ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧
ವಿ. ಎಲ್. ನರಸಿಂಹಮೂರ್ತಿ
ಟೆಕ್ನಾಲಜಿ ಅನ್ನೊದು ನಮ್ಮ ದೇಶದಲ್ಲಿ ಮಹಾ ಬ್ರೆಹ್ಮಿನಿಕಲ್. ನಮ್ಮ ದೇಶಕ್ಕೆ ಬಂದ ಎಲ್ಲ ಟೆಕ್ನಾಲಜಿಯೂ ಬ್ರಾಹ್ಮಣರ ಕೈಗೆ ಸಿಕ್ಕಿ ಅವರ ಕೈಯಲ್ಲೆ ಇವತ್ರಿಗೂ ಇದೆ. ಏನೋ ಈ ಸೋಷಿಯಲ್ ಮೀಡಿಯಾ ಬಂದ ಮೇಲೆ ಅಷ್ಟೊ ಇಷ್ಟೊ ಈ ಟೆಕ್ನಾಲಜಿ ಬಳಸುವ ಅವಕಾಶ ತಳ ಸಮುದಾಯಗಳಿಗೂ ಬಂತು.
ನಮ್ಮ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಸಾಹಿತ್ಯದ ವೇದಿಕೆಗಳು, ಸಾಹಿತ್ಯ ಪತ್ರಿಕೆಗಳು ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಮಾತ್ರವೇ ಇದ್ದ ಸಂಪ್ರದಾಯವನ್ನು ಮುರಿದು ಎಲ್ಲರೂ ತಮಗೆ ತೋಚಿದ್ದು, ಬೇಕಾದ್ದನ್ನು ಬರೆಯೋಕೆ ಶುರು ಮಾಡೊಕೆ ಸೋಷಿಯಲ್ ಮೀಡಿಯಾ ಕೂಡ ಅವಕಾಶ ಕೊಟ್ಟಿದೆ. ಈ ಚಲನೆಯಿಂದ ಸಾಹಿತ್ಯದ ವಲಯದಲ್ಲಿ ಬ್ರಾಹ್ಮಣ ಸಾಹಿತಿಗಳ ದರಬಾರು ಕಡಿಮೆಯಾಯಿತು.
ಸಾಕ್ಷಿ, ಸಂಚಯ, ರುಜುವಾತು, ದೇಶಕಾಲ.. ಮುಂತಾದ ‘ಉಡುಪಿ ಬ್ರಾಹ್ಮಣರ ಹೋಟೆಲ್’ ಮಾದರಿಯ pure veg ಮಾಡಲ್‌ನ ಸಾಹಿತ್ಯದ ಪತ್ರಿಕೆಗಳ ವೇದಿಕೆಗಳನ್ನು ದಿಕ್ಕರಿಸಿ ಫೇಸ್ ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳು ಹಿಂದುಳಿದ- ತಳಸಮುದಾಯದ ಲೇಖಕರಿಗೆ space ಸೃಷ್ಟಿ ಮಾಡಿದವು.
ಇದು ಕಾಯ್ಕಿಣಿ ತರದ ಬ್ರೇಮಿನ್ ಸಾಹಿತಿಗಳಿಗೆ ತಮ್ಮಅಸ್ತಿತ್ವಕ್ಕೆ ಧಕ್ಕೆ ತರುವ ಭಯ ಉಂಟು ಮಾಡಿರಬಹುದು.
ಕಾವ್ಯವಾಗಲಿ, ಕತೆಯಾಗಲಿ ಹೇಗೆ ಬರೆಯುತ್ತೇವೆ, ಎಲ್ಲಿ ಪ್ರಕಟ ಮಾಡುತ್ತೇವೆ ಅನ್ನೊದು ಮುಖ್ಯ ಅಲ್ಲ. ನಮ್ಮ ದನಿಯನ್ನು ದಾಖಲಿಸೋದು, Express ಮಾಡೋದು ಮುಖ್ಯವೇ ಹೊರತು, ಮೊಬೈಲಲ್ಲಿ ಬರಿತೀವ, ಗಾಂಧಿಬಜಾರ್‌ನ ವಿದ್ಯಾರ್ಥಿ ಭವನದ ತುಪ್ಪದ ದೋಸೆ ತಿನ್ಕೊಂಡು ಬರಿತಿವಾ ಅನ್ನೊದು ಮುಖ್ಯ ಅಲ್ಲ.
ಸಿನಿಮಾ ಟ್ಯೂನಿಗೆ ಹಾಡು ಬರೆದು ದುಡ್ಡು ತಗೊಂಡು ಜೇಬಿಗೆ ಇಳಿಸೊ ಕಾಯ್ಕಿಣಿ ತರದ ‘ಅಡ್ಡ ಗೋಡೆ ಮೇಲೆ ದೀಪದ’ ಕೆಟಗಿರಿಗೆ ಸೇರಿರೊ ಸಾಹಿತಿಗೆ ಸಾಹಿತ್ಯದ ಶ್ರೇಷ್ಠತೆ ಬಗ್ಗೆ ಮಾತಾಡೊ ಅಧಿಕಾರ ಕೊಟ್ಟವರು ಯಾರು?
ಆತನ ಜಾತಿ ಪ್ರೆಂಡ್ಸ್ !
ಕಾಯ್ಕಿಣಿ ತರದ ಬ್ರಾಹ್ಮಣರ ಮಾತನ್ನ ಸೀರಿಯಸ್ಸಾಗಿ ತಗೊಳದೆ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಬ್ಲಾಗ್ ಹೀಗೆ ಎಲ್ಲಿ ಜಾಗ ಸಿಗುತ್ತೊ ಅಲ್ಲೆಲ್ಲ ಪದ್ಯ ಬರೆದು ಹಾಕಿ.
ಕಾಯ್ಕಿಣಿ ಬೇಕಾದರೆ ಮೊಬೈಲ್ ನೆಟ್‌ವರ್ಕ್ ಸಿಗೋಕಡೆ ಮನೆ ಮಾಡಿಕೊಂಡು ಬರೆಯಲಿ ನೀವು ತಲೆಕೆಡಿಸಿಕೊಳ್ಳಬೇಡಿ.
ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2
~ ವಿ. ಎಲ್. ನರಸಿಂಹಮೂರ್ತಿ
ಚಿಂತಕರು , ನ್ಯಾಷನಲ್ ಕಾಲೇಜು ಅಧ್ಯಾಪಕರು.