ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ ಸಭೆ
“ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ” ಯ ಮೊದಲ ಸಭೆಯು ನೆನ್ನೆ (03/08/23) ಬೆಂಗಳೂರಿನ ಬುದ್ದಭವನದಲ್ಲಿ ನಡೆಯಿತು.
ಯಾರು ಏನೇ ಸ್ಪಷ್ಟನೆ ಸಮರ್ಥನೆ ಸಮಜಾಯಿಷಿ ನೀಡಿದರೂ SCST ಸಮುದಾಯಗಳ ಸಮಗ್ರ ಆರ್ಥಿಕಾಭಿವೃದ್ದಿಗೆ ಮೀಸಲಾಗಿಟ್ಟುರುವ SCSP/TSP ಸಾವಿರಾರು ಕೋಟಿ ಹಣವನ್ನು ಇತರೆ ಯೋಜನೆಗಳಿಗೆ ಅಥವಾ ಯಾವುದೇ ಭಾಗ್ಯ ಗ್ಯಾರೆಂಟಿಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಬಾರದು….
ಈ ಬಾರಿಯ 2023 – 24 ಸಾಲಿನ SCSP/TSPಯ ಒಟ್ಟು 34,274 ಕೋಟಿ ಹಣವು SCST ಸಮುದಾಯಗಳನ್ನು ಶಾಶ್ವತವಾಗಿ ಆರ್ಥಿಕ ಸಬಲೀಕರಣಗೊಳಿಸಲು ಬಳಕೆಯಾಗಬೇಕು.
೧.ಭೂರಹಿತ SCST ಗಳಿಗೆ ಕನಿಷ್ಟ 5 ಎಕರೆ ಕೃಷಿಭೂಮಿ ನೀಡಲಿ, (ವಸತಿರಹಿತ) ಮನೆಯಿರದವರಿಗೆ ಕನಿಷ್ಠ 10 ಲಕ್ಷ ರೂಪಾಯಿ worth ಕಟ್ಟಿಕೊಡಲಿ
೨. ಪ್ರತಿ ಜಿಲ್ಲೆಯ SCST ವಿದ್ಯಾವಂತ ನಿರುದ್ಯೋಗಿಗಳಿಗೆ ಅವಿದ್ಯಾವಂತ ಯುವಜನಾಂಗಕ್ಕೆ ಉದ್ಯೋಗ/ ಸ್ವಯಂ ಉದ್ಯೋಗಕ್ಕೆ ಕನಿಷ್ಟ 10 ಲಕ್ಷದಿಂದ 1 ಕೋಟಿ ವರೆಗೆ ಅನುದಾನ ನೀಡಲಿ
೩. ಪ್ರತಿ ಜಿಲ್ಲೆಗಳಲ್ಲಿಯೂ KG to PGಯವರೆಗೆ ಸಂಪೂರ್ಣ ಉಚಿತ English medium Residential ಶಿಕ್ಷಣ ನೀಡುವ ಶಾಲಾ ಕಾಲೇಜುಗಳನ್ನು ಸ್ಥಾಪಿಸಲಿ, ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ಕಂಡೀಷನ್ ಇಲ್ಲದೆ ಕಳಿಸಿಕೊಡಲಿ.
೪. ಪ್ರತಿ ಜಿಲ್ಲೆಗಳಲ್ಲಿಯೂ SCST ಗಳಿಗೆ ಪ್ರತ್ಯೇಕವಾಗಿ ಕೆಮ್ಮಿನಿಂದ ಕ್ಯಾನ್ಸರ್ ವರೆಗೂ ಉಚಿತ ಔಷಧೋಪಚಾರ ದೊರೆಯುವ Advance technology ಇರುವ High standard ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಗಳನ್ನು ಸ್ಥಾಪಿಸಲಿ
೫. ಪ್ರತಿ ಜಿಲ್ಲೆಗಳಲ್ಲಿ SCST ಸಮುದಾಯಗಳ ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ಉಳಿಸಲು ಬೆಳೆಸಲು ಸಾಂಸ್ಕೃತಿಕ ಕೇಂದ್ರಗಳು ಸ್ಥಾಪನೆಯಾಗಲಿ. ಬುದ್ಧ ಫುಲೆ ಅಂಬೇಡ್ಕರ್ ಪೆರಿಯಾರ್ ಸಾಹಿತ್ಯ ದೊರೆಯುವಂತೆ ಪ್ರತಿಗ್ರಾಮಕ್ಕೊಂದು ಸುಸಜ್ಜಿತ ಗ್ರಂಥಾಲಯ ಬುದ್ಧವಿಹಾರ ಮಾಹಿತಿಕೇಂದ್ರ ಸ್ಥಾಪನೆಯಾಗಲಿ. SCST ಕಲಾವಿದರಿಗೆ ವಿಶೇಷ ಅನುದಾನ ಹಾಗು ಸಾಮಾಜಿಕ ಹೋರಾಟಗಾರರಿಗೆ ಸಂಘಟನೆಗಳಿಗೆ 10 ಲಕ್ಷದಿಂದ 1 ಕೋಟಿವರೆಗೂ ಅನುದಾನ ನೀಡಲಿ.
ಇವೆಲ್ಲವೂ ಸಾಕಾರವಾಗಬೇಕು. ಆಗಲು ಸಾಧ್ಯವಿದೆ ಕೂಡ. “ಇದು ಆಗುವಂತೆ ಮಾಡೋಣ” ಎನ್ನುವವರೆಲ್ಲಾ ಕಾವಲುಪಡೆಯ ಸದಸ್ಯರಾಗಲು ಮುಂದೆ ಬನ್ನಿ. ನನ್ನನ್ನೂ ಎಲ್ಲರನ್ನೂ ಒಳಗೊಂಡು “ಕಾವಲು ಪಡೆ”ಯಲ್ಲಿ ಎಲ್ಲರೂ ಸದಸ್ಯರೇ… ಸ್ವಯಂ ಪ್ರೇರಣೆಯಿಂದ ನಿಸ್ವಾರ್ಥವಾಗಿ ಹೋರಾಟದಲ್ಲಿ ಭಾಗವಹಿಸುವವರೆಲ್ಲಾ ನಾಡಿನಾದ್ಯಂತ ಸದಸ್ಯರಾಗಿ.. ಪಕ್ಷಾತೀತವಾಗಿ ಸದಸ್ಯರಾಗಬಯಸುವವರು ನಿಮ್ಮ ಹೆಸರು ಸ್ಥಳ ಫೋನ್ ನಂಬರ್ ನೀಡಿ ನೊಂದಾಯಿಸಿಕೊಳ್ಳೋಣ.
ನಾಳೆ ಅಂದರೆ ಶನಿವಾರ, 5.8.2023 ಸಂಜೆ 5 ಗಂಟೆಗೆ ಮೈಸೂರು ರಸ್ತೆ ಮೆಟ್ರೋ ಹತ್ತಿರದ ಬುದ್ಧಭವನದಲ್ಲಿ ಎರಡನೇ ಸಭೆ ಇದೆ. ದಯಮಾಡಿ ಬನ್ನಿ… ಜೈಭೀಮ್
-ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ ಸಕ್ರಿಯ ಸದಸ್ಯ – ಹ.ರಾ.ಮಹಿಶ