ನೀವು ಕರೆ ಮಾಡಿದ ಸಂಖ್ಯೆ ಸದ್ಯ ಬ್ಯುಸಿ ಆಗಿದೆ

ನೀವು ಕರೆ ಮಾಡಿದ ಸಂಖ್ಯೆ ಸದ್ಯ ಬ್ಯುಸಿ ಆಗಿದೆ

ಪರಮೇಶ್ ಜೊಲಾಡ್

ನಮಸ್ತೆ,
ಈ ನನ್ನ ಕಲಾ ಪ್ರದರ್ಶನ, ವೆಂಕಟಪ್ಪ ಕಲಾ ಗ್ಯಾಲರಿಯ ನಿರ್ವಹಣೆಯಲ್ಲಿ ಆಗುತ್ತಿರುವ ನಿರ್ಲಕ್ಷತೆ ಮತ್ತು ನಿರಾಸಕ್ತಿ ಕುರಿತಾದ ನೋವಿನ ಸಂಗತಿಯನ್ನು ಅಭಿವ್ಯಕ್ತಿಸುವುದಾಗಿದೆ. ಗ್ಯಾಲರಿಗೆ ಇರಬೇಕಾದ ಮೂಲಭೂತ ಅಗತ್ಯವಾದ ಸ್ಪಾಟ್ ಲೈಟ್ ನ ಸೌಕರ್ಯ ಕೂಡ ಇಲ್ಲದ ಕಾರಣ ಆ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಕಂದೀಲುಗಳ ಸಹಾಯ ಪಡೆದದ್ದು ಈ ಪ್ರದರ್ಶನದ ಪ್ರಮುಖವಾದ ಅಂಶವಾಗಿದೆ.
     

 

ಕಲಾವಿದರು ಹಲಾವಾರು ಬಾರಿ ಈ ಗ್ಯಾಲರಿಯ ಪರಸ್ಥಿತಿಯ ಬಗ್ಗೆ ಮನವರಿಕೆ ಮಾಡಿದ ಮೇಲು ಯಾವುದೇ ರೀತಿಯ ಸುಧಾರಣೆ ಕಾಣಿಸದೆ ಇರುವುದು ವಿಷಾದ ಸಂಗತಿ. ಈ ಎಲ್ಲ ಅಸಹಾಯಕತೆಯನ್ನು ವ್ಯಕ್ತಪಡಿಸಲು ಈ ಪ್ರದರ್ಶನದಲ್ಲಿ ಎರಡು ವಾಲ್ ಇನ್ಸ್ಟಾಲೇಷನ್ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಈ ಪ್ರದರ್ಶನಾವಧಿಯ ನಾಲ್ಕೂ ದಿನಗಳ ಕಾಲ ಒಂದು ಪರ್ಫಾರ್ಮೆನ್ಸ್ ಕಲಾಕೃತಿಯನ್ನು ಪ್ರಸ್ತುತ ಪಡಿಸಲಾಗುತ್ತಿದ್ದು, ಶ್ರೀ ವೆಂಕಟಪ್ಪನವರ ಉಡುಗೆಯ ಭಾಗವಾದ ಕೋಟನ್ನು ಕೈ ಹೊಲಿಗೆಯಿಂದ ತಯಾರಿಸಿ ಪ್ರದರ್ಶಿಸುವುದಾಗಿದೆ. ಈ ಮುರೂ ಕಲಾಕೃತಿಗಳು ಈ ಗ್ಯಾಲರಿಯ ಸಂರಕ್ಷಣೆಯ ಅವಶ್ಯಕತೆ ಮತ್ತು ಅನಿವಾರ್ಯತೆಯನ್ನು ಬಿಂಬಿಸುತ್ತವೆ.

ಕೊನೆಯದಾಗಿ, ಕಲೆ ಮತ್ತು ಸಂಸ್ಕೃತಿಯನ್ನ ಕೇವಲ ಕಲಾವಿದರಿಂದ ಮಾತ್ರ ಉಳಿಸಲು ಸಾಧ್ಯವಿಲ್ಲ ಜೊತೆಗೆ ಸರಕಾರದ ಹೊಣೆಯು ಅತಿ ಅವಶ್ಯ ಎನ್ನುವುದನ್ನು ಅಭಿವ್ಯಕ್ತಿಸಲು ಮಾಡಿದ ಪ್ರಯತ್ನ ಈ ಕಲಾಪ್ರದರ್ಶನದ್ದಾಗಿದೆ.
ಪರಮೇಶ್ ಜೋಳದ, ಅಶೋಕ ಯು, ಕಂದೀಲುಗಳನ್ನು ಒದಗಿಸಿಕೊಟ್ಟ ನನ್ನ ಅಕ್ಕ,ಮತ್ತು ರಾಮನಗೌಡ ಗಡೇದ ಇವರಿಗೆ ನನ್ನ ಅನಂತಾನಂತ ಧನ್ಯವಾದಗಳು.

Hello,

 

This art exhibition of mine is to express the painful fact of neglect and apathy in the management of the Venkatappa Art Gallery. Since there is no facility for the spotlight, an essential requirement of a gallery, the help of lanterns is the most important aspect of this exhibition.

It is a pity that the artists have been convinced many times about the existence of this gallery but no improvement has been seen. To express all this helplessness, two wall installation artworks were created in this exhibition. In addition, a performance art piece is being presented for all four days of this exhibition, a hand-stitched coat that is part of Mr. Venkatappa’s attire. These artworks reflect the necessity and the imperative of the preservation of this gallery.

Finally, this art exhibition is an attempt to express that art and culture cannot be saved by artists alone and that the government’s responsibility is essential.

 

Paramesh Jolad

 

My sincere thanks to Ashok U, My Sister, Ramanagouda, and all my well-wishers.