ಪುಸ್ತಕ ಓದುವ ಮುನ್ನ
EWS ಮೀಸಲಾತಿ, ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲೇ, ಕ್ಷಿಪ್ರ ವಾಗಿ ಮೀಸಲಾತಿ ಬಗ್ಗೆ ಕಾಡುತ್ತಿದ್ದವರನ್ನು ಮೀಸಲಾತಿ-ಫಲಾನುಭವಿಗಳಾಗಿ ಮಾಡುವ ಚಮತ್ಕಾರವನ್ನು ಬಹಿರಂಗಪಡಿಸಿತು. ಅವರ ಮೀಸಲಾತಿ ವಿರೋಧಿ ರಾಜಕೀಯ ಮತ್ತು ಸಂಸ್ಕೃತಿಗೆ ಯಾವುದೇ ಪಶ್ಚಾತ್ತಾಪ, ವಿಷಾದ ಅಥವಾ ಅವಮಾನವನ್ನು ತೋರಿಸಲಿಲ್ಲ. ಮೀಸಲಾತಿ ನೀತಿಯ ಅಸ್ತಿತ್ವಕ್ಕಾಗಿ, ಬಹುಜನ ವಿದ್ಯಾರ್ಥಿ, ಪೋಷಕರು , ಉದ್ಯೋಗಿಗಳು ಮತ್ತು ಸಹೋದ್ಯೋಗಿಗಳನ್ನು ದಶಕಗಳ ಕಾಲ ಕಟುವಾದ ಮತ್ತು ಸಂಪೂರ್ಣವಾಗಿ ಕಾನೂನುಬದ್ದವಾಗಿಯೇ ಸಾಂಸ್ಥಿಕ ಅವಮಾನಕರ ಕಟು ಹೇಳಿಕೆಗಳಿಗೆ ಮತ್ತು ದಂಡನೆಗೆ ಒಳಪಡಿಸಿದ ಅನುಭವಗಳಿಗೆ ಯಾವುದೇ ಕ್ಷಮೆಯನ್ನು ಸಲ್ಲಿಸಲಿಲ್ಲ. ಮತ್ತು ಮೀಸಲಾತಿಯಿಂದ ಅರ್ಹತೆ ಗೆ ಧಕ್ಕೆ ಬರುತ್ತದೆಂಬ ಬ್ರಾಹ್ಮಣರ ಭಯವೂ ಹಾಗೆಯೇ ಮಾಯವಾಯಿತು.
ಹೌದು , ಸವರ್ಣೀಯರು ಮತ್ತು ಅವರ ಮೂಲತತ್ವವು, ಮಾರ್ಫ್ ಮಾಡುವುದು, ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯವನ್ನು ಬಲಪಡಿಸಲು ಯಾವುದೇ ಅವಕಾಶವನ್ನು ಅಳವಡಿಸಿಕೊಳ್ಳುವುದು.
ಬಹುಜನರು ಏನು ಮಾಡುತ್ತಿದ್ದರು ಎಂಬುದು ಪ್ರಶ್ನೆ. ಇತಿಹಾಸ, ಕ್ರಿಯೆ ಮತ್ತು ನಿಷ್ಕ್ರಿಯತೆಯ ತೀರ್ಪುಗಾರ. EWS ರಿಯಾಲಿಟಿ ಆಗುತ್ತಿರುವುದು ಬಹುಜನರ ಸಶಕ್ತ ವರ್ಗಗಳು ನಿಷ್ಕ್ರಿಯತೆಯಲ್ಲಿ ಹೆಪ್ಪುಗಟ್ಟಿರುವುದಕ್ಕೆ ಸಾಕ್ಷಿಯಾಗಿದೆ, ಅಲ್ಲದೆ ಆಳುವ ವರ್ಗಗಳ ಕ್ರಿಯಾಶೀಲತೆಯೂ ಕೂಡ.
ಬಹುಜನರಿಗೆ EWS ನೀತಿಯ ನಿರೀಕ್ಷಿತ ಫಲಿತಾಂಶವನ್ನು The Shared Mirror 2021 ರಲ್ಲಿ ಪ್ರಕಟಿಸಿದ ‘EWS: Quota To End All Quotas’ ಎಂಬ ಪುಸ್ತಕದ ಶೀರ್ಷಿಕೆಯಲ್ಲಿ ಸೆರೆಹಿಡಿಯಲಾಗಿದೆ. ರೌಂಡ್ ಟೇಬಲ್ ಇಂಡಿಯಾದ ಲೇಖಕರು ಮತ್ತು ಸಂಪಾದಕರು ನಡೆಸಿದ ಚರ್ಚೆಗಳು ಮತ್ತು ಸಂದರ್ಶನಗಳ ಮೂಲಕ ಈ ಪುಸ್ತಕವನ್ನು ಹೊರತರಲಾಯಿತು. . EWS ನೀತಿಯನ್ನು ಟೀಕಿಸುವ ಲೇಖನಗಳ ಸಂಕಲನವನ್ನು ಲೇಖಕರ ಸಮುದಾಯವಾದ ಅಂಬೇಡ್ಕರ್ ಏಜ್ ಕಲೆಕ್ಟಿವ್ ಬರೆದಿದೆ.
ಶೇರ್ಡ್ ಮಿರರ್ ಪ್ರಕಟಿಸಿದ ‘EWS: Quota To End All Quotas’ ಪುಸ್ತಕದ ಆಯ್ದ ಲೇಖನಗಳ ಕನ್ನಡ ಅನುವಾದಗಳು ಈಗಾಗಲೇ ರೌಂಡ್ ಟೇಬಲ್ ಇಂಡಿಯಾ ಕನ್ನಡ ಪೋರ್ಟಲ್ ನಲ್ಲಿ ಪ್ರಕಟವಾಗಿದೆ. EWS ಪುಸ್ತಕದ ಕನ್ನಡ ಆವೃತ್ತಿಯು ಕನ್ನಡ ಪೋರ್ಟಲ್ ನಲ್ಲಿ ಪ್ರಕಟಿಸಿರುವ ಅನುವಾದಗಳಲ್ಲದೆ ಹೊಸ ಅನುವಾದಗಳನ್ನು ಮತ್ತು ಕರ್ನಾಟಕದ ಚಿಂತಕರ ಹೊಸ ಲೇಖನಗಳನ್ನು ಒಳಗೊಂಡಿದೆ.
ರೌಂಡ್ ಟೇಬಲ್ ಇಂಡಿಯಾ ಮತ್ತು ದಿ ಶೇರ್ಡ್ ಮಿರರ್‌ನ ಸಂಪಾದಕರು ಬಹುಜನರ ಚರ್ಚೆಗಳು ಮತ್ತು ಆಲೋಚನೆಗಳನ್ನು ದಾಖಲಿಸಲು ಮತ್ತು ಭಾಷಾಂತರಿಸಲು ಬದ್ಧರಾಗಿದ್ದಾರೆ ಏಕೆಂದರೆ ಜಾತಿ ವಿನಾಶದ ಸಂವಾದ ಬಹುಜನರು ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಪ್ರಾಥಮಿಕವಾಗಿ ನಡೆಯುತ್ತದೆ.
Hatred in the Belly’ ಮೂಲಕ 2015 ರಲ್ಲಿ ಪ್ರಕಾಶನಕ್ಕಿಳಿದ ಶೇರ್ಡ್ ಮಿರರ್ ಪ್ರಕಾಶನ ಇಲ್ಲಿಯ ತನಕ 12 ಇಂಗ್ಲಿಷ್ ಮತ್ತು 2 ಹಿಂದಿ ಪುಸ್ತಕಗಳನ್ನು ಪ್ರಕಟಿಸಿದೆ. ಅಂದು ‘Hatred in the Belly’ ಪುಸ್ತಕದ ಪ್ರಚಾರದಲ್ಲಿ ಸಕ್ರಿಯವಾದ ಕರ್ನಾಟಕದ ಕಾರ್ಯಕರ್ತರು ಬೆಂಗಳೂರಿನಲ್ಲಿ ಬಿಡುಗಡೆ ಮತ್ತು ಸಂವಾದಕ್ಕೆ ಅನುವು ಮಾಡಿಕೊಳ್ಳಲು ಕಾರ್ಯಕ್ರಮವನ್ನು ಆಯೋಜಿಸಿ ರೌಂಡ್ ಟೇಬಲ್ ಇಂಡಿಯಾ ಕನ್ನಡ ೨೦೧೬ ರಲ್ಲಿ ಸಂಸ್ಥಾಪಿಸಲು ಕಾರಣವಾದರು. ಇಂದು ಅದೇ ಬಳಗ ‘EWS: ಸಾಮಾಜಿಕ ನ್ಯಾಯದ ಅಂತ್ಯ’ ವನ್ನು ಪ್ರಕಟಿಸುವ ಮೂಲಕ ಶೇರ್ರ್ಡ್ ಮಿರರ್ ಕನ್ನಡ ಪ್ರಕಾಶನವನ್ನು ಹುಟ್ಟು ಹಾಕಿ, ಕನ್ನಡದಲ್ಲಿಯೇ ಚೊಚ್ಚಲ ಕೃತಿಯನ್ನು ತರುತ್ತಿದ್ದೇವೆ. ಕನ್ನಡ ಓದುಗರು ಎದೆಗೆ ಹಾತುಕೊಂಡು ಸಂಸ್ಥೆ ಹಾಗೂ ಕನ್ನಡ ಪರಂಪರೆಯನ್ನು ವಿಸ್ತರಿಸುತ್ತೇರೆಂಬ ಮಹದಾಸೆ ನಮ್ಮದಾಗಿದೆ.
ಜಾತಿ ವಿನಾಶದ ಕೆಲಸಗಳ ಬಗ್ಗೆ ನಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳಲು ಅನುವು ಮಾಡುತ್ತಾ ಪ್ರೋತ್ಸಾಹಿಸುತ್ತಿರುವ ಮತ್ತು ಈ ಪುಸ್ತಕವನ್ನು ಹೊರ ತರಲು ಸಹಕರಿಸಿದ ನಮ್ಮ ಎಲ್ಲಾ ಲೇಖಕರು, ಅನುವಾದಕರು, ಸ್ನೇಹಿತರು, ಕುಟುಂಬ, ಓದುಗರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು.
ಸಂಪಾದಕರು
ಕುಫಿರ್ (ನರೇನ್ ಬೆಡಿದೆ),
ಅನು ರಾಮದಾಸ್,
ಹಾರೋಹಳ್ಳಿ ರವೀಂದ್ರ
ಶ್ರೀಧರ ಅಘಲಯ