ಹೊಲಗೇರಿ ಮತ್ತು ಉಪೇಂದ್ರ ಎಂಬ ರಾಯಭಾರಿ

ಹೊಲಗೇರಿ ಮತ್ತು ಉಪೇಂದ್ರ ಎಂಬ ರಾಯಭಾರಿ

 

-ಹಾರೋಹಳ್ಳಿ ರವೀಂದ್ರ

 

ನಟ ಉಪೇಂದ್ರ ಅವರ ಹೊಲಗೇರಿ ಹೇಳಿಕೆ ವಿರುದ್ಧ ಕರ್ನಾಟಕದಾಧ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಅವರ ಮೇಲೆ ಪ್ರಕರಣದ ಮೇಲೆ ಪ್ರಕರಣಗಳು ದಾಖಲಾದವು. ಬೀದಿ ಹೋರಾಟದ ಜೊತೆಗೆ ಕಾನೂನು ಹೋರಾಟವು ಮುಖ್ಯ. ಆದರೆ ಇದಾದರಷ್ಟೆ ಸಾಲದು. ನಟ ಉಪೇಂದ್ರ ಅವರು ಹಲವಾರು ಉತ್ಪಾದನಾ ಕಂಪನಿಗಳಿಗೆ ರಾಯಭಾರಿಯಾಗಿದ್ದಾರೆ. ಎಸ್ ಕೆ ಸೂಪರ್ ಟಿಎಂಟಿ, ಲೂನಾರ್ಸ್ ವಾಕ್ ಮೇಟ್, ಹಿಮಾಮಿ ನವರತ್ನ ಆಯಿಲ್, ಎಂಟಿಆರ್ ಹೀಗೆ ಹಲವಾರು ಬ್ರಾಂಡ್ ಗಳಿಗೆ ರಾಯಭಾರಿಯಾಗಿದ್ದಾರೆ.

 

ಈ ಹೇಳಿಕೆಗಳಿಂದ  ಆ ಕಂಪನಿಗಳು ನಿಜಕ್ಕೂ ಮುಜುಗರಕ್ಕೊಳಗಾಗಬೇಕಾಗಿತ್ತು. ಆದರೆ ಹಾಗಾಗಿಲ್ಲ, ಆ ಕಂಪನಿಗಳು ಉಪೇಂದ್ರ ಅವರನ್ನು ರಾಯಭಾರತ್ವದಿಂದ ಕೈಬಿಟ್ಟಿದ್ದರೆ ಚೂರಾದರು ಮರಿಯಾದೆ ಉಳಿಯುತಿತ್ತು. ಉಪೇಂದ್ರ ಅವರ ಹೇಳಿಕೆಯಿಂದ ಕಂಪನಿಗಳ ಉತ್ಪಾದನಾ ವಸ್ತುಗಳಿಂದ ಬರುತ್ತಿದ್ದ ಲಾಭ ಮುಂದೆ ತಗ್ಗಬಹುದು.

 

ಈ ವರ್ಷ ನಮ್ಮ ಕರ್ನಾಟಕ ಸರ್ಕಾರ ಬೆಸ್ಕಾಂಗೆ ಉಪೇಂದ್ರ ಅವರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕೆನ್ನುವ ಸುದ್ಧಿ ಇತ್ತು. ಬಹುಶಃ ಸರ್ಕಾರದ ಮುಂದಿನ ನಡೆ ನಿಗೂಢವಾಗಿದೆ. ಒಂದು ವೇಳೆ ಇಷ್ಟೆಲ್ಲಾ ಅವಾಂತರಗಳ ನಡುವೆ ಉಪೇಂದ್ರ ಅವರನ್ನು ರಾಯಭಾರಿಯನ್ನಾಗಿ ಸರ್ಕಾರ ತಂದರೆ ವಿಧಾನ ಸೌಧದ ಮುಂದೆ ಸರ್ಕಾರ ಬೆತ್ತಲುಗೊಂಡಂತೆ.


-ಹಾರೋಹಳ್ಳಿ ರವೀಂದ್ರ