ಯು.ಆರ್. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’
ವಿ ಎಲ್ ನರಸಿಂಹಮೂರ್ತಿ
ತಾವು ಬಾಯಲ್ಲಿ ಹೇಳುವುದಕ್ಕೂ ಬದುಕುವುದಕ್ಕು ಅಜಗಜಾಂತರ ವ್ಯತ್ಯಾಸ ಇದ್ದರೂ ತೋರಿಕೆಯ ‘ಕ್ರಾಂತಿಕಾರತ್ವ’ ಹೇಗೆ ಹಲಬಗೆಯ ಅನುಕೂಲಗಳನ್ನು ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಕನ್ನಡದ Star ಲೇಖಕರಲ್ಲೊಬ್ಬರಾದ ಯು.ಆರ್. ಅನಂತಮೂರ್ತಿಯವರನ್ನು ಗಮನಿಸಿಬಹುದು.
ಅನಂತಮೂರ್ತಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಸಣ್ಣಕತೆಗಳು ಮತ್ತು ‘ಸಂಸ್ಕಾರ’ ಕಾದಂಬರಿಯ ಮೂಲಕ ಬ್ರಾಹ್ಮಣ ಜಾತಿಯೊಳಗಿನ ಗಲೀಜನ್ನು expose ಮಾಡುವುದಕ್ಕೆ ಪ್ರಯತ್ನಿಸಿದರು. ಈ ಕಾರಣಕ್ಕೆ ಬ್ರಾಹ್ಮಣ ವಿರೋಧಿ ಅನ್ನಿಸಿಕೊಂಡು ತಮ್ಮನ್ನು ತಾವು Critical Insider ಅಂತ establish ಮಾಡಿಕೊಂಡರು. ಇದಕ್ಕೆ ಪೂರಕವಾಗಿ ಬ್ರಾಹ್ಮಣ ಧರ್ಮವನ್ನೆ ಹಿಂದೂ ಧರ್ಮದ ವಿಮರ್ಶೆ ಅಂತ ಭಾವಿಸಿರುವ ವೈದಿಕ ವಿದ್ವತ್ ವಲಯ ಅನಂತಮೂರ್ತಿಯವರನ್ನು ಹಿಂದೂ ಧರ್ಮದ ಸಮರ್ಥ ವಿಮರ್ಶಕ, ಚಿಕಿತ್ಸಕ ದೃಷ್ಟಿಯ ಬರಹಗಾರ ಅಂತ ಐವತ್ತು ವರ್ಷ ಮೆರೆಸಿತು. ಆದರೆ ಇವತ್ತು ಅನಂತಮೂರ್ತಿಯವರ ಸಾಹಿತ್ಯವನ್ನು ಸರಿಯಾಗಿ ಓದಿದರೆ ಅದು ಒಂದು ಕಡೆ ಬ್ರಾಹ್ಮಣರನ್ನ ಟೀಕಿಸುತ್ತಲೆ ಇನ್ನೊಂದು ಕಡೆ ಬ್ರಾಹ್ಮಣರ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಟಿಪಿಕಲ್ ‘ಬ್ರಾಹ್ಮಣ ಉದಾರವಾದಿ ಸಾಹಿತ್ಯ’ ಆಗಿಯೇ ಉಳಿದಿದೆ ಎನ್ನುವುದು ಗೊತ್ತಾಗುತ್ತದೆ.
ಈ ಬ್ರಾಹ್ಮಣ ಲೇಖಕರು ಆಧುನಿಕತೆಯನ್ನು ಕೂಡ ಬ್ರಾಹ್ಮಣೀಕರಣ ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಬುದ್ದಿವಂತರು.
ಇನ್ನು ತಮ್ಮ ಜಾತಿಯನ್ನು ಕ್ರಿಟಿಕಲ್ ಆಗಿ ನೋಡುವುದಕ್ಕೆ ತಾವು ಅಂತರ್ ಧರ್ಮೀಯ ವಿವಾಹವಾಗುವ ಮೂಲಕ ತಮ್ಮ ಕುಟುಂಬದಲ್ಲಿ ನಡೆಸಿದ ಕ್ರಾಂತಿಯೇ ಕಾರಣ ಅಂತ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿದ್ದ ಅನಂತಮೂರ್ತಿ ಕೊನೆಗೂ ಬ್ರಾಹ್ಮಣರಾಗಿಯೇ ಉಳಿದರೆ ವಿನಃ ತನ್ನ ಜಾತಿಯ ಆಚೆಗೆ ಬೆಳೆಯಲೇ ಇಲ್ಲ. ತೇಜಸ್ವಿ ಒಂದು ಕಡೆ ಹೇಳಿರುವ ಹಾಗೆ ಅನಂತಮೂರ್ತಿಯವರ ಇಡಿ ಸಾಹಿತ್ಯದಲ್ಲಿ ಬ್ರಾಹ್ಮಣ್ಯ ಬಿಟ್ಟರೆ ಇನ್ನೇನೂ ಇಲ್ಲ.
ಇನ್ನು ಅನಂತಮೂರ್ತಿ ತೀರಿಕೊಂಡಾಗ ಕಲಾಗ್ರಾಮದಲ್ಲಿ ಸೇರಿದ್ದ ಪ್ರಗತಿಪರರಿಗೆಲ್ಲ ಅವರ ಅಂತ್ಯ ಸಂಸ್ಕಾರವನ್ನು ವೈದಿಕ ವಿಧಿವಿಧಾನಗಳ ಪ್ರಕಾರ ನಡೆಸಿದ್ದು ಆಘಾತವನ್ನುಂಟು ಮಾಡಿತ್ತು. ಕ್ರಿಶ್ಚಿಯನ್ ಧರ್ಮದ ಅನಂತಮೂರ್ತಿಯವರ ಪತ್ನಿಯವರ ಕಾರಣಕ್ಕೆ ಆದರೂ ಜಾತಿ ಮತ ಮೀರಿ ನಡೆಯಬೇಕಿತ್ತು ಎನ್ನುವ ಮಾತನ್ನ ಹಲವರು ಆಡಿದರು.
‘ಬ್ರಾಹ್ಮಣ್ಯ ಅನಂತಮೂರ್ತಿಯನ್ನು ಬಿಟ್ಟರೂ ಅನಂತಮೂರ್ತಿ ಬ್ರಾಹ್ಮಣ್ಯವನ್ನು ಬಿಡಲೇ ಇಲ್ಲ.’
ಈ ಬ್ರಾಹ್ಮಣರು ಪ್ರಗತಿಪರರಾದರು ಪ್ರತಿಗಾಮಿಗಳಾದರೂ ಎಲ್ಲ ಕಡೆ ಸಲ್ಲುತ್ತಾರೆ ಎನ್ನುವುದಕ್ಕೆ ಯು.ಆರ್. ಅನಂತಮೂರ್ತಿ ಮತ್ತು ಎಸ್.ಎಲ್. ಭೈರಪ್ಪ ಒಳ್ಳೆಯ ಉದಾಹರಣೆಗಳು.
ಬ್ರಾಹ್ಮಣ ಜಾತಿ ತಂದು ಕೊಡುವ privilege ಅನ್ನು ಭೈರಪ್ಪ ಹೇಗೆ ಬಿಡುವುದಕ್ಕೆ ತಯಾರಿಲ್ಲವೋ ಅನಂತಮೂರ್ತಿ ಕೂಡ ಹಾಗೇ ತಯಾರಿರಲಿಲ್ಲ.
ಅನಂತಮೂರ್ತಿ ತರ ಪ್ರಗತಿಪರರಾದರೆ ಬ್ರಾಹ್ಮಣರಾದರೂ ಎಷ್ಟು ಜಾತ್ಯಾತೀತರಾಗಿದ್ದಾರೆ, ಅಂತರ್ಜಾತಿ ವಿವಾಹವಾಗಿದ್ದಾರೆ, ಮಧ್ಯ ಮಾಂಸ ಸೇವಿಸಿ radical ಆಗಿದ್ದಾರೆ ಅಂತ ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ.
ಎಸ್.ಎಲ್. ಭೈರಪ್ಪನ ತರ ಪ್ರತಿಗಾಮಿಗಳಾದರೆ ಎಂತಹ ಮಹಾಬ್ರಾಹ್ಮಣ ಬ್ರಾಹ್ಮಣ ಧರ್ಮದ ಉಳಿವಿಗಾಗಿ ಎಷ್ಟೆಲ್ಲ ಹೋರಾಟ ಮಾಡುತ್ತಾರೆ ಅಂತ ಗೌರವಿಸುತ್ತಾರೆ.
ಒಟ್ಟಿನಲ್ಲಿ ಇವರಿಬ್ಬರು ಸೇರುವುದು ಒಂದೇ ಬಿಂದುವಿಗೇ. ಹಾಗಾಗಿಯೇ ಈ ಬ್ರಾಹ್ಮಣರು ಎಲ್ಲ ಕಡೆ ಸಲ್ಲುವ ನಾಣ್ಯಗಳು.
ಇವತ್ತು ಬ್ರಾಹ್ಮಣರನ್ನು ತುಚ್ಛಿಕರಿಸಲಾಗುತ್ತದೆ ಎನ್ನುವ ರೋಹಿತ್ ಚಕ್ರತೀರ್ಥನ ಮಾತಿಗೆ ಕೇವಲ ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣರಷ್ಟೆ ಅಲ್ಲ ಪ್ರಗತಿಪರ ಬ್ರಾಹ್ಮಣರೂ ಒಳಗೊಳಗೆ ಹೌದಲ್ವ ಅಂದುಕೊಂಡಿರುತ್ತಾರೆ.
Progressive, liberal, Radical, Rational ಆಗುವುದು ಏನು ಅಂತ ಬ್ರಾಹ್ಮಣರು set ಮಾಡುವ model ಗಳನ್ನ ನಂಬಿದರೆ ನಾವು ವೈದಿಕರ ಟ್ರ್ಯಾಪ್‌ಗೆ ಬೀಳುತ್ತೇವೆ. ಅವರ ಉದ್ದೇಶಗಳನ್ನು ನಾವು ಪೂರೈಸುತ್ತಿರುತ್ತೇವೆ. ಅದಕ್ಕಾಗಿ ಎಚ್ಚರ ವಹಿಸಿ ನಮ್ಮ ನಮ್ಮ ಅನುಭವಗಳ ಆಧಾರದ ಮೇಲೆ ನಾವು ಎಷ್ಟು radical ಆಗಬೇಕು ಅನ್ನುವುದನ್ನು ನಾವೇ ನಿರ್ಧರಿಸಿಕೊಳ್ಳಬೇಕು.
ಅನಂತಮೂರ್ತಿ ಬೈರಪ್ಪನಷ್ಟೆ ಅಪಾಯಕಾರಿಯಾಗಬಲ್ಲ ಪ್ರತಿಗಾಮಿ ಬರಹಗಾರ ಎನ್ನುವುದಕ್ಕೆ ಅವರ ‘ಬೆತ್ತಲೆ ಪೂಜೆ ಯಾಕೆ ಕೂಡದು’ ಎನ್ನುವ ಅವರ ಒಂದು ಲೇಖನ ಸಾಕು.
ನಮ್ಮ ನಮ್ಮ ಸಮುದಾಯಗಳಿಗೆ ಹಿಂದೂಧರ್ಮ ಅಂದರೆ ಬ್ರಾಹ್ಮಣ ಧರ್ಮ ಅನ್ನುವುದನ್ನು ಆದಷ್ಟು ಬೇಗ ಮನದಟ್ಟು ಮಾಡಿಸಬೇಕು.
———————————————————-
ವಿ ಎಲ್ ನರಸಿಂಹಮೂರ್ತಿ
ಚಿಂತಕರು , ನ್ಯಾಷನಲ್ ಕಾಲೇಜು ಅಧ್ಯಾಪಕರು.