ಕರ್ನಾಟಕ ಸಬಾಲ್ಟ್ರನ್ ಓದು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು : ಪ್ರಸ್ತಾವನೆ

ಕಳೆದ ಹಲವು ದಶಕಗಳಿಂದ `ಸಬಾಲ್ಟ್ರನ್ಎಂಬ ಪದವನ್ನು ರಾಜಕೀಯ, ಚರಿತ್ರೆ ಮತ್ತು ಸಾಮಾಜಿಕ ಅಧ್ಯಯನಗಳ ಸಂದರ್ಭದಲ್ಲಿ ಬಳಸುತ್ತಾ ಬಂದಿದ್ದೇವೆ. ಆಂತೋನಿ ಗ್ರಾಮ್ಷಿಯಿಂದ ಬಳಕೆಗೆ ಬಂದ `ಸಬಾಲ್ಟ್ರನ್ಮತ್ತು `ಹೆಜಿಮೊನಿಎಂಬ ಎರಡು ಪರಿಭಾಷೆಗಳು ಇಟಲಿಯ ನಿರ್ದಿಷ್ಟ ರಾಜಕೀಯಾರ್ಥಿಕ ಸಂದರ್ಭದಲ್ಲಿ ರೂಪಗೊಂಡವುಗಳು. ಅದರಲ್ಲೂ `ಸಬಾಲ್ಟ್ರನ್ಎಂಬ ಪರಿಭಾಷೆಯನ್ನ ನಾವು ಸಾಂಸ್ಕøತಿಕ ನೆಲೆಯಲ್ಲಿ ಅರ್ಥ ಮಾಡಿಕೊಂಡಿರುವುದೇ ಹೆಚ್ಚು. ಆದರೆ `ಸಬಾಲ್ಟ್ರನ್ಎಂಬುದು ಅದರ ಹುಟ್ಟಿನಲ್ಲಿ ಶುದ್ಧ ರಾಜಕೀಯ ಕಾರಣಗಳಿಗಾಗಿ ರೂಪಗೊಂಡ ಪರಿಭಾಷೆಯಾಗಿದೆ. ಇಟಲಿಯ ಮಾಕ್ರ್ಸ್ವಾದಿ ಚಳುವಳಿಗಾರ ಗ್ರಾಮ್ಷಿ ತನ್ನ ಅಪಾರ ಓದು ಮತ್ತು ಅವಿರತ ಹೋರಾಟಗಳ ಅನುಭವಗಳ ಮೂಲಕ ಮಾಕ್ರ್ಸ್ವಾದಿ ಓದಿಗೆ ಮತ್ತು ಹೋರಾಟಗಳ ಸ್ವರೂಪಕ್ಕೆ ಭಿನ್ನ ನೆಲೆಗಳನ್ನು ಕಂಡುಕೊಳ್ಳಲು ಯತ್ನಿಸಿದವನು. ಗ್ರಾಮ್ಷಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಯುರೋಪ್ ಆಳುವ ವರ್ಗ ಊಳಿಗಮಾನ್ಯ ಮತ್ತು ಬಂಡವಾಳಶಾಹಿ ಪ್ರಣೀತಮೌಲ್ಯಗಳನ್ನುಜನ ಬದುಕಿನ ಮೇಲೆ ಹೇರಲಾರಂಭಿಸಿತ್ತು. ಒಂದೆಡೆ ಕ್ಯಾಥೊಲಿಕ್ ಚರ್ಚ್ ಮೂಲಭೂತವಾದ, ಇನ್ನೊಂದೆಡೆ ಊಳಿಗಮಾನ್ಯ ವ್ಯವಸ್ಥೆಯ ಕ್ರೂರ ದಮನಗಳು, ಮಗುದೊಂದೆಡೆ ಇಬ್ಬರೂ ರೂಢ ರಾಕ್ಷಸರನ್ನು ಬಳಸಿಕೊಂಡು ಫ್ಯಾಸಿಸಂನ್ನು ಸನ್ನದ್ಧಗೊಳಿಸುತ್ತಿದ್ದ ಬಂಡವಾಳಶಾಹಿ. ಇಟಲಿಯ ಬಹುಸಂಖ್ಯಾತ ದುಡಿವ ವರ್ಗ ಚಕ್ರಸುಳಿಯಲ್ಲಿ ನಲುಗುತ್ತಿದ್ದ ಸಂಕೀರ್ಣ ಕಾಲಘಟ್ಟದಲ್ಲಿ ಸ್ಥಳಿಯ ಪುರೋಗಾಮಿ ಸಂಘಟನೆಗಳು ವಿಭಿನ್ನ ಪರಿಭಾಷೆ ಮತ್ತು ಹೊಸ ಸಾಮಾಜಿಕ ವ್ಯಾಕರಣಗಳನ್ನು ಕಂಡುಕೊಳ್ಳುವ ಅನಿವಾರ್ಯತೆಗಳನ್ನು ಎದುರಿಸುತ್ತಿದ್ದವು. ಇಟಲಿಯನ್ನೂ ಒಳಗೊಂಡಂತೆ ಇಡೀ ಯುರೋಪ್ ಬಂಡವಾಳಶಾಹಿಯ ಹೊಸ ರಾಜಕೀಯ ತಂತ್ರಗಾರಿಕೆಗೆ ಬೆಚ್ಚಿಬಿದ್ದಿತ್ತು. ಇಂತಹ ಸಂದರ್ಭದಲ್ಲಿ ಇಟಲಿಯ ಸಮಾಜವಾದಿ ಸಂಘಟನೆಗಳು ಹಳೆಕಾಲದ ರಾಜಕೀಯ ಪ್ರಮೆಯಗಳನ್ನೇ ನೆಚ್ಚಿಕೊಂಡಿದ್ದವು.

ಗ್ರಾಮ್ಷಿ ಟಿಪಿಕಲ್ ಮಾಕ್ರ್ಸವಾದಿಯಲ್ಲ. ರಷ್ಯಾದ ಕ್ರಾಂತಿ ಮತ್ತು ಲೆನಿನ್, ಮಾಕ್ರ್ಸವಾದವನ್ನು ತನ್ನ ವರ್ತಮಾನದ ರಾಜಕಾರಣಕ್ಕೆ ತಕ್ಕಂತೆ ವಿಸ್ತರಿಸಿದ ಉದಾಹರಣೆಗಳಿಂದ ಪ್ರಭಾವಿತನಾದವನು. ಮಾಕ್ರ್ಸವಾದದ ಗಿಳಿಪಾಠ ಒಪ್ಪಿಸುತ್ತಿದ್ದ ಮತ್ತು ಅನುಕರಿಸುತ್ತಿದ್ದ ಕಮ್ಯುನಿಷ್ಟರಿಂದ ಗ್ರಾಮ್ಷಿ ದೂರವೇ ಉಳಿದ. ರಷ್ಯಾದ ಜನರ ನಿತ್ಯದ ಬದುಕಿಗೆ ಬೇಕಾದ ಪ್ರಮೆಯಗಳನ್ನು ಮಾಕ್ರ್ಸವಾದದಿಂದಲೇ ಹೆಕ್ಕಿ ಸಮಗ್ರ ಬದಲಾವಣೆಯನ್ನು ತಂದ ಲೆನಿನ್ ಪ್ರಯೋಗವನ್ನು ಗ್ರಾಮ್ಷಿ ಇಟಲಿಯಲ್ಲಿ ವಿಭಿನ್ನವಾಗಿ ಅನ್ವಯಿಸತೊಡಗಿದ. ‘ಇಟಲಿಯ ಜನರ ಬದುಕಿನ ಅನುಭವದ ಮೂಲಕ ಮಾಕ್ರ್ಸವಾದವನ್ನು ಪುನರ್ರೂಪಿಸಿಕೊಳ್ಳುವುದು. ಮಾಕ್ರ್ಸವಾದದ ವಿಚಾರಗಳ ಆಧಾರದಲ್ಲಿ ಇಟಲಿಯ ಜನರ ಬದುಕನ್ನು ರೂಪಿಸುವ ಕಾರ್ಯಕ್ರಮಗಳನ್ನು ರಚಿಸಿಕೊಳ್ಳಬೇಕು.’1 ಎಂಬ ಆಶಯದ ಮೂಲಕ ಗ್ರಾಮ್ಷಿ ಮಾಕ್ರ್ಸವಾದವನ್ನು ವರ್ತಮಾನಕ್ಕೆ ಅಣಿಗೊಳಿಸುತ್ತಾನೆ. ಇಟಲಿಯ ಉತ್ತರ ಭಾಗದ ಕಾರ್ಮಿಕರು ಮತ್ತು ದಕ್ಷಿಣ ಭಾಗದ ಹತಭಾಗ್ಯ ಕೃಷಿಕರ ದುಮ್ಮಾನಗಳನ್ನು ಬೆಸೆದು ನವಸಮಾಜದ ನಿರ್ಮಾಣಕ್ಕೆ ಗ್ರಾಮ್ಷಿ ಅಡಿಗಲ್ಲು ಹಾಕಲು ಯತ್ನಿಸುತ್ತಾನೆ. ಜಗತ್ತಿನ ಎಲ್ಲ ಶೋಷಿತರ ಮಿಡಿತಗಳಿಗೆ ಮಾಕ್ರ್ಸವಾದವನ್ನು ಮೂಲಭಿತ್ತಿಯಾಗಿಸುವ ಅಭೂತಪೂರ್ವ ಪ್ರಯತ್ನವಿದು. ಗ್ರಾಮ್ಷಿ ತನ್ನ ಪ್ರಯತ್ನದಲ್ಲಿ ಯಶಸ್ಸು ಕಂಡನೆಂಬುದಕ್ಕೆ ಸಮಕಾಲೀನ ರಾಜಕೀಯ ಚಿಂತನೆಗಳೇ ಸಾಕ್ಷಿಗಳನ್ನೊದಗಿಸುತ್ತವೆ. ಗ್ರಾಮ್ಷಿ ಬಹುಸಂಖ್ಯಾತ ಶೋಷಿತರ ವರ್ಗ ಹಿತಾಸಕ್ತಿಯ ಭಾಗವಾಗಿ ರೂಪಿಸಿದಸಬಾಲ್ಟ್ರನ್ಮತ್ತುಹೆಜಿಮೊನಿಎಂಬ ರಾಜಕೀಯ ಪರಿಭಾಷೆಗಳು ಚಳುವಳಿ ರಾಜಕಾರಣ ಮತ್ತು ಸಮಕಾಲೀನ ಶೈಕ್ಷಣಿಕ ವಿಧಾನಗಳೆರಡನ್ನೂ ಪ್ರಭಾವಿಸಿದವು. ಗ್ರಾಮ್ಷಿಯ ಮರಣಾನಂತರ, ಯೂರೋಪ್, ಅಮೇರಿಕಾ ಮತ್ತು ದಕ್ಷಿಣ ಏಷಿಯಾದ ಚಿಂಕರನ್ನುಗ್ರಾಮ್ಷಿಯನ್ ಮಾಕ್ರ್ಸವಾದಪ್ರಭಾವಿಸಿದೆ.

ಮಾಕ್ಸ್ ಮತ್ತು ಗ್ರಾಮ್ಷಿಗೂ ಮುನ್ನ ಇದ್ದ ಯುರೋಪ್ ಮತ್ತು ಅದರ ವಸಾಹತು ರಾಜಕಾರಣಗಳ ಚಾರಿತ್ರಿಕತೆಯನ್ನು ಗಮನಿಸುವುದೊಳಿತೆನ್ನಿಸುತ್ತದೆ. ಪುನರುಜ್ಜೀವನದ ನಂತರದ ಯುರೋಪಿನಲ್ಲಾದ ಜ್ಞಾನದ ಹರಿವು, ಬಂಡವಾಳಶಾಹಿ ಆರ್ಥಿಕತೆಯ ಬೆಳವಣಿಗೆ, ಆರ್ಥಿಕತೆಯ ಒಳಗೆ ರೂಪಗೊಂಡ ದಮನ ಮತ್ತು ಹಿಂಸೆಗಳು ಜನ ಬದುಕಿನ ನಡುವೆ ಅನೇಕ ತಲ್ಲಣಗಳನ್ನು ಸೃಷ್ಠಿಸಿದ್ದವು. ಬಂಡವಾಳಶಾಹಿಯು ಜ್ಞಾನದ ವಿವಿಧ ಪ್ರಕಾರಗಳಲ್ಲಿ ತನಗೆ ಪೂರಕವಾದ ತಿಳುವಳಿಕೆಯನ್ನೇ ಲೋಕೋತ್ತರ ಸಂಗತಿಗಳೆಂದು ಸಂಚಯಿಸಲಾರಂಭಿಸಿತ್ತು. ಜೊತೆಗೆ ಬಂಡವಾಳವಾದ, ತನ್ನ ಮಾರುಕಟ್ಟೆ ವಿಸ್ತರಣೆಗೆ ಅಡ್ಡಿಯನ್ನುಂಟು ಮಾಡುವ ಎಲ್ಲಾ ಬಗೆಯ ಪ್ರತಿರೋಧಗಳನ್ನು ಕ್ರೂರ ಹಿಂಸೆಗಳ ಮೂಲಕ ನಿವಾರಿಸಿಕೊಳ್ಳಲೆತ್ನಿಸುತ್ತಿತ್ತು. ಬಂಡವಾಳವು ತನ್ನ ವಿಸ್ತರಣೆಯನ್ನು ಅನೇಕ ಜ್ಞಾನ ಕ್ರಮದ ಮೂಲಕ ಮತ್ತು ಕ್ರೂರ ದಮನಗಳ ಮೂಲಕ ಸಮರ್ಥಿಸಿಕೊಳ್ಳಲು ಯತ್ನಿಸಿತು. ಹೀಗಾಗಿ ಅಧುನಿಕ ಯುರೋಪಿನ ಚರಿತ್ರೆಯನ್ನು, ಅದು ಬಂಡವಾಳಶಾಹಿ ತನ್ನ ರಕ್ಷಣೆಗಾಗಿ ಹೂಡಿದ ಯುದ್ಧಗಳು ಮತ್ತು ಹುಟ್ಟು ಹಾಕಿದ ಜನವಿರೋಧಿ ಜ್ಞಾನಕ್ರಮಗಳ ಹೊರತಾಗಿಸಿ ನೋಡಲಾಗುವುದಿಲ್ಲ. ಕಾರಣಕ್ಕಾಗಿಯೇ ಆಧುನಿಕ ಜಗತ್ತು ಚರಿತ್ರೆಯಲ್ಲಿ ಈಗಾಗಲೇ ಹೆಸರಿಸಲ್ಪಟ್ಟಿರುವ ಎರಡು ಜಾಗತಿಕ ಯುದ್ಧಗಳನ್ನು ಮತ್ತು ಅವುಗಳ ಕೇಡುಗಳನ್ನು ಅನುಭವಿಸುತ್ತಲೇ ಇದೆ. ಬಂಡವಾಳವಾದ ತನ್ನ ಜಾಗತಿಕ ವಿಸ್ತರಣೆಗಾಗಿ ಮುಂದಾದ ಮೇಲೆ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಯುದ್ಧಗಳು ಇಂದಿಗೂ ಚಾಲ್ತಿಯಲ್ಲಿವೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಕೇವಲ ಎರಡು ಜಾಗತಿಕ ಯುದ್ಧಗಳನ್ನು ಮಾತ್ರ ಮಾಡಿ ವಿರಮಿಸಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ.

ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆ ಕೇವಲ ಯುದ್ಧಗಳಿಂದ ಮಾತ್ರ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲಿಲ್ಲ. ಬದಲಿಗೆ ಜ್ಞಾನ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ತನಗೆ ಬೇಕಾದ ತಿಳುವಳಿಕೆಯನ್ನು ಸೃಷ್ಠಿಸಿ ಅದರ ಮೂಲಕ ತನ್ನ ಅಸ್ತಿತ್ವವನ್ನು ನ್ಯಾಯಬದ್ಧಗೊಳಿಸಿಕೊಳ್ಳುತ್ತಾ ಬಂದಿದೆ. ವಿಜ್ಞಾನ ಮತ್ತು ಸಮಾಜವಿಜ್ಞಾನಗಳ ಕ್ಷೇತ್ರದಲ್ಲಿ ನಡೆದ ಅನೇಕ ಅಧ್ಯಯನಗಳಿಗೆ ಪ್ರಯೋಜಕತ್ವ ನೀಡುವ ಮೂಲಕ ಬಂಡವಾಳವಾದ ತನಗೆ ಪೂರಕವೆನ್ನುವ ತಿಳುವಳಿಕೆಯ ಕ್ರಮಗಳನ್ನು ರೂಪಿಸಿದೆ. ಅದರಲ್ಲೂ ಜನರನ್ನು ನೇರವಾಗಿ ತಲುಪುವ ಸಮಾಜವಿಜ್ಞಾನ ಕ್ಷೇತ್ರವನ್ನು ತನ್ನ ಬೆಳವಣಿಗೆಯ ಅಡಿಗಲ್ಲಿನಂತೆಯೇ ಬಳಸುತ್ತ ಬಂದಿದೆ. ಸಾಮಾಜಿಕ ಅಧ್ಯಯನಗಳು, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಚರಿತ್ರೆ, ಮಾನವಶಾಸ್ತ್ರಗಳಾದಿಯಾಗಿ ಸಮಾಜ ವಿಜ್ಞಾನದ ಬಹುತೇಕ ಎಲ್ಲಾ ಆಧುನಿಕ ಶೈಕ್ಷಣಿಕ ಶಿಸ್ತುಗಳು ಬಂಡವಾಳಶಾಹಿ ಪ್ರಣೀತ ಯುರೋಪಿನ ಸೃಷ್ಠಿಗಳೇ ಆಗಿವೆ. ಬಂಡವಾಳವಾದದ ಪ್ರಯತ್ನಗಳು ಕೇವಲ ಯುರೋಪಿಗೆ ಮಾತ್ರ ಸೀಮಿತವಾಲಿಲ್ಲ. ಯುರೋಪ್ ತಾನು ವಸಾಹತುವನ್ನಾಗಿ ಮಾಡಿಕೊಂಡ ಎಲ್ಲಾ ಭೂಖಂಡಗಳಲ್ಲಿ ಬಂಡವಾಳವಾದದ ದಮನಗಳನ್ನು ಸಮರ್ಥಿಸುವ ಜ್ಞಾನವನ್ನು ವಿಶ್ವವಿದ್ಯಾಲಯಗಳ ಮೂಲಕ ಸಂಚಯಿಸಿತು. ವಸಾಹತುಗಳು ಕೇವಲ ಯುರೋಪಿನ ಜ್ಞಾನ ಕ್ರಮವನ್ನೂ ಮಾತ್ರ ಒಳಗೊಳ್ಳಲಿಲ್ಲ. ಯುರೋಪಿನ ಬಂಡವಾಳಶಾಹಿ ಉತ್ಪಾದನಾ ಕ್ರಮವನ್ನೂ ಆದರ್ಶ ಮಾದರಿಯೆಂದೇ ಒಪ್ಪಿಕೊಂಡವು. ಯುರೋಪಿನಿಂದ ಹೆಸರಿಗಷ್ಟೇ ವಿಮೋಚನೆಗೊಂಡ ವಸಾಹತುಗಳಲ್ಲಿ ಸ್ವಾತಂತ್ರ್ಯವೆಂಬುದು ನಗೆಪಾಟಲಿನ ವಸ್ತುವೇ ಆಗಿ ಬಿಟ್ಟಿತು. ಹೀಗೆ ವಿಮೋಚಿತ ವಸಾಹತುಗಳ ರಾಜಕೀಯಾರ್ಥಿಕ ವಿದ್ಯಮಾನಗಳೆಲ್ಲ ಯುರೋಪಿನ ಮತ್ತು ಸಾಮ್ರಾಜ್ಯಶಾಹಿಗಳ ನಿಯಂತ್ರಣದಲ್ಲಿಯೇ ಇವೆ. ಯುರೋಪಿನ ಬಂಡವಾಳವಾದವು ಉತ್ಪಾದನಾ ಕ್ಷೇತ್ರದ ತನ್ನ ಯಜಮಾನಿಕೆಯನ್ನು ವಸಾಹತುಗಳಲ್ಲಿ ತಾನು ಸಂಚಯಿಸಿದ ಜ್ಞಾನದ ಮೂಲಕ ನ್ಯಾಯಬದ್ಧಗೊಳಿಸುತ್ತಲೇ ಬಂದಿದೆ. ಜ್ಞಾನ ಕ್ಷೇತ್ರದ ಎಲ್ಲಾ ಚಟುವಟಿಕೆಗಳನ್ನು ತಾನೂ ಸ್ಥಾಪಿಸಿದ ಹಲವು ಫಂಡಿಂಗ್ ಏಜೆನ್ಸಿಗಳ ಮೂಲಕ ಹತೋಟಿಯಲ್ಲಿಟ್ಟುಕೊಳ್ಳುತ್ತಾ ಬಂದಿದೆ. ಯುರೋಪ್ ಮತ್ತು ನಂತರದ ಅಮೇರಿಕಾಗಳು ತಮ್ಮ ಅನೇಕ ಹಣಕಾಸು ಸಂಸ್ಥೆಗಳ ಮೂಲಕ ವಸಾಹತುಗಳ ಮತ್ತು ವಿಮೋಚಿತ ವಸಾಹತುಗಳ ಜ್ಞಾನ ಕ್ಷೇತ್ರದ ಚಟುವಟಿಕೆಗಳನ್ನು ರೂಪಿಸುತ್ತಲೇ ಇವೆ. ಕ್ಷೇತ್ರದಲ್ಲಿ ಕೆಲಸ ಮಾಡುವ ವಿದ್ವಾಂಸರೂ ಸಹ ಜಾಗತಿಕ ಹಣಕಾಸು ಸಂಸ್ಥೆಗಳ ನಿಯೋಗಿಗಳಂತೆ ಕೆಲಸ ಮಾಡುತ್ತಲೇ ಬಂದಿದ್ದಾರೆ.

ಜ್ಞಾನ ಮತ್ತು ಅಧಿಕಾರ: ನಿರ್ವಸಾಹತೀಕರಣ ಚಿಂತನೆಗಳ ಸ್ವರೂಪ:

ಇಂಡಿಯಾದ ಸಮಾಜವನ್ನು ಅಧ್ಯಯನ ಮಾಡಲು ಆರಂಭಿಸಿದವರು ಅಂದು ನಮ್ಮ ದೇಶವನ್ನು ವಸಾಹುವನ್ನಾಗಿಸಿಕೊಂಡಿದ್ದ ಯುರೋಪಿನವರು. ಇವತ್ತು ನಾವು ಯಾವುದನ್ನು ಸಮಾಜ ಜ್ಞಾನ ಎಂದು ಕರೆಯುತ್ತೇವೋ ಅದರ ಅಧ್ಯಯನ ಶಿಸ್ತುಗಳ ಶೈಕ್ಷಣಿಕ ವಿಧಾನಗಳನ್ನು ರೂಪಿಸಿದ್ದು ಮತ್ತು ಪ್ರಚಲಿತಗೊಳಿಸಿದ್ದು ಯುರೋಪು. ಎರಡನೇ ಮಹಾಯುದ್ಧದ ನಂತರ ಬಗೆಯ ಅದಿsಕಾರವು ಅಮೇರಿಕಾಕ್ಕೆ ಹಸ್ತಾಂತರಗೊಂಡಿತು. ಯಾವುದು ಸಂಶೋಧನೆ? ಸಂಶೋಧನೆಯ ಆದ್ಯ ಕಾಳಜಿಗಳೇನು? ಸಂಶೋಧನೆಯಿಂದಯಾವಸತ್ಯವನ್ನು ಕಂಡುಕೊಳ್ಳಬೇಕು? ಸತ್ಯವೆಂದರೆ ಯಾವುದು? ಯಾವ ಶೈಕ್ಷಣಿಕ ವಿಧಾನದ ಮೂಲಕ ಕಂಡುಕೊಂಡ ಅಧ್ಯಯನದ ಫಲಿತವು ಸತ್ಯವಾಗಿರುತ್ತದೆ? ಎಂಬುದನ್ನು ನಿರ್ಧರಿಸುವ ಅದಿsಕಾರವು ಯುರೋಪಿನಿಂದ ಅಮೇರಿಕಾಕ್ಕೆ ವರ್ಗವಾಯಿತು. ಕಾರಣ ಜಗತ್ತನ್ನು ನಿಯಂತ್ರಿಸುವ ಅದಿsಕಾರವನ್ನು ಅಮೇರಿಕಾವು ಯುರೋಪಿನಿಂದ ಕಿತ್ತುಕೊಂಡಿತ್ತು. ನಂತರ ಅಮೇರಿಕಾ ಪ್ರಣೀತ ಶೈಕ್ಷಣಿಕ ವಿಧಾನಗಳು ಸಮಾಜವಿಜ್ಞಾನಗಳಲ್ಲಿ ಅದರಲ್ಲೂ ಮಾನವಶಾಸ್ತ್ರದಲ್ಲಿ ಹೆಚ್ಚು ಮುಂಚೂಣಿಗೆ ಬಂದವು. ಮೆಲಿನೋವಸ್ಕಿಯ ಸಹಭಾಗಿ ಅನುಭವಾತ್ಮಕ ಅಧ್ಯಯನ, ರೆಡ್ಕ್ಲಿಪ್ ಬ್ರೌನ್ ಅವರ ಸ್ಟ್ರಕ್ಚರಲ್ ಫಂಕ್ಷನಲಿಸಂ ಮಾನವಶಾಸ್ತ್ರದ ವಿದಿವಿಧಾನಗಳನ್ನು ನಿರ್ಣಾಯಕವಾಗಿ ಪ್ರಭಾವಿಸಿದವು.

ಕಾಲಘಟ್ಟದಿಂದ ಸಮಾಜವಿಜ್ಞಾನಗಳ ಅಧ್ಯಯನ ವಿಧಾನಗಳು ಮಹಾಕಥನಗಳಾಗಿ ಬೆಳೆದು ನಿಂತವು. ಜಗತ್ತಿನೆಲ್ಲೆಡೆ ಕಥನಗಳು ತೀವ್ರ ಪ್ರಭಾವ ಬೀರಿದ ಕಾರಣಕ್ಕಾಗಿ ಅಮೇರಿಕಾವು ಜಗತ್ತಿನ ಸಮಾಜಗಳ ಹಲವು ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿಯಂತ್ರಿಸುವ ಶಕ್ತಿಯಾಗಿ ಬೆಳೆದು ನಿಂತಿತು. ‘ಅಮೇರಿಕಾದ ಅನೇಕ ಫೌಂಡೇಶನ್ಗಳು ಭಾರತದಲ್ಲಿ ಸಾಮಾಜಿಕ ಅಧ್ಯಯನಗಳನ್ನು ಕೈಗೊಳ್ಳಲು ಧನಸಹಾಯ ಮಾಡತೊಡಗಿದವು. ಪಠ್ಯಕ್ರಮ ರೂಪಿಸುವುದು, ವಿದ್ಯಾರ್ಥಿ ವೇತನಗಳನ್ನು ನೀಡುವುದರ ಜೊತೆಗೆ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟುಹಾಕಿ ಅಲ್ಲಿ ನಡೆಯುವ ಅಧ್ಯಯನಗಳಿಗೆ ಫೌಂಡೇಶನ್ಗಳು ಅನುವು ಮಾಡಿಕೊಟ್ಟವು. ಇದರಿಂದಾಗಿ ವಸಾಹತೋತ್ತರ ಕಾಲಘಟ್ಟದ ನಂತರವೂ ಭಾರತದ ಸಾಮಾಜಿಕ ಅಧ್ಯಯನಗಳು ಮೊದಲಿನ ಜನಪ್ರಿಯ ಮಾದರಿಯಲ್ಲಿಯೇ ಉಳಿದವು’2. ಅಮೇರಿಕಾವು ಏರಿಯಾ ಸ್ಪಡಿ ಮತ್ತು ಅನ್ವಯಿಕ ಶೈಕ್ಷಣಿಕ ಯೋಜನೆಗಳ ನೆಪದಲ್ಲ್ಫಿ ಮೂರನೇ ಜಗತ್ತಿನ ದೇಶಗಳಲ್ಲಿ ಸಾಮ್ರಾಜ್ಯಶಾಹಿ ಹುನ್ನಾರಗಳು ಮಿಳಿತಗೊಂಡ ಅಧ್ಯಯನ ವಿಧಾನಗಳನ್ನೇ ಪ್ರಚುರ ಪಡಿಸಿತು. ಯೋಗೇಂದ್ರಸಿಂಗ್ ಅದನ್ನು ಹೀಗೆ ವಿವರಿಸುತ್ತಾರೆ. ‘ಬಿನ್ನ ಶೈಕ್ಷಣಿಕ ವಿಧಾನ ಮತ್ತು ಯೋಜನೆಗಳನ್ನು ನಿರೂಪಿಸುವ ಅನ್ವಯಿಕ ಗುಣವುಳ್ಳ ಅಮೇರಿಕಾದ ಸಮಾಜಶಾಸ್ತ್ರದ ಮಾದರಿಯನ್ನು ಮೂರನೇ ಜಗತ್ತಿನ ರಾಷ್ಟ್ರಗಳು ಅನುಸರಿಸತೊಡಗಿದವು. ಅಲ್ಲದೆ ಸಮಾಜಶಾಸ್ತ್ರದ ಜೊತೆಗೆ ಅಮೇರಿಕಾದಲ್ಲಿ ಸಾಮಾಜಿಕ ಮಾನವಶಾಸ್ತ್ರವೂ ರೂಪುಗೊಂಡಿತು. ಇಂಡಿಯಾದ ಸಮಾಜಶಾಸ್ತ್ರವೂ ಸಹ ಅಮೇರಿಕಾದ ಸಮಾಜಶಾಸ್ತ್ರ ಮತ್ತು ಸಾಮಾಜಿಕ ಮಾನವಶಾಸ್ತ್ರದ ಪರಿಕಲ್ಪನೆ ಮತ್ತು ಹಿನ್ನೆಲೆಗಳಿಂದ ಸಹಜವಾಗಿಯೇ ಪ್ರಭಾವಿತವಾಯಿತು’3. ಇದರ ಜೊತೆಗೆ ಭಾರತದ ಅಬಿsವೃದ್ಧಿಯ ನಿಯಂತ್ರಕ ಶಕ್ತಿಯೂ ಯುರೋಪಿನಿಂದ ಅಮೇರಿಕಾಕ್ಕೆ ವರ್ಗಗೊಂಡಿತು. ಕೃಷಿ ಉತ್ಪಾದನೆ, ಕೈಗಾರಿಕೆ ಮತ್ತು ಅಬಿsವೃದ್ಧಿ ಯೋಜನೆಗಳಿಗೆ ಸಂಬಂದಿಸಿದಂತೆ ಅಮೇರಿಕಾವು ಭಾರತಕ್ಕೆ ಮಾದರಿಯಾಯಿತು. ಇದೇ ಹೊತ್ತಿನಲ್ಲಿಮಾನವಶಾಸ್ತ್ರದ ಅಧ್ಯಯನಗಳು ಆದಿಮ ಬುಡಕಟ್ಟುಗಳನ್ನು ಸ್ವಲ್ಪ ಹಿಂಜರಿಕೆಯಿಂದಲೇ ಬಿಟ್ಟುಕೊಟ್ಟು ರೈತ ಸಮುದಾಯಗಳನ್ನು ಹೆಚ್ಚು ಪರಿಗಣಿಸಲಾರಂಬಿsಸಿದವು. ವ್ಯವಸಾಯೀ ಸಂಸ್ಕøತಿಯು ಒಂದು ನಾಗರೀಕತೆಗೆ ಅತ್ಯಂತ ಆದಿಮವಾದದ್ದು ಎಂದು ಮಾನವಶಾಸ್ತ್ರಜ್ಞರು ಭಾವಿಸಲಾರಂಬಿsಸಿದು. ಮಾನವಶಾಸ್ತ್ರದ ಅಧ್ಯಯನಗಳಿಗೆ ಬಗೆಯ ನೆರವು ಕೊಟ್ಟಿದ್ದು ಅಮೇರಿಕಾದ ವಿಶ್ವವಿದ್ಯಾಲಯಗಳು. ಅದರಲ್ಲೂ ಚಿಕಾಗೋ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದ ರಾಬರ್ಟ್ ರೆಡ್ ಫೀಲ್ಡ್ ಈ ಬಗೆಯ ಅಧ್ಯಯನಗಳಿಗೆ ಅನುವು ಮಾಡಿದ’4.

ಅಮೇರಿಕಾವು ಯುರೋಪಿಗಿಂತ ತುಸು ಹೆಚ್ಚಾಗಿ ಒಳ ಹುನ್ನಾರಗಳನ್ನು ರೂಪಿಸಿಕೊಂಡು ಮೂರನೇ ಜಗತ್ತಿನ ದೇಶಗಳಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಬಿsಸಿತು. ಯುರೋಪಿನ ಒರಟು ತಂತ್ರಗಾರಿಕೆಯ ಮುಂದೆ ಅಮೇರಿಕಾವು ಹೆಚ್ಚು ಪ್ರಗತಿಪರವೂ, ಅಬಿವೃದ್ಧಿಶೀಲವೂ ಆದ ಏರಿಯಾ ಸ್ಪಡಿಗಳ ಮುಖವಾಡಗಳನ್ನು ಮುಂದುಮಾಡಿಕೊಂಡು ಪ್ರತ್ಯಕ್ಷವಾಯಿತು. ಮೂರನೇ ಜಗತ್ತಿನ ಅಬಿವೃದ್ಧಿಯ ಕುರಿತು ಸದಾ ಚಿಂತಿಸುವ ಬಿಡುವಿಲ್ಲದ ಹರಿಕಾರನಂತೆ ಅಮೇರಿಕಾವು ತನ್ನನ್ನು ಬಿಂಬಿಸಿಕೊಂಡಿತು. ಇದಕ್ಕೆ ಪೂರಕವಾಗಿ ವಿಶ್ವಬ್ಯಾಂಕ್. .ಎಂ.ಎಫ್ ಮತ್ತು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳು ಅಮೇರಿಕಾದ ಅಂಗಸಂಸ್ಥೆಗಳಾಗಿ ಬದಲಾದವು. ಅಮೇರಿಕಾವು ಮೊದಲೇ ಹೇಳಿದಂತೆ ತನ್ನ ವಿಶ್ವವಿದ್ಯಾಲಯಗಳ ಮೂಲಕ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳನ್ನು ಮತ್ತು ಫೌಂಡೇಶನ್ಗಳನ್ನು ಪ್ರಾರಂಬಿಸಿ ಅವುಗಳ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿತು. ಭಾರತದಲ್ಲಿ ಇದೇ ಸಂದರ್ಭದಲ್ಲಿ ಏರಿಯಾ ಸ್ಪಡಿಗಳು ಮತ್ತು ಗ್ರಾಮ ಅಧ್ಯಯನಗಳು ಪ್ರಾರಂಭಗೊಂಡವು. ‘1950 ದಶಕದಲ್ಲಿ ಭಾರತದಲ್ಲೂ ಗ್ರಾಮ ಮತ್ತು ನಗರಗಳ ಅಧ್ಯಯನಗಳು ಪ್ರಾರಂಭವಾದವು. ಎಸ್.ಸಿ.ದುಬೆ, ಎಂ.ಎನ್.ಶ್ರೀನಿವಾಸ್. ರಾಮಕೃಷ್ಣ ಮುಖರ್ಜಿ ಮತ್ತು .ಆರ್.ದೇಸಾಯಿಯಂತಹ ಸಮಾಜಶಾಸ್ತ್ರಜ್ಞರು ಗ್ರಾಮಗಳ ಅಧ್ಯಯನ ಕೈಗೊಂಡರು. ಇವರ ಜೊತೆಗೆ ಅಮೇರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ದೇಶದ ಹಲವು ಸಾಮಾಜಿಕ ಮಾನವಶಾಸ್ತ್ರಜ್ಞರೂ ಸಹ ಇಂಡಿಯಾದಲ್ಲಿ ಹಳ್ಳಿಗಳ ಅಧ್ಯಯನ ಕೈಗೊಂಡರು. ಅಮೇರಿಕಾದ ಸಾಮಾಜಿಕ ಮಾನವಶಾಸ್ತ್ರಜ್ಞ ಆಸ್ಕರ್ ಲಿವೀಸ್ ಉತ್ತರ ಭಾರತದ ಹಳ್ಳಿಯೊಂದನ್ನು ಅಧ್ಯಯನ ಮಾಡಿದ. (ಆಸ್ಕರ್ ಲಿವೀಸ್ ಹಿಂದೆ ಮೆಕ್ಸಿಕೋದ ಹಳ್ಳಿಯೊಂದನ್ನು ಅಧ್ಯಯನ ಮಾಡಿದ್ದ) ಆಸ್ಕರ್ ಲಿವೀಸ್ ಅಧ್ಯಯನವನ್ನು ಭಾರತ ಸರಕಾರದ ಯೋಜನಾ ಆಯೋಗದ ಸಹಯೋಗದಲ್ಲಿ ಕೈಗೊಂಡಿದ್ದನು. ಅಲ್ಲದೆ ಈತ ಯೋಜನಾ ಆಯೋಗದ ಸಲಹೆಗಾರನೂ ಆಗಿದ್ದನು’5. ಹೀಗೆ ಅಮೇರಿಕಾವು ವಿದ್ವಾಂಸರೆನ್ನಿಸಿಕೊಂಡ ತನ್ನ ಜನರನ್ನು ಭಾರತದಂತಹ ದೇಶದ ಆಡಳಿತದ ಆಯಕಟ್ಟಿನ ಸ್ಥಳಕ್ಕೆ ರವಾನೆ ಮಾಡಲಾರಂಬಿಸಿತು. ಅದೇ ಹೊತ್ತಿಗೆಎರಡನೇ ಮಹಾಯುದ್ಧದ ನಂತರ ಗ್ರಾಮಗಳ ಅಧ್ಯಯನಗಳಲ್ಲಿ ಅಗಾಧ ಪ್ರಮಾಣದ ಬದಲಾವಣೆಗಳು ಸಂಭವಿಸಿದವು. ಭಾರತದ ಸಾಮಾಜಿಕ ಮಾನವಶಾಸ್ತ್ರಜ್ಞರು ವಿದೇಶಗಳಿಗೆ ಹೋಗಿ ಅಲ್ಲಿನ ತಜ್ಞರಿಂದ ಗ್ರಾಮಗಳ ಅಧ್ಯಯನಗಳನ್ನು ಮಾಡುವ ವಿಧಾನದಲ್ಲಿ ತರಬೇತಿ ಪಡೆದು ಬಂದರು. ಆನಂತರ ಭಾರತದ ಗ್ರಾಮಗಳ ಅಧ್ಯಯನಗಳ ಶೈಕ್ಷಣಿಕ ವಿಧಾನದಲ್ಲಿ ಮೂಲಭೂತ ಬದಲಾವಣೆಗಳಾದವು’6.

ಗ್ರಾಮಗಳ ಅಧ್ಯಯನದಲ್ಲಿ ವಸಾಹತುಶಾಹಿ ಅಧ್ಯಯನಕಾರರು ಮತ್ತು ಅವರಿಂದ ತರಬೇತಿ ಪಡೆದು ಬಂದ ದೇಶೀಯ ವಿದ್ವಾಂಸರು ತಾವು ಅನುಸರಿಸುತ್ತ ಬಂದ ಅಧ್ಯಯನ ವಿಧಾನಕ್ಕೆ ಸಂಬಂದಿಸಿದಂತೆ ಯಾವ ಮಹತ್ವದ ಮಾರ್ಪಾಡುಗಳನ್ನು ಮಾಡಿಕೊಂಡಿರಲಿಲ್ಲ. ಅಮೇರಿಕಾದ ನವವಸಾಹತು ನೀತಿಗೆ ಪೂರಕವಾದ ರಾಜಕೀಯ ಧೋರಣೆಗಳನ್ನು ಇವರು ಚಾಚೂ ತಪ್ಪದೆ ಅನುಸರಿಸಿದರು. ‘ಅಮೇರಿಕಾ ಪಶ್ಚಿಮದ ಸಾಮ್ರಾಜ್ಯಶಾಹಿ ನೀತಿಯನ್ನು ಸಮರ್ಥಿಸುವ ಮತ್ತು ರಕ್ಷಿಸುವ ಶಕ್ತಿಯಾಗಿ ರೂಪುಗೊಂಡಿತ್ತು. ಆಂತರಿಕವಾಗಿ ತನ್ನೆಲ್ಲ ಉದ್ಯಮಗಳನ್ನು ಮತ್ತು ಕಾರ್ಪೊರೇಟ್ ಶಕ್ತಿಗಳನ್ನು ಬಲಪಡಿಸಲು, ಬಂಡವಾಳ ತೊಡಗಿಸಲು ಮತ್ತು ಸಾಮ್ರಾಜ್ಯಶಾಹಿ ಆಕ್ರಮಣಶೀಲತೆಯನ್ನು ಜಾರಿಯಲ್ಲಿಡಲು ಅಮೇರಿಕಾ ಮುಂದಾಯಿತು. ಕಾರಣಕ್ಕಾಗಿ ಯುರೋಪಿನ ಮಾಜಿ ವಸಾಹತುಗಳಾದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕಾ ದೇಶಗಳ ಮಾಹಿತಿ ಸಂಗ್ರಹಿಸಲು ಮುಂದಾಯಿತು. ಕಾರಣಕ್ಕಾಗಿ ಅಮೇರಿಕಾ ಬೃಹತ್ ಪ್ರಮಾಣದ ಹಣವನ್ನು ವಿನಿಯೋಗಿಸತೊಡಗಿತು. ಇದಕ್ಕಾಗಿ ತಮ್ಮ ತಜ್ಞತೆಯನ್ನು ಧಾರೆ ಎರೆಯಲು ಅನೇಕ ಮಾನವಶಾಸ್ತ್ರಜ್ಞರು ಅಮೇರಿಕಾದ ಯೋಜನೆಗಳಲ್ಲಿ ತೊಡಗಿಕೊಂಡರು’7. ಕೆಲವುಮಾನವಶಾಸ್ತ್ರಜ್ಞರು ಅಮೇರಿಕಾದ ಇಂಟಲಿಜನ್ಸ್ ಏಜನ್ಸಿಯ ಅದರಲ್ಲೂ CIA ಯ ಅಲ್ಪಾವದಿಯ ಇಲ್ಲವೇ ಪೂರ್ಣಾವದಿಯ ನೌಕರರಾದರು. ಇವರು ಕೆಲವು ಅನುಮಾನಾಸ್ಪದ ಮತ್ತು ಪ್ರಶ್ನಾರ್ಹವಾದ ಮೂಲಗಳಿಂದ ಸಂಶೋಧನಗೆ ಹಣ ಪಡೆಯಲಾರಂಬಿಸಿದರು. ಇಲ್ಲವೆ ಖಾಸಗೀ ಸಂಸ್ಥೆಗಳ ಸಂಶೋಧನೆಗಳನ್ನು ಕೈಗೆತ್ತಿಕೊಂಡರು’8. ಮೂರನೇ ಜಗತ್ತಿನ ದೇಶಗಳ ಅಬಿವೃದ್ಧಿಯ ಸಲುವಾಗಿ ಅನ್ವಯಿಕ ಅಧ್ಯಯನಗಳು ನಡೆಯುತ್ತವೆ ಎಂದು ಹೇಳಲಾಗುತ್ತಿತ್ತಾದರೂ, ಅಧ್ಯಯನಗಳಿಗೆ ಭಾರತದಂತಹ ದೇಶದ ಹಳ್ಳಿಗಳಲ್ಲಿನ ವರ್ಗ ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳುವ ಜರೂರುಗಳು ಇರಲಿಲ್ಲ. ಇವು ಇಂಡಿಯಾದ ಸಮಾಜವನ್ನು ಅಖಂಡವಾಗಿ ಗ್ರಹಿಸಿದವು. ಮತ್ತು ಮೇಲ್ಸ್ತರದ ವಿವರಗಳನ್ನೆ ನಂಬಿ ಸಿದ್ಧಾಂತಗಳನ್ನು ರೂಪಿಸಿದವು. ಹೀಗೆ ಭಾರತದ ಸಂದರ್ಭದಲ್ಲಿ ಅನೇಕ ಮಾನವಶಾಸ್ತ್ರಜ್ಞರು ತಮ್ಮ ಸಾಮಾಜಿಕ ಸಿದ್ಧಾಂತಗಳನ್ನು ರೂಪಿಸಿದ್ದಾರೆ.

ಮೇಲಿನ ವಿವರಗಳನ್ನು ಇನ್ನೂ ಸಾಂದ್ರಗೊಳಿಸಬಹುದಾಗಿದೆ. 20ನೇ ಶತಮಾನದ ಪೂರ್ವಾರ್ಧದಲ್ಲಿ ಎರಡು ಜಾಗತಿಕ ಯುದ್ಧಗಳಲ್ಲಿ ಪಾಲ್ಗೊಂಡ ಯುರೋಪಿನ ರಾಷ್ಟ್ರಗಳು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ತಲ್ಲಣಗೊಂಡವು. ಅಲ್ಲದೆ ಮಿತಿಮೀರಿದ ಆರ್ಥಿಕ ಪೈಪೋಟಿಯು ಸಹ ಯುರೋಪಿನ ದೇಶಗಳಲ್ಲಿ ಅನೇಕ ಸಂಘರ್ಷಗಳನ್ನು ಹುಟ್ಟು ಹಾಕಿತ್ತು. ಎರಡನೇ ಮಹಾಯುದ್ಧದ ನಂತರ ಯುರೋಪಿನ ಮಿತ್ರಕೂಟಕ್ಕೆ ಸಹಾಯ ಮಾಡಿದಂತೆ ಮಾಡಿ, ಏಷ್ಯಾದ ದೇಶವೊಂದರ ಮೇಲೆ ಅಣುಬಾಂಬ್ ಪ್ರಯೋಗ ಮಾಡಿ ಲಕ್ಷಾಂತರ ಜನರನ್ನು ಕೊಂದುಹಾಕಿದ ಅಮೇರಿಕಾವು ಯುರೋಪ್ ಮತ್ತು ಏಷ್ಯಾ ಖಂಡದ ದೇಶಗಳಿಗೆ ಯಜಮಾನನಾಗಿ ರೂಪುಗೊಂಡಿತು. ಯಾವಾಗ ಜಾಗತಿಕ ರಾಜಕಾರಣಕ್ಕೆ ಅಮೇರಿಕಾವು ಕೇಂದ್ರವಾಯಿತೋ ಆಗಿನಿಂದ ಅಮೇರಿಕಾ ಜಗತ್ತಿನ ಆಗುಹೋಗುಗಳ ನಿಯಂತ್ರಕ ಶಕ್ತಿಯಾಗಿ ಪರಿಣಮಿಸಿತು. ಆದರೆ ಅಮೇರಿಕಾದ ಗೋಮುಖ ವ್ಯಾಘ್ರತನ ವಿಯಟ್ನಾಂ ಯುದ್ಧದ ನಂತರ ಬಯಲಾಯಿತು. ಅಮೇರಿಕಾದ ರಾಜಕೀಯ ಚಲನೆಗಳು ಮೂರನೇ ಜಗತ್ತಿನ ಬುದ್ಧಿಜೀವಿಗಳನ್ನು ತಲ್ಲಣಗೊಳಿಸಿದವು. ವಿಯಟ್ನಾಂ ಮೇಲಿನ ದಾಳಿಯು ಮೂರನೇ ಜಗತ್ತಿನ ರಾಷ್ಟ್ರಗಳನ್ನು ದಿಕ್ಕೆಡಿಸಿತು. ಅನಂತರ ರಾಷ್ಟ್ರಗಳು ಕೇವಲ ರಾಜಕೀಯ ಕಾರಣಗಳಿಗಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಅಮೇರಿಕಾವನ್ನು ಅನುಮಾನಿಸಲಾರಂಬಿsಸಿದವು. ಅಮೇರಿಕಾದ ಶೈಕ್ಷಣಿಕ ಸಿದ್ಧಾಂತಗಳು ಮತ್ತು ಅದು ಸೃಷ್ಟಿಸಿದ ಜಾಗತಿಕ ಮಹಾಕಥನಗಳನ್ನು ವಿದ್ವಾಂಸರು ಪ್ರಶ್ನಿಸಲಾರಂಬಿsಸಿದರು. ಜೊತೆಗೆ ಅಮೇರಿಕಾವು ಯುರೋಪಿನ ಸಂಕಥನಗಳನ್ನೇ ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ಜಾರಿಗೊಳಿಸಿತ್ತು. ಮೂಲದಲ್ಲಿ ವಸಾಹತು ಸಂದರ್ಭದ ಸಂಕಥನಗಳು ಸಾಮ್ರಾಜ್ಯಶಾಹಿ ನೀತಿಗೆ ಪೂರಕವಾಗಿದ್ದ ಕಾರಣಕ್ಕೆ ಯುರೋಪು ಅಮೇರಿಕಾದ ಸಾಮ್ರಾಜ್ಯಶಾಹಿ ನೀತಿಗೆ ಪೂರಕವಾಗಿದ್ದ ಕಾರಣಕ್ಕೆ ಅದು ಅಮೇರಿಕಾದ ಸಾಮ್ರಾಜ್ಯಶಾಹಿ ಆತ್ಮದಲ್ಲಿ ಅಂತರ್ಗತವಾಯಿತು. ಕಾರಣದಿಂದ ಜಗತ್ತಿನ ಸೋತ ದೇಶಗಳ ವಿದ್ವಾಂಸರು ಮತ್ತು ಚಳುವಳಿಗಾರರು ವಸಾಹತುವಾದದ ಸಾಮ್ರಾಜ್ಯಶಾಹಿ ನೀತಿಯನ್ನು ಮತ್ತು ಶೈಕ್ಷಣಿಕ ವಿಧಾನಗಳನ್ನು ನಿರಾಕರಿಸಿದರು. ಇದನ್ನು ವಸಾಹತೋತ್ತರವಾದ ಎಂದೂ ಕರೆಯಲಾಗುತ್ತದೆ.

ವಸಾಹತೊತ್ತರ ಸಂದರ್ಭದ ಪ್ರಮುಖ ಚಿಂತಕರು ಯುರೋಪ್ ಸೃಷ್ಟಿಸಿದ ವಿರಾಟ್ ಕಥನಗಳನ್ನು ಪ್ರಶ್ನಿಸಲಾರಂಬಿsಸಿದರು. 20ನೇ ಶತಮಾನದ ಆರಂಭದಲ್ಲಿಯೇ ಪ್ರಾರಂಭವಾದ ವಸಾಹತೋತ್ತರ ಚರ್ಚೆಗಳು ಹಂತ ಹಂತವಾಗಿ ಘನೀಕರಣಗೊಂಡವು. ಮುಖ್ಯವಾಗಿ ವಸಾಹತುಗಳನ್ನು ನೋಡುವ ಮತ್ತು ಅವುಗಳನ್ನು ಅರ್ಥೈಸುವ ಸಲುವಾಗಿ ಯುರೋಪಲ್ಲಿ ರೂಪುಗೊಂಡ ಸಂಕಥನಗಳು ವಸಾಹತೋತ್ತರ ಕಾಲಘಟ್ಟದಲ್ಲಿ ತೀವ್ರ ಪರಿಶೀಲನೆಗೆ ಒಳಪಟ್ಟವಲ್ಲದೆ, ವಿಮೋಚನೆಗೊಂಡ ರಾಷ್ಟ್ರಗಳು ಪರ್ಯಾಯ ಬೌದ್ಧಿಕ ಕ್ರಮಗಳನ್ನು ಕಟ್ಟಿಕೊಳ್ಳಲು ವಸಾಹತೋತ್ತರ ಚಿಂತಕರು ಪ್ರೇರೇಪಿಸಿದರು. ಜೊತೆಗೆ ಯುರೋಪಿನ ಅಬಿಜಾತ ಶೈಕ್ಷಣಿಕ ವಿಧಾನದ ಹಿಂದಿರುವ ಸಾಮ್ರಾಜ್ಯಶಾಹಿ ಹುನ್ನಾರಗಳನ್ನು ಚಿಂತಕರು ಬಹಿರಂಗಗೊಳಿಸಿದರು. ಚಿಂತಕರಿಗೆ ಒಂದು ರಾಜಕೀಯ ದೃಷ್ಟಿಕೋನ ರೂಪುಗೊಳ್ಳಲು ಕಾರಣನಾದವನು ಆಂಥೋನಿ ಗ್ರಾಂಮ್ಷಿ. ಆನಂತರ ಮೈಕೇಲ್ ಫುಕೋ, ಎಡ್ವರ್ಡ್ ಸೈದ್, ಫ್ರಾಂಜ್ ಫ್ಯಾನನ್ ಮತ್ತು ಅಲ್ಬರ್ಟ್ ಮೆಮ್ಮಿ ಚಿಂತಕರಲ್ಲಿ ಪ್ರಮುಖರು. ಫುಕೋ, ಜ್ಞಾನ ಮತ್ತು ಅದಿಕಾರಗಳಿಗಿರುವ ಸಂಬಂಧಗಳನ್ನು ಚಾರಿತ್ರಿಕವಾಗಿ ವಿಶ್ಲೇಷಿಸಿದನು. ‘ಎಲ್ಲಾ , ಜ್ಞಾನ ಕ್ಷೇತ್ರಗಳಲ್ಲಿಯೂ ವಿಜೃಂಬಿಸುವ ಡಿಸ್ಕೋರ್ಸ್ಗಳು ಆಯಾಯಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿರುವವರ ಅದಿsಕಾರವನ್ನು ಮತ್ತು ಸ್ಥಾನಮಾನಗಳನ್ನು ರಕ್ಷಿಸುವುದಕ್ಕಾಗಿ ಮತ್ತು ಮುಂದುವರೆಸುವುದಕ್ಕಾಗಿ ಜನ್ಮತಾಳಿರುತ್ತವೆ. ಪರಿಣಾಮತಃ ಒಂದು ಕ್ಷೇತ್ರದ ಪ್ರಭಾವೀ ಡಿಸ್ಕೋರ್ಸ್ ಅನ್ನು ಒಪ್ಪಿಕೊಳ್ಳದೆ ಮತ್ತು ಅದನ್ನು ಸ್ವೀಕರಿಸದೆ ಡಿಸ್ಕೋರ್ಸ್ ಅನ್ನು ರೂಪಿಸಿದ ಸಂಸ್ಥೆಯ ಹತ್ತಿರ ನಾವು ಹೋಗಲಾಗುವುದಿಲ್ಲ. ಸಂಸ್ಥೆಯು ಕೊಡುವ ಅದಿsಕಾರದಲ್ಲಿ ನಾವು ಭಾಗಿಗಳಾಗುವುದು ಸಾಧ್ಯವಿಲ್ಲ. ಆದ್ದರಿಂದಲೇ ಜ್ಞಾನಕ್ಕೂ ಅದಿಕಾರಕ್ಕೂ ಹಾಗೂ ಪರಸ್ಪರ ಪೋಷಕ ಸಂಬಂಧವನ್ನು ಗುರುತಿಸಿಜ್ಞಾನವೆಂದರೆ ಅದಿಕಾರಎಂದು ಫುಕೋ ತೀರ್ಮಾನಿಸುತ್ತಾನೆ…… ಅದಿಕಾರ ಮತ್ತು ಜ್ಞಾನ ಇವುಗಳನ್ನು ಬಿನ್ನ ಸ್ವತಂತ್ರ ಸಂಗತಿಗಳೆಂಬಂತೆ ಫುಕೋ ಪರಿಗಣಿಸುವುದಿಲ್ಲ. ಅವೆರಡೂ ಪರಸ್ಪರ ಹೆಣೆದುಕೊಂಡು ಒಂದು ಬಗೆಯ ಅವಿನಾ ಸಂಬಂಧವನ್ನು ಹೊಂದಿವೆ. ಆದ್ದರಿಂದಲೇ ಫುಕೋ ಅವನ್ನುಅದಿಕಾರ / ಜ್ಞಾನ(Power/knowledge) ಎಂದು ದಾಖಲಿಸುತ್ತಾನೆ. ‘ಅದಿಕಾರ ಮತ್ತು ಜ್ಞಾನ ಇವುಗಳು ನೇರವಾಗಿ ಒಂದು ಮತ್ತೊಂದನ್ನು ಒಳಗೊಳ್ಳುತ್ತವೆ….. ಯಾವುದೋ ಅದಿಕಾರಾಧಾರಿತ ಸಂಬಂಧವೂ ಅದಕ್ಕೆ ಪೂರಕವಾಗುವ ಜ್ಞಾನಕ್ಷೇತ್ರದ ರಚನೆಯಾಗದೆ ಅಸ್ತಿತ್ವಕ್ಕೆ ಬರುವುದಿಲ್ಲ ಮತ್ತು ಅದಿಕಾರಾಧರಿತ ಸಂಬಂಧಗಳನ್ನು ರೂಪಿಸದೆ ಯಾವ ಜ್ಞಾನ ಕ್ಷೇತ್ರವೂ ಅಸ್ತಿತ್ವದಲ್ಲಿರುವುದಿಲ್ಲ’9ಎನ್ನುತ್ತಾನೆ ಫುಕೋ. ಫುಕೋ ಆಧುನಿಕ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಯುರೋಪಿನ ಸಾಂಪ್ರದಾಯಿಕ ತಿಳುವಳಿಕೆಯ ಕ್ರಮಗಳನ್ನು ಮತ್ತು ಶೈಕ್ಷಣಿಕ ಶಿಸ್ತುಗಳನ್ನು ತೀವ್ರ ವಿಮರ್ಶೆಗೆ ಒಳಪಡಿಸುತ್ತಾನೆ. ಯುರೋಪಿನ ಆಧುನಿಕ ಪೂರ್ವ ಕಾಲಘಟ್ಟದ ಸಮಾಜ ವಿಜ್ಞಾನಗಳ ಶೈಕ್ಷಣಿಕ ಶಿಸ್ತುಗಳು ಯಾವ ಬಗೆಯಲ್ಲಿ ಅದಿಕಾರಸ್ಥ ಕೇಂದ್ರಗಳನ್ನು ಪೆÇೀಷಿಸಿದವು ಎಂಬುದನ್ನು ಫುಕೋ ತರ್ಕಬದ್ಧವಾಗಿ ವಿವರಿಸುತ್ತಾನೆ.

ವಸಾಹತೋತ್ತರ ಕಾಲಘಟ್ಟದ ಚಿಂತನೆಗಳಿಗೆ ಸೈದ್ಧಾಂತಿಕ ತಳಹದಿ ರೂಪಿಸಿದವನೆಂದರೆ ಫ್ರಾಂಜ್ ಫ್ಯಾನನ್. ಈತನ Black skin white maskಮತ್ತು The wretched of the earthಕೃತಿಗಳು ವಸಾಹತೀಕರಣಗೊಂಡ ಜನಾಂಗಗಳು ಕೀಳರಿಮೆಗಳಿಂದ ತಮ್ಮನ್ನು ಆಳುವ ಧಣಿಗಳ ಸಂಸ್ಕøತಿಯನ್ನು ಅನುಕರಿಸುವ ಪ್ರವೃತ್ತಿಯನ್ನು ಫ್ಯಾನನ್ ತನ್ನ ಎರಡು ಕೃತಿಗಳಲ್ಲಿ ವಿವರಿಸಲೆತ್ನಿಸುತ್ತಾನೆ. ಪರತಂತ್ರ ವ್ಯವಸ್ಥೆಯಲ್ಲಿ ಅದಿೀನ ಜನಾಂಗಗಳು, ಆಳುವ ವರ್ಗದ ಸಂಸ್ಕøತಿ, ಭಾಷೆ ಮತ್ತು ಜೀವನ ವಿಧಾನಗಳನ್ನು ತಮ್ಮದನ್ನಾಗಿಸಿಕೊಳ್ಳುವ ಆತ್ಮದ್ವೇಷದ ಸಂದರ್ಭಗಳನ್ನು ಫ್ಯಾನನ್ ವಿವರಿಸುತ್ತಾನೆ. ಆಳ್ವಿಕೆಗೊಳಪಡುವ ಜನರ ರಾಜಕೀಯ ಪರಾತಂತ್ರವೇ ಅವರ ಆತ್ಮದ್ವೇಷಕ್ಕೆ ಕಾರಣವಾಗುತ್ತದೆ. ತಮ್ಮ ಸಾಂಸ್ಕøತಿಕ ಚಹರೆಗಳನ್ನು ಬಿಟ್ಟುಕೊಡುವ ಜನ ಆಳುವವರ ಜೀವನ ವಿಧಾನವನ್ನು ಮೋಹಿಸುತ್ತಾರೆ. ಚರ್ಮ ಕಪ್ಪಾಗಿದ್ದರೂ, ತಮ್ಮ ಆಳುವ ಬಿಳಿ ಜನರ ಮುಖವಾಡಗಳನ್ನು ಧರಿಸಲು ಆಳಿಸಿಕೊಳ್ಳುವ ಜನ ಕಾತುರಗೊಳ್ಳುತ್ತಾರೆ. ತಮ್ಮ ತನವನ್ನು ದ್ವೇಷಿಸಿಕೊಳ್ಳುವುದರ ಜೊತೆಗೆ ಬಿಳಿಯರ ಸಂಸ್ಕøತಿಯನ್ನು ಅನುಕರಿಸುವುದರಲ್ಲಿಯೇ ತಮ್ಮ ಸಾರ್ಥಕ್ಯವನ್ನು ಕಂಡುಕೊಳ್ಳುತ್ತಾರೆ ಎಂದು ಫ್ಯಾನನ್ ಆಳಿಸಿಕೊಳ್ಳುವ ಜನರ ಮನೋವ್ಯಾಪಾರವನ್ನು ವಿವರಿಸುತ್ತಾನೆ. ಜೊತೆಗೆ ವಸಾಹತುಶಾಹಿಯ ಜೊತೆಗಿನ ಪ್ರತಿರೋಧದಲ್ಲಿ ದುಡಿವ ವರ್ಗಗಳು ಅದರಲ್ಲೂ ರೈತರು ಮಹತ್ತದ ಪಾತ್ರ ವಹಿಸುತ್ತಾರೆ. ಹಿಂಸಾತ್ಮಕ ಮಾರ್ಗದಿಂದ ಮಾತ್ರ ಯಶಸ್ಸು ದೊರಕುತ್ತದೆಂಬ ಸತ್ಯ ಎಲ್ಲರಿಗಿಂತ ಮೊದಲು ವರ್ಗಕ್ಕೆ ಅರಿವಾಗುತ್ತದೆ. ಅವರಿಗೆ ಸಾಮ್ರಾಜ್ಯಶಾಹಿಯೊಡನೆ ಯಾವುದೋ ವಿಧದ ರಾಜಿ ಅಥವಾ ಸಂಧಾನ ಸಾಧ್ಯವಿಲ್ಲ ಎನ್ನುತ್ತಾನೆ10. ಇದರ ಜೊತೆಗೆ ಆಳ್ವಿಕೆಗೊಳಪಟ್ಟ ಜನರನ್ನು ಅರ್ಥಮಾಡಿಕೊಳ್ಳುವ ಯುರೋಪಿನ ಶೈಕ್ಷಣಿಕ ತಿಳುವಳಿಕೆಗೆ ಪರ್ಯಾಯವಾಗಿ ದೇಶೀ ಚಿಂತಕರು ತಮ್ಮದೇ ಆದ ವಿವೇಚನೆಗಳನ್ನು ರೂಪಿಸಿಕೊಳ್ಳುವ ಅಗತ್ಯಗಳನ್ನು ಫ್ಯಾನನ್ ಸೂಚಿಸುತ್ತಾನೆ. ಬಗೆಯ ಪರ್ಯಾಯ ದೃಷ್ಟಿಕೋನದಿಂದ ಮಾತ್ರ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುತ್ತಾನೆ.

ವಸಾಹತೋತ್ತರ ಚಿಂತನೆಯ ಸಂದರ್ಭದಲ್ಲಿ ಪ್ರಮುಖವಾಗಿ ಕೇಳಿಬರುವ ಮತ್ತೊಂದು ಹೆಸರು ಎಡ್ವರ್ಡ್ ಸೈದ್. ಈತನೂ ಗ್ರಾಂಸಿಯ ರಾಜಕೀಯ ಚಿಂತನೆಗಳಿಂದ ಪ್ರಭಾವಿತನಾದವನು. ಅದರಲ್ಲೂ ಈತನ Orientalism ಮತ್ತು Culture and Imperialismಕೃತಿಗಳು ವಸಾಹತೋತ್ತರ ಚಿಂತನೆಗಳನ್ನು ಸೈದ್ಧಾಂತಿಕವಾಗಿ ಪ್ರೇರೇಪಿಸಿವೆ. ಈತನಓರಿಯಂಟಲಿಸಂಕೃತಿ ಒಂದು ಅರ್ಥದಲ್ಲಿ ಪಶ್ಚಿಮದ ಶೈಕ್ಷಣಿಕ ಶಿಸ್ತುಗಳನ್ನು ನೋಡುವ ದೃಷ್ಟಿಕೋನವನ್ನು ರೂಪಿಸುವಷ್ಟು ದಾರ್ಶನಿಕವಾದದ್ದು. ಆಧುನಿಕಪೂರ್ವ ಯುರೋಪಿನ ಜ್ಞಾನ ಶಿಸ್ತುಗಳು ಹೇಗೆ ಸಾಮ್ರಾಜ್ಯಶಾಹಿ ಹುನ್ನಾರಗಳ್ನು ಪೂರೈಸಲು ಬಳಕೆಯಾಗುತ್ತವೆ ಎಂಬುದನ್ನು ಓರಿಯಂಟಲಿಸಂ ಕೃತಿ ವಿವರಿಸುತ್ತದೆ. ಯುರೋಪ್ಪೂರ್ವಎಂದು ಕರೆಯುವ ಕಲ್ಪಿತ ಭೂಭಾಗವು ಕೇವಲ ಶೈಕ್ಷಣಿಕ ಚರ್ಚೆಗಳಲ್ಲಿ ಮಾತ್ರ ಇಲ್ಲ. ಅದು ಯುರೋಪಿನ ಬಂಡವಾಳ ವಿಸ್ತರಣೆಯಾಗುವ ಮತ್ತು ಯುರೋಪಿನ ಅದಿsಕಾರದ ವ್ಯಾಪ್ತಿಗೆ ಒಳಪಡುವ ಅದಿsೀನ ರಾಷ್ಟ್ರಗಳ ಗುಂಪು. ರಾಷ್ಟ್ರಗಳನ್ನು ನಿಯಂತ್ರಿಸಲೆಂದೇ ಯುರೋಪಿನ ಜ್ಞಾನ ಶಿಸ್ತುಗಳು ವಸಾಹತಶಾಹಿಗಳಿಗೆ ಪೂರಕ ಮಾಹಿತಿಗಳನ್ನು ಒದಗಿಸುತ್ತವೆ. ‘18 ನೇ ಶತಮಾನದ ಕೊನೆಯ ಹೊತ್ತಿಗೆ ಓರಿಯಂಟಲ್ವಾದವು ಯುರೋಪಿನ ಮುಖ್ಯ ಚರ್ಚೆಗಳಲ್ಲಿ ಆಕಾರಗೊಂಡಿತು. ಇದುಪೂರ್ವ ಕುರಿತ ಸಂಗತಿಗಳ್ನು ವಿವರಿಸಲು ತನ್ನನ್ನು ಸೀಮಿತಗೊಳಿಸಿಕೊಂಡಿತು. ಇದು ಪೂರ್ವವನ್ನು ಕುರಿತು ವಿವರಿಸುವ, ಅದಿsಕೃತವೆಂದು ಭಾವಿಸಲ್ಪಡುವ ಮತ್ತು ಆಳುವ ಎಲ್ಲ ಕ್ರಿಯೆಗಳನ್ನು ಒಳಗೊಂಡಿತು. ಓರಿಯಂಟಲ್ವಾದವೆಂದರೆ ಅದು ಪಶ್ಚಿಮದ ಆಕ್ರಮಣಕಾರೀ ಪ್ರವೃತ್ತಿಯ ಭಾಗವಾಗಿಯೇ ರೂಪಿಸಲ್ಪಟ್ಟಿದೆ. ಅದು ಪೂರ್ವವನ್ನು ಆಳುವುದಕ್ಕಾಗಿಯೇ ರಚನೆಗೊಂಡ ಚಿಂತನಾಕ್ರಮಎಂದು ಎಡ್ವರ್ಡ್ ಸೈದ್ ಓರಿಯಂಟಲ್ವಾದವನ್ನು ವಿವರಿಸುತ್ತಾನೆ.’11.

ಸೈದ್ ಮುಂದುವರೆದುಪಶ್ಚಿಮ ಮತ್ತು ಪೂರ್ವದ ಸಂಬಂಧವು ಅದಿsಕಾರದ ಮತ್ತು ಆಕ್ರಮಣದ ಸುತ್ತ ಹೆಣೆದುಕೊಂಡಿದೆ’12. ಎನ್ನುತ್ತಾನೆ. ಜೊತೆಗೆ ಪುನರುಜ್ಜೀವನದ ನಂತರ ಯುರೋಪಿನಲ್ಲಿ ಕಾಣಿಸಿಕೊಂಡ ಸಮಾಜ ಜ್ಞಾನಗಳ ವಿವಿಧ ಶಾಖೆಗಳಾದ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರಗಳು ಅದಿsಕಾರಸ್ಥ ಕೇಂದ್ರಗಳ ಆದರ್ಶಗಳಿಗಾಗಿಯೇ ರೂಪುಗೊಂಡವು13. ಅವು ಯುರೋಪಿನ ದಂಡಯಾತ್ರೆಗಳ ಜೊತೆಗೆ ವಸಾಹತುಗಳು ತಮ್ಮನ್ನು ವಿಸ್ತರಿಸಿಕೊಂಡವು ಎನ್ನುತ್ತಾನೆ. ಕಾರಣದಿಂದ ಬ್ರಿಟನ್ ವಿದ್ವಾಂಸನೊಬ್ಬ ಈಜಿಪ್ತನಲ್ಲಿರಲಿ ಅಥವಾ ಇಂಡಿಯಾದಲ್ಲಿರಲಿ, ಆತ 19ನೇ ಶತಮಾನದ ತನ್ನ ಸಮಕಾಲೀನ ಅದಿsಕಾರಸ್ಥ ರಾಜಕಾರಣದ ಹೊರತಾಗಿ ತನ್ನ ವಸಾಹತುಗಳನ್ನು ಪರಿಭಾವಿಸಲಾರ. 19ನೇ ಶತಮಾನದಲ್ಲಿ ಈಜಿಪ್ತ ಮತ್ತು ಇಂಡಿಯಾದಂತಹ ದೇಶಗಳ ಕುರಿತು ಸೃಷ್ಟಿಯಾದ ಜ್ಞಾನವು ಯುರೋಪಿನ ಆಕ್ರಮಣಕಾರೀ ರಾಜಕಾರಣದ ಮೊತ್ತವಾಗಿದೆ14 ಎನ್ನುತ್ತಾನೆ ಎಡ್ವರ್ಡ್ ಸೈದ್. ಸೈದ್ ಚಿಂತನೆಗಳು ಮೂರನೇ ಜಗತ್ತಿನಲ್ಲಿ ಆಧುನಿಕೋತ್ತರವಾದ ಹುಟ್ಟಲು ಕಾರಣವಾಗುತ್ತವೆ. ಭಾರತದಲ್ಲಿ ಅಶೀಶ್ನಂದಿ, ಅನಂದಕುಮಾರಸ್ವಾಮಿ, ಜಿ.ಎನ್.ದೇವಿ, ಕನ್ನಡದ ಸಂದರ್ಭದಲ್ಲಿ ಅನಂತಮೂರ್ತಿ ಮತ್ತು ಡಿ.ಆರ್.ನಾಗರಾಜ್ ಅವರು ಪ್ರಮುಖವಾಗಿ ವಾದವನ್ನು ಪ್ರಚುರಗೊಳಿಸಿದರು. ಆಧುನಿಕೋತ್ತರವಾದವು ದೇಶೀ ಜ್ಞಾನ ವನ್ನು ಸ್ಥಳೀಯ ಸಂಸ್ಕøತಿಗಳು ಪಶ್ಚಿಮಕ್ಕೆ ಪರ್ಯಾಯವಾಗಿ ಕಟ್ಟಿಕೊಂಡಿರುವುದನ್ನು ಮತ್ತು ಸಂಸ್ಕøತಿಗಳ ಸ್ಮೃತಿಯಲ್ಲಿ ಸಂಚಯಗೊಂಡಿರುವ ಜ್ಞಾನ ಪರಂಪರೆಯನ್ನು ಪಶ್ಚಿಮದ ಮಹಾಕಥನಗಳಿಗೆ ಪರ್ಯಾಯವಾಗಿ ಎತ್ತಿ ನಿಲ್ಲಿಸುವ ಕೆಲಸವನ್ನು ಮಾಡಿತು. ದೇಶೀ ಪರಂಪರೆ, ದೇಶೀ ಜ್ಞಾನ, ಮತ್ತು ದೇಶೀಯ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಸ್ಥಾನದ ಚಿಂತಕರು ಮಹತ್ವದ ಕೆಲಸ ಮಾಡಿದರೂ ಸಹ, ಇವರು ಹೆಚ್ಚಾಗಿ ಯಾವುದನ್ನು ದೇಶೀ ಜ್ಞಾನ ಪರಂಪರೆ ಎಂದು ಭಾವಿಸಿದ್ದರೋ ಅದು ಮುಖ್ಯಧಾರೆ ಮತ್ತು ಪ್ರತಿಷ್ಟಿತ ವರ್ಗಗಳ ಜ್ಞಾನ ಪರಂಪರೆಯೇ ಆಗಿತ್ತು15. ದೇಶೀಯ ಸಮುದಾಯಗಳ ಸ್ಮೃತಿಗಳಲ್ಲಿನ ಜ್ಞಾನ ರೂಪಗಳು ಯುರೋಪಿನ ಮಹಾಕಥನಗಳಿಗೆ ಪರ್ಯಾಯವಾಗಬಲ್ಲವು. ಕಾರಣದಿಂದಾಗಿ ಸಮುದಾಯಗಳಿಗೆ ಆವರಿಸಿರುವ ವಿಸ್ಮೃತಿಗಳಲ್ಲಿನ ಜ್ಞಾನರೂಪಗಳು ಯುರೋಪಿನ ಮಹಾಕಥನಗಳಿಗೆ ಪರ್ಯಾಯವಾಗಬಲ್ಲವು. ಕಾರಣದಿಂದಾಗಿ ಸಮುದಾಯಗಳಿಗೆ ಆವರಿಸಿರುವ ವಿಸ್ಮೃತಿಯನ್ನು ಹೋಗಲಾಡಿಸಿ, ಅವರ ಜ್ಞಾನ ಪರಂಪರೆಗಳಿಗೆ ಮರು ಜೀವ ನೀಡಬೇಕು ಎಂಬ ನಿಲುವುಗಳನ್ನು ಚಿಂತಕರು ಮಂಡಿಸಿದರು. ಜಿ.ಎನ್.ದೇವಿ After Amnesia: Tradition and change in Indian literary criticismಕೃತಿಯಲ್ಲಿ ವಾದವನ್ನು ಮಂಡಿಸಿದರೆ, ಕನ್ನಡದಲ್ಲಿ ಡಿ.ಆರ್.ನಾಗರಾಜ ಅಕ್ಷರ ಚಿಂತನೆಯ ಮಾಲೆಯ ಮೂಲಕ ಅನೇಕ ಪುಸ್ತಕಗಳನ್ನು ಮಂಡಿಸುವುದರ ಮೂಲಕ ವಾದವನ್ನು ಹೆಚ್ಚು ವಿಸ್ತರಿಸಿದರು.

ವಸಾಹತೋತ್ತರ ಸಂದರ್ಭದಲ್ಲಿ ಭಾರತದಲ್ಲಿ ಸಬಾಲ್ಟ್ರನ್ ಅಧ್ಯಯನಗಳು ಮಾಕ್ರ್ಸ್ವಾದಿಗಳಿಂದ ಆರಂಭವಾದವು. ಭಾರತ ದೇಶದ ಅಲಕ್ಷಿತ ಸಮುದಾಯಗಳಾದ ರೈತ, ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ತಿಳುವಳಿಕೆಯ ಜಗತ್ತನ್ನು ಅನಾವರಣ ಮಾಡುವ ಮೂಲಕ ಅಧ್ಯಯನಗಳು ತಮ್ಮದೇ ಆದ ಸೈದ್ಧಾಂತಿಕ ನೆಲೆಯೊಂದನ್ನು ರೂಪಿಸಿಕೊಂಡವು ಅಬಿಜಾತ ಮಾನವಶಾಸ್ತ್ರದ ಅಧ್ಯಯನ ವಿಧಾನವನ್ನು ಪ್ರಜ್ಞಾಪೂರ್ವಕವಾಗಿ ಮೀರುವ ಪ್ರಯತ್ನಗಳು ಭಾರತದಲ್ಲಿ ಅಧ್ಯಯನಗಳ ಮೂಲಕ ಸಂಭವಿಸಿದವು. ರಂಜಿತ್ ಗುಹಾ, ಡೇವಿಡ್ ಹಾರ್ಡಿಮನ್. ಸುಮಿತ್ ಸರ್ಕಾರ್, ಗಾಯತ್ರಿ ಸ್ಪಿವಾಕ್ ಮುಂತಾದ ಚಿಂತಕರು ಪ್ರಸ್ಥಾನವನ್ನು ಭಾರತದಲ್ಲಿ ಬೆಳೆಸಿದರು. ಅಧ್ಯಯನಗಳು ಮುಖ್ಯವಾಗಿ ಸ್ಥಾಪಿತ ಶೈಕ್ಷಣಿಕ ವಿಧಾನವನ್ನಷ್ಟೇ ಅಲ್ಲದೆ, ಸಮಕಾಲೀನ ರಾಜಕೀಯ ವಿದ್ಯಮಾನಗಳನ್ನು ಪ್ರಶ್ನಿಸಿದವು. ಇಲ್ಲಿಯವರೆಗೆ ಯಾವ ಶೈಕ್ಷಣಿಕ ಮತ್ತು ರಾಜಕೀಯ ನಂಬಿಕೆಗಳು ಮೂರನೇ ಜಗತ್ತನ್ನು ಅದರಲ್ಲೂ ಭಾರತದ ತಿಳುವಳಿಕೆಯ ಕ್ಷೇತ್ರವನ್ನು ನಿಯಂತ್ರಿಸುತ್ತಾ ಬಂದಿದ್ದವೋ ಗ್ರಹೀತಗಳನ್ನು ಸಬಾಲ್ಟ್ರನ್ ಅಧ್ಯಯನಗಳು ಪ್ರಶ್ನಿಸಿದವು ಮತ್ತು ದೇಶದ ಕೆಳಜಾತಿ, ಆದಿವಾಸಿ, ಅಲೆಮಾರಿ ಮತ್ತು ಅಂಚಿನ ಸಮುದಾಯಗಳ ತಿಳುವಳಿಕೆಯ ಲೋಕವನ್ನು ಸೈದ್ಧಾಂತಿಕವಾಗಿ ಮಂಡಿಸುವ ಮೂಲಕ ಪರ್ಯಾಯ ಅಧ್ಯಯನ ವಿಧಾನವನ್ನು ಅಧ್ಯಯನಗಳು ರೂಪಿಸಿದವು.

ಪರ್ಯಾಯ ಶೈಕ್ಷಣಿಕ ವಿಧಾನದ ಹಂಬಲಗಳು

ನಮ್ಮ ನಡುವಿನ ಸೂಕ್ಷ್ಮ ಸಂವೇದಿ ಸಂಸ್ಕøತಿ ಚಿಂತಕ, ಭಾಷಾಶಾಸ್ತ್ರಜ್ಞ ಮತ್ತು ಈಗ ಬುಡಕಟ್ಟು ಮತ್ತು ಅಲೆಮಾರಿಗಳ ನಡುವೆ ಕೆಲಸ ಮಾಡುತ್ತಿರುವ ಜಿ.ಎನ್.ದೇವಿ ತಮ್ಮ ಒಂದು ಲೇಖನದಲ್ಲಿ ಒಂದು ವ್ಯಕ್ತಿಗತ ಟಿಪ್ಪಣಿ ಬರೆದುಕೊಂಡಿದ್ದಾರೆ. ‘ಇದು ಒಂದು ವ್ಯಕ್ತಿಗತ ಟಿಪ್ಪಣಿ, ಗಿರೀಶ್ ಕರ್ನಾಡರ ಪ್ರಸಿದ್ಧ ನಾಟಕ ಹಯವದನವನ್ನು ಆರಂಭದಲ್ಲೇ ಉಲ್ಲೇಖಿಸಲಿಚ್ಚಿಸುತ್ತೇನೆ. ಅಪರಿಪೂರ್ಣತೆ ನಾಟಕದ ವಸ್ತು. ಅರ್ಧ ವ್ಯಕ್ತಿ, ಅರ್ಧ ಕುದುರೆ ಪಾತ್ರವಾದಹಯವನದವನ್ನು ಗಿರೀಶ್ ಕಾರ್ನಾಡರು ನಾಟಕದ ಆರಂಭದಲ್ಲಿಯೇ ಪರಿಚಯಿಸುತ್ತಾರೆ. ಸಮಕಾಲೀನ ಬೌದ್ಧಿಕ ವಲಯದಲ್ಲಿ ವಿಮರ್ಶಕನಾಗಿ ದುಡಿಯುತ್ತಿರುವ ನನಗೆ, ನಾನೊಬ್ಬ ಬೌದ್ಧಿಕ ಹಯವದನ ಇರಬಹುದೇ ಎಂಬ ಭಾವನೆ ಆಗಾಗ ಕಾಡುತ್ತದೆ. ನನ್ನ ದೇಹದ ಎಲ್ಲಾ ರಕ್ತಕಣಗಳೂ ಭಾರತೀಯ ಮಣ್ಣು, ನೀರು, ಗಾಳಿಯಿಂದ ಮಾಡಲ್ಪಟ್ಟಿದ್ದರೆ, ನನ್ನ ಮಿದುಳಿನಲ್ಲಿ ಸಂಗ್ರಹಿತವಾಗಿರುವ ಜ್ಞಾನ ಎಲ್ಲಿಂದಲೋ ಬಂದಂತೆ ಕಾಣುತ್ತದೆ’16. ಎನ್ನುತ್ತಾರೆ. ಬಹುಕಾಲ ಸಾಹಿತ್ಯ ಮತ್ತು ಸಂಸ್ಕøತಿ ಚಿಂತಕರಾಗಿ After Amnesiaದಂತಹ ಪುಸ್ತಕದ ಮೂಲಕ ದೇಶೀಯ ಜ್ಞಾನ ಪರಂಪರೆಗಳ ಮಹತ್ವದ ಕುರಿತು ತೀವ್ರವಾಗಿ ಬರೆದ ದೇವಿಯವರು ತಮ್ಮನ್ನುಹಯವದನರೂಪಕದ ಮೂಲಕ ಭಾವಿಸಿಕೊಳ್ಳುವುದು ದೇಶೀ ಚಿಂತಕನ ತೀವ್ರ ಆತ್ಮವಿಮರ್ಶೆಯಂತೆ ಕಾಣುತ್ತದೆ. ದೇವಿ ಒಬ್ಬ ಚಿಂತಕನಾಗಿ ವಸಾಹತೋತ್ತರ ಸಂದರ್ಭದ ತನ್ನೆಲ್ಲ ಓರಿಗೆಯ ಲೇಖಕರನ್ನು ಸಮರ್ಥವಾಗಿ ಪ್ರತಿನಿದಿಸುವವರು. ಅದರಲ್ಲೂ ಆಧುನಿಕೋತ್ತರ ವಿದ್ವಾಂಸರಲ್ಲಿ ದೇವಿಯವರಿಗೆ ಮಹತ್ವದ ಸ್ಥಾನವಿದೆ. ಕಾರಣದಿಂದ ತಮ್ಮ ತಿಳುವಳಿಕೆಯನ್ನುಅನ್ಯಎಂದು ಭಾವಿಸುವ ಒರಟು ಸಿನಿಕತನ ದೇವಿಯವರಿಂದ ವ್ಯಕ್ತವಾಗಲಾರದು. ದೇವಿಯವರಂತೆ ಆಧುನಿಕೋತ್ತರ ಸಂದರ್ಭದಲ್ಲಿ ಸ್ಥಳೀಯ ಸಂಸ್ಕøತಿಗಳ ಕುರಿತು ಚಿಂತಿಸುವ ಪ್ರತಿಯೊಬ್ಬ ಚಿಂತಕನಿಗೆ ಹಯವದನದರೂಪಕವು ಲಗಾಮು ಹಾಕುತ್ತಲೇ ಇರುತ್ತದೆ. ಬಗೆಯ ಆತ್ಮವಿಮರ್ಶೆಯು ಪರ್ಯಾಯ ಚಿಂತನಾಕ್ರಮ ಮತ್ತು ಪರ್ಯಾಯ ಅಧ್ಯಯನ ವಿಧಾನಗಳನ್ನು ಹಂಬಲಿಸುವಂತಹ ರಚನಾತ್ಮಕ ತಳಮಳಗಳನ್ನು ಹುಟ್ಟುಹಾಕಬೇಕಿದೆ. ದೇವಿ ಸಾಹಿತ್ಯ ವಿಮರ್ಶೆ ಮತ್ತು ಭಾಷಾವಿಜ್ಞಾನ ಅಧ್ಯಯನಗಳಿಂದ ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳ ಕಡೆಗೆ ನಡೆದು ಹೋದದ್ದು ಬಗೆಯ ರಚನಾತ್ಮಕ ತಳಮಳಗಳಿಂದಾಗಿಯೇ ಎನ್ನಿಸುತ್ತದೆ.

ಪಶ್ಚಿಮವನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀವ್ರ ಪರಿಶೀಲನೆಗೆ ಒಳಪಡಿಸದ ಹೊರತು ಸ್ಥಳೀಯವಾದ ಮತ್ತು ದೇಶೀಯ ಅಧ್ಯಯನ ಕ್ರಮಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಕಳೆದ ಮುನ್ನೂರು ವರ್ಷಗಳಿಂದ ಯಾರಿಂದ ನಾವು ವ್ಯಾಖ್ಯಾನಿಸಲ್ಪಟ್ಟೆವು? ಯಾರು ಹೇಗೆಲ್ಲ ನಮ್ಮನ್ನು ವ್ಯಾಖ್ಯಾನಿಸಿದರು? ಯಾವ ವ್ಯಾಖ್ಯಾನದ ಕ್ರಮಗಳು ನಮ್ಮ ಚಿಂತನೆಗಳನ್ನು ನಿಯಂತ್ರಿಸುತ್ತಿವೆ? ಎಂಬುದನ್ನು ವಿವರಿಸಿಕೊಳ್ಳದ ಹೊರತು ನಾವು ಕನಸುವ ಪರ್ಯಾಯ ನೋಟದ ಕ್ರಮಗಳು ರೂಪುಗೊಳ್ಳಲಾರವು. ಅದರಲ್ಲೂ ಪಶ್ಚಿಮದ ಶೈಕ್ಷಣಿಕ ವಿಧಾನಗಳನ್ನು ಅದರ ರಾಜಕೀಯಾರ್ಥಿಕ ಹುನ್ನಾರಗಳಲ್ಲಿಟ್ಟು ಪರಿಭಾವಿಸದ ಹೊರತು ನಾವುನಮ್ಮದೇಆದ ಅಧ್ಯಯನ ವಿಧಾನಗಳನ್ನು ಸೈದ್ಧಾಂತಿಕವಾಗಿ ನಿರೂಪಿಸಿಕೊಳ್ಳಲು ಸಾಧ್ಯವಿಲ್ಲ.

ನಾವು ನಮ್ಮನ್ನು ನೋಡಿಕೊಳ್ಳುವ ವಿಧಾನವು ನಮ್ಮ ಲೌಕಿಕ ಬದುಕಿಗೆ ಸಂಬಂದಿsಸಿದ್ದು. ನಮ್ಮ ಒಳಿತು ಕೆಡುಕುಗಳ ರಾಜಕಾರಣಕ್ಕೆ ಸಂಬಂದಿಸಿದ್ದು. ಯಾಕೆಂದರೆ ಸಮಾಜ ವಿe್ಞÁನಗಳಲ್ಲಿ ನಡೆಯುವ ಸಂಶೋಧನೆಯು ನಾವು ಬದುಕುವ ಸಮಾಜಕ್ಕೆ ಮತ್ತು ಮನುಷ್ಯರಿಗೆ ಸಂಬಂಧಪಟ್ಟದ್ದಾಗಿದೆ. ಆದರೆ ಇಲ್ಲಿಯವರೆಗೆ ನಮ್ಮ ಸಮಾಜ ಮತ್ತು ಇಲ್ಲಿನ ಮನುಷ್ಯರನ್ನು ನಿರ್ವಚಿಸಿದ್ದು ಯುರೋಪಿನ ಹಲವು ಕ್ಷೇತ್ರಕ್ಕೆ ಸಂಬಂದಿsಸಿದ ವಿದ್ವಾಂಸರು. ಓರಿಯಂಟಲಿಸ್ಟರು, ಇತಿಹಾಸಜ್ಞರು, ಮಾನವಶಾಸ್ತ್ರಜ್ಞರು ತಮ್ಮನ್ನು ಕರೆತಂದ ವಸಾಹತುಶಾಹಿಗಳ ರಾಜಕೀಯ ದೃಷ್ಟಿಕೋನಕ್ಕೆ ಪೂರಕವಾಗಿಯೇ ನಮ್ಮನ್ನು ವ್ಯಾಖ್ಯಾನಿಸಿದರು. ಇಂಡೆನ್ ಪ್ರಕಾರಭಾರತವನ್ನು ಕುರಿತು ರಚನೆಗೊಂಡಿರುವ ಸಂವಾದಗಳನ್ನೆಲ್ಲವಿರಚಿಸುವುದುಮೊದಲ ಹೆಜ್ಜೆಯಾಗುತ್ತದೆ. ಸಂವಾದಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಎಚ್ಚರವನ್ನು ಪಡೆಯದೆ ಅವುಗಳಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ 17. ಮೊದಲೇ ಹೇಳಿದಂತೆ ಬೌದ್ಧಿಕವಾಗಿ ವಸಾಹತುಶಾಹಿಯಿಂದ ವಿಮೋಚನೆ ಪಡೆಯುವುದು ನಮಗೆ ಇನ್ನೂ ಸಾಧ್ಯವಿಲ್ಲ. ಏಕೆಂದರೆವಸಾಹತುಶಾಹಿಯು ವಸಾಹತೀಕರಣಕ್ಕೊಳಪಟ್ಟವರನ್ನು ಕೇವಲ ಭೌತಿಕವಾಗಿ ಮಾತ್ರ ಆಕ್ರಮಿಸಿಕೊಳ್ಳುವುದಿಲ್ಲ. ಜನರ ಮನಸ್ಸನ್ನು ವಸಾಹತೀಕರಣಗೊಳಿಸುತ್ತದೆ. ಜೊತೆಗೆ ವಸಾಹತೀಕರಣಗೊಂಡ ಸಮಾಜವು ತನ್ನ ಸಾಂಸ್ಕøತಿಕ ಆದ್ಯತೆಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳದಷ್ಟು ವಸಾಹತುಶಾಹಿಯು ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತದೆ’18. ಅಶೀಶ್ ನಂದಿ ವಸಾಹತಶಾಹಿ ಯನ್ನು ಕೇವಲ ಒಂದು ರಾಜಕೀಯಶಕ್ತಿ ಎಂದು ಮಾತ್ರ ಪರಿಭಾವಿಸುವುದಿಲ್ಲ. ಜೊತೆಗೆ ವಿಮೋಚಿತವಸಾಹತವು ಸ್ವಾತಂತ್ರ್ಯ ಸಿಕ್ಕ ತಕ್ಷಣ ಅದು ವಸಾಹತುಶಾಹಿಯಿಂದ ಮುಕ್ತಿ ಪಡೆದಂತಲ್ಲ. ವಸಾಹತುಶಾಹಿಯು ಒಂದು ಮನಃಸ್ಥಿತಿ. ಅದು ತನ್ನದಲ್ಲದ ಸಮಾಜದಲ್ಲೂ ಸುಲಭವಾಗಿ ಅಂತರ್ಗತವಾಗಿಬಿಡುವ ಪ್ರಕ್ರಿಯೆ’19ಎನ್ನುತ್ತಾರೆ.

ಇದರಿಂದಾಗಿ ವಸಾಹತು ಸಂದರ್ಭದ ಜ್ಞಾನಕ್ರಮಗಳು ವಸಾಹತುಗಳಲ್ಲಿ ಇಲ್ಲಿಯವರೆಗೂ ಪ್ರಶ್ನಿತವಾಗದೆ ಚಾಲ್ತಿಯಲ್ಲಿದ್ದವು. ಇಲ್ಲಿಯವರೆಗೂ ನಾವು ಪಶ್ಚಿಮದ ಕಣ್ಣುಗಳ ಮೂಲಕ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ಹಾಗೆಂದು ಪಶ್ಚಿಮದಲ್ಲಿನ ಎಲ್ಲ ಜ್ಞಾನಕ್ರಮಗಳನ್ನು ನೋಡಬೇಕಿಲ್ಲ. ವಿಮೋಚಿತ ವಸಾಹತುಗಳಲ್ಲಿ ಮಾಜಿ ಯಜಮಾನರು ಬಿಟ್ಟುಹೋದ ನೋಟಕ್ರಮಗಳನ್ನು ನಾವು ಪರಿಶೀಲಿಸುವ ಅಗತ್ಯವಿದೆ. ಹೇಳಿಕೆಯನ್ನು ನಾವು ಹಲವು ಉದಾಹರಣೆಗಳ ಮೂಲಕ ಸಮರ್ಥಿಸಬಹುದು. ವಸಾಹತು ಆಡಳಿತದ ಯಾವ ಅದಿsಕಾರಿಗಳು ಮತ್ತು ಸಂದರ್ಭದ ವಿದ್ವಾಂಸರು ಇಲ್ಲಿನ ಅಲೆಮಾರಿಗಳನ್ನು, ಆದಿವಾಸಿಗಳನ್ನು ಕಳ್ಳರು, ಅಪರಾದಿsಗಳು ಎಂದು ಪರಿಭಾವಿಸಿದ್ದರೋ ಅದೇ ಬಗೆಯ ಸೈದ್ಧಾಂತಿಕತೆ, ಈವತ್ತೂ ವಿಮೋಚಿತ ವಸಾಹತುಗಳ ವಿದ್ವಾಂಸರಲ್ಲಿ ಜೀವಂತವಾಗಿದೆ. ಕಾರಣದಿಂದ ಅಬಿsಜಾತ ಮಾನವಶಾಸ್ತ್ರವು ತಾನು ಅಧ್ಯಯನ ಮಾಡುವ ಸಮುದಾಯಗಳ ಪರವಾಗಿರುವುದಿಲ್ಲ. ಮೆಮ್ಮಿಯ ಪ್ರಕಾರಮಾನವಶಾಸ್ತ್ರಜ್ಞನು ಯಾವತ್ತೂ ಶಕ್ತಿರಾಜಕಾರಣ ಮಾಡುವ ಪ್ರಬಲ ಗುಂಪಿನ ಪರವಾಗಿರುತ್ತಾನೆ. ಜೊತೆಗೆ ವಸಾಹತಶಾಹಿ ಆಡಳಿತದ ಚಲನೆಗಳನ್ನು ಯಾವತ್ತೂ ಸಮರ್ಥಿಸುತ್ತಿರುತ್ತಾನೆ. ಮತ್ತು ಆಳಿಸಿಕೊಳ್ಳುವ ಜನಕ್ಕೆ ತಮ್ಮ ಒಳಿತನ್ನು ಸಾದಿsಸಿಕೊಳ್ಳುವ ಶಕ್ತಿ ಇಲ್ಲದವರೆಂದು ನಂಬಿಸುತ್ತಾನೆ’20. ಮೊದಲೇ ಹೇಳಿದಂತೆ ಆಳಿಸಿಕೊಳ್ಳುವ ಜನರನ್ನು ವಸಾಹತು ಶಕ್ತಿಗಳು ಬೌದ್ಧಿಕವಾಗಿ ನಾಶ ಮಾಡಿದವು. ಯಾವ ಓರಿಯಂಟಲಿಸ್ಟರುಭವ್ಯ, ಆದರ್ಶ, ಭಾರತವನ್ನುರಮ್ಯವಾಗಿ ಚಿತ್ರಿಸಿದರೋ ಅದರ ವಿವರಗಳನ್ನು ಇಟ್ಟುಕೊಂಡು ಮುಂದೆ ಬಂದ ಆಡಳಿತಗಾರರು ವಿದ್ವಾಂಸರು ಯುರೋಪಿನ ಮಾನವಶಾಸ್ತ್ರಜ್ಞರು ವಸಾಹತು ಭಾರತದ ಸಮಾಜದ ಆತ್ಮಪ್ರತ್ಯಯದ ನಾಶಕ್ಕೆ ಕೈ ಹಾಕಿದರು.

ಮಾನವಶಾಸ್ತ್ರದ ಶೈಕ್ಷಣಿಕ ಆದ್ಯತೆಗಳಲ್ಲಿ ಮೊದಲನೆಯದು. ‘ಮಾಹಿತಿಯನ್ನುಕ್ರೋಡಿೀಕರಿಸುವುದು. ಸಂಗ್ರಹಿಸಿದ ಮಾಹಿತಿಯನ್ನು ಮಹತ್ವದ್ದೆಂದು ಸಂರಕ್ಷಿಸುವುದು. ತಾವುಅಧ್ಯಯನಮಾಡುವ ಜನರ ಮೇಲ್ಸ್ತರದ ವಿವರಗಳನ್ನೇ ಅತ್ಯಂತಿಕ ಸತ್ಯಗಳೆಂದು ಪರಿಗಣಿಸುವುದು ಅಬಿsಜಾತ ಮಾನವಶಾಸ್ತ್ರದ ಗುಣ. ಇಲ್ಲಿ ಪಡೆದ ಮಾಹಿತಿಯ ಮರುಪರಿಶೀಲನೆ ಇರುವುದಿಲ್ಲ. ಉದಾಹರಣೆಗೆ ಸಿದ್ದಿಯರು ಮುದ್ದೆ ಮಾಡುವಾಗ ಹಿಟ್ಟನ್ನು ಸರಿಯಾಗಿ ಮಿಶ್ರಣ ಮಾಡಲು ಒಂದು ಮರದ ಕೋಲನ್ನು ಬಳಸುತ್ತಾರೆ. ಮತ್ತು ಸಿದ್ದಿ ಸಮುದಾಯದವರು ಯಾವತ್ತೂ ಮುದ್ದೆಯನ್ನು ಆಹಾರಕ್ಕಾಗಿ ಬಳಸುತ್ತಾರೆ. ಸಿದ್ದಿಯರು ಮುದ್ದೆ ಮಾಡಲು ಬಳಸುವ ಮುದ್ದೆಕೋಲುಇಷ್ಟು ಉದ್ದ, ಇಷ್ಟು ಅಗಲಇರುತ್ತದೆ. ಮುದ್ದೆಕೋಲು ಕಾಲಾನಂತರ ನಶಿಸಿಹೋಗಿಬಿಡಬಹುದು ಇದನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು ಎಂದು ಮಾನವಶಾಸ್ತ್ರಜ್ಞನೊಬ್ಬ ಯೋಚಿಸಿಬಿಡುತ್ತಾನೆ. ಮದ್ರಾಸಿನ ಮಾನವಶಾಸ್ತ್ರೀಯ ವಸ್ತು ಸಂಗ್ರಹಾಲಯದಲ್ಲಿ ತೋಡ, ಬಡಗ ಮತ್ತು ಇರುಳ ಮುಂತಾದ ಸಮುದಾಯಗಳ ತಲೆ ಬುರುಡೆ, ಅಸ್ತಿ ಪಂಜರ ಸಮೇತ ಆಯಾ ಸಮುದಾಯಗಳ ದಿನ ಬಳಕೆಯ ಪರಿಕರಗಳ ಸಂಗ್ರಹವನ್ನು ನೋಡಬಹುದು. ಅಲ್ಲಿನವಸ್ತುಗಳುಕೆಲವುಕಥೆಹೇಳುತ್ತವೆ. ಆದರೆ ಪಶ್ಚಿಮದ ಮಾನವಶಾಸ್ತ್ರಕ್ಕೆ ಸಿದ್ದಿಯರು ಆಹಾರಕ್ಕೆ ಮುದ್ದೆಯನ್ನೇ ಏಕೆ ಬಳಸುತ್ತಾರೆ? ಸಿದ್ದಿಯರು ಮುದ್ದೆ ಕೋಲನ್ನು ಬಳಸಿ ದಿನಕ್ಕೆ ಎಷ್ಟು ಬಾರಿ ಅಡುಗೆ ಮಾಡುತ್ತಿದ್ದರು? ಸಿದ್ದಿಯರು ದಿನಕ್ಕೆ ಎಷ್ಟು ಬಾರಿ ಮುದ್ದೆಯನ್ನು ಊಟ ಮಾಡುತ್ತಿದ್ದರು? ಎಂಬ ಪ್ರಶ್ನೆಗಳು ಕಾಡುವುದಿಲ್ಲ. ಕ್ಷಣಕ್ಕೆ ಪಡೆದ ವಿವರಗಳು ಮಾತ್ರ ಮಾನವಶಾಸ್ತ್ರಕ್ಕೆ ಅತ್ಯಂತಿಕ. ಅದಕ್ಕೆ ಕ್ಲಿಫಾರ್ಢ್ಮಾನವಶಾಸ್ತ್ರದ ಸತ್ಯಗಳು ಅರ್ಧ ಸತ್ಯಗಳಾಗಿರುತ್ತವೆ. ಜೊತೆಗೆ ಸತ್ಯಗಳು ನಿಶ್ಚಿತ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿರುತ್ತವೆ’21 ಎನ್ನುತ್ತಾನೆ. ಅಬಿsಜಾತ ಮಾನವಶಾಸ್ತ್ರ ಯಾವುದನ್ನು ಕ್ಷಣದ ಸತ್ಯ ಎಂದು ನಂಬುತ್ತದೋ ಅದು ಸ್ಥಳೀಯ ಸಾಮಾಜಿಕ ಸಂದರ್ಭದಲ್ಲಿ ಸಾಮಾನ್ಯ ವಿವರವಾಗಿ ಮಾತ್ರ ಲಭ್ಯವಾಗಿರುತ್ತದೆ. ಒಟ್ಟಿನಲ್ಲಿ ಅಬಿಜಾತ ಮಾನವಶಾಸ್ತ್ರಕ್ಕೆ ಭಾರತದಂತಹ ದೇಶದ ಸಮಾಜದ ತಿಳುವಳಿಕೆಯನ್ನು e್ಞÁನದ ಮಟ್ಟದಲ್ಲಿ ವಿವರಿಸಿಕೊಳ್ಳುವ ಜರೂರು ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೇ ಬಗೆಯ ಶೈಕ್ಷಣಿಕ ವಿಧಾನವನ್ನು ಸ್ಥಳೀಯ, ದೇಶೀಯ ಮಾನವಶಾಸ್ತ್ರಜ್ಞರು ಇಂದಿಗೂ ಅನುಸರಿಸುತ್ತಿರುವುದು ಒಂದು ವಿಪರ್ಯಾಸ.

ಮೇಲೆ ಉಲ್ಲೇಖಿಸಿದ ಜಿ.ಎನ್.ದೇವಿ ಅವರ ಲೇಖನದ ಕೊನೆಗೆಬ್ರಿಟಿಶ್ ವಸಾಹತು ಕಾಲದಿಂದ ಪಶ್ಚಿಮ ಮತ್ತು ಭಾರತದ ನಡುವಿನ ಬೌದ್ಧಿಕ ವ್ಯಾಪಾರ ಏಕಮುಖವಾಗಿ ಸಾಗಿದೆ. ನಮ್ಮ ವಿಮರ್ಶಾ ವ್ಯಾಪಾರದಲ್ಲಿ ನಾವು ಎಷ್ಟರ ಮಟ್ಟಿಗೆ ವಿದೇಶಿಯನ್ನು ಸ್ವೀಕರಿಸುತ್ತಿದ್ದೇವೆ ಎಂದರೆ, ಅದರಲ್ಲಿನದೇಶೀಅವಕಾಶ ಮತ್ತಷ್ಟು ಅನಿರ್ವಚನೀಯವಾಗುತ್ತಾ ಸಾಗಿದೆ’22 ಎನ್ನುತ್ತಾರೆ. ರಾಜಕೀಯವಾಗಿ ತಿರಸ್ಕರಿಸಿದ್ದನ್ನು ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ಅವಲಂಬಿಸುವ ಹುಂಬ ನಿರ್ಧಾರಗಳ ಕುರಿತ ಹಳಹಳಿಕೆ ದೇವಿಯವರ ಲೇಖನದುದ್ದಕ್ಕೂ ವ್ಯಕ್ತವಾಗುತ್ತದೆ. ಜೊತೆಗೆ ದೇವಿದೇಶೀಅಧ್ಯಯನ ವಿಧಾನವನ್ನು ಪ್ರe್ಞÁಪೂರ್ವಕವಾಗಿ ಹಂಬಲಿಸುತ್ತಾರೆ. ಆವೇಶದಿಂದ ಆಕ್ರಮಣ ಮಾಡುವ ದುಡುಕಿನ ಉಗ್ರಗಾಮಿಯಾಗದ, ನಿಂತಲ್ಲೇ ನಿಂತು ಮಿತಿಗಳನ್ನು ಆರಾದಿsಸುವ ಕೂಪ ಮಂಡೂಕವಾಗದ ದೇಶಿ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದು ದೇವಿ ತಮ್ಮ ಲೇಖನದಲ್ಲಿ ಚರ್ಚಿಸಿದ್ದಾರೆ.

ದೇಶೀ ಅಧ್ಯಯನ ವಿಧಾನ ಕುರಿತ ಚರ್ಚೆ ಏಕರೂಪವಾಗಿಲ್ಲ. ದೇವಿ ಮತ್ತು ಡಿ.ಆರ್. ವಿಸ್ಮೃತಿಯ ಪರಿಕಲ್ಪನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಸರ್ವಕಾಲಿಕ ಎನ್ನುವ ಅಧ್ಯಯನ ಮಾದರಿಗಳಿಗೆ ಮತ್ತು ಕಥನಗಳಿಗೆ ಸ್ಥಳೀಯಜ್ಞಾನ ಪರಂಪರೆಗಳು ಪರ್ಯಾಯಗಳು ಎಂದು ಭಾವಿಸುತ್ತಾರೆ. ಆದರೆ ಇವರು ನಂಬುವುದುಸ್ಥಳೀಯಜ್ಞಾನ ಪರಂಪರೆಗಳು ಮತ್ತೆ ಅಖಿಲ ಭಾರತ ಮಟ್ಟದ ವಿರಾಟ್ ಕಥನಗಳನ್ನೇ. ಅಕ್ಷರ ಚಿಂತನ ಮಾಲೆಯಲ್ಲಿ ಡಿ.ಆರ್. ಪ್ರಕಟಿಸಿದ ಹಲವು ಪುಸ್ತಕಗಳು ಇದನ್ನು ಸಮರ್ಥಿಸುತ್ತವೆ. ದಾವ್ ಜಿಂಗ್, ದಾರು ಪ್ರತಿಮಾ ಪೂಜಿವೆಯಂತಹ ಕೆಲವು ಪುಸ್ತಕಗಳನ್ನು ಬಿಟ್ಟರೆ ಉಳಿದ ಕೃತಿಗಳು Pan Indian ಮಾದರಿಯನ್ನು ಸಮರ್ಥಿಸುವಂತವುಗಳೇ ಆಗಿವೆ.

ಸ್ವಕೀಯ ತಿಳುವಳಿಕೆ ಮೂಲಕ ಉತ್ಪನ್ನವಾಗುವ ಗ್ರಹಿಕೆಯ ವಿಧಾನಗಳನ್ನು ಕಂಡುಕೊಳ್ಳಲೆತ್ನಿಸುವ ವಿದ್ವಾಂಸರು ದೇಶೀಯತೆಯನ್ನು ಇವರಿಗಿ0ತ ಬಿನ್ನವಾಗಿಯೇ ಪರಿಭಾವಿಸುತ್ತಾರೆ. ಇವರು ಅಂಚಿನ ಸಮುದಾಯಗಳು, ಜಾನಪದದ, ಆದಿವಾಸಿಗಳ ತಿಳುವಳಿಕೆಯ ಮೂಲಕ ದೇಶೀಯತೆಯನ್ನು ಪರಿಕಲ್ಪಿಸಲು ಪ್ರಯತ್ನಿಸುತ್ತಾರೆ. ಮೊಗಳ್ಳಿ ಗಣೇಶ್, ‘ದೇಶೀತನ್ನ ಅಸ್ತಿತ್ವವನ್ನು ಪುನರ್ ಸೃಷ್ಟಿಸಿಕೊಳ್ಳುವ ಕಥನ’23 ಎನ್ನುತ್ತಾರೆ. ಅಖಿಲ ಭಾರತ ಮಟ್ಟದ ಚಿಂತಕರು ಪರ್ಯಾಯವೆಂದು ಸಮರ್ಥಿಸುವ ದೇಶೀ e್ಞÁ ಮತ್ತು ದೇಶೀ ಅಧ್ಯಯನ ವಿಧಾನಗಳನ್ನು ನಿರಾಕರಿಸುವ ಗುಣ ಇವರ ಚಿಂತನೆಯಲ್ಲಿದೆ. ಕನ್ನಡದ ಸಂದರ್ಭದಲ್ಲಿ ರಹಮತ್ ತರೀಕೆರೆಯವರ ಪ್ರತಿಸಂಸ್ಕøತಿಯ ಪರಿಕಲ್ಪನೆ ಮತ್ತು ಸೂಪಿsಗಳನ್ನು ಅಧ್ಯಯನ ಮಾಡಿದ ಕ್ರಮ, ಕನ್ನಡದ ಸಾಹಿತ್ಯ ಮೀಮಾಂಸೆಯನ್ನು ಸಂಸ್ಕøತದ ಲಾಕ್ಷಣಿಕರ ಕ್ಲೀಷೆಗಳಿಂದ ಬೇರ್ಪಡಿಸಿ ಕನ್ನಡದ್ದೇ ಮೀಮಾಂಸೆಯನ್ನು ರೂಪಿಸಲು ಮಾಡಿದ ಪ್ರಯತ್ನಗಳು ಗಮನಾರ್ಹವಾದವುಗಳೇ ಆಗಿವೆ. ಜೊತೆಗೆ ಅಖಿಲ ಭಾರತ ಮಟ್ಟದ ವಿಸ್ಮೃತಿ ಚರ್ಚೆಯನ್ನು ಬುಡಕಟ್ಟೊಂದರ ಲೋಕದೃಷ್ಟಿಯ ಹಿನ್ನೆಲೆಯಲ್ಲಿ ವಿಮರ್ಶೆಗೊಳಪಡಿಸುವ ಹಿ.ಚಿ.ಬೋರಲಿಂಗಯ್ಯನವರವಿಸ್ಮೃತಿ ಮತ್ತು ಸಂಸ್ಕøತಿಪುಸ್ತಕವು ಬಗೆಯ ಪರ್ಯಾಯ ಅಧ್ಯಯನ ವಿಧಾನಗಳನ್ನು ಮಂಡಿಸುತ್ತದೆ. ಬಿ.ಎಂ.ಪುಟ್ಟಯ್ಯನವರಸಾವು ! ಒಂದು ಚರ್ಚೆ’, ಎಸ್.ಎಸ್. ಹಿರೇಮಠರ ಕರ್ನಾಟಕ ದಲಿತ ಸಂಸ್ಕøತಿ ಕುರಿತ ಅಧ್ಯಯನಗಳು, ಸಾಕಿಯವರ Making Historyಯ ಎರಡು ಸಂಪುಟಗಳು, ಮೊಗಳ್ಳಿ ಗಣೇಶರ ದೇಶಿ, ಮೌಖಿಕ ಕಥನಗಳ ಕುರಿತ ಅವರ ಬರಹಗಳು ಅಖಿಲ ಭಾರತ ಮಟ್ಟದ ದೇಶೀ ಚರ್ಚೆಯನ್ನು ಸೂಕ್ಷ್ಮ ನೆಲೆಯಲ್ಲಿ ವಿಮರ್ಶಿಸುತ್ತಾ, ಹೊಸ ಶೈಕ್ಷಣಿಕ ದೃಷ್ಟಿಕೋನವನ್ನು ರೂಪಿಸಲು ಪ್ರೇರೇಪಿಸುತ್ತವೆ.

ಮೇಲಿನ ಶೈಕ್ಷಣಿಕ ವಿಧಾನಗಳು ಸಬಾಲ್ಟ್ರನ್ ಅಧ್ಯಯನಗಳ ಶೈಕ್ಷಣಿಕ ವಿಧಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತವೆ. ಅಲಕ್ಷಿತ ಅಧ್ಯಯನಗಳು ಆದಿವಾಸಿ, ರೈತ, ಕೆಳಜಾತಿ ಮತ್ತು ಮಹಿಳಾ ಲೋಕಗಳ ತಿಳುವಳಿಕೆಗಳನ್ನು ಚರಿತ್ರೆಯ ಭಾಗವಾಗಿಸುವ ಪ್ರಯತ್ನ ಮಾಡುತ್ತಾ ಬಂದಿವೆ. ಯಾವುದೋ ಆದಿವಾಸಿ ಸಮುದಾಯದ ವಿಧವೆ ಚಂದ್ರಾಳ ಸಾವನ್ನು ಮುಖ್ಯವಾಗಿಟ್ಟುಕೊಂಡು ಭಾರತದ ಸಾಮಾಜಿಕ ಚರಿತ್ರೆಯಲ್ಲಿ ಪುರುಷ ಪ್ರಧಾನ ಸಮಾಜದ ನ್ಯಾಯ ವ್ಯವಸ್ಥೆಯನ್ನು ಪರಿಶೀಲಿಸುವ ಮೂಲಕ ರಂಜಿತ್ ಗುಹಾ ಆದಿವಾಸಿಗಳ ಕಣ್ಣುಗಳ ಮೂಲಕ ದಬ್ಬಾಳಿಕೆಯು ಜಗತ್ತಿನ ಮುಂದೆಹೊಸಚರಿತ್ರೆಯ ರಚನಾ ಮಾದರಿಯನ್ನು ಎತ್ತಿ ನಿಲ್ಲಿಸುತ್ತಾರೆ. ಆದಿವಾಸಿಗಳುಮುಖ್ಯವಾಹಿನಿಎಂಬ ಜಗತ್ತಿನ ಮುಂದೆ ಕ್ಷುಲ್ಲಕವಾಗಿ ಬಿಡುವ, ಅವರ ದುಃಖ ದುಮ್ಮಾನುಗಳು ದಾಖಲಾಗದೆ ನಗಣ್ಯವಾಗುವುದನ್ನು ಸಬಾಲ್ಟ್ರನ್ ಚರಿತ್ರೆ ರಚನಾಶಾಸ್ತ್ರವು ವಿರೋದಿsಸುತ್ತದೆ. ಅಲೆಮಾರಿ, ಆದಿವಾಸಿ, ರೈತ ಮತ್ತು ಮಹಿಳೆಯರ ಕಷ್ಟ ಸುಖಗಳ ಮೂಲಕ ರೂಪುಗೊಳ್ಳುವ ಸಾಮಾಜಿಕ ಚರಿತ್ರೆಯು ಯಾವುದನ್ನು ನಾವು ಅಖಿಲ ಭಾರತೀಯ ಚರಿತ್ರೆ ಎನ್ನುತ್ತೇವೋ ಚರಿತ್ರೆಗೆ ಸಹಜವಾಗಿಯೇ ತಾತ್ವಿಕವಾಗಿ ಪರ್ಯಾಯವಾಗುತ್ತದೆ. ಬಗೆಯ ಅಂಚಿನ ಸಮುದಾಯಗಳ ದುಮ್ಮಾನಗಳ ಭಾಗವಾಗಿ ರೂಪುಗೊಳ್ಳುವ ಚರಿತ್ರೆಯ ರಾಜಕೀಯ ಸಿದ್ಧಾಂತ ರಾಜರ ದಂಡಯಾತ್ರೆಗಳ ವಿವರಗಳನ್ನೇ ಒಳಗೊಂಡ ಅಬಿsಜಾತ ಚರಿತ್ರೆಶಾಸ್ತ್ರವನ್ನು ಲೇವಡಿ ಮಾಡಿಬಿಡುತ್ತದೆ. ಈವರೆಗೆ ಸಬಾಲ್ಟ್ರನ್ ಅಧ್ಯಯನ ಮಾಲಿಕೆಯಲ್ಲಿ ಹನ್ನೆರಡು ಸಂಪುಟಗಳು ಪ್ರಕಟವಾಗಿವೆ. ರಂಜಿತ್ ಗುಹಾ ಸಂಪಾದಕತ್ವದಲ್ಲಿ ನಡೆದ ಶೈಕ್ಷಣಿಕ ಯೋಜನೆಯ ಸೈದ್ಧಾಂತಿಕತೆಯನ್ನೂ ತಾತ್ವಿಕವಾಗಿ ವಿರೋದಿsಸುವ ಒಂದು ವಿದ್ವಾಂಸ ಪಡೆಯೂ ಇದೆ. ಮೊದಲು ಸಬಾಲ್ಟ್ರನ್ ಅಧ್ಯಯನ ಬಳಗದಲ್ಲಿಯೇ ಇದ್ದ ಸುಮಿತ್ ಸರ್ಕಾರ್ ಮತ್ತು ವೀಣಾದಾಸ್ ಸಬಾಲ್ಟ್ರನ್ ಅಧ್ಯಯನಗಳಲ್ಲಿರುವ ಕೆಲವು ಸೈದ್ಧಾಂತಿಕ ಮಿತಿ ಮತ್ತು ಗೊಂದಲಗಳನ್ನು ಪ್ರಶ್ನಿಸುತ್ತಾರೆ. ವೀಣಾದಾಸ್ ತಮ್ಮ Subaltern as perspectiveಲೇಖನದಲ್ಲಿ ಕುರಿತು ವಿಶ್ಲೇಷಿಸುತ್ತಾರೆ.

ಸಬಾಲ್ಟ್ರನ್ ಸ್ಟಡೀಸ್ ಆರನೇ ಸಂಪುಟದಲ್ಲಿ ಪ್ರಕಟವಾದ ಮೇಲಿನ ಲೇಖನದಲ್ಲಿ ವೀಣಾದಾಸ್ ಮೊದಲ ಐದು ಸಂಪುಟಗಳ ಲೇಖನಗಳಲ್ಲಿಯ ಸೈದ್ಧಾಂತಿಕ ಬಿರುಕುಗಳನ್ನು ಇಲ್ಲಿ ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಮೂಲತಃ ಸಾಮ್ರಾಜ್ಯಶಾಹಿಗಳ ಅಗತ್ಯಕ್ಕೆ ರೂಪುಗೊಂಡ ಮಾನವಶಾಸ್ತ್ರ ಮತ್ತು ಅದರ ಶೈಕ್ಷಣಿಕ ವಿಧಾನಗಳನ್ನು ಸೈದ್ಧಾಂತಿಕವಾಗಿ ಸಬಾಲ್ಟ್ರನ್ ಅಧ್ಯಯನಗಳು ನಿರಾಕರಿಸುತ್ತವೆ. ಆದರೆ ಸಬಾಲ್ಟ್ರನ್ ಅಧ್ಯಯನಗಳಲ್ಲೂ ಸಹ ಅಬಿsಜಾತ ಮಾನವಶಾಸ್ತ್ರದ ಶೈಕ್ಷಣಿಕ ವಿಧಾನಗಳು ಸದ್ದಿಲ್ಲದೆ ನುಸುಳಿ ಬಂದಿರುವುದನ್ನು ವೀಣಾದಾಸ್ ಎತ್ತಿ ತೋರಿಸುತ್ತಾರೆ. ತನಿಕಾ ಸರ್ಕಾರ್, ಡೇವಿಡ್ ಆರ್ನಾಲ್ಡ್, ಪಾರ್ಥಚಟರ್ಜಿ ಮತ್ತು ಗೌತಮಭದ್ರ ಅವರ ಕೆಲವು ಲೇಖನಗಳಲ್ಲಿ ಅಬಿsಜಾತ ಮಾನವಶಾಸ್ತ್ರದ ಅಧ್ಯಯನ ವಿಧಾನವು ನುಸುಳಿ ಬಂದಿರುವುದನ್ನು ವಿಶ್ಲೇಷಿಸುತ್ತಾರೆ.24 ಇದೇ ರೀತಿ, ಸುಮಿತ್ ಸರಕಾರ್ ಅವರ writing Social Historyಪುಸ್ತಕದ Decline of subltern in subltern studies ಎಂಬ ಲೇಖನದಲ್ಲಿ ಸಬಾಲ್ಟ್ರನ್ ಅಧ್ಯಯನಗಳ ತಾತ್ವಿಕ ಮಿತಿಗಳನ್ನು ಗುರುತಿಸುತ್ತಾರೆ. ಸಬಾಲ್ಟ್ರನ್ ಅಧ್ಯಯನಗಳು ಸಾರ್ವಕಾಲಿಕ ಮತ್ತು ಜಾಗತಿಕವೆನ್ನಿಸುವ ಸತ್ಯ ಮತ್ತು ಶೈಕ್ಷಣಿಕ ವಿಧಾನಗಳನ್ನು ಪ್ರಶ್ನಿಸುತ್ತಲೇ ರೂಪಗೊಂಡವು ಎಂಬುದನ್ನು ಸುಮಿತ್ ಸರ್ಕಾರ್ ಒಪ್ಪುತ್ತಾರೆ. ಆದರೆ ಆನಂತರ ಸಬಾಲ್ಟ್ರನ್ ಅಧ್ಯಯನಗಳು ಭಾರತದ ಅಂಚಿನ ಸಮುದಾಯಗಳ ಕುರಿತು ಚರ್ಚಿಸದೆ ಮತ್ತೆ ಜಾಗತಿಕ ಮಟ್ಟದ ಚರ್ಚೆಗಳಿಗೆ ತಮ್ಮನ್ನು ಒಪ್ಪಿಸಿಕೊಂಡಿರುವುದನ್ನು ಸುಮಿತ್ ಸರ್ಕಾರ್ ವಿರೋದಿsಸುತ್ತಾರೆ25. ಸಬಾಲ್ಟ್ರನ್ ಅಧ್ಯಯನಗಳ ಕುರಿತು ಸೈದ್ಧಾಂತಿಕವಾಗಿ ಅನೇಕ ಬಿsನ್ನಾಬಿsಪ್ರಾಯಗಳು ಸಹಜ ಮತ್ತು ಅವು ಅನಿವಾರ್ಯವೂ ಹೌದು. ಆದರೆ ಅಲಕ್ಷಿತ ಅಧ್ಯಯನಗಳು ಶೈಕ್ಷಣಿಕ ವಿಧಾನ ಮತ್ತು ರಾಜಕೀಯ ಸೈದ್ಧಾಂತಿಕತೆಯು ದೇಶೀಯ ಮಾನವಶಾಸ್ತ್ರಜ್ಞರಿಗೆ ಮತ್ತು ಸಾಮಾಜಿಕ ಚರಿತ್ರೆಕಾರರಿಗೆ ಒಂದು ದಿಕ್ಸೂಚಿ. ಮುಖ್ಯವಾಹಿನಿಯು ಭಾರತದ ಅಥವಾ ಸ್ಥಳೀಯ ಚರಿತ್ರೆಯನ್ನೇ ದುಡಿವ ವರ್ಗಗಳ ಕಣ್ಣುಗಳ ಮೂಲಕ ನೋಡುವ ಮತ್ತು ರೂಪಿಸುವ ವಿಧಾನವೇ ಒಂದು ಕ್ರಾಂತಿಕಾರಿ ಮತ್ತು ರಚನಾತ್ಮಕ ಶೈಕ್ಷಣಿಕ ಪ್ರಯತ್ನ.

ಕನ್ನಡದ ಸಂದರ್ಭದಲ್ಲಿ ತರಹದ ಪ್ರಯತ್ನಗಳು ಸಾಹಿತ್ಯ ಅಕಾಡೆಮಿಯ ಉಪಸಂಸ್ಕøತಿ ಮಾಲೆಯ ಮೂಲಕ ನಡೆದವು. ಮಾಲೆಯ ಪುಸ್ತಕಗಳಿಗೆ ಬರಗೂರರು ಬರೆದ ಸಂಪಾದಕೀಯವು ಒಂದು ಅರ್ಥದಲ್ಲಿ ಇತ್ತೀಚಿನ ಸಬಾಲ್ಟ್ರನ್ ಅಧ್ಯಯನಗಳ ತಾತ್ವಿಕತೆಯನ್ನು ಧ್ವನಿಸುತ್ತದೆ. ಸಂಪಾದಕೀಯವು ಇಡೀ ಉಪಸಂಸ್ಕøತಿ ಮಾಲೆಗೆ ಒಂದು ಸೈದ್ಧಾಂತಿಕ ನೀಲನಕ್ಷೆಯನ್ನು ರೂಪಿಸುತ್ತದೆ. ಉಪಸಂಸ್ಕøತಿಗಳ ಅಧ್ಯಯನವು ಆಯಾ ಸಂಸ್ಕøತಿಗಳ ವೈಭವೀಕರಣವಲ್ಲ; ‘ನಾಗರಿಕಎಂದು ಕರೆಸಿಕೊಳ್ಳುತ್ತಿರುವ ಸಮಾಜ ಮತ್ತು ಸಂಸ್ಕøತಿಯು ಅಸಂಖ್ಯಾತ ಸಂಸ್ಕøತಿಗಳನ್ನು ದೂರದಲ್ಲೇ ಬಿಟ್ಟು ದಾಪುಗಾಲು ಹಾಕಿದ ಇತಿಹಾಸದ ಒಡಕುತನವನ್ನು ತಂತಾನೆ ಹೊರಗೆಳೆಯುವ ಶಕ್ತಿಯುಳ್ಳ ವಿವರಗಳ ನಿರೂಪಣೆ ಮತ್ತು ವಿಶ್ಲೇಷಣೆ ವಸ್ತು ಸ್ಥಿತಿಯ ಹೂರಣ ಮತ್ತು ಒಂದು ಅನಾವರಣ’26. ಎಂದು ತಮ್ಮ ಯೋಜನೆಯ ಉದ್ದೇಶಗಳನ್ನು ಬರಗೂರ್ ಅವರು ಪ್ರತಿಪಾದಿಸುತ್ತಾರೆ. ಆದರೆ ಮಾಲಿಕೆಯ ಒಂದೆರಡು ಪುಸ್ತಕಗಳ್ನು ಬಿಟ್ಟರೆ ಬಹುಪಾಲು ಕೃತಿಗಳು ಅಬಿsಜಾತ ಮಾನವಶಾಸ್ತ್ರದ ಅಧ್ಯಯನ ವಿಧಾನವನ್ನೇ ಅನುಸರಿಸಿ ಬರೀ ಮಾಹಿತಿ ಕಲೆ ಹಾಕುವ ಪ್ರಯತ್ನಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿವೆ. ಕೋಟಗಾನಳ್ಳಿ ರಾಮಯ್ಯನವರಸಿಂದ್ ಮಾದಿಗರ ಸಂಸ್ಕøತಿ, ಲಕ್ಷ್ಮೀಪತಿ ಕೋಲಾರ ಅವರಮಾಸ್ಟಿಕರ ಸಂಸ್ಕøತಿಮುಂತಾದ ಕೆಲವು ಪುಸ್ತಕಗಳು ಸಮುದಾಯಗಳ ನಿತ್ಯದ ಬವಣೆಗಳ ಮೂಲಕ ಸಂಸ್ಕøತಿ ಮತ್ತು ಸಮಾಜವನ್ನು ಗ್ರಹಿಸುವ ಕಾರಣಕ್ಕಾಗಿ ಬಿನ್ನವಾಗಿ ನಿಲ್ಲುತ್ತವೆ. ಆದರೆ ಉಳಿದವು ಕೇವಲ ಮಾಹಿತಿ ಸಂಗ್ರಹಿಸುವುದಕ್ಕೇ ಹೆಚ್ಚು ಸೀಮಿತಗೊಂಡಿವೆ.

ಕನ್ನಡದಲ್ಲಿ ಇತ್ತೀಚಿನ ಕೆಲವು ಅಧ್ಯಯನಗಳು ತಮ್ಮ ತಾತ್ವಿಕ ನಿಲುವುಗಳ ಕಾರಣಕ್ಕಾಗಿ ಬಿsನ್ನ ಶೈಕ್ಷಣಿಕ ವಿಧಾನವನ್ನು ರೂಪಿಸಿಕೊಳ್ಳಲು ತವಕಿಸುತ್ತಿರುವುದು ಗಮನಾರ್ಹ ಸಂಗತಿ. ಇಲ್ಲಿ ಹಲವು ಸಂದರ್ಭಗಳಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ವಿಷಯವೇ ಅಧ್ಯಯನಕಾರನನ್ನು ತಾತ್ವಿಕವಾಗಿ ನಿಯಂತ್ರಿಸಿರುವುದು ಮತ್ತು ಮಾಕ್ರ್ಸ್, ಅಂಬೇಡ್ಕರ್, ಲೋಹಿಯಾ ಮತ್ತು ಪೆರಿಯಾರ್ ಅವರ ಚಿಂತನೆಗಳ ಬೆಳಕಲ್ಲಿ ನಮ್ಮ ಸಮಾಜದ ಚರಿತ್ರೆಯನ್ನು ಸೈದ್ಧಾಂತಿಕವಾಗಿ ರೂಪಿಸಲು ಹೊರಟಿರುವ ಎರಡು ಸಂದರ್ಭಗಳೂ ಆಗಿ ಹೋಗಿವೆ.

ಒಟ್ಟಾರೆಯ ಬರಹದ ಸಾರಾಂಶವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ಪುನರುಜ್ಜೀವನ ಕಾಲಘಟ್ಟದ ನಂತರ ನಡೆದ e್ಞÁನಕ್ರಾಂತಿಯ ಕಾರಣಕ್ಕಾಗಿ ಯುರೋಪಿನ ದೇಶಗಳು ವಿe್ಞÁ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಂದ ಜಗತ್ತಿನ ಮೇಲೆ ಹಲವು ಬಗೆಗಳಲ್ಲಿ ಹಿಡಿತ ಸಾದಿಸಲು ಸಾಧ್ಯವಾಯಿತು. ಕೈಗಾರಿಕಾ ಕ್ರಾಂತಿಯಿಂದ ಯುರೋಪಿನ ಸಮಾಜ ಊಳಿಗಮಾನ್ಯತೆಯಿಂದ ಬಂಡವಾಳಶಾಹಿ ವ್ಯವಸ್ಥೆಯ ಕಡೆಗೆ ನಡೆದು ಹೋಯಿತು. ಮುಂದೆ ಯುರೋಪಿನ ದೇಶಗಳು ಜಗತ್ತಿನಹಿಂದುಳಿದದೇಶಗಳನ್ನು ಆಕ್ರಮಿಸಿಕೊಂಡು ವಸಾಹತುಗಳನ್ನಾಗಿ ರೂಪಾಂತರಿಸಿಕೊಂಡ ನಂತರ, ಅಲ್ಲಿನ ಸ್ಥಳೀಯ ಸಮಾಜಗಳನ್ನು ಅರ್ಥ ಮಾಡಿಕೊಳ್ಳಲು ತಾನೇ ರೂಪಿಸಿದ್ದ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಗಳೆಂಬ ಜ್ಞಾನ ಶಿಸ್ತುಗಳನ್ನು ಬಳಸಿಕೊಂಡಿತು. ಜ್ಞಾನ ಶಿಸ್ತುಗಳು ಯುರೋಪಿನ ರಾಜಕೀಯ ಗಣ್ಯತೆಯನ್ನೇ ಸೈದ್ಧಾಂತಿಕ ನೆಲೆಗಟ್ಟಾಗಿಸಿಕೊಂಡಿದ್ದ ಕಾರಣಕ್ಕಾಗಿ, ತಾವು ಅಧ್ಯಯನ ಮಾಡುವ ಸಮುದಾಯಗಳು ಕೇವಲ ವಸ್ತು ಮತ್ತು ಆಕರಗಳೆಂದು ಪರಿಭಾವಿಸಿದವು. ತಮ್ಮ ಆಡಳಿತ ಸುಗಮಗೊಳ್ಳಲೆಂದ ಸ್ಥಳೀಯ ಸಮುದಾಯಗಳನ್ನು ಅಧ್ಯಯನ ಮಾಡಿದ ಯುರೋಪಿನ ಜನ ಒಂದು ಅಬಿsಜಾತ ಶೈಕ್ಷಣಿಕ ವಿಧಾನವನ್ನು ಸಮಾಜ ವಿಜ್ಞಾನ ಗಳ ಕ್ಷೇತ್ರದಲ್ಲಿ ಅದರಲ್ಲೂ ಮಾನವಶಾಸ್ತ್ರದ ಕ್ಷೇತ್ರದಲ್ಲಿ ರೂಪಿಸಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೂ ಯುರೋಪಿನ ಶೈಕ್ಷಣಿಕ ಯಜಮಾನಿಕೆ ಅಬಾದಿತವಾಗಿ ಮುಂದುವರೆಯಿತು. 50 ದಶಕದ ನಂತರ ಜಗತ್ತಿನ ರಾಜಕೀಯ ಯಜಮಾನಿಕೆಯು ಯುರೋಪಿನಿಂದ ಅಮೇರಿಕಾಕ್ಕೆ ವರ್ಗಾವಣೆಗೊಂಡಿತ್ತು. ಆದರೆ ಭಾರತದ ಪಾಲಿಗೆ ಯಜಮಾನ ಮಾತ್ರ ಬದಲಾಗಿದ್ದ. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ಭಾರತದ ಅವಲಂಬನೆ ಮುಂದುವರಿದೇ ಇತ್ತು. ಇದು ಶೈಕ್ಷಣಿಕ ಕ್ಷೇತ್ರದಲ್ಲೂ ಮುಂದುವರೆಯಿತು.

ಆದರೆ 80 ದಶಕದ ನಂತರ ಭಾರತದಲ್ಲಿ ಬಿsನ್ನ ಶೈಕ್ಷಣಿಕ ವಿಧಾನವನ್ನು ಕಂಡುಕೊಳ್ಳಲಾಯಿತು. ಗ್ರಾಂಸಿಯ ಸಬಾಲ್ಟ್ರನ್ ಪರಿಕಲ್ಪನೆಯನ್ನು ಆಧರಿಸಿ ಭಾರತದಲ್ಲಿ ರಂಜಿತ್ ಗುಹಾ ಸಂಪಾದಕತ್ವದಲ್ಲಿ ನಡೆದ ಸಬಾಲ್ಟ್ರನ್ ಅಧ್ಯಯನಗಳು ಪ್ರಾರಂಭವಾದವು. ಕನ್ನಡದಲ್ಲೂ ದಲಿತ ಬಂಡಾಯ ಚಳುವಳಿಯ ಭಾಗವಾಗಿ ಪ್ರಾರಂಭವಾದ ಚಿಂತನೆಗಳಲ್ಲಿ ಬಗೆಯಸಬಾಲ್ಟ್ರನ್ವಿಷಯಗಳ ಕುರಿತ ಚರ್ಚೆ ಇದ್ದರೂ, ಬರಗೂರರು ಸಾಹಿತ್ಯ ಅಕಾಡೆಮಿಯಿಂದ ಉಪಸಂಸ್ಕøತಿ ಮಾಲೆಯ ಪುಸ್ತಕಗಳ ಮೂಲಕ ಅಲಕ್ಷಿತ ಸಮುದಾಯಗಳ ಅಧ್ಯಯನಗಳನ್ನು ಪ್ರಾರಂಬಿsಸಿದರು. ಆದರೆ ಮಾಲೆಯ ಬಹುತೇಕ ಲೇಖಕರು ಮಾಹಿತಿ ಕಲೆಹಾಕುವ ಮತ್ತು ಅದನ್ನೇ ಸಂಶೋಧನೆ ಎಂದು ಭಾವಿಸುವ ಅಬಿsಜಾತ ಮಾನವಶಾಸ್ತ್ರದ ಶೈಕ್ಷಣಿಕ ವಿಧಾನವನ್ನೇ ಅನುಸರಿಸಿದರು. ಕನ್ನಡದಲ್ಲಿ ವ್ಯಕ್ತಿಗತವಾಗಿ ಸಬಾಲ್ಟ್ರನ್ ಅಧ್ಯಯನಗಳನ್ನು ಕೈಗೊಂಡ ಅನೇಕ ಲೇಖಕರಿದ್ದಾರೆ. ಇವರು ಮಾಕ್ರ್ಸ್, ಗಾಂದಿs, ಅಂಬೇಡ್ಕರ್ ಮತ್ತು ಲೋಹಿಯಾವಾದದ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರುಮುಖ್ಯಧಾರೆಯಿಂದ ಅಲಕ್ಷಿತವಾದ ಸಮುದಾಯಗಳ ಅಂತಸ್ಥ ಜಗತ್ತುಗಳ ಅನಾವರಣ ಮಾಡುವ ಮೂಲಕ ಕನ್ನಡದಲ್ಲಿ ಬಗೆಯ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ. ಸೂಪಿsಗಳ, ಜನಪದ ಅನುಭಾವಿಗಳು ಮತ್ತು ಅಲೆಮಾರಿ, ಆದಿವಾಸಿ ಸಮುದಾಯಗಳ ಅಧ್ಯಯನಗಳು ಕನ್ನಡದಲ್ಲಿ ನಿರಂತರವಾಗಿ ಸಾಗುತ್ತಿವೆ. ಪ್ರಸ್ತುತ ನಮ್ಮ ಯೋಜನೆ ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳ ಬದುಕನ್ನು, ಸಮುದಾಯಗಳ ಅನುಭವಗಳ ಮೂಲಕ ದಕ್ಕಿದ ಒಳನೋಟ ಮತ್ತು ಸಬಾಲ್ಟ್ರನ್ ಅಧ್ಯಯನ ವಿಧಾನಗಳ ಮೂಲಕ ಮರುರೂಪಿಸು ಅಗತ್ಯವಿದೆ. ಹಾಗಾದಾಗ ಮಾತ್ರ ಅದು ಕನ್ನಡದ ಮತ್ತು ಕರ್ನಾಟಕದ ಓದಾಗುತ್ತದೆ.

ಟಿಪ್ಪಣಿಗಳು

1. ಫಣಿರಾಜ್, ಆಂಟೋನಿಯೋ ಗ್ರಾಮ್ಷಿ, ಪು 21, 2001

2. Jaganath Pathy, Anthropology Of Development, Demystification and Relevance, p vi,1987

3. Yogendra Singh, Indian Socialogy: Retrospect and Prospect. Ed: M V Nadakarni, Land Marks In Development Of Social Science, p 89-90, 2002

 

4. M.N. Srinivas, Studying One’s Own Culture, p 574,2002

 

5. Yogendra Singh, Indian Sociology: Retrospect and Prospect. Ed: M V Nadakarni, Land Marks In Development Of Social Science, p 90, 2002

 

6. M.N. Srinivas, Village Studies, Perticipant Observation, p 516, 2002

 

7. Satish Saberwal, Inetrnational Social science: Some Political Aspects, 1970

 

8. Nelson, Quoted: Jaganath Pathy, Anthropology Of Development, Demystification and Relevance, 1987

9. Simans Jan, Foucault and the political‑p‑27‑1979, Quoted:ಸಿ ಎನ್ ರಾಮಚಂದ್ರನ್

10. Frantz Fanon, The Wretched Of the Earth, p 47,1966

 

 

11. Edward W Said, Orientaism, p3,1979

 

12. Ibid p 5

 

13. Ibid p 9

 

14. Ibid p 11

15. ವಸಾಹತೋತ್ತರ ಚಿಂತನೆಯ ಸಂದರ್ಭದಲ್ಲಿ ಅಶೀಶ್ ನಂದಿ ದೇಶಿ ಜ್ಞಾನ ಪರಂಪರೆಗಳ ಕುರಿತು ಹೆಚ್ಚು ವಕಾಲತ್ತು ವಹಿಸಿದವರು. ‘ಪ್ರಸ್ತುತ ಭಾರತ ಮತ್ತು ದೇಶಿ ಜ್ಞಾನ ಪರಂಪರೆಗಳುಎಂಬ ಅವರ ಲೇಖನದಲ್ಲಿ ಭಾರತದ ನ್ಯಾಯಾದಿsೀಶ ಜಸ್ಟೀಸ್ ರಾಧಾ ವಿನೋದ್ ಪಾಲ್ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಟೋಕಿಯೋ ವಾರ್ ಕ್ರೈಮ್ಸ್ ಟ್ರಿಬ್ಯುನಲ್ನಲ್ಲಿ ಕೊಟ್ಟ ತೀರ್ಪನ್ನು ಅಮೇರಿಕಾದ ಕಾನೂನು ತಜ್ಞನೊಬ್ಬ ಶ್ಲಾಘಿಸಿರುವುದನ್ನು ಉಲ್ಲೇಖಿಸುತ್ತಾರೆ. ಟ್ರಬ್ಯುನಲ್ನಲ್ಲಿ ಇದ್ದ ಬೇರೆ ದೇಶಗಳ ಹತ್ತು ನ್ಯಾಯಾದಿsೀಶರಿಗಿಂತ ಅಂತಾರಾಷ್ಟ್ರೀಯ ಕಾನೂನಿನ ಅರಿವು ಇದ್ದದ್ದು ರಾಧಾವಿನೋದ್ ಪಾಲ್ ಅವರಿಗೆ ಎಂಬ ಸಂಗತಿಯು ಭಾರತದ ದೇಶಿ ಜ್ಞಾನ ಪರಂಪರೆಯನ್ನು ಪ್ರತಿನಿದಿsಸುತ್ತದೆ ಎನ್ನುತ್ತಾರೆ ಅಶೀಶ್ ನಂದಿ. ರಾಧಾವಿನೋದ್ ಪಾಲ್ ದೇಶದ ಪ್ರತಿಷ್ಟಿತ ವರ್ಗಕ್ಕೆ ಸೇರಿದವರು. ಜೊತೆಗೆ ಅವರು ಕೆಲಸ ಮಾಡುತ್ತಿದ್ದುದು ಅಂತಾರಾಷ್ಟ್ರೀಯ ವಾರ್ ಕ್ರೈಮ್ಸ್ ಟ್ರಿಬ್ಯುನಲ್ನಲ್ಲಿ ಮತ್ತು ಅವರು ಕೊಟ್ಟ ತೀರ್ಪು ಸಹ ಅಂತಾರಾಷ್ಟ್ರೀಯ ಅಪರಾಧಗಳಿಗಾಗಿ!, ನೋಡಿ: ಅಶೀಶ್ ನಂದಿ ವಿಚಾರ, ಅಶೀಶ್ ನಂದಿ, ಅನು: ಕು ಶಿ ಹರಿದಾಸ್ಭಟ್, ಅಕ್ಷರ ಪ್ರಕಾಶನ ಹೆಗ್ಗೋಡು, 1995

16. ದೇವಿ,ಜಿ ಎನ್ ಅನು: ವಿ ಬಿ ತಾರಕೇಶ್ವರ್, ದೇಶಿವಾದ, ಕನ್ನಡ ಅಧ್ಯಯನ, ಗಾಳಿ ಸಂಚಿಕೆ, ಸಂ 5, ಸಂ 2, ಪು 95, 1999

17. ರೋನಾಲ್ಡ್ ಇಂಡೆನ್, ಅನು: ಏಲ್ ನಾಗಭೂಷಣಸ್ವಾಮಿ, ಭಾರತವನ್ನು ಕುರಿತ ಓರಿಯಂಟಲಿಸ್ಟರ ಗ್ರಹಿಕೆಗಳು, ಭಾರತೀಯ ಇತಿಹಾಸ, ಸಮಾಜ ಮತ್ತು ಸಂಸ್ಕøತಿ, ಪು 232, 2004

18. Ashis Nandi, The Intimate Enemy, Loss And Recovery Of Self Under Colonialism, p xi, 1983

 

19. Ibid p 3

 

20. Albert Memmi, The Coloniser and the Colonised, p 17, 1967

 

21. James Clifford, Writing Culture, The Poetics And Politics Of Ethnography, Ed: James Clifford, Gerge E,   p7, 1990

22. ದೇವಿ, ಜಿ ಎನ್ ಅನು: ವಿ ಬಿ ತಾರಕೇಶ್ವರ್, ದೇಶಿವಾದ, ಕನ್ನಡ ಅಧ್ಯಯನ, ಗಾಳಿ ಸಂಚಿಕೆ, ಸಂ 5, ಸಂ 2, ಪು 101, 1999

23. ಮೊಗಳ್ಳಿ ಗಣೇಶ್, ದೇಶಿ ಸಂಶೋಧನಾ ವಿಧಾನ, ಬುಡಕಟ್ಟು ಅಧ್ಯಯನ 4, ಪು 20, 2005

24. ನೋಡಿ: Subaltern as perspective. Veena Das, p 310, Ranajit Guha, Ed: Subaltern studies Vol vi, 1989

 

25. ನೋಡಿ: Sumit Sarkar, The Decline of the subalterns in subaltern studies, p 82, 1997

 

26. ಬರಗೂರು ರಾಚಂದ್ರಪ್ಪ, ಪ್ರಸ್ತಾವನೆ, ಉಪಸಂಸ್ಕøತಿ ಮಾಲೆ, ಪು 31, 1993

ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ: ಸಂಪುಟ 

 …………………………………………………………

ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು

                ………………………………

ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆಯ ಒಂದು ಸಂಪುಟವನ್ನು ನಾನು ಮತ್ತು ಡಾ.‌ಕುಂಸಿ ಉಮೇಶ್ ಅವರು ಸಂಪಾದಿಸಿ ಈ ಹಿಂದೆ ಸಾಹಿತ್ಯಅಕಾಡೆಮಿಗೆ ಸಲ್ಲಿಸಿದ್ದೆವು. ‘ಬುಡಕಟ್ಟುಮತ್ತುಅಲೆಮಾರಿ ಸಮುದಾಯಗಳುಎಂಬ ಹೆಸರಲ್ಲಿಈ ಸಂಪುಟ ಮುದ್ರಣವಾಗಿ ಈಗ ಹೊರಬಂದಿದೆ.

ಪ್ರಸ್ತುತ ಸಂಪುಟವು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳನ್ನು ಅಧ್ಯಯನ ಮಾಡುವ ಆಸಕ್ತರಿಗೆ ಉಪಯುಕ್ತವಾಗಬಲ್ಲದು. ಮುಖ್ಯವಾಗಿ, ಎಂಫಿಲ್, ಪಿಎಚ್, ಡಿ ವಿದ್ಯಾರ್ಥಿಗಳು, ಆಸಕ್ತ ಸಂಶೋಧಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಇದು ಕೈಪಿಡಿಯ ರೂಪದಲ್ಲಿ ನೆರವಾಗುತ್ತದೆತಳಸ್ತರದ ಸಮುದಾಯಗಳನ್ನುಅಧ್ಯಯನ ಮಾಡುವ ದೃಷ್ಟಿಕೋನವನ್ನು ವಿಶ್ಲೇಷಿಸುವ ಬರಹಗಳು ಇಲ್ಲಿವೆ

ರಹಮತ್ ತರೀಕೆರೆ, ಹಿಚಿಬೋರಲಿಂಗಯ್ಯಚಂದ್ರಪೂಜಾರಿ, ಟಿಆರ್ಚಂದ್ರಶೇಖರ್, ದಿ. ಕಿಕ್ಕೇರಿನಾರಾಯಣ, ಟಿಎಸ್  ಚನ್ನೇಶ್ಹೊನ್ನಾಳಿ, ಮಂಜುನಾಥಬೇವಿನಕಟ್ಟಿ, ಕ್ಷೀರಸಾಗರ, ಶೈಲಜಹಿರೇಮಠ, ಇವರ ಲೇಖನಗಳು ಈ ಸಂಪುಟದಲ್ಲಿವೆ. ಜೊತೆಗೆ ವರ್ತಮಾನವನ್ನು ಕಾಲದ ಅಗತ್ಯದಲ್ಲಿಟ್ಟು ವಿಶ್ಲೇಷಿಸುವ ಗೆಳೆಯರಾದ ಎಚ್ಡಿ ಪ್ರಶಾಂತ, ಕಿರಣ್ ಗಾಜನೂರು, ಮೋಹನ್ ಚಂದ್ರಗುತ್ತಿ, ಹರ್ಷಕುಮಾರ್ ಕುಗ್ವೆ, ಅರುಣ್ಜೋಳದ ಕೂಡ್ಲಿಗಿ, ಎಸ್ಎಂ ಮುತ್ತಯ್ಯ, ಆರಡಿಮಲ್ಲಯ್ಯ, ಶಶಿಕಿರಣ್, ವೆಂಕಟಗಿರಿದಳವಾಯಿ ಯವರ ಬರಹಗಳು ಇಲ್ಲಿವೆ. ಇವುಗಳ ಜೊತೆ ಆನಂದ್ ತೇಲ್ತುಂಬ್ಡೆ, ವರ್ಜಿನಸ್ಕಾಕಾ, ಸೀತಾಕಾಂತ್ ಮಹಾಪಾತ್ರ, ಹರಿಮೋಹನ್ ಮಾಥೂರ್, ಪೆಗ್ಗಿಫ್ರಾಯರ್, ಮಿಲಿಂದ್ ಬೋಕಿಲ್, ಮುಂತಾದ ಹಿರಿಯರ ಲೇಖನಗಳೂ ಇವೆ. ಒಟ್ಟಿನಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೈಧಾನಿಕ ಪ್ರಸ್ಥಾನಗಳನ್ನು ವಿಶ್ಲೇಷಿಸುವ ಅತ್ಯುತ್ತಮ ಬರಹಗಳನ್ನುಇಲ್ಲಿಸಂಕಲಿಸಲಾಗಿದೆ.

ಇಂತಹ ಒಂದು ಯೋಜನೆಯನ್ನುನಮಗೆ ವಹಿಸಿದ ಮೇಟಿ ಮಲ್ಲಿಕಾರ್ಜುನ ಅವರಿಗೆ ಮೊದಲು ಕೃತಜ್ಞತೆಸಲ್ಲಿಸಬೇಕು. ಅಕಾಡೆಮಿಯ ಅಂದಿನ ಮತ್ತುಇಂದಿನ ಅಧ್ಯಕ್ಷರಾದ ಮಾಲತಿಪಟ್ಟಣಶೆಟ್ಟಿ, ಅರವಿಂದ ಮಾಲಗತ್ತಿಮತ್ತುಸಿಬ್ಬಂದಿ ವರ್ಗಕ್ಕೆ ನಮಸ್ಕಾರಗಳು. ಬರಹಗಳನ್ನುಮಾಡಿಕೊಟ್ಟ ಹಿರಿಯಮತ್ತುಕಿರಿಯ ಮಿತ್ರರಿಗೆ, ಅನುವಾದ ಮಾಡಿಕೊಟ್ಟ ಗೆಳೆಯರಿಗೆ ಧನ್ಯವಾದಗಳು.

ಒಟ್ಟು ೮೭೨ ಪುಟಗಳ ಪುಸ್ತಕವಿದು. ಬೆಲೆ: ೩೮೦/- ರೂಪಾಯಿಗಳು. ಸಾಹಿತ್ಯ ಅಕಾಡೆಮಿಯ ಮಾರಾಟಮಳಿಗೆಗಳಲ್ಲಿಈ ಪುಸ್ತಕವನ್ನು ಖರೀದಿಸಬಹುದು.

ಪ್ರಭಾಕರ ಎ ಎಸ್

Be the first to comment on "ಕರ್ನಾಟಕ ಸಬಾಲ್ಟ್ರನ್ ಓದು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು : ಪ್ರಸ್ತಾವನೆ"

Leave a comment

Your email address will not be published.


*