ಸ್ಟೇಜ್ – ವಹಾರು ಸೋನವಾನೆ

ಸ್ಟೇಜ್

ವಹಾರು ಸೋನವಾನೆ

ನಾವು ವೇದಿಕೆಗೆ ಹೋಗಲಿಲ್ಲ,
ನಮ್ಮನ್ನು ಕರೆದೂ ಇರಲಿಲ್ಲ.

ಬೆರಳು ತೋರಿಸಿ
ನಮಗೆ ನಮ್ಮ ಜಾಗ ತೋರಿಸಿದರು.
ನಾವು ಅಲ್ಲಿಯೇ ಕುಳಿತೆವು;
ಅಭಿನಂದನೆಗಳು ಸಿಕ್ಕವು ನಮಗೆ.

“ಅವರು”, ವೇದಿಕೆಯ ಮೇಲೆ ನಿಂತು,
ನಮ್ಮ ದುಃಖಗಳನ್ನು ನಮಗೆ ಹೇಳುತ್ತಲೇ ಇದ್ದರು.
‘ನಮ್ಮ ದುಃಖಗಳು ನಮ್ಮದಾಗೇ ಉಳಿದವು,
ಅವೆಂದಿಗೂ ಅವರದಾಗಲಿಲ್ಲ…’

ನಾವು ಅನುಮಾನದಿಂದ ಪಿಸುಗುಟ್ಟಿದಾಗ
ಅವರು ತಮ್ಮ ಕಿವಿಗಳನ್ನು ಕೊಟ್ಟು ಕೇಳಿ,
ನಿಟ್ಟುಸಿರಿಟ್ಟು ,
ನಮ್ಮ ಕಿವಿಗಳನ್ನು ತಿರುಚಿ,
ಏರು ದ್ವನಿಯಲ್ಲಿ ಹೇಳಿದರು –
ಕ್ಷಮೆ ಕೇಳು; ಇಲ್ಲವಾದರೆ ..!’

ಕನ್ನಡ ಅನುವಾದ  – ಶ್ರೀಧರ ಅಘಲಯ (Sridhara Aghalaya ) ಮೂಲ ಲೇಖಕರ ಅನುಮತಿಯೊಂದಿಗೆ.  

ಚಿತ್ರ ಕೃಪೆ – adivasiresurgence.com

ವಹಾರು ಸೋನವಾನೆ (b. 1950) ( Waharu Sonawane )  ಅವರು ಭಿಲ್ ಆದಿವಾಸಿ, ಕವಿ ಮತ್ತು ಹೋರಾಟಗಾರರು. 1970 ರ ದಶಕದಿಂದಲೂ, ಅವರು ಪಶ್ಚಿಮ ಭಾರತದ ತಮ್ಮೂರಿನ  ಬಳಿ ತಮ್ಮ ಸಮುದಾಯದಲ್ಲಿ ಆದಿವಾಸಿ ಸ್ವಾವಲಂಬನೆಗಾಗಿ ಸಂಘಟಿಸುತ್ತಿದ್ದಾರೆ.

ಮೂಲ ಮರಾಠಿ

स्टेज

आम्ही स्टेजवर गेलोच नाही

आणि आम्हाला बोलावलंही नाही.

बोटाच्या इशाऱ्यांनी-

आमची पायरी आम्हाला दाखवून दिली.

आम्ही तिथेच बसलो;

आम्हाला शाबासकी मिळाली.

आणि ‘ते’ स्टेजवर उभे राहून

आमचे दुःख आम्हालाच सांगत राहिले.

‘आमचे दुःख आमचेच राहिले

कधीच त्यांचे झाले नाही…’

आमची शंका आम्ही कुजबुजलो.

ते कान टवकारत ऐकत राहिले

नि सुस्कारा सोडला

आणि आमचेच कान धरून

आम्हालाच दम भरला –

‘माफी मागा; नाही तर..!’

Be the first to comment on "ಸ್ಟೇಜ್ – ವಹಾರು ಸೋನವಾನೆ"

Leave a comment

Your email address will not be published.


*