ಕಾಟೇರ: ಜೀವಪರತೆ, ಮನುಷ್ಯ ಘನತೆಯ ಪ್ರತೀಕ

ಕಾಟೇರ: ಜೀವಪರತೆ, ಮನುಷ್ಯ ಘನತೆಯ ಪ್ರತೀಕ

ಕೋಡಿಹಳ್ಳಿ ಸಂತೋಷ್

 

1)ಕಮ೯ಠ ಬ್ರಾಹ್ಮಣ್ಯಕ್ಕಿಂತ

ಲಿಬರಲ್ (ಉದಾರವಾದಿ)

ಬ್ರಾಹ್ಮಣ್ಯವೇ ಅಂತಿಮವಾಗಿ ಅಪಾಯಕಾರಿಯೇ?!

ಕಾಟೇರ ಸಿನಿಮಾದ ಕ್ಲೈಮಾಕ್ಸ್

ಧ್ವನಿಸುವುದು

ಈ ಅಂಶದ ತಿರುಳನ್ನೇ….?!

ಬನ್ನಿ ನೋಡೋಣ.

…………………….

2)ಪ್ರೇಕ್ಷಕರ ಕಣ್ಣಿಗೆ ಕಾಣಿಸದೆ,

ಕೋಣದ ಕಣ್ಣಿನ

ಅಕ್ಷಿಪಟಲದಲ್ಲಿ ಮಾತ್ರ ಸೆರೆಯಾಗುವ

ಬ್ರಾಹ್ಮಣ್ಯದ ಪ್ರತೀಕವಾದ

ಪದ್ದುವಿನ ಹತ್ಯೆಯ

ಕ್ಲೈಮಾಕ್ಸ್ ದೃಶ್ಯದ ಸುತ್ತ ಮಾಡಿರುವ

ಒಂದು ಸುತ್ತಿನ ವಿಶ್ಲೇಷಣೆ…… ಇಲ್ಲಿದೆ.

……………………………

* * * * * * * * * * * * >

ಕಾಟೇರ…. ಶೋಷಿತ ಸಮುದಾಯದ ಕಮ್ಮಾರನಾದರೇ

ಕಾಟೇರನ ಗೆಳತಿ ಪ್ರಭಾವತಿ ಶಾನುಭೋಗರ ಮನೆಯ ಹೆಣ್ಣುಮಗಳು.

ಓದಿಕೊಂಡವಳು,

ಶಾನುಭೋಗರ ಮಗಳಾದರೂ ಆಧುನಿಕ ಶಿಕ್ಷಣ ಪಡೆದ ಕಾರಣಕ್ಕೆ ಸಂಪ್ರದಾಯ ಕಟ್ಟುಪಾಡುಗಳಾಚೆಗೆ ಭಿನ್ನವಾಗಿ ಆಲೋಚಿಸುವವಳು.

ಆಕೆಯ ಬಾಲ್ಯದಲ್ಲೊಮ್ಮೆ ಘಟಿಸಿದ ರಸ್ತೆ ಅಪಘಾತದಲ್ಲಿ ಆಕಸ್ಮಿಕವಾಗಿ ಕಾಟೇರನ ದೇಹದ ರಕ್ತದಾನ ಪಡೆದು ಬದುಕುಳಿದವಳು.

ಹಾಗಾಗಿ ಅವಳಿಗೆ

ಎಳವೆಯಿಂದಲೂ ಕಾಟೇರನೆಡೆಗೆ ಸಹಜ ನಿವ್ಯಾ೯ಜ್ಯ ಪ್ರೀತಿ,

ತನ್ನ ಓದಿನಿಂದ ದತ್ತವಾದ ತಿಳುವಳಿಕೆಯ ಕಾರಣಕ್ಕೆ

ಗೇಣಿದಾರ ರೈತರ ಬವಣೆಗಳ ಬಗ್ಗೆ ಮಮಕಾರವುಳ್ಳವಳು..

ಈ ಮಧ್ಯೆ ಶಾನುಭೋಗರಿಗೆ ಒಂದು ಗಂಡು ಸಂತಾನವೂ ಇದ್ದು,

ಅವನು ನಾಯಕಿ ಪ್ರಭಾವತಿಯ ತಮ್ಮ.

ತಂದೆ ಶಾನುಭೋಗರು ಕಮ೯ಠ ಬ್ರಾಹ್ಮಣನಾದರೇ.

ತಮ್ಮ ಮಾತ್ರ ಲಿಬರಲ್ ಮನೋಧಮ೯ವುಳ್ಳವನು.

 

ಹೀಗಾಗಿ ಪ್ರಭಾವತಿ ತನ್ನ ಮದುವೆ ದಿಬ್ಬಣ ಸಾಗುತ್ತಿರುವಾಗಲೇ ತನ್ನವರನ್ನು ತೊರೆದು ಕಾಟೇರನ ಜೊತೆ ಹೊರಟು ನಿಂತಾಗ

ಆಕೆಯ ಕಮ೯ಠ ತಂದೆ ನಿಂತ ಗಳಿಗೆಯಲ್ಲಿಯೇ

ತಲೆಯ ಮೇಲೆ ಗಡಿಗೆ ನೀರು ಸುರಿದುಕೊ೦ಡು

ಮಗಳು ತನ್ನ ಪಾಲಿಗೆ ಇನ್ನು ಸತ್ತಳೆಂದು ಘೋಷಿಸಿ ತಪ೯ಣ ಬಿಟ್ಟು ಕಠೋರ ನಿಲುವನ್ನು ತಾಳುತ್ತಾರೆ.

ಆದರೆ ಶಾನುಭೋಗರ ಮಗ,ಪ್ರಭಾವತಿಯ ಅಣ್ಣ ಮಾತ್ರ ಕಾಟೇರನ ಹಟ್ಟಿಯ ತನಕ ಬಂದು ಹೋಗುವ

ತಾಯಿಕೊಟ್ಟ ತಿಂಡಿ-ತಿನಿಸುಗಳನ್ನು

ಕದ್ದು ಮುಚ್ಚಿ ಕಾಟೇರನ ಹಟ್ಟಿತನಕ ತಲುಪಿಸಿ ಬರುವ ಹೃದಯವಂತಿಕೆ ಉಳ್ಳವನು.

 

ಇಷ್ಟೆಲ್ಲ ಬೆಳವಣಿಗೆಗಳ ನಡುವೆ

ಶಾನುಭೋಗರ ಕುಟುಂಬದ ಕಾಟೇರ-ಪ್ರಭಾವತಿಯರ ಮದುವೆ ಕಾಯ೯ ಸೆಟ್ಟೇರಿದ ದಿನದ ರಾತ್ರಿಯಲ್ಲಿ

ಪ್ರಭಾವತಿ ನಿಗೂಢವಾಗಿ ಕೊಲೆಯಾಗುತ್ತಾಳೆ.

 

ಉತ್ತರದ ಕಡೆಯಿಂದ 108 ಜನ ಕಿರಾತಕರನ್ನ ಕರೆಸಿ ಗೇಣಿದಾರ ರೈತರನ್ನೆಲ್ಲ ಕೊಲ್ಲಿಸುವ ಹುನ್ನಾರ ಮಾಡಿದ್ದ ಭೀಮನಹಳ್ಳಿಯ ಭೂಮಾಲೀಕನೇ ಪ್ರಭಾವತಿ ಕೊಲೆಯನ್ನ ಮಾಡಿಸಿರಬಹುದೆಂದು ಕಾಟೇರನ ಸಮೇತ ಪ್ರೇಕ್ಷಕರೂ ನಂಬುತ್ತಾರೆ..

 

ಆದರೆ ಅಸಲೀ ಸತ್ಯವೇ ಬೇರೆಯಿರುತ್ತದೆ.

 

ಭೂ ಮಾಲೀಕ ಫ್ಯೂಡಲ್ ಗಳಿಗೆ ತಮ್ಮ ಭೂ ಸಂಪತ್ತು ಕೈಬಿಟ್ಟು ಹೋಗುವ-ಗೇಣಿದಾರರು ಸ್ವಾಯತ್ತರಾಗುವ,ಅದುವರೆಗೆ ಅವರ ತಲೆಗಳನ್ನ ಅಲಂಕರಿಸಿದ್ದ ಕೊಂಬು-ಕೀರೀಟಗಳು ಕಳಚಿ ಬೀಳುತ್ತವೆ, ಫ್ಯೂಡಲ್ ಗತ್ತು ಸತ್ತು ಮಲಗುತ್ತದೆ ಎಂಬ ಭವಿಷ್ಯ ಕುರಿತಾದ ಹತಾಶಭರಿತ ಆಕ್ರೋಶದ ತೀರುವಳಿಗಾಗಿ ಅವರು ನೇರವಾಗಿ ಕಾಟೇರನ ಮೇಲೆ ಹಾತೊರೆಯುತ್ತಿರುತ್ತಾರೆಯೇ ಹೊರತು

ಕಾಟೇರನ ಅಂತಜಾ೯ತಿ ವಿವಾಹದಿಂದ ಅವರು ತಕ್ಷಣಕ್ಕೆ ಕಳೆದುಕೊಳ್ಳುವುದು ಏನೂ ಇರುವುದಿಲ್ಲ.

 

ಆದರೆ ಕಮ೯ಠ ಬ್ರಾಹ್ಮಣರ ಮಗ ಲಿಬರಲ್ ನಂತೆ ಕಾಣುವ ಪ್ರಭಾವತಿಯ ತಮ್ಮ ಪದ್ದುವಿಗೆ ಈ ಅಂತಜಾ೯ತಿ ವಿವಾಹ ತನ್ನ ಅಸ್ತಿತ್ವಕ್ಕೆ ಎರಗಿದ ಬರಸಿಡಿಲಾಗಿರುತ್ತದೆ.

ಆದರೆ ತಂದೆಯಂತೆ ಸಿಟ್ಟು ಹೊರಹಾಕಿ ಸುಮ್ಮನಾಗದ ಪದ್ದು “ಬ್ರಾಹ್ಮಣ್ಯ”ದ ಗಾಢ ಮತ್ತು ಸಂಕೀಣ೯ ಸಂಚಿನ ಪ್ರತೀಕದಂತೆ ಕಂಡು ಬರುತ್ತಾನೆ…..

 

ಯಾರಿಗೂ ಗೊತ್ತಾಗದ ಹಾಗೆ ತನ್ನ ಅಕ್ಕನನ್ನು ನಂಬಿಸಿ ಊರಿಂದ ಹೊರಗೊಯ್ದು ಕೊಲೆ ಮಾಡುತ್ತಾನೆ.

ಕೊಲೆ ಮಾಡುವ ಮುನ್ನ

ಪದ್ದು ತನ್ನ ಅಕ್ಕನ ಎದುರು

ಆಕೆಯ ಕೊಲೆಗೆ ಸಮಥ೯ನೆಯಾಗಿ ಆಡುವ ಮಾತುಗಳು ಭಾರತೀಯ ಬ್ರಾಹ್ಮಣ್ಯದ ಪಾತಕದ ಮಜಲುಗಳ ಅಸಲೀತನವನ್ನು ಹೊರಹಾಕುತ್ತವೆ……

 

ಅಂದರೇ ಪ್ರೇಕ್ಷಕನ ಕಣ್ಣಿಗೆ ರಾಚುವ ಶಾನುಭೋಗರೊಳಗಿನ ಕಮ೯ಠ ಬ್ರಾಹ್ಮಣನೇ ಬೇರೆಯಾದರೇ

ಉದಾರವಾದಿ(ಲಿಬರಲ್) ಬ್ರಾಹ್ಮಣನಾ

ಪದ್ದುವಿನ ಆಳವಾದ ಸಂಚುಕೋರತನವೇ ಬೇರೆಯಾಗಿರುತ್ತದೆ.

……

ಇನ್ನು ಚಿತ್ರದ ಕ್ಲೈಮ್ಯಾಕ್ಸ್ ನತ್ತ ಹೊರಳೋಣ..

ಹೊಲಮಾರಿಯನ್ನ ತನ್ನೂರಿಗೆ ಮರಳಿ ತರುವ ಸಲುವಾಗಿ ಜೈಲು ಸೇರಿದ 14 – 15 ವಷ೯ಗಳ ನಂತರ ಕಾಟೇರ ಪೆರೋಲ್ ಮೇಲೆ ಬಿಡುಗಡೆಯಾಗಿ ಬರುತ್ತಾನೆ..

 

ಬಂದವನೇ ಸೀದಾ ಪಕ್ಕದೂರಿನ ಮಾರಿ ಜಾತ್ರೆಗೆ ಹೋಗುತ್ತಾನೆ.

ಅಲ್ಲಿ ನೆರೆದವರೆಲ್ಲ ಕಾಟೇರ ಹೊಲೆಮಾರಿಯನ್ನ ಹೊತ್ತೊಯ್ಯಲು ಬಂದಿದ್ದಾನೆಂದೇ ಭಾವಿಸುತ್ತಾರೆ…..

ಆದರೆ ಕಾಟೇರ ಯೋಚಿಸುವ ರೀತಿಯೇ ಬೇರೆ,

ಎಲ್ಲ ಸಮಸ್ಯೆಗಳ ಮೂಲ ಬ್ರಾಹ್ಮಣ್ಯ ಎಂಬುದು ಅವನ ಖಚಿತ ನಿಲುವಾಗಿರುತ್ತದೆ.

ಒಂದೆಡೆ ಭೂಮಾಲೀಕರಿಗೆ ಒತ್ತಾಸೆಯಾಗಿದ್ದು ಗೇಣಿದಾರರ ಬದುಕನ್ನೇ ಜೀತಕ್ಕೀಡು ಮಾಡುವ ಬ್ರಾಹ್ಮಣ್ಯ,

ಮತ್ತೊಂದೆಡೆ ಸಮಾಜವನ್ನ ಹಲವು ಜಾತಿಗಳನ್ನಾಗಿ ಒಡೆದು ನೂರು ಹೋಳು ಮಾಡಿ ಆಳುವ ಆಟವಾಡುತ್ತಿರುತ್ತದೆ.

ಈ ವಂಚಕ ಆಟದ ಫಲದಿಂದಲೇ ಸಮಾಜದಲ್ಲಿ ಇಷ್ಟೊಂದು ಏರುಪೇರು-ಉದ್ವಿಗ್ನತೆ-ಅಸಮಾನತೆಗಳು ತಾಂಡವಾಡಲು ಮೂಲ ಕಾರಣ ಎಂಬುದು ಕಾಟೇರ ತನ್ನ ಅನುಭವದ ಮೂಲಕ ಕಂಡುಕೊಂಡಿರುತ್ತಾನೆ…..

 

ಹೀಗಾಗಿಯೇ ಹೊಲೆಮಾರಿ ಹೊತ್ತೊಯ್ಯುವ ಗೀಳು ತೊರೆದು,

ಭೂಮಾಲೀಕರ ಮೇಲಿನ ಹಗೆಯನ್ನು ಪಕ್ಕಕ್ಕಿಟ್ಟು ತನ್ನ ಸಂಗಾತಿಯನ್ನು ಮರಾಮೋಸದಿಂದ ಬಲಿಪಡೆದಿದ್ದ ಬ್ರಾಹ್ಮಣ್ಯದ ಪ್ರತಿನಿಧಿಯಾದ ಪದ್ದುವಿನ ಭೇಟೆಗೆ ಮಾನಸಿಕವಾಗಿ ಸಜ್ಜಾಗುತ್ತಾನೆ.

ಅದೂ ಕೂಡ ಪದ್ದುವೇ ತನ್ನ ಮೇಲೆರಗಿ ಕೊಲ್ಲುವ ಪ್ರಯತ್ನದ ತನಕ ಸುಮ್ಮನಿದ್ದು ಆ ನಂತರ ಅವನನ್ನು ಮಾರಿಯ ಮುಂದೆಯೇ ಹತ್ಯೆಗೈಯುತ್ತಾನೆ…..

 

ಸಿನಿಮಾದ ಮೂರು ಫೈಟ್ ಗಳಲ್ಲಿ ನಾಯಕ ಶತ್ರುಗಳನ್ನ ತರಿದುಹಾಕುವುದನ್ನ ಡಾಳಾಗಿ ತೋರಿಸುವ ನಿದೇ೯ಶಕರು

ಲಿಬರಲ್ ಬ್ರಾಹ್ಮಣ್ಯದ ಪ್ರತೀಕ ಪದ್ದುವನ್ನ ಮಾರಿಗೆ ಬಲಿಹಾಕುವ ದೃಶ್ಯವನ್ನ ಮಾತ್ರ ನಿದೇ೯ಶಕರು ಪ್ರೇಕ್ಷಕರಿಗೆ ನೇರವಾಗಿ ತೋರಿಸಲು ಹೋಗಲ್ಲ..

 

ಆದರೆ ಮಾರಿಗೆ ಬಲಿನೀಡಲು ತಂದು ಕಾಟೇರನಿಂದ ವಿಮೋಚನೆಗೊಂಡಿದ್ದ

ಕೋಣದ ಕಣ್ಣಿನ ಅಕ್ಷಿಪಟಲದ ಮೇಲೆ ಬ್ರಾಹ್ಮಣ್ಯದ ಹತ್ಯೆಯ ದೃಶ್ಯ ಮೆಟಫಾರಿಕ್ ರಿವಾಜಿನಲ್ಲಿ ಸೆರೆಯಾಗುತ್ತದೆ……

[ಅನಾದಿ ಕಾಲದಿಂದಲೂ ಮಾರಿಗೆ ಬಲಿನೀಡುವ ಕೋಣ ಯಾರನ್ನು ಪ್ರತಿನಿಧಿಸುತ್ತದೆ ಎಂಬುದನ್ನ ಇಲ್ಲಿ ವಿವರಿಸಬೇಕಿಲ್ಲ..]

ಆದರೆ ಆ ಕೋಣಕ್ಕೆ ಮಾತ್ರ ಬ್ರಾಹ್ಮಣ್ಯದ ಹತ್ಯೆಯನ್ನು ಕಣ್ಣಾರೆ ಕಾಣುವ ಹಕ್ಕನ್ನು ಅನಾಮತ್ತಾಗಿ ನೀಡುವ ನಿದೇ೯ಶಕನ ದೃಶ್ಯ ಸಾಂಧಬಿ೯ಕ ಸೆನ್ಸಿಟಿವಿಟಿ,

ಚಿಂತನಾಶೀಲತೆ,

ಇತಿಹಾಸದ ಪ್ರಜ್ಞಾವಂತಿಕೆ ಕಂಡು ದಂಗುಬಡಿಯುವಂತಾಗುತ್ತದೆ.

 

ಬ್ರಾಹ್ಮಣ್ಯದ ಪ್ರತಿನಿಧಿ ಪದ್ದು ತಾನೇ ತನ್ನ ಅಕ್ಕನನ್ನು ಕೊಂದದ್ದು ಎಂಬ ಸತ್ಯವನ್ನ ಹೊರಹಾಕಿದಾಗ ಜಾತ್ರೆಯಲ್ಲಿ ನೆರೆದಿದ್ದ ಜನಸ್ತೋಮ ದಿಗಿಲುಬಿದ್ದು ಬೆಚ್ಚುತ್ತದೆ…..

ಜನರಿಗಿಂತ

ಹತ್ತು ಪಟ್ಟು ಹೆಚ್ಚು

ಕಮ೯ಠ ಬ್ರಾಹ್ಮಣನಾದ ಆಕೆಯ ತಂದೆ ಶಾನುಭೋಗರು ಮಗನ ಕ್ರಾಯ೯ಕ್ಕೆ ನಡುಗಿಹೋಗುತ್ತಾರೆ.

ಈ ಹಿಂದೆ ಕಾಟೇರನ ಹಿಂದೆ ಹೋದ ಮಗಳು ಸತ್ತಳೆಂದು ತಪ೯ಣ ಬಿಟ್ಟು ಆಕೆಯಿಂದ ಮಾನಸಿಕವಾಗಿ ದೂರಾಗಲು ತಂದೆ ಪ್ರಯತ್ನಿಸಿರುತ್ತಾನಷ್ಟೇ..

ಆದರೆ ಬ್ರಾಹ್ಮಣ್ಯ ತೊತ್ತಾದ ಶಾನುಭೋಗರ ಮಗ ಪದ್ದು ತನ್ನ ತಂಗಿಯನ್ನ ಮಯಾ೯ದೆಗೇಡು ಹತ್ಯೆ ಮಾಡುವ ಮೂಲಕ ತನ್ನ ನಿಸ್ಸೀಮ ಕ್ರಾಯ೯ವನ್ನ ಮೆರೆಯುತ್ತಾನೆ…..

ಅದಕ್ಕೆ ಪ್ರತಿಯಾಗಿ

ಕಾಟೇರನಿಂದ ಸಮಾಪ್ತಿಯಾಗುತ್ತಾನೆ…..

ಇದೆಲ್ಲ ಚಿತ್ರದ ಅದ್ಭುತ ಮೆಟಫಾರಿಕ್ ಅಂಶಗಳು.

ಪದ್ದು ಕಾಟೇರನಿಂದ ಹತನಾಗುವಾಗ

ಇಡೀ

ಊರಿನ ಯಾರಿಂದಲೂ,

ಕೊನೆಗೆ ಶಾನುಭೋಗ ದಂಪತಿಗಳಿಂದಲೂ ಸಣ್ಣ ಪ್ರತಿರೋಧವೂ ವ್ಯಕ್ತವಾಗಲ್ಲ..,

ಬದಲಾಗಿ ಮಾರಿಯ ಮುಂದೆ ಪದ್ದು ಹತನಾದ ಕ್ಷಣವೇ ಆ ಊರಿನ ಭೂಮಾಲೀಕ ಫ್ಯೂಡಲ್ ಗಳ ಕೈಯಲ್ಲಿದ್ದ ಕತ್ತಿ -ಮಚ್ಚುಗಳು ತಂತಾನೇ

ಅವರ ಕೈಯಿಂದ ಜಾರಿ ನೆಲಕ್ಕೆ ತಪತಪನೆ ಬೀಳುತ್ತಾ ಹೋಗುತ್ತವೆ…..

 

ಅಲ್ಲಿಗೆ ಫ್ಯೂಡಲ್ ವಗ೯ ಗೇಣಿದಾರರ-ಊರಿನ ಅಸಹಾಯಕರ ಶೋಷಣೆಗೆ ಪಕ್ಕಾಗಿದ್ದ

ಶಸ್ತ್ರಗಳು ಶಾಶ್ವತವಾದ ತ್ಯಾಗದ

ಸ್ಪಷ್ಟ ಸೂಚನೆ ನೀಡುತ್ತವೆ.

ಅಂದರೇ ಫ್ಯೂಡಲ್ಗಳ ಪೋಷಕ ವ್ಯವಸ್ಥೆಯಾದ ಬ್ರಾಹ್ಮಣ್ಯ ಸಮಾಪ್ತಿಯಾದ ಕ್ಷಣಕ್ಕೆ ಇಡೀ ಸಮಾಜವು ತನ್ನ ಶ್ರೇಣಿಕರಣ ಅವಸ್ಥೆಯಿಂದ ಜಾರಿ ಸಮಸಮಾಜದ ಸಾಲಲ್ಲಿ ಬಂದು ನಿಲ್ಲುತ್ತದೆಯೆಂಬುದನ್ನ ಈ ದೃಶ್ಯ ಅಥೆoಟಿಕ್ ಆಶಯದೊಂದಿಗೆ ಹೇಳುತ್ತದೆ.

 

ಇನ್ನು

ಪದ್ದು(ಬ್ರಾಹ್ಮಣ್ಯ)ಹತನಾದ ಮರುಗಳಿಗೆಯೇ

ಸಂತನ-ಅವಧೂತನ ಮುಖಭಾವ ಹೊತ್ತು ನಿಲ್ಲುವ ಕಾಟೇರ ಸುತ್ತ ನೆರೆದಿದ್ದ ಜನರಿಗೆ ಜಾತಿ ಹುಟ್ಟಿದ್ದು ಹೇಗೆ,

ಅದು ಅಂತಿಮವಾಗಿ ಮಾನವ ಕುಲದ ಮನುಷ್ಯತ್ವವನ್ನೇ ಕೊಲ್ಲುವ ಮಟ್ಟಕ್ಕೆ

ವಿಕೃತವಾಗಿ ಬೆಳೆದದ್ದು ಹೇಗೆ ಎಂಬುದನ್ನ

ಕೆಲವೇ ಮಾತುಗಳಲ್ಲಿ ಹೇಳಿ ಮುಗಿಸುವ

ಕಾಟೇರ ಜಾತಿಯ ಸಂಕೋಲೆಗಳಿಂದ ಈ ಸಮಾಜ ಹೊರಬರಬೇಕಾದ ಅಗತ್ಯತೆಯನ್ನ ಹೇಳಿ ನಿರುಮ್ಮಳನಾಗುತ್ತಾನೆ…..

ನಂತರ ಬೇಡಿ ತೊಟ್ಟು ಜೈಲಿಗೆ ವಾಪಾಸ್ ಆಗುವ ಮುನ್ನ ನೆರೆದಿದ್ದವರಿಗೆ,

ವಿಶೇಷವಾಗಿ ಶಾನುಭೋಗ ದಂಪತಿಗಳತ್ತ ತಿರುಗಿ ಕೈಜೋಡಿಸಿ ಮುಗಿಯುತ್ತಾನೆ..

ಶಾನುಭೋಗರೂ ಕೂಡ ಎಲ್ಲ ಕಟ್ಟುಪಾಡುಗಳಿಂದ ಮುಕ್ತರಾದ ನಿರಾಳತೆಯ ಭಾವದಿಂದ

ಕಾಟೇರನತ್ತ ಪ್ರತಿಯಾಗಿ ಕೈಜೋಡಿಸಿ ಮುಗಿದು ಕಣ್ಣಾಲಿಗಳನ್ನು ತುಂಬಿಕೊಳ್ಳುತ್ತಾರೆ……

…………………………………………..

ಜಸ್ಟ್ ಥಿಂಕ್ ಯುವರ್ ಸೆಲ್ಫ್

ಈ ದೇಶದ,

ಈ ನೆಲದ ಇನ್ಯಾವ ಭಾಷೆಯ ಚಿತ್ರ

ಇಷ್ಟು ಸಮಗ್ರವಾಗಿದೆ,ಸಮೃದ್ಧವಾಗಿದೆ,ಹೃದ್ಯವಾಗಿದೆ, ಅಂತಿಮವಾಗಿ ಜೀವಪರತೆಯ,ಮನುಷ್ಯ ಘನತೆಯ ಪ್ರತೀಕವಾಗಿದೆ

ಎಂಬುದ ಹೇಳಿ ನೋಡೋಣ?!