಮೀನು ಸಿಕ್ಕಾಗ ಜೈಲಿನಿಂದ ಹೊರಬಂದರು. ಹಲವು ಸಂಘಟನೆಗಳು ಅವರನ್ನು ಆಹ್ವಾನಿಸಲು ಅಲ್ಲಿಗೆ ಹೋಗಿದ್ದರು. ಹೊರಬರುತ್ತಿದ್ದಂತೆಯೆ ಅವರ ಕತ್ತಿಗೆ ಹಾರ ಹಾಕಿ ಸ್ವಾಗತಿಸಿದರು. ಅದೇ ಸಂದರ್ಭದಲ್ಲಿ ಬಂದಿದ್ದ ಪತ್ರಕರ್ತರು ಇದರ ಬಗ್ಗೆ ನೀವು ಏನು ಹೇಳಲು ಇಚ್ಚಿಸುತ್ತೀರಿ ಎಂದು ಕೇಳಿದಾಗ. ಪತ್ರಕರ್ತರಿಗೆ ಮಹೇಶ್ ಚಂದ್ರಗುರು ಅವರು ಹೇಳಿದ್ದೇನು ಗೊತ್ತೆ?
ನೋ ರಾಮ್ ಜೈಭೀಮ್
ಮಹೇಶ್ ಚಂದ್ರಗುರು ಅವರು ಹೇಳಿದ ನೋ ರಾಮ್, ಜೈಭೀಮ್ ಎನ್ನುವುದು ಒಂದು ರೂಪಕ ಹಾಗೂ ಹೊಸ ಪರಿಭಾಷೆಯೆ ಆಗಿದೆ. ಈ ನೆಲದಲ್ಲಿ ಜೀವಸಂಕುಲದ ಆಧಾರದ ಮೇಲೆ ಭಿಮ ಮತ್ತು ರಾಮರನ್ನು ಹೇಗೆ ನೋಡಬೇಕು ಎಂಬುದು ಈ ರೂಪಕದ ಮೂಲಕ ವ್ಯಕ್ತವಾಗುತ್ತದೆ. ರಾಮ ಸಂಪೂರ್ಣವಾಗಿ ಬ್ರಾಹ್ಮಣ್ಯವಾದಿ, ಆತ ಸಮಾನತೆಯ ವಿರೋಧಿ. ವರ್ಣವ್ಯವಸ್ಥೆಯನ್ನು ಕರಾರು ಒಕ್ಕಾಗಿ ಪಾಲಿಸಿದವನು. ಈ ರಾಮನಿಂದ ಇಡೀ ಸಮಾಜವು ರೋಗಗ್ರಸ್ಥ ಸಮಾಜವಾಗುವತ್ತ ಹೊರಟಿದೆ. ಆದರೆ ಭಿಮರದು ಆಗಲ್ಲ, ರಾಮ ಮಾನವೀಯ ನೆಲೆಯ ವಿರೋಧಿಯಾದರೆ. ಭೀಮ ಬಹುದೊಡ್ಡ ಮಾನವತಾವಾದಿ. ಸಮಬಾಳು ಮತ್ತು ಸಮಪಾಲು ಎಂಬುದನ್ನು ಈ ದೇಶದ ಕಣ್ಣಾಗಿಸಿದವರು. ಇಲ್ಲಿ ಪ್ರತಿಯೊಬ್ಬರು ಬದುಕಲು ಹಕ್ಕುಳ್ಳವರಾಗಿದ್ದಾರೆ. ಆ ಕಾರಣಕ್ಕೆ ಭೀಮ ಎಲ್ಲರಿಗೂ ಪ್ರಸ್ತುತವಾಗುತ್ತಾರೆ. ಆದರೆ ರಾಮ ಈ ಕಾಲಕ್ಕಲ್ಲ ಯಾವ ಕಾಲಕ್ಕು ಪ್ರಸ್ತುತವಲ್ಲ ಎಂಬುದೇ ಈ ರೂಪಕದ ಪರಿಭಾಷೆಯಾಗಿದೆ. ಆದರೆ ರಾಮ ಬೇಕೊ? ಅಥವಾ ಭೀಮ ಬೇಕೊ? ಎಂಬುದನ್ನು ದೇಶದ ಸಮಾಜಿಕವಾಗಿ ನಿಂತು ಸೆಣಸಾಡುತ್ತಿರುವ ಜನ ನಿರ್ಧರಿಸಬೇಕಿದೆ.
~~~
ಹಾರೋಹಳ್ಳಿ ರವೀಂದ್ರ :ಹಾರೋಹಳ್ಳಿ ಅವರು ತಾಯಿ ಮಹದೇವಮ್ಮ, ತಂದೆ ಅಂದಾನಿ ಅವರ ಮಗನಾಗಿ 27 ಜನವರಿ 1986 ರಲ್ಲಿ ಮೈಸೂರು ತಾಲ್ಲೂಕು, ವರುಣಾ ಹೋಬಳ್ಳಿಗೆ ಹೊಂದಿಕೊಂಡಿರುವ ಹಾರೋಹಳ್ಳಿ ಗ್ರಾಮದದಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನಲ್ಲೆ ಮುಗಿದಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ (ಎಂ.ಎ ಪತ್ರಿಕೋದ್ಯಮ). ಇವರು ಮೂಲತಹ ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡವರು. ಇವರ ಇದುವರೆಗಿನ ಕೃತಿಗಳು, 2012ರಲ್ಲಿ ಮನದ ಚೆಲುವು ಮುದುಡಿದಾಗ(ಕವನ ಸಂಕಲನ). 2014ರಲ್ಲಿ ಹಿಂದುತ್ವದೊಳಗೆ ಭಯೋತ್ಪಾದನೆ(ವೈಚಾರಿಕ ಕೃತಿ). 2015ರಲ್ಲಿ ಹಿಂದೂಗಳಲ್ಲದ ಹಿಂದೂಗಳು(ಬಿಡಿ ಲೇಖನಗಳ ಕೃತಿ). ಇವರ ನಾಲ್ಕನೇ ಕೃತಿ ಎಬಿವಿಪಿ ಭಯೋತ್ಪಾದನೆ ಎಂಬ ಕೃತಿಯು ಹಚ್ಚಿನಲ್ಲಿದೆ. ಇದಲ್ಲದೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿರುತ್ತಾರೆ.
Be the first to comment on "ನೋ ರಾಮ್, ಜೈಭೀಮ್"