ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು

ಪೇಶ್ವೆ ಸಾಮ್ರಾಜ್ಯದ ದಾಳಿಗಳಿಗೆ ಬಲಿಯಾದ ಕನ್ನಡಿಗರು

ಸಂಶೋಧನೆ ಮತ್ತು ಬರಹಗಾರಅಮೀನ್ ಅಹ್ಮದ್ ತುಮಕೂರು

ಪೇಶ್ವೆಗಳು ಕರ್ನಾಟಕದ ಮೇಲೆ ದಾಳಿಗಳನ್ನು ಮಾಡಿದ್ದಕ್ಕೆ ೧೯ನೇ ಶತಮಾನದ ಹಲವು ಲೇಖಕರ ದಾಖಲೆಗಳಿವೆ. ಅದರಲ್ಲಿ ಫ್ರಾನ್ಸಿಸ್ ಬುಕಾನನ್ ಕೂಡ ಒಬ್ಬ. ಬುಕಾನನ್ ಮದ್ರಾಸ್ ನಿಂದ ಬಾರಾ ಮಹಲ್ ಮೂಲಕ ಕೇರಳಕ್ಕೆ ಪ್ರಯಾಣ ಮಾಡಿದ. ೧೮೦೦ ಏಪ್ರಿಲ್ ೨೩ರಿಂದ ೧೮೦೧ ಜುಲೈ ೬ರವರೆಗೆ ಅವನು ಮೈಸೂರು ರಾಜ್ಯ ಮತ್ತು ಕರಾವಳಿ ಭಾಗದಲ್ಲಿ ಸುತ್ತಾಡಿದ. ತನ್ನ ಭೇಟಿಯಲ್ಲಿ ಬುಕಾನನ್ ಹಲವು ಪಟ್ಟಣ, ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿದ, ಹಲವು ಕಡೆ ಕೃಷಿಭೂಮಿಯಲ್ಲಿ ಸಂಚರಿಸಿದ. ೧೮ನೇ ಶತಮಾನದಲ್ಲಿ ಪೇಶ್ವೆ ಆಕ್ರಮಣಕ್ಕೆ ಒಳಗಾದ ಹಲವು ಊರಿನ ಕಥೆಗಳನ್ನು ದಾಖಲಿಸಿದ್ದಾನೆ.


೧೭೭೦ ದಶಕದ ಮುನ್ನ ಪೇಶ್ವೆ ಗಳಿಂದ   ಆದ ವಿನಾಶಗಳನ್ನು ಬುಕಾನನ್ ಕೆಳಗಿನಂತೆ ಗುರುತಿಸಿದನು:
. ಸತ್ತೇಗಾಲ, ಕೊಳ್ಳೆಗಾಲ ತಾಲೂಕು, ಚಾಮರಾಜನಗರ ಜಿಲ್ಲೆ 
. ಸೋಂಡಾ, ಶಿರಸಿ, ಉತ್ತರ ಕನ್ನಡ ಜಿಲ್ಲೆ


೧೭೭೦ರಲ್ಲಿ ಪೇಶ್ವೆ ಮಾಧವ ರಾವ್ ಸೈನ್ಯದಿಂದ ಆದ ವಿನಾಶ
ಬುಕಾನನ್ ಪುಸ್ತಕವನ್ನು ಆಧರಿಸಿದೆ.
೧.ಮಧುಗಿರಿ ಪಟ್ಟಣ, ತುಮಕೂರು ಜಿಲ್ಲೆ
೨. ಚೀಣ್ಯ, ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ
೩. ಮೇಲುಕೋಟೆ, ಮಂಡ್ಯ ಜಿಲ್ಲೆ
೪. ಕಟ್ಟೆ ಮಳಲವಾಡಿ
೫. ಸತ್ತೇಗಾಲ, ಚಾಮರಾಜನಗರ ಜಿಲ್ಲೆ
೬. ಸಿಂಗಾನಲ್ಲೂರು
೭. ಸುಂಠಿಕೊಪ್ಪ
೮. ಬಸವಪಟ್ಟಣ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
೯. ಸಿದ್ದರಾಮನಹಳ್ಳಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
೧೦. ಹಿರಿಯೂರು, ಚಿತ್ರದುರ್ಗ ಜಿಲ್ಲೆ
೧೧. ಬಾಣಾವರ, ಹಾಸನ ಜಿಲ್ಲೆ
೧೨. ನಾಗಪುರಿ, ಹಾಸನ ಜಿಲ್ಲೆ
೧೩. ಜಾವಗಲ್ ಗ್ರಾಮ, ಅರಸಿಕೆರೆ ತಾಲ್ಲೂಕು, ಹಾಸನ ಜಿಲ್ಲೆ
೧೪. ಶಾಂತಿಗ್ರಾಮ

೧೭೯೧ನಲ್ಲಿ ಧಾರವಾಡ ಪಟ್ಟಣವನ್ನು ಪೇಶ್ವೆ  ಸೇನಾಧಿಕಾರಿ ಪರಶುರಾಮ ಭಾವು ಪಟವರ್ಧನ್ ನ ಮಗ ಅಪ್ಪಾ ಸಾಹೇಬನ ಸೈನಿಕರು ಲೂಟಿ ಮಾಡಿದರು.

ಪರಶುರಾಮ್ ಭಾವು ಪಟವರ್ಧನ್ ಮತ್ತು ಹರಿಪಂತ್ ಫಡ್ಕೆ ನೇತೃತ್ವದ ಪೇಶ್ವೆ ಸೇನೆ ೧೭೯೦೯೨ ರಲ್ಲಿ ನೆಡೆಸಿದ ದೌರ್ಜನ್ಯಗಳು 


ಬ್ರಿಟಿಷರು ನಡೆಸಿದ ನಿರ್ಣಾಯಕ ೩ನೇ ಆಂಗ್ಲೊ-ಮೈಸೂರು ಯುದ್ದದ ಸಮಕಾಲೀನ ಮೂಲಗಳ ಪ್ರಕಾರ, ಪೇಶ್ವೆ  ಸೈನ್ಯದ ನೇತೃತ್ವ ವಹಿಸಿದವರು ಪರಶುರಾಮ್ ಭಾವು ಪಟವರ್ಧನ್ ಮತ್ತು ಹರಿಪಂತ್ ಫಡ್ಕೆ.  ಕೊಲೆ, ಲೂಟಿ, ಸಾಮೂಹಿಕ ಹತ್ಯೆ, ಊರನ್ನು ಸುಡುವಿಕೆ, ಹೆಣ್ಣುಗಳ ಅತ್ಯಾಚಾರ ಈ ವಿಷಯದಲ್ಲಿ ಪಟವರ್ಧನ್ ಹೆಸರು ಹಲವಾರು ಬಾರಿ ಕಾಣಸಿಗುತ್ತದೆ.  ೧೭೯೦-೯೨ರವರೆಗಿನ ಮೈಸೂರು ದಾಳಿಯ ಸಂದರ್ಭದಲ್ಲಿ ಕ್ಯಾಪ್ಟನ್ ಲಿಟ್ಲ್ನ   ಸೇನೆಯ ಒಂದು ತುಕಡಿ ಪೇಶ್ವೆ ಸಹಾಯಕ್ಕೆ ಇತ್ತು. ಆ ಸೈನ್ಯದಲ್ಲಿ ಇದ್ದ  ಎಡ್ವರ್ಡ ಮೂರ್ ಪೇಶ್ವೆ ಆಕ್ರಮಣದ ಕುರಿತು ತಾನೇ ಪ್ರತ್ಯಕ್ಷ ಕಂಡ ವಿನಾಶದ ಸಾಕ್ಷಿಗಳನ್ನು ಈ ಕೆಳಗಿನಂತೆ ದಾಖಲಿಸುತ್ತಾನೆ.

ಮಧುಗಿರಿ ಬೆಟ್ಟ ಮತ್ತು ಕೋಟೆ. ಸಮೃದ್ದವಾಗಿದ್ದ ಈ ಪಟ್ಟಣದ ಮೇಲೆ ಪೇಶ್ವೆ  ಸೈನ್ಯ ೧೭೯೧ರಲ್ಲಿ ಬಲವಂತ್ ರಾವ್ಗೆ ಸೇರಿದ ಸೈನ್ಯ ಮತ್ತೆ ಮತ್ತೆ ಇದರ ಮೇಲೆ ದಾಳಿ ಮಾಡಿತು. ನೂರುವರ್ಷದ ನಂತರ ೧೮೯೭ರಲ್ಲಿ ಪ್ರಕಟವಾದ ಮೈಸೂರು ಗೆಜೆಟಿಯರ್ನಲ್ಲಿ ಇದು ಸರಿಪಡಿಸಲಾಗದಷ್ಟು ನಾಶವಾಗಿದೆ ಎಂದು ಹೇಳಲಾಗಿದೆ.

 

 

೧. ಹರಿಹರ, ದಾವಣಗೆರೆ ಜಿಲ್ಲೆ: “ಸಾವಿನದೃಶ್ಯ ಮತ್ತು ವಿನಾಶ”.
. ಹಿರಿಯೂರು, ಚಿತ್ರದುರ್ಗ ಜಿಲ್ಲೆ: ಇದನ್ನು ಸುಟ್ಟು ಹಾಕಲಾಯಿತು.
. ಚಿತ್ರದುರ್ಗ ನಗರ: ಇದನ್ನು ಲೂಟಿ ಮಾಡಲಾಯಿತು.
. ಚಿಕ್ಕಮ್ಮನಹಳ್ಳಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆದಾರಿಯಲ್ಲಿ ಸಾಗುವ ಪ್ರತಿಯೊಬ್ಬರ ಜೊತೆ ಪೇಶ್ವೆ ಸೈನಿಕರು ಜಗಳವಾಡಿ ಹಣ ಕೊಡದೆ ಅವರಲ್ಲಿ ಇದ್ದ ವಸ್ತುಗಳನ್ನು ಬಲವಂತವಾಗಿ ಕಿತ್ತುಕೊಂಡರು.
. ತಳಕು, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ: ಇದನ್ನು ಲೂಟಿ ಮಾಡಿ ಸುಟ್ಟು ಹಾಕಲಾಯಿತು.
. ಹಿರೆಗುಂಟನೂರು, ಚಿತ್ರದುರ್ಗ ಜಿಲ್ಲೆ: ಈ ಊರನ್ನು ಸುಟ್ಟು ಹಾಕಲಾಯಿತು.
. ದುಂಡೇರಗುಟ್ಟೆಚನ್ನಗಿರಿಯಿಂದ ಆರುಮೈಲು ದೂರವಿರುವ ಈ ಊರನ್ನು ಸುಟ್ಟು ಹಾಕಿದರು.
. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಒಮ್ಮೆಲೆ ಹತ್ತು ಊರುಗಳನ್ನು ಸುಟ್ಟು ಹಾಕಲಾಯಿತು.
. ಬೇಡರ ಹೊಸಹಳ್ಳಿ: ತುಂಗಾ ನದಿಯ ದಂಡೆಯಲ್ಲಿರುವ ಈ ಊರನ್ನು ಲೂಟಿ ಮಾಡಿದರು.
೧೦. ಗಾಜನೂರುಶಿವಮೊಗ್ಗ ಜಿಲ್ಲೆ: ಇದನ್ನು  ಲೂಟಿ ಮಾಡಿ, ಸುಟ್ಟು ಹಾಕಿದರು
೧೧. ಶಿವಮೊಗ್ಗ ನಗರವನ್ನು ಲೂಟಿ ಮಾಡಿ ಕೆಲವು ಭಾಗವನ್ನು ಸುಟ್ಟರು. ಚಮ್ಮಾರನೊಬ್ಬನ (ದಲಿತ) ಪತ್ನಿಯನ್ನು ಭಾವು ಪಟವರ್ಧನ್ ನ ಬ್ರಾಹ್ಮಣ ಸಹಚರರು ಅತ್ಯಾಚಾರ ಮಾಡಿ ಕೊಂದರು.
೧೨. ದೇವರಾಯನದುರ್ಗ, ತುಮಕೂರು ಜಿಲ್ಲೆ: ಈ ಊರನ್ನು ಸುಟ್ಟು ಹಾಕಲಾಯಿತು.
೧೩. ಧಾರಾವಾಡ ನಗರವನ್ನು ಲೂಟಿ ಮಾಡಿದರು.
೧೪. ಧಾರಾವಾಡ ಸುತ್ತಲಿನ ಸಣ್ಣ ಊರುಗಳನ್ನು ನಾಶ ಮಾಡಿದರು.
೧೫. ಇತರ ಆಕ್ರಮಣಗಳು: ಪೇಶ್ವೆ ಮತ್ತು ಇಂಗ್ಲಿಷರ ಸೈನ್ಯ ಒಟ್ಟು ಸೇರಿ ರೈತರ ಹಿಪ್ಪುನೆರಳೆ ಬೆಳೆಯನ್ನು ನಾಶಮಾಡಿತು.

ಪರಶುರಾಮ ಭಾವು  ಪಟವರ್ಧನ್ ಮತ್ತು ಹರಿಪಂತ್ ಫಡ್ಕೆ ಸೇನೆ ಸಿರಾ ಕೋಟೆಯ ಕಡೆಗೆ ತಿರುಗಿತು. ಜಿಲ್ಲಾಕೇಂದ್ರದಲ್ಲಿ ೧೭೯೧ರ ಮೂರನೆ ಆಂಗ್ಲೊಮೈಸೂರು ಯುದ್ದದ ಹೊತ್ತಿಗೆ ಬೀಡು ಬಿಟ್ಟಿತ್ತು.  ಪೇಶ್ವೆ ಸೇನೆಯ ಕುದುರೆಸವಾರರು ಸುತ್ತಲಿನ ಹಳ್ಳಿಗಳನ್ನು ನಾಶಗೊಳಿಸಿದರು. ತುಮಕೂರು ಜಿಲ್ಲೆಯಲ್ಲಿ ಅವರು ದಾಳಿ ಮಾಡದ ಎಂ.ಎನ್, ಕೋಟೆ ಊರಿನ ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ಹೋದರು.

ಈ ಯುದ್ದಕ್ಕೆ ಇನ್ನೊಂದು ಪ್ರತ್ಯಕ್ಷ ಸಾಕ್ಷಿಯೆಂದರೆ ಬ್ರಿಟಿಷ್ ಸೈನಿಕ ದಿರಮ್.  ಅವನು ಬರೆಯುವಂತೆ, ಯುದ್ದವು ಅಂತಿಮ ಹಂತವನ್ನು ತಲುಪಿದ್ದು ಮೇ ೧೭೯೧ರಲ್ಲಿ ಪೇಶ್ವೆ ಸೈನ್ಯವು ಕಾರ್ನ್ವಾಲಿಸ್ನ ಸೈನ್ಯದ ಜೊತೆ  ಸೇರಿದ ಮೇಲೆ, ಇದು ೧೭೯೨ರ ಮಾರ್ಚ್ ತಿಂಗಳಿನವರೆಗೂ, ಅಂದರೆ  ಟಿಪ್ಪು ಶರಣಾಗುವವರೆಗೂ, ಮುಂದುವರೆಯಿತು. ಈ ಪುಸ್ತಕ ೧೭೯೩ರಲ್ಲಿ ಪ್ರಕಟವಾಯಿತು. ಮೂರ್ ಹೇಳಿದ ಹಲವು ಘಟನೆಗಳನ್ನು ದಿರಮ್ ಧೃಡೀಕರಿಸುತ್ತಾನೆ.
ಈ ಯುದ್ದದ ಆಕ್ರಮಣಗಳನ್ನು ಬುಕಾನನ್ ಈ ಕೆಳಗಿನಂತೆ ಉಲ್ಲೇಖಿಸುತ್ತಾನೆ.

. ಬ್ಯಾಲ್ಯ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆದೊಡ್ಡ ಪ್ರಮಾಣದ ಹಿಂಸೆಯನ್ನು ಅನುಭವಿಸಿತು.
. ಮಧುಗಿರಿ ಪಟ್ಟಣ, ತುಮಕೂರು ಜಿಲ್ಲೆ: ಸಂಪೂರ್ಣ ಆಕ್ರಮಣಕ್ಕೆ ಒಳಗಾಯಿತು.
. ಬಡವನಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ: ೧೭೯೧ರಲ್ಲಿ ಗ್ರಾಮವು ಭಾವು ಪಟವರ್ಧನ್ ನ ಸೈನ್ಯದ ಕೈಗೆ ಸಿಕ್ಕಿದ ನಂತರ ೧೮೦೧ರಲ್ಲಿ ಅರ್ಧದಷ್ಟು ಜನಸಂಖ್ಯೆಯು ಚೇತರಿಸಿಕೊಂಡಿಲ್ಲ.
. ಸಿರಾ, ತುಮಕೂರು ಜಿಲ್ಲೆ: ದಿಲ್ವಾರ್ ಖಾನ್ ಆಡಳಿತದ ಅವಧಿಯಲ್ಲಿ ಇಲ್ಲಿ ೫೦,೦೦೦ ಇದ್ದ ಮನೆಗಳು ಮರಾಠರ ದಾಳಿಗಳ ನಂತರ  ೩೦೦ಕ್ಕೆ ಇಳಿಯಿತು. ೧೭೯೧ರಲ್ಲಿ ಪರಶುರಾಮ್ ಭಾವು  ಪಟವರ್ಧನ್  ಮತ್ತು ಹರಿಪಂತ್ ಫಡ್ಕೆ ಸೈನ್ಯ ಸಿರಾ ಕೋಟೆಯಲ್ಲಿ ಬೀಡು ಬಿಟ್ಟಿತು.
. ಸಿರಾ ತಾಲ್ಲೂಕಿನ ಸುತ್ತಲಿನ ಹಳ್ಳಿಗಳುಸುತ್ತಮುತ್ತಲಿನ ಹಳ್ಳಿಗಳನ್ನು ನಾಶಮಾಡಲಾಯಿತು. ೧೮೦೧ರಲ್ಲಿ ಬುಕಾನನ್ ಭೇಟಿ ನೀಡುವವರೆಗೂ ಅವನತಿಯಾಗುತ್ತಲೆ ಇತ್ತು.
. ಸಿರಾದಿಂದ ಮಿಡ್ಗೇಶಿ ಪಟ್ಟಣದವರೆಗೆ ಪರಶುರಾಮ್ ಭಾವು ಪಟವರ್ಧನ್ ನ ಆಕ್ರಮಣಕ್ಕೆ ತುತ್ತಾದ ಈ ಊರು ಇನ್ನೂ ಚೇತರಸಿಕೊಳ್ಳುತ್ತಿದೆ.
. ಮೂಕನಾಯಕನ ಕೋಟೆ ಅಥವಾ ಎಂ.ಎನ್. ಕೋಟೆ, ತುಮಕೂರು ಜಿಲ್ಲೆತಮ್ಮ ಲೂಟಿಯ ಅವಧಿಯಲ್ಲಿ ಪೇಶ್ವೆ ಕುದುರೆ ಸವಾರರು ಈ ಊರನ್ನು ನಾಶ ಮಾಡಿದರು. ಗ್ರಾಮಸ್ಥರು ಅವರ ವಿರುದ್ದವಾಗಿ ಹೋರಾಡಿದರು. ಅದಕ್ಕೆ ಪ್ರತಿಯಾಗಿ ಪೇಶ್ವೆ ಸೇನೆ ಲೂಟಿ ಮಾಡಿತು. ಹಿಂದಿನಂತೆ ಹೆಣ್ಣುಮಕ್ಕಳನ್ನು ಅಪಹರಿಸಲಾಯಿತು.
. ಚಿಕ್ಕನಾಯಕನ ಹಳ್ಳಿ , ತುಮಕೂರು ಜಿಲ್ಲೆಬುಕಾನನ್ ಇಲ್ಲಿಗೆ ೧೮೦೦ ಆಗಸ್ಟ್ ೨೦ ಮತ್ತ ೨೧ರಂದು ಭೇಟಿ ನೀಡಿದ, ಶ್ರಿರಂಗಪಟ್ಟಣಕ್ಕೆ ಹೋಗುವಾಗ ಬರುವಾಗ ಎರಡೂ ಸಂದರ್ಭದಲ್ಲೂ ಪೇಶ್ವೆ ಸೈನಿಕರು ಇದನ್ನು ಲೂಟಿ ಮಾಡಿದರು. ಪೇಶ್ವೆ ಆಕ್ರಮಣಕಾರರು ಅಡಿಕೆ ಮರ ಮತ್ತು ತೆಂಗಿನಮರಗಳನ್ನು ಕತ್ತರಿಸಿ ಹಾಕಿದರು.
. ತುರುವೇಕೆರೆ ಪಟ್ಟಣ, ತುಮಕೂರು ಜಿಲ್ಲೆಇಲ್ಲಿಗೆ ಬುಕಾನನ್ ೨೧ ಆಗಸ್ಟ್ ೧೮೦೦ರಲ್ಲಿ ಭೇಟಿ ನೀಡಿದನು. ಹುರುಳಿಯ ಹೊಲ ಮತ್ತು ತೆಂಗಿನತೋಟಗಳನ್ನು ನಾಶ ಮಾಡಲಾಗಿತ್ತು.
೧೦. ನಾಗಮಂಗಲ ಪಟ್ಟಣ, ಮಂಡ್ಯ ಜಿಲ್ಲೆಇಲ್ಲಿಗೆ ಬುಕಾನನ್ ೨೧ ಆಗಸ್ಟ್ ೧೮೦೦ರಲ್ಲಿ ಭೇಟಿ ನೀಡಿದ. ಪರಶುರಾಮ್ ಭಾವು ಪಟವರ್ಧನ್ ನ ಆಕ್ರಮಣಕ್ಕೆ ಮುಂಚೆ ಇಲ್ಲಿ ೧೫೦೦ ಮನೆಗಳಿದ್ದವು. ನಂತರ ಉಳಿದದ್ದು ೨೦೦ ಮಾತ್ರ. ಒಂದೂವರೆ ಲಕ್ಷ ತಾಳೆಮರಗಳನ್ನು ಕತ್ತರಿಸಿ ಹಾಕಲಾಯಿತು. ಅರ್ಧದಷ್ಟು  ರೈತರು ತಿಗಳ ಸಮುದಾಯದವರು, ತಮ್ಮ ಸ್ಥಳವನ್ನು ಬಿಟ್ಟು ಓಡಿಹೋದರು.
೧೧. ಪಾಲಹಳ್ಳಿ, ಮಂಡ್ಯ ಜಿಲ್ಲೆಪೇಶ್ವೆ ಭಯದಿಂದ ನಲುಗಿತು.
೧೨. ಸೀಕನೆಪುರಮೂಲೂರು ಶ್ರೀರಂಗಪಟ್ಟಣದ ಪಶ್ಚಿಮಕ್ಕೆ ಇವೆ. ಆಧುನಿಕ ಹೆಸರು ತಿಳಿದಿಲ್ಲ. ಪೇಶ್ವೆ ಸೈನ್ಯ ಮತ್ತು ಕಾರ್ನವಾಲೀಸ್ನ ಸೇನೆ  ಕೃಷಿ ಬೆಳೆಗಳನ್ನು ನಾಶ ಮಾಡಿತು.
೧೩. ಸತ್ಯಗಾಲ, ಚಾಮರಾಜನಗರಕಾರ್ನವಾಲೀಸನ ಆಕ್ರಮಣದ ಸಮಯದಲ್ಲಿ ಪೇಶ್ವೆ ಸೈನ್ಯವು ಹನ್ನೊಂದು ಸಾವಿರ ಮನೆಗಳನ್ನು ಧ್ವಂಸಗೊಳಿಸಿತು.
೧೪. ಹೊನ್ನಾವರ ಹತ್ತಿರದ ಬೈಲೂರು, ಉತ್ತರ ಕನ್ನಡ ಜಿಲ್ಲೆಈ ಊರು ದಾಳಿಯಿಂದ ನಲುಗಿತು.
೧೫. ಭಟ್ಕಳ ಪಟ್ಟಣ, ಉತ್ತರ ಕನ್ನಡ ಜಿಲ್ಲೆ: ಇದನ್ನು ಕಾರ್ನವಾಲೀಸನ ಆಕ್ರಮಣ ಸಮಯದಲ್ಲಿ ಪೇಶ್ವೆ ಸೇನೆ ಲೂಟಿ ಮಾಡಿತು.
೧೬. ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯು ಭಾವು ನಾಶಪಡಿಸುವವರೆಗೂ ಸಮೃದ್ದವಾಗಿತ್ತು.
೧೭. ಶಿವಮೊಗ್ಗ ನಗರಪೇಶ್ವೆ ಸೈನ್ಯ ಇಲ್ಲಿ ೬೦೦೦ಮನೆಗಳನ್ನು ನಾಶ ಮಾಡಿ ಹೆಣ್ಣುಗಳನ್ನು ಹೊತ್ತುಕೊಂಡು ಹೋದನು.
೧೮. ಕೂಡಲಿ ಗ್ರಾಮ, ಶಿವಮೊಗ್ಗ ಜಿಲ್ಲೆಇದನ್ನು ಲೂಟಿ ಮಾಡಿ ಸುಟ್ಟು ಹಾಕಲಾಯಿತು. ಕೂಡಲಿ ಮಠವನ್ನು ಬಿಡದೆ ಸುಟ್ಟು ಹಾಕಿದರು. ನಿರಾಯುಧರಾಗಿದ್ದ ಶೂದ್ರರನ್ನು ಭಾವು ಪಟವರ್ಧನ್  ಕ್ರೂರವಾಗಿ ಕೊಲ್ಲಿಸಿದನು.
೧೯. ಸಾಸ್ವೇಹಳ್ಳಿಬುಕಾನನ್ ಇಲ್ಲಿಗೆ ೧೮೦೧ ಏಪ್ರಿಲ್ ೪ರಂದು ಭೇಟಿ ನೀಡಿದ, ಹಳ್ಳಿಗಳು ಭಾವು ಪಟವರ್ಧನ್ ನ ಕಾರಣದಿಂದ ನಿರ್ಜನವಾಗಿದ್ದವು.
೨೦. ಮಲೆಬೆನ್ನೂರು ಪಟ್ಟಣ, ದಾವಣಗೆರೆ ಜಿಲ್ಲೆಇದನ್ನು ನಾಶ ಮಾಡಲಾಗಿತ್ತು.
೨೧. ಹರಿಹರ ಪಟ್ಟಣ, ದಾವಣಗೆರೆ ಜಿಲ್ಲೆಭಾವು ಪಟವರ್ಧನ್ ಜನರನ್ನು ಲೂಟಿ ಮಾಡಿದ ಹಲವರು ಹಸಿವಿನಿಂದ ಸತ್ತರು.
೨೨. ಕೊಡಗನ್ನೂರು, ಚಿತ್ರದುರ್ಗ: ಭಾವು ಪಟವರ್ಧನ್ ನ ಆಕ್ರಮಣದಿಂದ ಮರುಭೂಮಿಯಂತೆ ಆಯಿತು.
೨೩. ಚಿಕ್ಕಲಘಟ್ಟ೧೭೭೧ರ ಪೇಶ್ವೆ  ದಾಳಿ ಮತ್ತು ೧೭೯೧ರ ಪೇಶ್ವೆ ದಂಡನಾಯಕ

ಪರಶುರಾಮ್ ಭಾವು ಪಟವರ್ಧನ್  ದಾಳಿಯಿಂದ ಈ ಊರು ಬಂಜರುಭೂಮಿಯಾಯಿತು.
೨೪. ಹಿರಿಯೂರು ಪಟ್ಟಣ, ಚಿತ್ರದುರ್ಗಪೇಶ್ವೆ ದಾಳಿಯಿಂದ ಬಾಧಿತವಾಯಿತು ಮತ್ತು ಜೊತೆಗೆ ಬರಗಾಲವು ಕಾಣಿಸಿಕೊಂಡಿತು.
೨೫. ಬೆಳಗೂರುಬುಕಾನನ್ ಇಲ್ಲಿಗೆ ೮ ಮೇ ೧೮೦೧ರಲ್ಲಿ ಭೇಟಿ ನೀಡಿದನು. ಪೇಶ್ವೆ ಸೈನ್ಯವು ಸಾಗಿ ಹೋದ ಕಾರಣ ಇಲ್ಲಿನ ಭೂಮಿಯು ಕೃಷಿಗೆ ಅನುಪಯುಕ್ತವಾಯಿತು.
೨೬. ಗರುಡನಗಿರಿ, ಹಾಸನ ಜಿಲ್ಲೆಪೇಶ್ವೆ ಸೈನ್ಯ ದ ಕಾರಣದಿಂದ ೯ಮೇ ೧೮೦೧ರವರೆಗೆ ನಿರ್ಜನ ಪ್ರದೇಶವಾಗಿತ್ತು.
೨೭. ಬಾಣಾವರ, ಹಾಸನ ಜಿಲ್ಲೆಪೇಶ್ವೆ ಸೈನ್ಯ ವಿನ ದಾಳಿಯಿಂದ ನಲುಗಿತು.
೨೮. ಹಾಸನ ಪಟ್ಟಣಬುಕಾನನ್ ಪ್ರಕಾರ ಪೇಶ್ವೆ ದಾಳಿಯಿಂದ ಕೇವಲ ಒಂದು ಕಾಲು ಭಾಗದಷ್ಟು ಭೂಮಿ ಮಾತ್ರ  ಕೃಷಿಗೆ ಯೋಗ್ಯವಾಗಿತ್ತು.

ತುಮಕೂರು ಪಟ್ಟಣದ ಸಮೀಪವಿರುವ ದೇವರಾಯನ ದುರ್ಗ. ೧೭೯೧ರಲ್ಲಿ ಪೇಶ್ವೆ ಸೇನೆ ಇದನ್ನು ಲೂಟಿ ಮಾಡುವವರೆಗೂ ಸಮೃದ್ದವಾದ ಪಟ್ಟಣವಾಗಿತ್ತು.

 

ನಂತರದ ಬ್ರಿಟಿಷ್ ಮೂಲಗಳು

ಲಿವಿನ್ ಬೋಥಮ್ ಬೌರಿಂಗ್  ೧೮೭೧ರಲ್ಲಿ ೧೭೯೦-೯೧ರಲ್ಲಿ ಚಿತ್ರದುರ್ಗದ ಮೇಲಿನ ಪೇಶ್ವೆ  ಆಕ್ರಮಣದ ಕುರಿತು ಬರೆಯುತ್ತಾನೆ “ಪೇಶ್ವೆ ದಂಡನಾಯಕ ಪರಶುರಾಮ್ ಭಾವು ಪಟವರ್ಧನ್ ಗೆ ಚಿತ್ರದುರ್ಗ ಕೊಳ್ಳೆ ಹೊಡೆಯಲು ಬಹುಮುಖ್ಯವಾದ ಸ್ಥಳ ಎಂದೆನಿಸಿ ಮೈಸೂರು ರಾಜ್ಯದ ಉತ್ತರಭಾಗದ ಕಡೆಗೆ ಪ್ರಯಾಣ ಬೆಳೆಸಿದನು. ಜನರು ತಮ್ಮ ಸಂಪೂರ್ಣ ನಿವಾಸವನ್ನೆ ಖಾಲಿ ಮಾಡಿ ಮನೆ ಬಿಟ್ಟು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಒಂದು ಸ್ತಳದಿಂದ ಮತ್ತೊಂದು ಸ್ತಳಕ್ಕೆ ಹೋಗುವುದು ʼವಲಸೆʼ ಎನ್ನಿಸಿಕೊಳ್ಳುತ್ತಿತ್ತು.

ಪೇಶ್ವೆ  ಸೈನ್ಯ ಆಕ್ರಮಣದ ಹತ್ತು ವರ್ಷದ ನಂತರ ಬುಕಾನನ್ ಈ ಸ್ಥಳಕ್ಕೆ ಭೇಟಿ ನೀಡಿದ ಆಗಲೂ ಅವು ಚೇತರಿಸಿಕೊಂಡಿರಲಿಲ್ಲ. ಬೌರಿಂಗ್ ಪ್ರಕಾರ ಶಿವಮೊಗ್ಗ ಪಟ್ಟಣವು ವಿನಾಶದ ಎಂಬತ್ತು ವರ್ಷದ ನಂತರವೂ ಚೇತರಿಸಿಕೊಂಡಿಲ್ಲ.

ಅವನು ಹೀಗೆ ಬರೆಯುತ್ತಾನೆ “ಟೀಪೂವಿನ ಜೊತೆಗಿನ ಯುದ್ದದ ಸಂದರ್ಭದಲ್ಲಿ ಶಿವಮೊಗ್ಗದ ಮೇಲೆ ಪರಶುರಾಮ್ ದಾಳಿ ಮಾಡಿದನು. ಕರುಣೆಯಿಲ್ಲದ ಲೂಟಿ ಮಾಡಿದನು. ಇದರ ವಿನಾಶದ ಗುರುತಿನ ಭಯದಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ.”

ಬಿ.ಎಲ್.ರೈಸ್ (೧೮೯೭) ಗಮನಿಸಿದಂತೆ ಮಧುಗಿರಿ ಪಟ್ಟಣವನ್ನು ೧೭೯೧ರಲ್ಲಿ ಬಲವಂತ್ ರಾವ್ ನೇತೃತ್ವದ ಸೇನೆ ಮೂರು ತಿಂಗಳು ಮುತ್ತಿಗೆ ಹಾಕಿತ್ತು, ಒಂದು ಶತಮಾನದ ನಂತರವೂ ಊರು ಸುಧಾರಣೆಯಾಗಿಲ್ಲ.

……………………………..

ಪೇಶ್ವೆಗಳ ಬಗ್ಗೆ

ಪೇಶ್ವೆ ಎಂಬ ಪದವು ಪರ್ಷಿಯನ್ پیشوا pēshwā ನಿಂದ ಬಂದಿದೆ, ಇದರ ಅರ್ಥ “ಮುಂಚೂಣಿಯಲ್ಲಿರುವ, ನಾಯಕ”.

ಛತ್ರಪತಿ ಶಿವಾಜಿ ಮಹಾರಾಜ್ (1659-80 ರ ಆಳ್ವಿಕೆ) ಇದಕ್ಕೆ ಪ್ರಧಾನ ಮಂತ್ರಿ ಸ್ಥಾನಮಾನವನ್ನು ನೀಡಿದರು ಮತ್ತು ಮೊರೋಪಂತ್ ಪಿಂಗಳೆ ಅವರನ್ನು ಮೊದಲ ಪೇಶ್ವೆಯಾಗಿ ನೇಮಿಸಿದರು. ಶಿವಾಜಿ, ಸಂಭಾಜಿ ಮತ್ತು ರಾಜಾರಾಮ್ ಆಳ್ವಿಕೆಯಲ್ಲಿ ಎಲ್ಲಾ ಪೇಶ್ವೆಗಳು ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರು .

ಶಿವಾಜಿಯ ಮೊಮ್ಮಗ ಶಾಹು 1713 ರಲ್ಲಿ , ಚಿತ್ಪಾವನ ಬ್ರಾಹ್ಮಣ ಭಟ್ ಕುಟುಂಬದ ಬಾಲಾಜಿ ವಿಶ್ವನಾಥ್ (ಭಟ್) ಅವರನ್ನು ಪೇಶ್ವೆಯಾಗಿ ನೇಮಿಸಿದರು.

1719 ರಲ್ಲಿ ಬಾಲಾಜಿಯ ಮಗ ಬಾಜಿ ರಾವ್ I ನನ್ನು ಶಾಹು ಪೇಶ್ವೆಯಾಗಿ ನೇಮಿಸಿದ ನಂತರ ಭಟ್ ಕುಟುಂಬಕ್ಕೆ ಆ ಸ್ಥಾನ ಆನುವಂಶಿಕವಾಯಿತು. ತದ ನಂತರ ಪೇಶ್ವೆ ಅವರ ಮನೆತನದ ಹೆಸರಾಯಿತು.
ಶಾಹು, 1749 ರಲ್ಲಿ ತೀರಿಕೊಂಡ ನಂತರ ಪೇಶ್ವೆ ಬಾಲಾಜಿ ಬಾಜಿ ರಾವ್ ಮಹಾರಾಷ್ಟ್ರದ ರಾಜ್ಯಭಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಕೊನೆಯ ಪೇಶ್ವೆ, ಬಾಜಿ ರಾವ್ II, 1818 ರಲ್ಲಿ ಭೀಮಾ ಕೋರೆಗಾಂವ್ ನಲ್ಲಿ ನಡೆದ ಮೂರನೇ ಆಂಗ್ಲೋ-ಮರಾಠಾ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಸೋತ ನಂತರ ಪೇಶ್ವೆ ಸಾಮ್ರಾಜ್ಯ ಅಂತ್ಯ ಕಂಡಿತು.

ಪೇಶ್ವೆ ಧಾಳಿಗಳ ಬಗ್ಗೆ ಸಮಕಾಲೀನ ಬರಹಗಾರರ ಪ್ರಕಾರ ಸಾಮಾನ್ಯ ಕನ್ನಡಿಗರು ಬಹಳಷ್ಟು ಯಾತನೆಗೀಡಾಗುತ್ತಿದ್ದರೆ. ಅವರಿಂದ, ಶೂದ್ರರು ಎಂದು ಕರೆಯಲ್ಪಡುವ ಬ್ರಾಹ್ಮಣೇತರರು ಅತ್ಯಂತ ಬರ್ಬರ ಯಾತನೆಗೀಡಾಗುತ್ತಿದ್ದರೆಂದು ಈಸ್ಟ್ ಇಂಡಿಯಾ ಕಂಪನಿ ನಿಯೋಜಿಸಿದ್ದ ಒಬ್ಬ ಪ್ರವಾಸಿಗ, ಬರಹಗಾರ ಮತ್ತು ವೈದ್ಯನಾಗಿದ್ದ ಫ್ರಾನ್ಸಿಸ್ ಬುಕಾನನ್ ಹೇಳುತ್ತಾನೆ. ಇದಕ್ಕಿದ್ದ ಒಂದು ಕಾರಣವೆಂದರೆ, ‘ವರ್ಣ’ ಅಥವಾ ಜಾತಿ ವ್ಯವಸ್ಥೆಯ ಆಧಾರದ ಮೇಲೆ ವಸತಿ ವಿನ್ಯಾಸಗಳನ್ನು ಬೇರ್ಪಡಿಸಿದ್ದುದು. ಇದರಲ್ಲಿ ಬ್ರಾಹ್ಮಣರು ಯಾವುದೇ ಸಾಮಾನ್ಯ ವಸಾಹತಿನ ಅತ್ಯಂತ ಭದ್ರವಾದ ಭಾಗದಲ್ಲಿ ಅಥವಾ ಕೋಟೆಗಳೊಳಗೇ ವಾಸಿಸುತ್ತಿದ್ದರು. ನಿಕಟವಾಗಿ ನೋಡಿದರೆ ಪೇಶ್ವೆ ಸೈನ್ಯದಿಂದ ಬ್ರಾಹ್ಮಣೇತರರು ಉದ್ದೇಶಪೂರ್ವಕವಾಗಿ ಗುರಿಯಾಗುತ್ತಿದ್ದದ್ದು ಬಹಿರಂಗವಾಗುತ್ತದೆ.