ಎಸ್ ಸಿ ಎಸ್ ಪಿ / ಟಿ ಎಸ್ ಪಿ ಕಾಯ್ದೆ ವಿರುದ್ಧವಾಗಿ ಮೀಸಲು ಹಣ ಬಳಸುತ್ತಿರುವ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಮೆರವಣಿಗೆ
ದಿನಾಂಕ ; ೨೯ .೦೮. ೨೦೨೩ ಮಂಗಳವಾರ
ಸಮಯ ಬೆಳಗ್ಗೆ : ೧೧ ಗಂಟೆಗೆ
ಸ್ಥಳ: ಪುರಭವನದಿಂದ ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು
ಬಂಧುಗಳೇ,
ಸಾವಿರಾರು ವರ್ಷಗಳ ಕಾಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಶೋಷಿತವಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಸ್ಥಿತಿಗತಿಯನ್ನು ತನ್ನ ಅವಲೋಕನ ಸಮೀಕ್ಷೆಯಲ್ಲೆ ಮನಗಂಡ ಕೇಂದ್ರ ಸರ್ಕಾರದ ಯೋಜನಾ ಆಯೋಗವು ಈ ಸಮುದಾಯಗಳ ಬಲವರ್ಧನೆಗಾಗಿ ಸರ್ಕಾರಗಳು ವಾರ್ಷಿಕ ಬಜೆಟ್ ಅಭಿವೃದ್ಧಿ ಅನುದಾನದಲ್ಲಿ ಜನಸಂಖ್ಯೆಗನುಗುಣವಾಗಿ ಹಣವನ್ನು ಮೀಸಲಿರಿಸಿ ಪರಿಶಿಷ್ಟರ ಸರ್ವತೋಮುಖ ಅಭಿವೃದ್ಧಿಗೆ ಬಳಸುವಂತೆ ೧೯೮೪ರಲ್ಲೇ ನಿರ್ದೇಶಿಸಲಾಗಿತ್ತು. ಇದರಂತೆ ದೇಶದಲ್ಲಿ ಮೊದಲಿಗೆ ಆಂಧ್ರಪ್ರದೇಶ ಸರ್ಕಾರ ನಂತರ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನಾ ಕಾಯ್ದೆಯನ್ನು ಜಾರಿಗೆ ತಂದವು.
೨೦೧೩ ರಲ್ಲಿ ಈ ಕಾಯ್ದೆಯನ್ನು ಮರು ಪರಿಷ್ಕರಿಸಿ ಜಾರಿ ಮಾಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅನಾವಶ್ಯಕವಾಗಿ ಸೆಕ್ಷನ್ ೭ ಡಿ ಯನ್ನು ಕಾಯ್ದೆಯಲ್ಲಿ ಅಳವಡಿಸಿದ ಪರಿಣಾಮ ಮೀಸಲು ಹಣ ಅನ್ಯ ಕಾರ್ಯಗಳಿಗೆ ಬಳಕೆಯಾಗಿ ದುರುಪಯೋಗಪಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತಾಯ್ತು. ಇದರಿಂದ ಕಾಯ್ದೆಯ ಉದ್ದೇಶ ಈಡೇರದೆ ಪರಿಶಿಷ್ಟರ ಪ್ರಗತಿ ಕುಂಠಿತಗೊಂಡಿತ್ತು. ನಂತರ ಬಂದ ಬಿಜೆಪಿ ಸರ್ಕಾರವು ಎಸ್ ಎಸಿ ಎಸ್ ಪಿ/ ಟಿಎಸ್ಪಿ ಅನುದಾನವನ್ನು ಕಡಿತ ಮಾಡಿದಲ್ಲದೆ ೭ ಡಿ ಯನ್ನು ಹೆಚ್ಚು ದುರ್ಬಳಕೆ ಮಾಡಿಕೊಂಡಿತು. ಈ ಅನ್ಯಾಯವನ್ನು ತೀವ್ರವಾಗಿ ಖಂಡಿಸಿದ ದಲಿತ ಪರ ಸಂಘಟನೆಗಳ ಹೋರಾಟದ ಫಲವಾಗಿ ಈಗಿರುವ ಕಾಂಗ್ರೆಸ್ ನೇತೃತ್ವ ಸರ್ಕಾರವು ತನ್ನ ಬಜೆಟ್ ಭಾಷಣದಲ್ಲಿ ೭ ಡಿಯನ್ನು ರದ್ದುಗೊಳಿಸುವುದಾಗಿ ಹೇಳಿ ಎಸ್ ಸಿ ಎಸ್ ಪಿ/ ಟಿಎಸ್ಪಿ ಯೋಜನೆಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆಯಾಗದಂತೆ ಪರಿಣಾಮತ್ಮಕವಾಗಿ ರಕ್ಷಿಸುತ್ತೇವೆಂದು ಭರವಸೆ ನೀಡಿದ್ದರೂ ಗ್ಯಾರಂಟಿ ಯೋಜನೆಗಳಿಗೆ ಮೀಸಲು ಹಣ ಬಳಸಿಕೊಳ್ಳುವ ಸಲುವಾಗಿ ಸೆಕ್ಷನ್ ೭ ಡಿ ಯನ್ನು ರದ್ದುಗೊಳಿಸದೆ ಜೀವಂತವಾಗಿರಿಸಿ ದಲಿತ ಸಮುದಾಯಕ್ಕೆ ದ್ರೋಹವೆಸಗಿದ್ದಾರೆ.
ಈ ಭಾರಿಯ ಬಜೆಟ್ ಗಾತ್ರದಲ್ಲಿ ೧.೪೨ ಲಕ್ಷ ಕೋಟಿ ಹಣವನ್ನು ಅಭಿವೃದ್ಧಿ ಅನುದಾನಕ್ಕಾಗಿ ಇಡಲಾಗಿದೆ. ೨೦೧೧ರ ಜನಗಣಗತಿಯ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟರು ಶೇ.೨೪ ರಷ್ಟಿದ್ದಾರೆ. ಕಾಯ್ದೆಯನ್ವಯ ಎಲ್ಲಾ ಇಲಾಖೆಗಳಲ್ಲಿಯೂ ಶೇ. ೨೪. ೧೦ ರಷ್ಟು ಹಣವನ್ನು ಪ್ರತ್ಯೇಕವಾಗಿ ಮೀಸಲಿಟ್ಟು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕೆಂಬ ನಿಯಮವಿದೆ. ಆದರೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಸಾರ್ವತ್ರಿಕ ಯೋಜನೆಗಳಾದ ೫ ಗ್ಯಾರಂಟಿಗಳಿಗೆ ಹಣ ಪೂರೈಸುವ ಸಲುವಾಗಿ ಮೀಸಲು ನಿಧಿಯಿಂದ ೧೧. ೧೧೪ ಕೋಟಿಗಳನ್ನು ತೆಗೆದುಕೊಂಡು ಪರಿಶಿಷ್ಟರಿಗೆ ಮಾತ್ರ ಬಳಸುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ.
ಒಂದು ವೇಳೆ ಪರಿಶಿಷ್ಟರಿಗೆ ಮಾತ್ರ ಈ ಹಣ ಬಳಸುವುದಾದರೆ ಅಂಕಿ ಅಂಶಗಳ ಪ್ರಕಾರ ೮. ೧೫೦ ಕೋಟಿ ಸಾಕಾಗುತ್ತದೆ. ಆದರೆ ಮೂರು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಎಸ್ ಸಿ ಎಸ್ ಪಿ / ಟಿಎಸ್ಪಿ ನಿಧಿಯಿಂದ ಹೆಚ್ಚುವರಿಯಾಗಿ ಪಡೆದಿರುವ ಉದ್ದೇಶವೇನು? ಗ್ಯಾರಂಟಿ ಯೋಜನೆಗಳಿಗೆ ಮೀಸಲು ಹಣ ಬಳಸುವುದಾದರೆ ಕಾಯ್ದೆಯನ್ನು ಉಲ್ಲಂಘಿಸಿದಂತಾಗುವುದಾದಿಲ್ಲವೇ? ದಲಿತರಿಗೆ ಗ್ಯಾರಂಟಿಗಳು ಇಲ್ಲ ಎಂದಾಗುವುದಿಲ್ಲವೇ? ದಲಿತರಿಗೆ ಮೀಸಲಾಗಿ ಹಣ ಇಡುವ ಅಗತ್ಯವೇನಿತ್ತು? ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವುದು ತಲೆಮಾರಿನುದ್ದಕ್ಕೂ ಆಳುವ ಸರ್ಕಾರಗಳು ದಲಿತರನ್ನು ವಂಚಿಸುತ್ತಲೇ ಬಂದಿರುವುದನ್ನು ಮುಂದುವರಿಸುತ್ತಿರುವುದಲ್ಲದೇ ಮೀಸಲಾತಿಯ ಪರಿಕಲ್ಪನೆಯನ್ನು ತಿರುಚಲಾಗುತ್ತಿದೆ.
ಶತಮಾನಗಳಿಂದ ನೊಂದು- ಬೆಂದು ಇನ್ನೂ ಸೂರಿಲ್ಲದೆ, ಸರಿಯಾದ ಶಿಕ್ಷಣವಿಲ್ಲದೆ, ದುಡಿಮೆ ಇಲ್ಲದೆ, ತುಂಡು ಭೂಮಿಯೂ ಇಲ್ಲದೆ, ಆರೋಗ್ಯ ಇಲ್ಲದೆ, ಸಾಮಾನ್ಯ ಮನುಷ್ಯ ಗೌರವದಿಂದಲೂ ಹಾಗೂ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗುತ್ತಿರುವ ಪರಿಶಿಷ್ಟರಿಗೆ ಹತ್ತಾರು ಸಮಸ್ಯೆಗಳು ನಿತ್ಯವೂ ಕಿತ್ತು ತಿನ್ನುತ್ತಿರುವ ಇಂತಹ ಸಂದರ್ಭಗಳಲ್ಲಿ ಶಾಶ್ವತ ಯೋಜನೆಗಳಾದ ಭೂರಹಿತರಿಗೆ ಭೂಮಿ ಕೊಡುವುದು, ನಿವೇಶನ ಒದಗಿಸುವುದು, ಭೂಮಿ ಉಳ್ಳವರಿಗೆ ಕೊಳವೆ ಬಾವಿ ವ್ಯವಸ್ಥೆ ಕಲ್ಪಿಸಿಕೊಡುವುದು, ಶಿಕ್ಷಣಕೊಡಿಸುವುದು, ಖಾಸಗಿ ಶಾಲೆಗಳಲ್ಲಿ ಆರ್ ಟಿ ಐ ಕಾಯ್ದೆಯಡಿ ಓದುತ್ತಿರುವ ಮಕ್ಕಳಿಗೆ ೮ ರಿಂದ ೧೦ ನೇ ತರಗತಿ ಮಕ್ಕಳಿಗೆ ಸರ್ಕಾರವೇ ಶುಲ್ಕ ಪಾವತಿಸುವುದು, ವಿದ್ಯಾರ್ಥಿ ವೇತನ ಹೆಚ್ಚಿಸುವುದು ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಜಾರಿಗೆ ತರುವುದು, ಹೆಚ್ಚು ಹೆಚ್ಚು ಸ್ವಯಂ ಉದ್ಯೋಗಿಗಳನ್ನಾಗಿ ರೂಪಿಸುವುದು, ಈಗಿರುವ ನಿಯಮಗಳನ್ನು ಸರಳೀಕರಣಗೊಳಿಸಿ ನೇರ ಸಾಲ ಸೌಲಭ್ಯ ನೀಡುವುದು, ದಲಿತರ ಸಾಲವನ್ನು ಮನ್ನಾ ಮಾಡುವುದು, ದಲಿತರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿ ಸಂವಿಧಾನದ ಆಶಯದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ಮಾತ್ರವೇ ಎಸ್ ಸಿ ಎಸ್ ಪಿ / ಟಿಎಸ್ಪಿ ಕಾಯ್ದೆಯ ಮೀಸಲು ಹಣವನ್ನು ಬಳಸಬೇಕೆಂದು ಒತ್ತಾಯಿಸುತ್ತಿರುವ ನಮಗೆ ದನಿಯಾಗುವ ಸಲುವಾಗಿ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮೌನ ಮುರಿದು ಸಮುದಾಯಗಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಮುಂದಾಗಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯು ಇತರೆ ಪ್ರಗತಿಪರ ಚಳವಳಿಗಳ ಜೊತೆಗೂಡಿ ದಿನಾಂಕ ೨೯ – ೦8- ೨೦೨೩ ರ ಮಂಗಳವಾರ ಬೆಳಗ್ಗೆ ೧೧- ಗಂಟೆಗೆ ಮೈಸೂರು ಪುರಭವನದಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿರುವುದರಿಂದ ದಸಂಸ ಕಾರ್ಯಕರ್ತರು , ವಿದ್ಯಾರ್ಥಿಗಳು, ಪ್ರಗತಿಪರು, ಚಿಂತಕರು, ಸಾಹಿತಿಗಳು, ರೈತಪರ ಸಂಘಟನೆಗಳು, ಮಹಿಳಾ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಭಾಗವಹಿಸಬೇಕೆಂದು ದಸಂಸವು ಈ ಮೂಲಕ ಮನವಿ ಮಾಡುತ್ತದೆ.
ಹಕ್ಕೊತ್ತಾಯಗಳು :
೧. ಎಸ್ ಸಿ ಎಸ್ ಪಿ/ ಟಿಎಸ್ಪಿ ಕಾಯ್ದೆಗೆ ಅವಶ್ಯಕವಾಗಿ ಅಳವಡಿಸಿರುವ ಸೆಕ್ಷನ್ ೭ ಡಿ ಯನ್ನು ಈ ಕೂಡಲೇ ರದ್ದುಗೊಳಿಸಬೇಕು.
೨. ಪರಿಶಿಷ್ಟರಲ್ಲದವರು ಫಲಾನುಭವಿಘಾಲಗುವ ಯಾವುದೇ ಯೋಜನೆಗಳಿಗೆ ಎಸ್ ಸಿ ಎಸ್ ಪಿ/ ಟಿಎಸ್ಪಿ ಹಣವನ್ನು ಬಳಸಬಾರದು
೩. ಎಸ್ ಸಿ ಎಸ್ ಪಿ/ಟಿಎಸ್ಪಿ ಕಾಯ್ದೆಗೆ ವಿರುದ್ಧವಾಗಿ ಮೀಸಲು ಹಣ ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು
೪. ಮೀಸಲು ಹಣ ದುರುಪಯೋಗಪಡಿಸಿಕೊಳ್ಳಲು ಶಿಫಾರಸ್ಸು ಮಾಡುವ ಜನಪ್ರತಿನಿಧಿಗಳ ಸದಸ್ಯತ್ವವನ್ನು ರದ್ದುಗೊಳಿಸಬೇಕು
ಮೈಸೂರು ಜಿಲ್ಲಾ ಸಮಿತಿ:
ಚೋರನಹಳ್ಳಿ ಶಿವಣ್ಣ, ಕೆ.ವಿ. ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕನಪುರ.
ಮೈಸೂರು ಜಿಲ್ಲಾ ಕಾರ್ಯಕಾರಿಣಿ ಸಮಿತಿ:
ಚಾ. ಶಿವಕುಮಾರ್, ಆಲಗೂಡು ಚಂದ್ರಶೇಖರ್, ಸಣ್ಣಯ್ಯ ಲಕ್ಕೂರು.
ಮೈಸೂರು ತಾಲ್ಲೂಕು ಸಮಿತಿ:
ಸಂತೋಷ್ ತಳೂರು, ಅರಸನಕೆರೆ ಶಿವರಾಜ್, ಸಣ್ಣಮಾಧು ಭುಗತಗಳ್ಳಿ, ದೇವರಾಜು ಚಿಕ್ಕಹಳ್ಳಿ, ಬೊಮ್ಮೇನಹಳ್ಳಿ ಮಹದೇವ್, ಪ್ರಸನ್ನ ಹಂಚ್ಯಾ,
ಮೈಸೂರು ನಗರ ಸಮಿತಿ:
ಸೋಮನಾಯಕ, ಚಿಕ್ಕಲಿಂಗಯ್ಯ, ವರುಣಾ ಮಹೇಶ್, ಪುಟ್ಟಣ್ಣ ಹನುಮನಪುರ, ಸಿದ್ಧರಾಜು ಅರವಿಂದ ನಗರ
ನಂಜನಗೂಡು ತಾಲೂಕು ಸಮಿತಿ:
ಪ್ರಭುಸ್ವಾಮಿ ಹಗಿನವಾಳು, ರವಿಕುಮಾರ್ ಏಚಗಳ್ಳಿ, ರಾಚಯ್ಯ ಶಂಕರಪುರ, ಮಾದೇಶ್ ಗೊದ್ದೇನಪುರ, ದೊರೆಸ್ವಾಮಿ ಶಂಕರಪುರ, ಪ್ರಕಾಶ್ ಹೆಗ್ಗಡಹಳ್ಳಿ, ಬಸವರಾಜು ಹೆಗ್ಗಡಹಳ್ಳಿ, ನಾರಾಯಣ ಹರತಲೆ, ಪ್ರತಾಪ್ ಉಸ್ಕೂರು, ಸಿದ್ಧಣ್ಣ ಕಪ್ಪಸೋಗೆ, ಸೋಮನಾಯಕ.
ಹುಣಸೂರು ತಾಲೂಕು ಸಮಿತಿ:
ವಿವೇಕಾನಂದ ಉದ್ದೂರು, ದೇವರಾಜು ಬಿಳಿಕೆರೆ, ಮಹೇಶ ಪಾಲ, ಮಹೇಶ ಹೆಬ್ಬಾಳ, ಹರೀಶ ಬೀಜಗನಹಳ್ಳಿ, ಚಿಕ್ಕಾಡನಹಳ್ಳಿ ನಾರಾಯಣ, ರಾಚಯ್ಯ ಚಿಕ್ಕಬೀಚನಹಳ್ಳಿ, ಹೊನ್ನೇನಹಳ್ಳಿ ಕಾಳಯ್ಯ.
ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕು ಸಮಿತಿ:
ಕುಮಾರ್ ಚಂಗೌಡನಹಳ್ಳಿ, ಸೋಮಣ್ಣ ಕೋಟೆ, ಮಹದೇವಸ್ವಾಮಿ ಹಾದನೂರು, ರವಿ ಹಾದನೂರು, ಮಾಲಗಯ್ಯ ಕೆ.ಜಿ.ಹಳ್ಳಿ, ರವಿ, ಕೆ.ಜಿ.ಹಳ್ಳಿ, ನಯಾಮುಲ್ಲಾ, ಜಾವಿದ್ ಪಾಷಾ, ಅಮ್ಜಾನ್, ಸತ್ತರ್ ಪಾಷಾ, ಆನಂದ್ ಕಟ್ಟೆಮನುಗನಹಳ್ಳಿ, ಹರೀಶ್ ಕಟ್ಟೆಮನುಗನಹಳ್ಳಿ, ಜವರ ಕಟ್ಟೇಮನುಗನಹಳ್ಳಿ, ಸುರೇಶ ಕುರ್ಣೆಗಾಲ, ಕೃಷ್ಣ ಕುರ್ಣೆಗಾಲ, ಸಿದ್ಧಯ್ಯ ಕುರ್ಣೆಗಾಲ, ಸ್ವಾಮಿ ಮಚ್ಚರೆ (ಜಿಹಾರ), ಸುಂದರೇಶ ಮಚ್ಚರೆ (ಜಿಹಾರ),
ಟಿ. ನರಸೀಪುರ ತಾಲೂಕು ಸಮಿತಿ:
ಕೆಂಪಯಯ್ನಹುAಡಿ ರಾಜು, ಮರಿಸ್ವಾಮಿ ಕನ್ನಾಯಕನಹಳ್ಳಿ, ಮನೋಜ್ ಕುಮಾರ್ ನೆರಗ್ಯಾತನಹಳ್ಳಿ, ದಿನೇಶ್ ಹುನಗನಹಳ್ಳಿ, ರಂಗಸಮುದ್ರ ಪುಟ್ಟರಾಜು.
ನಮ್ಮೊಂದಿಗೆ:
ಆರ್. ಮಹದೇವಪ್ಪ, ಹಾರೋಹಳ್ಳಿ ರವೀಂದ್ರ, ಡಾ. ಚನ್ನಕೇಶವಮೂರ್ತಿ, ರಫತ್ ಖಾನ್ (ಎಸ್.ಡಿ.ಪಿ.ಐ), ಪ್ರದೀಪ್ ಮುಮ್ಮುಡಿ, ತಗಡೂರು ಲಿಂಗಯ್ಯ, ಬ್ಯಾಂಕ್ ಶಿವಣ್ಣ, ಅಣ್ಣಯ್ಯ ಅಶೋಕಪುರಂ, ಮಂಜುನಾಥ್ ಗೋಕುಲಂ, ಕಂದೇಗಾಲ ಶಿವಣ್ಣ, ಕಂದೇಗಾಲ ಶ್ರೀನಿವಾಸ್, ಚೆಲುವರಾಜ್ ಮಾದಹಳ್ಳಿ, ದೊಡ್ಡ ತಿಮ್ಮಯ್ಯ, ಮುರುಡಗಳ್ಳಿ ಮಹದೇವ, ಹಂಚ್ಯಾ ಚೆನ್ನಪ್ಪ, ಕಲ್ಲಹಳ್ಳಿ ಮೂರ್ತಿ, ಲೋಕೇಶ್ ಕೂರ್ಗಳ್ಳಿ, ಸತೀಶ್ ಪಡುವಾರಹಳ್ಳಿ, ಭುಗತಗಳ್ಳಿ ಮಹದೇವು, ಭುಗತಗಳ್ಳಿ ಯಶವಂತಕುಮಾರ್, ಮಹೇಶ್ ಲಕ್ಷೀಪುರ, ಜುವರಪ್ಪ ಗಾಂಧೀನಗರ, ಪ್ರದೀಪ್ ಸಿದ್ಧಾರ್ಥ ನಗರ, ಸಿದ್ಧರಾಜು ನಂದಿನಿ ಬಡಾವಣೆ, ಬಸವರಾಜು ಕಲ್ಯಾಣಗಿರಿ ನಗರ, ಚೋರನಹಳ್ಳಿ ಕಾರ್ತಿಕ್ ಕುಮಾರ್, ರಾಘವೇಂದ್ರ, ಗಣೇಶ್, ಶ್ರೀಧರ್ ದೇವೂರು, ನಂದೀಶ್ ಗೊದ್ದನಪುರ, ಮರಿಸ್ವಾಮಿ ಕೆಂಪನಪುರ, ಮಲ್ಲೇಶ್ ಯಡಕೋಳ, ಸತೀಶ್ ಕುಪ್ಪೇಗಾಲ, ಏಕಲವ್ಯ ನಗರ: ಮುರಳಿ ಮೋಹನ, ಲಿಂಗರಾಜು, ರವಿ, ವಿಷ್ಣು ಸಂತೋಷ್, ಮಂಜುನಾಥ್, ಕಾಂತ, ಲಕ್ಷಮ್ಮ, ಎಂ. ಭಾಗ್ಯ, ಸಂಗೀತಮ್ಮ, ನೀಲಮ್ಮ, ಚಿಕ್ಕಹಳ್ಳಿ ಶಿವರಾಜ್, ಯಡದೊರೆ ಶಿವಮಲ್ಲಯ್ಯ, ಮಾಯಪ್ಪ ಅವಿನಾಶ್ ಆಲನಹಳ್ಳಿ, ಸುನೀಲ್ ಬನ್ನೂರು, ಕೆಂಪಯ್ಯನಹುAಡಿ ರಾಮಯ್ಯ, ಬಸವರಾಜ್ ಆದಿಬೆಟ್ಟಹಳ್ಳಿ, ಹರೀಫ್, ಚಿಕ್ಕರಸನಾಯಕ, ಸಿದ್ಧಾರ್ಥನಗರ ಬಾಬು, ಜಾನಕಮ್ಮ, ಜಯಮ್ಮ, ವನಿತಾ ಕುಮಾರಿ, ರಾಮಚಂದ್ರ, ರಮೇಶ್ ಗಾಂಧಿನಗರ.
ವ್ಯವಸ್ಥೆ
ದಲಿತ ಸಂಘರ್ಷ ಸಮಿತಿ: ಮೈಸೂರು.