ಗೆ,
ಮಾನ್ಯ ಸಿದ್ದರಾಮಯ್ಯನವರು
ಮುಖ್ಯಮಂತ್ರಿಗಳು
ಕರ್ನಾಟಕ
ದಿನಾಂಕ : 27 ಅಕ್ಟೊಬರ್ , 2023
ವಿಷಯ : ಕರ್ನಾಟಕದ ಜನರ ವಾಕ್ ಸ್ವಾತಂತ್ರ್ಯ ಹಾಗು ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ರಕ್ಷಿಸುವ ಬಗ್ಗೆ.
ಮಾನ್ಯರೇ ,
ಪ್ಯಾಲೆಸ್ಟೈನ್ ನಲ್ಲಿ ನಡೆಯುತ್ತಿರುವ ನರಮೇಧ ವಿರೋಧಿಸಿ, ಪ್ಯಾಲೆಸ್ಟೈನ್ ಜನರಿಗೆ ನ್ಯಾಯ ಒದಗಿಸುವಂತೆ ಹಾಗು ಇಸ್ರೇಲ್ -ಪ್ಯಾಲೆಸ್ಟೈನ್ ಭಾಗದಲ್ಲಿ ಶಾಂತಿಗಾಗಿ ಒತ್ತಾಯಿಸಲು ಕರ್ನಾಟಕದ ಹಲವು ಕಡೆ ಜನ ಕೈಗೊಳ್ಳುತ್ತಿರುವ/ ಕೈಗೊಳ್ಳಲಿರುವ ಪ್ರತಿಭಟನೆಗಳನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿರುವುದನ್ನು ಖಂಡಿಸಿ ‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ವತಿಯಿಂದ ಈ ಪತ್ರ ಬರೆಯುತ್ತಿದ್ದೇವೆ. ಪೊಲೀಸ್ ಇಲಾಖೆ ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸುವುದಲ್ಲದೆ , ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರವವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿದೆ.
ಇಸ್ರೇಲ್ ನವರು ಜನಸಾಮಾನ್ಯರ ಮೇಲೆ ಬಾಂಬ್ ದಾಳಿ ಮುಂದುವರಿಸುತ್ತಿರುವುದು, ಪ್ಯಾಲೆಸ್ಟೈನ್ ಜನರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ಹಾಗು ಗಾಜಾ ದಲ್ಲಿ ಆಗುತ್ತಿರುವ ತೀವ್ರ ಬಿಕ್ಕಟ್ಟಿನ ಬಗ್ಗೆ ತಮಗೆ ತಿಳಿದೇ ಇದೆ. ಜಗತ್ತಿನಾದ್ಯಂತ ಯುದ್ಧ ತಕ್ಷಣ ನಿಲ್ಲಿಸಬೇಕು, ಪ್ಯಾಲೆಸ್ಟೈನ್ ಜನರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತಾ ಜನರು ಪ್ರತಿಭಟಿಸುತ್ತಿದ್ದಾರೆ.
ಅಲ್-ಅಲ್ಹಿ ಆಸ್ಪತ್ರೆ, ಶಾಲೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸಹ ಬಾಂಬ್ ದಾಳಿಗೆ ಒಳಗಾಗಿವೆ . UN OCH, ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಮತ್ತು UNICEF ನ ಮಾಹಿತಿ ಪ್ರಕಾರ 2,360 ಮಕ್ಕಳನ್ನು ಒಳಗೊಂಡಂತೆ 5,791 ಪ್ಯಾಲೆಸ್ಟೈನ್ ಜನರು ಸಾವನ್ನಪಿದ್ದಾರೆ . (ಇದು ಶವಗಳು ಸಿಕ್ಕಿ ಗುರುತಿಸಲ್ಪಟ್ಟ ಜನರ ಸಂಖ್ಯೆ ಮಾತ್ರ, ಇನ್ನು ಹಲವಾರು ಬಾಂಬ್ ದಾಳಿಗೆ ಒಳಗಾದ ಬಿಲ್ಡಿಂಗ್ ಗಳ ಕೆಳಗೆ ಸಾವನ್ನಪ್ಪಿದ್ದಾರೆ ಹಾಗು ಅವರ ಶವ ಸಹ ಸಿಕ್ಕಿಲ್ಲ) . ಜೊತೆಗೆ ಇಸ್ರೇಲ್ ನ ಉದ್ದೇಶಿತ ದಾಳಿಗಳು ಹಲವಾರು ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಶಿಕ್ಷಕರನ್ನು ಕೊಂದಿವೆ.
ಪ್ಯಾಲೆಸ್ಟೈನ್ ನಲ್ಲಿ ನರಮೇಧ ನಡೆಯುತ್ತಿರಬೇಕಿದ್ದರೆ, ಅದನ್ನು ವಿರೋಧಿಸಿ ಅಲ್ಲಿನ ಜನರಿಗೆ ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ.
ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಕಳೆದ ವಾರ ಸಹ ಎಡ ಪಕ್ಷಗಳು ಈ ವಿಷಯವಾಗಿ ಪ್ರತಿಭಟನೆ ಆಯೋಜಿಸಲು ಹೊರಟಾಗ, ಪೋಲಿಸಿನವರು ಅನುಮತಿ ನಿರಾಕರಿಸಿದರು. ಪೋಲೀಸಿನವರ ಈ ನಡೆ ಬಗ್ಗೆ ಅಕ್ಟೊಬರ್ 20 ರಂದು ತಮ್ಮ ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿಯಾಗಿ ಇದರ ಬಗ್ಗೆ ತಿಳಿಸಿದೆವು. ಇದಾದ ಮೇಲೂ ಸಹ ಪೋಲಿಸಿನವರು ಪ್ರತಿಭಟನೆಗೆ ಅನುಮತಿ ನಿರಾಕರಿಸುತ್ತಿದ್ದಾರೆ.
ನೆನ್ನೆಯ ದಿವಸ ( 26 ಅಕ್ಟೊಬರ್) ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯವರು, 28 ಅಕ್ಟೊಬರ್ ರಂದು ನಡೆಯಬೇಕಿದ್ದ ಸಾರ್ವಜನಿಕ ಸಭೆಗೆ,
“ತಾವು ಮನವಿ ಪತ್ರದಲ್ಲಿ ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸಲು ಅನುಮತಿ ಕೋರಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ ೨೮/೧೦/೨೦೨೩ ರಂದು ನೀವು ಹಮ್ಮಿಕೊಂಡಿರುವ ಪ್ರತಿಭಟನೆಗೆ ಅನುಮತಿ ನಿರಾಕರಿಸಬೇಕೆಂದು ವರದಿ ಸಲ್ಲಿಸಿರುತ್ತಾರೆ. ಆದ್ದರಿಂದ ನೀವು ಹಮ್ಮಿಕೊಂಡಿರುವ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಲಾಗಿದೆ” ಅಂತ ಹೇಳಿ ಅನುಮತಿ ನಿರಾಕರಿಸಿದ್ದಾರೆ.
ವಾಕ್ ಸ್ವಾತಂತ್ರ್ಯ ದ ಹಕ್ಕು ಕೇವಲ ನಮ್ಮ ದೇಶದ ವಿಷಯಗಳ ಬಗ್ಗೆ ಚಲಾಯಿಸಬೇಕು ಎನ್ನುವುದು ಸರಿಯಲ್ಲ. ಅಲ್ಲದೆ ನಮ್ಮ ಶಾಂತಿಯುತ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಯಾವ ರೀತಿ ಧಕ್ಕೆ ಆಗುತ್ತದೆ ಎಂದು ಹೇಳಲು ಯಾವುದೇ ಆಧಾರವಿಲ್ಲ.
ಪೋಲಿಸಿನವರು ಅನುಮತಿ ನಿರಾಕರಿಸುವುದಲ್ಲದೆ ಬೆಂಗಳೂರು, ತುಮಕೂರು ಹಾಗು ಮೈಸೂರಿನಲ್ಲಿ ಯುದ್ಧ ನಿಲ್ಲಬೇಕೆಂದು ಒತ್ತಾಯಿಸಿ, ಪ್ಯಾಲೆಸ್ಟೈನ್ ನ ಪರ ಹೋರಾಟ ಮಾಡುತ್ತಿರುವವರನ್ನು ಬಂಧಿಸಿದ್ದಾರೆ, ಪ್ರಕರಣಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನಲ್ಲೇ ಎರಡು ಎಫ್.ಐ.ಆರ್ ದಾಖಲಾಗಿದೆ, ಒಂದು ಎಂ.ಜಿ ರಸ್ತೆಯಲ್ಲಿ, ಮತ್ತೊಂದು ತಿಲಕನಗರದಲ್ಲಿ. ಈ ಎರಡು ಎಫ್.ಐ.ಆರ್ ದಾಖಲಾಗಿರುವುದು, ಪ್ರತಿಭಟನಾಕಾರರು ಫ್ರೀಡಂ ಪಾರ್ಕ್ ಬಿಟ್ಟು ಬೇರೆ ಕಡೆ ಪ್ರತಿಭಟನೆ ಮಾಡಿದಕ್ಕಾಗಿ. ಆದರೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟಿಸಲು ಸಹ ಅನುಮತಿ ನೀಡುತ್ತಿಲ್ಲ. ಹೊಸಪೇಟೆಯಲ್ಲಿ ಪ್ಯಾಲೆಸ್ಟೈನ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ವ್ಯಕ್ತಿಯೊಬ್ಬರನ್ನು ಪೊಲೀಸ್ ಬಂಧಿಸಿದ್ದರು !
ಕರ್ನಾಟಕ ರಾಜ್ಯ ಸರ್ಕಾರದ ಇಂತಹ ಕ್ರಮಗಳು ನಾಗರಿಕರ ಪ್ರತಿಭಟನೆಯ ಮೂಲಭೂತ ಹಕ್ಕುಗಳ ಮೇಲಿನ ದಾಳಿ ಮಾತ್ರವಲ್ಲ, ಇಸ್ರೇಲ್ ಸರ್ಕಾರ ನಡೆಸುತ್ತಿರುವ ನರಮೇಧದ ಬಗ್ಗೆ ಕ್ರೂರ ಉದಾಸೀನತೆಯನ್ನು ಪ್ರದರ್ಶಿಸುತ್ತದೆ. ಇದು ಪೊಲೀಸ್ ಇಲಾಖೆಯ ಅಧಿಕಾರದ ಅನೈತಿಕ ದುರುಪಯೋಗ ಸಹ.
ಪ್ಯಾಲೆಸ್ಟೈನ್ ಪರ ಭಾರತದ ಐತಿಹಾಸಿಕ ನೆರವು
ಐತಿಹಾಸಿಕವಾಗಿ, ಭಾರತವು ಯಾವಾಗಲೂ ಪ್ಯಾಲೆಸ್ಟೈನ್ ಜನರೊಂದಿಗೆ ನಿಂತಿದೆ ಮತ್ತು ಅವರಿಗೆ ನ್ಯಾಯ ದೊರೆಯುವಂತೆ ಒತ್ತಾಯಿಸಿದೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಮನಮೋಹನ್ ಸಿಂಗ್ ರಿಂದ ನರೇಂದ್ರ ಮೋದಿಯವರನ್ನು ಸೇರಿ ನಮ್ಮ ನಾಯಕರು ಮತ್ತು ಪ್ರಧಾನ ಮಂತ್ರಿಗಳು ಯಾವಾಗಲೂ ಪ್ಯಾಲೆಸ್ಟೈನ್ ಜನರ ಹಕ್ಕುಗಳ ಪರವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸುತ್ತಿನ ಹಿಂಸಾಚಾರ ಭುಗಿಲೆದ್ದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡ ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿ ಮಾತನಾಡಿದೆ. (ಅನುಬಂಧ 2 ರಲ್ಲಿ ವಿವರಗಳು)
ಅಕ್ಟೋಬರ್ 12, 2023 ರಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯವು “ಸಾರ್ವಭೌಮ, ಸ್ವತಂತ್ರ” ಪ್ಯಾಲೆಸ್ಟೈನ್ ರಾಷ್ಟ್ರದ ಸ್ಥಾಪನೆಯನ್ನು ಭಾರತವು ಹಿಂದೆಯೂ ಬೆಂಬಲಸಿದಂತೆ ಈಗಲೂ ಬೆಂಬಲಿಸುತ್ತದೆ ಎಂದು ಹೇಳಿಕೆಯನ್ನು ನೀಡಿತು.
ದಶಕಗಳಿಂದ ಹಲವಾರು ಜಾಗತಿಕ ಶಕ್ತಿಗಳ ಬೆಂಬಲದೊಂದಿಗೆ ಇಸ್ರೇಲಿ ಸರ್ಕಾರವು ಮಾಡಿದ ದಿಗ್ಬಂಧನಗಳು ಮತ್ತು ಯುದ್ಧಾಪರಾಧಗಳ ನಡುವೆಯೂ, ಭಾರತವು ಪ್ಯಾಲೆಸ್ತೀನ್ ಜನರು ಮತ್ತು ಅವರ ಹಕ್ಕುಗಳೊಂದಿಗೆ ಸತತವಾಗಿ ನಿಂತಿದೆ ಮತ್ತು ಪ್ಯಾಲೆಸ್ಟೈನ್ ನ ಜನರನ್ನು ಬಲವಂತವಾಗಿ ಸ್ಥಳಾಂತರಿಸಲು ಮತ್ತು ಕೊಲ್ಲಲು ಇಸ್ರೇಲಿ ಸರ್ಕಾರದ ಅನೈತಿಕ ಮತ್ತು ಕಾನೂನುಬಾಹಿರ ಕ್ರಮಗಳನ್ನು ವಿರೋಧಿಸಿದೆ.
ಪ್ಯಾಲೆಸ್ಟೈನ್ ಜನರ ಬಲವಂತದ ಸ್ಥಳಾಂತರ ಮತ್ತು ಹತ್ಯೆಗಳು
ಅಕ್ಟೋಬರ್ 7, 2023 ರ ನಂತರದ ಹಿಂಸಾಚಾರ ಸಾವಿರಾರು ನಾಗರಿಕರನ್ನು ಬಲಿ ಪಡೆದಿದೆ. ಇಸ್ರೇಲಿ ಸರ್ಕಾರವು 12,000 ಟನ್ ಸ್ಫೋಟಕಗಳನ್ನು ಗಾಜಾ ಮೇಲೆ ಸುರಿದಿದೆ( ವಿಶ್ವ ಸಮರ 2ರ ಸಮಯದಲ್ಲಿ ಹಿರೋಷಿಮಾದಲ್ಲಿ ಬೀಳಿಸಿದ ಬಾಂಬ್‌ಗಳಿಗೆ ಸಮಾನವಾಗಿದೆ). ಮಾನವೀಯ ನೆರವು ಸಾಗಿಸುವ ಬಹಳಷ್ಟು ವಾಹನಗಳನ್ನು ಗಾಜಾಕ್ಕೆ ಪ್ರವೇಶಿಸಿದಂತೆ ನಿಷೇಧಿಸಿದೆ. ಗಾಜಾದಲ್ಲಿರುವ 2.2 ಮಿಲಿಯನ್ ಪ್ಯಾಲೆಸ್ಟೈನ್ ಜನರಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಅಕ್ಟೋಬರ್ 23, 2023 ರಂದು, ಒಂದೇ ದಿವಸದಲ್ಲಿ ವೈಮಾನಿಕ ದಾಳಿಯಲ್ಲಿ 704 ಪ್ಯಾಲೆಸ್ಟೈನ್ ನಿವಾಸಿಗಳು ಸಾವನ್ನಪ್ಪಿದರು . ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಮೂಲಭೂತ ನಿಯಮಗಳನ್ನು ರೂಪಿಸುವ ನಾಲ್ಕನೇ ಜಿನೀವಾ ಒಪ್ಪಂದದ ಅಸಂಖ್ಯಾತ ಉಲ್ಲಂಘನೆಗಳಾಗಿವೆ.
ಹಿಂಸಾಚಾರದ ತೀವ್ರತೆಯ್ನನು ಪರಿಗಣಿಸಿ, ವಿಶ್ವಸಂಸ್ಥೆಯು ಸಹ ನಾವು ಹಿಂತಿರುಗದ ಹಂತವನ್ನು ತಲುಪುವ ಮೊದಲು ಅಂತರರಾಷ್ಟ್ರೀಯ ಸಮುದಾಯವು ತುರ್ತಾಗಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಬೇಕು ಎಂದು ಹೇಳಿದೆ. ಹಮಾಸ್ ದಾಳಿಗಳು ಪ್ಯಾಲೆಸ್ಟೈನ್ ಜನರ ದಶಕಗಳ ಸ್ಥಳಾಂತರ ಮತ್ತು ಅವರ ವಿರುದ್ಧ ನಡೆದಿರುವ ಹಿಂಸಾಚಾರದ ಸನ್ನಿವೇಶದಲ್ಲಿ ಆಗಿವೆ ಎಂದು ಯುಎನ್ ಸೆಕ್ರೆಟರಿ ಜನರಲ್ ಭದ್ರತಾ ಮಂಡಳಿಗ (ಸೆಕ್ಯೂರಿಟಿ ಕೌನ್ಸಿಲ್)ಗೆ ತಿಳಿಸಿದ್ದಾರೆ. ಶಾಂತಿಯನ್ನು ಮರುಸ್ಥಾಪಿಸಲು, ಮಾತುಕಥೆ ಪ್ರಾರಂಭಿಸಲು ಮತ್ತು ಪ್ಯಾಲೇಸ್ಟಿನಿಯನ್ ಜನರ ಹಕ್ಕುಗಳನ್ನು ಎತ್ತಿಹಿಡಿಯಲು ಯುಎನ್ ನ ತಕ್ಷಣದ ಮಧ್ಯಸ್ಥಿಕೆಗೆ ಅವರು ಕರೆ ನೀಡಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಹ ನಡೆಯುತ್ತಿರುವ ಕಲಹದ ಸಂದರ್ಭದಲ್ಲಿ ನಾಗರಿಕ ಸಾವುನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ಹಕ್ಕಿನ ಮೇಲೆ ನಿರ್ಬಂಧ:
‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರಿನ’ ಸದಸ್ಯರಾದ ನಾವು, ನಮ್ಮ ಅನುಮತಿಯ ಅರ್ಜಿಯನ್ನು ನಿರಾಕರಿಸಲು ಪೋಲಿಸಿನವರು ಒದಗಿಸರುವ ಕಾರಣಗಳು ಆಧಾರ ರಹಿತವಾಗಿವೆ, ಹಾಗು ಅನುಮತಿ ನಿರಾಕರಿಸಲು ಅವರು ನೀಡಿರುವ ಕಾರಣಗಳು ಸೂಕ್ತವಲ್ಲ ಮತ್ತು ಕ್ಷುಲ್ಲಕವಾಗಿವೆ. ಕಾಂಗ್ರೆಸ್ ಪಕ್ಷ, ಕೇಂದ್ರ ಸರ್ಕಾರ ಪ್ಯಾಲೆಸ್ಟೈನ್ ಜನರ ಪರವಿರುವಾಗ ರಾಜ್ಯ ಸರ್ಕಾರ ಪ್ಯಾಲೆಸ್ಟೈನ್ ಪರ ಧ್ವನಿಗಳನ್ನು ಹತ್ತಿಕ್ಕುತ್ತಿರುವುದು ಖಂಡನೀಯ .
ಆಗ್ರಾ, ಪೂಣೆ, ಮುಂಬೈ, ಹೈದರಾಬಾದ್, ಕೋಳಿಕೋಡ್, ಕೊಯಂಬತ್ತೂರ್ ಮುಂತಾದ ಕಡೆ ಸಾವಿರಾರು ಜನ ಸೇರಿ ಪ್ರಟಿಭಟನೆಗಳನ್ನು ಕೈಗೊಂಡಿದ್ದಾರೆ. ಆ ರಾಜ್ಯಗಳಲ್ಲಿ ಅನುಮತಿ ನೀಡುತ್ತಿರಬೇಕಾದರೆ, ನಮ್ಮ ರಾಜ್ಯ ಏಕೆ ನೀಡುತ್ತಿಲ್ಲ ? ಪ್ಯಾಲೆಸ್ಟೈನ್ ಪರ ಹೋರಾಟಗಳನ್ನು ಹತ್ತಿಕುತ್ತಿರುವುದು ಏಕೆ? ಇಸ್ರೇಲ್, ಪ್ಯಾಲೆಸ್ಟೈನ್ ಜನರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ವಿರುದ್ಧ ಹೋರಾಡುತ್ತಿರುವವರ ಮೇಲೆ ಎಫ್.ಐ.ಆರ್ ಏಕೆ?
ಹಾಗಾಗಿ ನಾವು ಒತ್ತಾಯಿಸುವುದೇನೆಂದರೆ
- ಪೊಲೀಸರು ನಮ್ಮ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಸಭೆ ಸೇರುವ ಹಕ್ಕನ್ನು ನಿರಾಕರಿಸದ ಹಾಗೆ ಖಚಿತಪಡಿಸಿ ಮತ್ತು ಪ್ರತಿಭಟನೆಗೆ ಅನುಮತಿ ನೀಡುವಂತೆ ಆದೇಶಿಸಬೇಕು.
- ಪ್ರತಿಭಟಿಸುವ ಮೂಲಭೂತ ಹಕ್ಕನ್ನು ಚಲಾಯಿಸಿದ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು.
- ಪ್ಯಾಲೆಸ್ಟೈನ್ ಪರವಾಗಿ ಒಗ್ಗಟ್ಟಿನಿಂದ ಶಾಂತಿಯುತವಾಗಿ ಪ್ರತಿಭಟಿಸಿದ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್‌ಗಳನ್ನು ಏಕೆ ದಾಖಲಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕು.
ಇಂತಿ,
ತಮ್ಮ ವಿಶ್ವಾಸಿಗಳಾದ
ಮೈತ್ರೇಯಿ ಕೆ – ಎ ಐ ಸಿ ಸಿ ಟಿ ಯು (All India Central Council for Trade Unions)
ಗುಲಾಬ್ ಪಾಷಾ – ಸ್ವರಾಜ್ ಇಂಡಿಯಾ
ಐಶ್ವರ್ಯ ರವಿಕುಮಾರ್ – ಪಿ.ಯು.ಸಿ.ಎಲ್ (ಬೆಂಗಳೂರು )
ನರಸಿಂಹ ಮೂರ್ತಿ ಟಿ – ಮಾನವ ಹಕ್ಕು ಹೋರಾಟಗಾರರು
ಸಯ್ಯದ್ ತೌಸಿಫ್ ಮಸೂದ್ – ಸಾಮಾಜಿಕ ಕಾರ್ಯಕರ್ತರು
ನಿಷ್ಕಲ , ಸಿ ಎಸ ಎಂ ಆರ್ ( Coalition for Sexual Minorities and Sex Workers Rights)
‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಪರವಾಗಿ
Annexure 1
India’s historical support to Palestine
Jawaharlal Nehru stated, “Palestine is essentially an Arab country and must remain so” and “the right of the Jews for a homeland should not come at the expense of a homeland of the Arab population of Palestine.”
Mahatma Gandhi wrote, “It is wrong and inhuman to impose the Jews on the Arabs. What is going on in Palestine today, cannot be justified by any moral code of conduct.”
On October 8, 2008, during a visit of Palestinian leaders to India, the then Prime Minister Manmohan Singh reaffirmed India’s commitment to the cause of Palestine, and will the solutions entails a sovereign, independent, viable and united State of Palestine.
Just two days later, a joint statement with Indian and Palestinian leaders said, “India also called for an end to the expansion of Israeli settlements in occupied Palestine and for an early and significant easing of restrictions on the free movement of persons and goods within Palestine.”
After the violence erupted in the region this year, on October 9, 2023 the Congress Working Committee passed a resolution calling for an “immediate cease-fire” and said it has a long-standing support “for the rights of the Palestinian people to land, self-government and to live with dignity and respect.”
…………………….
Pic Credit : Aljazeera
Wael Dahdouh, mourns over the body of his seven-year-old daughter [Majdi Fathi/AFP] The wife, son, daughter and grandson of Wael Dahdouh, Al Jazeera Arabic’s bureau chief in Gaza were killed in an Israeli air raid.