ಬ್ರಾಹ್ಮಣ ಸಮಸ್ಯೆ – ಅನು ರಾಮದಾಸ್

ಬ್ರಾಹ್ಮಣ ಸಮಸ್ಯೆ

ಅನು ರಾಮದಾಸ್ (Anu Ramadas)

ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya)

ಬ್ರಾಹ್ಮಣರ ತಳಹದಿಯ ನಂಬಿಕೆ ವ್ಯವಸ್ಥೆಯು  ತಮ್ಮದೇ ಆದ ಆಧಾರ ಗ್ರಂಥಗಳ ಪ್ರಕಾರ ತಪ್ಪೊಪ್ಪಿಕೊಳ್ಳದ ಮೇಲರಿಮೆಯ  ಪ್ರಾಬಲ್ಯ (Supremacy) ವನ್ನು ಹೊಂದಿದೆ. ಮುಖಾಮುಖಿಯಾದಾಗ, ತರ್ಕಬದ್ಧ ಚಿಂತನೆಯಲ್ಲಿ ಪಾಲನ್ನು ಹೊಂದಿರುವ ಇಂದಿನ ಬ್ರಾಹ್ಮಣರು ಅದರ ಅಮಾನ್ಯತೆಯನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ ಎಂದು ಒಬ್ಬರು ನಿರೀಕ್ಷಿಸುತ್ತಾರೆ. ಬೌದ್ಧ ಧರ್ಮದ ಸಂವಾದ , ಜಾತಿ-ವಿರೋಧಿ ಚಳುವಳಿ ಮತ್ತು ಸಾಹಿತ್ಯಗಳೆಲ್ಲವೂ ಸಹಜವೆನಿಸುವ  ಮತ್ತು ಎಂದಿಗೂ ತಗ್ಗಿಸಲಾಗದ  ಬ್ರಾಹ್ಮಣ ಮೇಲರಿಮೆಯ ಹಕ್ಕುಗಳ ಟೊಳ್ಳುತನವನ್ನು ಪದೇ ಪದೇ ವಿವರಿಸಿವೆ. ಈ ಸಾಹಿತ್ಯವು ಐತಿಹಾಸಿಕ ಪರಿಶೀಲನೆಗೆ ಜವಾಬ್ದಾರರಾಗಲು ನಿರಾಕರಿಸುತ್ತದೆ ಮತ್ತು ದೈವಿಕ ಕರ್ತೃತ್ವವನ್ನು ಧರ್ಮಶ್ರದ್ಧೆಯಿಂದ  ಪ್ರತಿಪಾದಿಸುವುದರಿಂದ   ದಂತ ಕಥೆಗಳ  ಕ್ಷೇತ್ರಕ್ಕೆ ತಳ್ಳಲ್ಪಡಬೇಕು ಎಂದು ಅಂಬೇಡ್ಕರ್ ಸೂಚಿಸಿದ್ದರು . ಆದರೂ, ಬ್ರಾಹ್ಮಣರ ಮೇಲರಿಮೆ ಪ್ರಾಬಲ್ಯ ನಂಬಿಕೆ ವ್ಯವಸ್ಥೆಯು ಉಪಖಂಡದ ಸಾಮಾಜಿಕ ಸಂವಾದದಲ್ಲಿ   ನಿರಂತರ ಸಮರ್ತನೆಯನ್ನು  ಪಡೆಯುತ್ತಿರುತ್ತದೆ.

ನಾವೊಂದಿಷ್ಟು ಹಿಂದೆ ಸರಿದು ಮೇಲರಿಮೆಯ ಪ್ರಾಬಲ್ಯ ಪದದೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳೋಣ. ಅತ್ಯಂತ ಸಾಮಾನ್ಯವಾಗಿ ಚರ್ಚಿಸುವುದು : ಬಿಳಿ ಮೇಲರಿಮೆಯ ಪ್ರಾಬಲ್ಯ (White Supremacy) , ಇದು ಬಿಳಿ ಜನಾಂಗವು ಇತರ ಎಲ್ಲಾ ಜನಾಂಗಗಳಿಗಿಂತ ಉತ್ತಮವಾಗಿದೆ ಮತ್ತು ಅವರ ಮೇಲೆ ನಿಯಂತ್ರಣವನ್ನು ಹೊಂದಿರಬೇಕು ಎಂದು ನಂಬುವ ವ್ಯಕ್ತಿಗಳ ನಂಬಿಕೆ ವ್ಯವಸ್ಥೆಯಾಗಿದೆ. ಕಡಿಮೆ ಚರ್ಚಿಸಿರುವುದು  : ಬ್ರಾಹ್ಮಣ ಮೇಲರಿಮೆಯ ಪ್ರಾಬಲ್ಯ (Brahmin Supremacy), ಇದು ಕೆಳ ಜಾತಿಗಳಾಗಿ ವಿಭಜಿಸಲ್ಪಟ್ಟಿರುವ ಎಲ್ಲರಿಗಿಂತ ಬ್ರಾಹ್ಮಣರು ಉತ್ತಮರು ಮತ್ತು ಅವರ ಮೇಲೆ ನಿಯಂತ್ರಣವನ್ನು ಹೊಂದಿರಬೇಕು ಎಂದು ನಂಬುವ ವ್ಯಕ್ತಿಗಳ ನಂಬಿಕೆ ವ್ಯವಸ್ಥೆಯಾಗಿದೆ.

 

ಮಾನವ ಇತಿಹಾಸದಲ್ಲಿ, ಬ್ರಾಹ್ಮಣ ಮೇಲರಿಮೆಯ ಪ್ರಾಬಲ್ಯವು ಕ್ಷೀಣಿಸದ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾಗಿದೆ. ಬದಲಾಗಿ, ಇತರ ಮೇಲರಿಮೆ ಪ್ರಾಬಲ್ಯದ ರೂಪಗಳು ಕಣ್ಮರೆಯಾಗಿರುವಾಗ  ಅಥವಾ ನಶಿಸುತ್ತಿರುವಾಗ ಅಥವಾ ಸಾಮಾನ್ಯ ಜ್ಞಾನದ ಮಟ್ಟದಲ್ಲಿ ನಾಚಿಕೆಪಡುವ ಮತ್ತು ಟೀಕಿಸುವ ಹಂತವನ್ನು ಪ್ರವೇಶಿಸಿರುವಾಗ ಬ್ರಾಹ್ಮಣ ಪ್ರಾಬಲ್ಯವು ಉಗ್ರವಾಗಿಯೇ  ಬೆಳೆಯುತ್ತಿದೆ.

 

ಬ್ರಾಹ್ಮಣ ಮೇಲರಿಮೆಯ ಪ್ರಾಬಲ್ಯವು ಸಮರ್ಥನೀಯ  ನಂಬಿಕೆ ವ್ಯವಸ್ಥೆಯಾಗಿ ಹೇಗೆ ರೂಪುಗೊಂಡಿದೆ? ಈ ಪ್ರಶ್ನೆಯನ್ನು ವಿಶಿಷ್ಟತೆಯನ್ನು ತೋರಿಸಿಕೊಳ್ಳುವ ಯಾವುದೇ ಸಾಮಾಜಿಕ ಗುಂಪಿನ ಸಾಮಾನ್ಯ ಮೂರು ಅಂಶಗಳನ್ನು ಪರಿಶೀಲಿಸುವ ಮೂಲಕ ನೋಡಬಹುದು : ಸದಸ್ಯರ ಸ್ವಯಂ ಗ್ರಹಿಕೆ; ಸದಸ್ಯರಲ್ಲದವರಿಗೆ ಗುಂಪಿನ ಗುರುತಿನ ತೋರುವಿಕೆ  ಮತ್ತು ಸದಸ್ಯರಲ್ಲದವರಿಂದ ಈ ಗುಂಪಿನ ಗ್ರಹಿಕೆ.

 

ಈಗ, ನಾವು ಇವುಗಳ ಸುತ್ತ ಪ್ರಶ್ನೆಗಳನ್ನು ರಚಿಸೋಣ: ಬ್ರಾಹ್ಮಣನು ತನ್ನನ್ನು ತಾನು ಹೇಗೆ ಗ್ರಹಿಸುತ್ತಾನೆ; ಅವನು ತನ್ನ ಅಸ್ಮಿತೆಯನ್ನು  ಬ್ರಾಹ್ಮಣೇತರರಿಗೆ ಹೇಗೆ ತೋರಿಸುತ್ತಾನೆ ಮತ್ತು ಬ್ರಾಹ್ಮಣೇತರರು ಬ್ರಾಹ್ಮಣರನ್ನು ಹೇಗೆ ಗ್ರಹಿಸುತ್ತಾರೆ (ಒಬ್ಬ ವ್ಯಕ್ತಿಯಾಗಿ ಮತ್ತು ಸಮುದಾಯವಾಗಿ)?

 

ಬ್ರಾಹ್ಮಣರ ಸ್ವಯಂ-ಗ್ರಹಿಕೆಯು ತಾವು ಸೇರಿರುವ  ಮನುಷ್ಯರ  ಗುಂಪಿನ ನಂಬಿಕೆಯಾದ ಪ್ರತಿಯೊಬ್ಬ ಸದಸ್ಯನು ತಾನು ಶ್ರೇಷ್ಠನಾಗಿ ಹುಟ್ಟಿದ್ದಾನೆ ಮತ್ತು ಎಲ್ಲಾ ಸಂದರ್ಭಗಳಲ್ಲಿ ಮತ್ತು ಪೀಳಿಗೆಯಲ್ಲಿ ಯಾವಾಗಲೂ ಶ್ರೇಷ್ಠನಾಗಿರುತ್ತಾನೆ ಎಂಬುದರಿಂದ   ಬೇರ್ಪಡಿಸಲಾಗದು. ಇದಕ್ಕೆ ಪುರಾವೆಗಳು ಪುರಾತನ ಪಠ್ಯಗಳಿಗೆ ಸೀಮಿತವಾಗಿಲ್ಲ, ಅಲ್ಲದೆ  ದಕ್ಷಿಣ ಏಷ್ಯಾ ಹಳೆ ಕಡತಗಳಲ್ಲಿ, ಸಮಕಾಲೀನ ಜ್ಞಾನ ಉತ್ಪಾದನೆಯಲ್ಲಿ ಮತ್ತು ದೈನಂದಿನ ಸಂಭಾಷಣೆಗಳು ಮತ್ತು ಕ್ರಿಯೆಗಳಲ್ಲಿದೆ . ಇತ್ತೀಚಿನ ಗೋಚರಿಸುವ ಉದಾಹರಣೆ ಎಂದರೆ ಭಾರತೀಯ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಉನ್ನತ ಸದಸ್ಯರಾಗಿರುವ  ಒಬ್ಬ  ಬ್ರಾಹ್ಮಣ ರಿಂದ ಗೌಡ ಸಾರಸ್ವತ ಬ್ರಾಹ್ಮಣ (GSB) ಗರ್ವದ ಕೊಂಡಾಟ    ಮತ್ತು ಸಮರ್ಥನೆ. ಪಾಶ್ಚಿಮಾತ್ಯ ಉದಾರ ಶಿಕ್ಷಣ ಮತ್ತು ಮೌಲ್ಯದ ಪರಿಚಯ  ಬ್ರಾಹ್ಮಣರ ನಿರಂತರ ಮೇಲರಿಮೆ ಪ್ರತಿಪಾದನೆಗೆ  ನಿರೋಧಕವಾಗಿ ಕಾರ್ಯನಿರ್ವಹಿಸುವುದಿಲ್ಲ.

ಎಲ್ಲಾ ಸಂವಹನ ಮಾರ್ಗಗಳನ್ನು  ಮೇಲರಿಮೆ ಪ್ರಾಬಲ್ಯ  ಪರಂಪರೆಯನ್ನು ಹೆಚ್ಚಿಸಲು ವಾಡಿಕೆಯಂತೆ ಬಳಸಲಾಗುತ್ತದೆ: ಅದು ಶೈಕ್ಷಣಿಕ, ಮನರಂಜನೆ ಅಥವಾ ವ್ಯಾಪಾರವಿರಬಹುದು. ಬೌದ್ಧಿಕ, ಸಾಹಿತ್ಯಿಕ, ಕಲಾತ್ಮಕ ಅಥವಾ ಆಧ್ಯಾತ್ಮಿಕ – ಯಾವುದೇ ಮಟ್ಟದಲ್ಲಿ ಮುಖ್ಯವಾಹಿನಿಯಲ್ಲಿ ಈ ನಂಬಿಕೆ ವ್ಯವಸ್ಥೆಯ ಮುಸುಕು ತೆಗೆಯುವ ಸಂಪೂರ್ಣ ಅನುಪಸ್ಥಿತಿ ಇದಕ್ಕೆ ಪುರಾವೆಗಳನ್ನು ಒದಗಿಸಿದೆ. ಆಶಿಸ್ ನಂದಿಯವರ ಮುಚ್ಚು ಮರೆಯಿಲ್ಲದ  ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯದ ನಂಬಿಕೆ ವ್ಯವಸ್ಥೆಯಿಂದ ಪಡೆದ ಶಕ್ತಿ  ಪ್ರದರ್ಶನ ವು ಇಡೀ ಸಮುದಾಯಗಳನ್ನು – ದಲಿತರು, ಆದಿವಾಸಿಗಳು ಮತ್ತು ಬಹುಜನರನ್ನು ಭ್ರಷ್ಟರೆಂದು ಕರೆಯುವಂತಾದಾಗ  ಸಮಾನತೆ, ವಿವೇಚನೆ  ಮತ್ತು ನೈತಿಕತೆಯನ್ನು ಗೌರವಿಸುವ ಯಾವುದೇ ಸಮಾಜವು ನಿರೀಕ್ಷಿಸುವಂಥ  ಖಂಡನೆಯಾಗಲಿಲ್ಲ ಬದಲಾಗಿ, ಇದು ಅವರ ಹಕ್ಕನ್ನು ಎತ್ತಿಹಿಡಿಯುವ ಶೈಕ್ಷಣಿಕ ಮತ್ತು ಮುಖ್ಯವಾಹಿನಿಯ ಸಾಹಿತ್ಯ ನಿರ್ಮಿಸಿತು. ಉಪಖಂಡದಲ್ಲಿ ಸಾಮಾಜಿಕ ಚಿಂತನೆಯ ತಿರುಳಾಗಿ  ಬ್ರಾಹ್ಮಣ ಮೇಲರಿಮೆ  ಪ್ರಾಬಲ್ಯವು, ತನ್ನ  ಮೇಲರಿಮೆ  ಪ್ರಾಬಲ್ಯವನ್ನು ಕಿತ್ತುಹಾಕುವ ಗುರಿಯನ್ನೊ  ಒಳಗೊಂಡಂತೆ ಸಾಮಾಜಿಕ ಸಂವಾದಗಳನ್ನು  ನಿಯಂತ್ರಿಸುವ ಸಂಕೀರ್ಣ ಪ್ರಕ್ರಿಯೆಯಿಂದ ನಿರ್ವಹಿಸಲ್ಪಡುತ್ತದೆ. ಬಾಬಾಸಾಹೇಬರ ‘ಜಾತಿ ವಿನಾಶ’( Annihilation of Caste) ವನ್ನು ಸ್ವಾಧೀನಪಡಿಸಿಕೊಳ್ಳುವ ರಾಯ್-ನವಯಾನ  ಯೋಜನೆಯು ಒಂದು ಉದಾಹರಣೆಯಾಗಿದೆ.

 

ಬ್ರಾಹ್ಮಣನು ತನ್ನ ಮೇಲರಿಮೆ ಪ್ರಾಬಲ್ಯವನ್ನು  ಪ್ರಪಂಚದ ಇತರ ಭಾಗಗಳಿಗೆ ಹೇಗೆ ತೋರಿಸುತ್ತಾನೆ? ನಾವು ಈ ನಂಬಿಕೆ ವ್ಯವಸ್ಥೆಯನ್ನು ಸರಳ ಕಲಿಕೆಯರಿಮೆಗೆ ಒಳಪಡಿಸುತ್ತೇವೆ  ಎಂದು ಊಹಿಸಿ. ಬ್ರಾಹ್ಮಣ ನಂಬಿಕೆಯ ವ್ಯವಸ್ಥೆಯು ವ್ಯಾಪಕವಾಗಿಲ್ಲದ ಕೆಲವು ದೇಶದಲ್ಲಿ ನಾವು 8 ನೇ ತರಗತಿಯ ಬಹುಸಂಸ್ಕೃತಿಯ ತರಗತಿಯನ್ನು ಕಲಿಸುತ್ತಿದ್ದೇವೆ ಎಂದು ಹೇಳೋಣ. ನಾವು ಸರಳವಾದ ಇಂಗ್ಲಿಷ್‌ನಲ್ಲಿ ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯದ ಬಗ್ಗೆ ಪರಿಶೀಲಿಸಬಹುದಾದ ಸತ್ಯಗಳ ಗುಂಪನ್ನು ರಚಿಸಲು ಬಯಸುತ್ತೇವೆ.

ಈ ಪಾಠದ ತಯಾರಿಕೆಯಲ್ಲಿ ನಾವು ಈ  ಕೆಲವು ಮಾರ್ಗಗಳ ನ್ನು ಬಳಸಬಹುದು.  ಒಂದು ಮಾರ್ಗವೆಂದರೆ ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯದ ಸಾಮಾಜಿಕ ವಾಸ್ತವತೆಯ ಬಗ್ಗೆ ಸರಣಿ ಪ್ರಶ್ನೆಗಳನ್ನು  ಕೇಳುವುದು ಮತ್ತು ಪರಿಶೀಲಿಸಬಹುದಾದ ಪುರಾವೆಗಳೊಂದಿಗೆ ಉತ್ತರಗಳನ್ನು ಹುಡುಕಲು ವಿದ್ಯಾರ್ಥಿಗಳಿಗೆ ನಿರ್ದೇಶಿಸುವುದು, ಉದಾಹರಣೆಗೆ:

  1. ಗುಂಪಿಗೆ ಸೇರಿರುವ ಪ್ರತಿಯೊಬ್ಬ ಸದಸ್ಯನು ತಾನು ಇತರ ಎಲ್ಲ ಬ್ರಾಹ್ಮಣರಲ್ಲದವರಿಗಿಂತ ಶ್ರೇಷ್ಠನೆಂದು ನಂಬುವ ಮತ್ತು ಅದರಂತೆ ಬದುಕುವ ಗುಂಪಿನ ರಚನೆಗೆ ಏನು ಕಾರಣವಾಗಿರಬಹುದು? ಒಂದು ಸಮಾಜಶಾಸ್ತ್ರೀಯ ಗುಂಪಿನಂತೆ ಬ್ರಾಹ್ಮಣರು ಉಪಖಂಡದ ಇನ್ನೊಂದು  ಸಮುದಾಯದಂತೆ ವೈವಿಧ್ಯಮಯವಾಗಿದೆ ಹಾಗು ಅನೇಕ ಭಾಷೆಗಳನ್ನು ಮಾತನಾಡುತ್ತಾರೆ ಎಂಬುದನ್ನು ನೆನಪಿನಲ್ಲಿಡಿ; ಆದರೂ, ಅವರೆಲ್ಲರೂ ಒಂದೇ ರೀತಿಯ ಅನುಭವ, ಇತಿಹಾಸ ಮತ್ತು ಮೇಲರಿಮೆ ಪ್ರಾಬಲ್ಯವಾದಿಗಳಾಗಿರುವ ಮತ್ತು ಹುಟ್ಟುಹಾಕುವ  ದೃಷ್ಟಿಕೋನವನ್ನು ಹೊಂದಿದ್ದಾರೆ.
  2. ಬ್ರಾಹ್ಮಣ ವ್ಯಕ್ತಿತ್ವವು ಎಂದಿಗೂ ಆಘಾತಕ್ಕೊಳಗಾಗುವ, ಹಿಂಸೆಗೆ ಒಳಗಾಗುವ, ಹೊರಗಿಡಲ್ಪಡುವ ಅಥವಾ ನಿಕೃಷ್ಟವೆನ್ನಿಸುವ ಸನ್ನಿವೇಶಗಳನ್ನು ಎದುರಿಸಿ ತನ್ನ ಮೌಲ್ಯವನ್ನು, ತನ್ನ ಬಗ್ಗೆ ತನ್ನ ನಂಬಿಕೆಗಳನ್ನು ಪ್ರಶ್ನಿಸುವಂತೆ , ಬ್ರಾಹ್ಮಣರ ಸಾಮೂಹಿಕ ಮತ್ತು ವೈಯಕ್ತಿಕ ಮೇಲರಿಮೆ ಪ್ರಾಬಲ್ಯವನ್ನು ನಿರೂಪಣೆಗಳನ್ನು ಪ್ರಶ್ನಿಸುವುದಿಲ್ಲವೇ ?
  3. ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯವಾದಿ ನಂಬಿಕೆ ವ್ಯವಸ್ಥೆಯ ಕಾರ್ಯವೇನು ಮತ್ತು ಅದರ ಮುಖ್ಯ ಅಂಶಗಳು ಯಾವುವು?
  4. ಈ ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯದ ನಂಬಿಕೆ ವ್ಯವಸ್ಥೆಯು ಅಡೆತಡೆಯಿಲ್ಲದ ರೀತಿಯಲ್ಲಿ ಇತಿಹಾಸದುದ್ದಕ್ಕೂ  ಎಲ್ಲಾ ಬ್ರಾಹ್ಮಣರಿಗೆ ಹೇಗೆ ಹಂಚಿಕೊಳ್ಳುವ  ಮೌಲ್ಯವಾಗುತ್ತದೆ ?
  5. ಅವರು ಕೇಳಿಕೊಳ್ಳುತ್ತಾರೆಯೇ –  ನಿಜವಾಗಿಯೂ ನಾವು  ಯಾರೆಂದು? ಪಕ್ಕದ  ಮನುಷ್ಯನಿಗಿಂತ ಅವರು ನಿಜವಾಗಿಯೂ ಉತ್ತಮರೇ ಎಂದು ಯೋಚಿಸುತ್ತಾರೆಯೇ? ಅವರಿಗೆ  ಸಾಧಾರಣ  ಸಾಮರ್ಥ್ಯ ಹೊಂದಿರುವ ಸಾಮಾನ್ಯ ಮನುಷ್ಯರಾಗಿರಬಹುದು ಎಂಬ ಸ್ವಯಂ-ಅನುಮಾನದ ಕ್ಷಣಗಳು ಅಥವಾ ಅವಧಿಗಳಿವೆಯೇ?

 

ತ್ವರಿತವಾಗಿ ತಿಳಿಯುವುದೇನೆಂದರೆ  ಈ ಸರಳ ಪ್ರಶ್ನೆಗಳಿಗೆ ಉತ್ತರಿಸಲು ಬಹಳ ಕಡಿಮೆ ದಾಖಲಾತಿಗಳಿವೆ . ಬ್ರಾಹ್ಮಣರು ವಸಾಹತುಶಾಹಿಗಳ ನೋಟ ಮತ್ತು ವಿಧಾನಗಳನ್ನು ವ್ಯಾಪಕವಾಗಿ ಜಾತಿ ವ್ಯವಸ್ಥೆಯ ಪರಿಧಿಯ ಹೊರಗಿರುವ ದಲಿತರು ಮತ್ತು ಆದಿವಾಸಿಗಳನ್ನು ವಸ್ತು (Specimen) ಗಳನ್ನಾಗಿ  ರೂಪಿಸಲು ಬಳಸುತ್ತಾರೆ. ಆದರೆ ಬಹಳ ಕುತೂಹಲಕಾರಿಯಾಗಿ, ಬ್ರಾಹ್ಮಣನು ತನ್ನನ್ನು ತಾನು ಮಾನವಶಾಸ್ತ್ರೀಯ ಮಾದರಿಯಾಗಿ ಪರೀಕ್ಷಿಸಲು ಬೃಹತ್ ಸಾಂಸ್ಥಿಕ ಸಂಪನ್ಮೂಲಗಳ ಸಂಪೂರ್ಣ ಉಸ್ತುವಾರಿ ಹೊಂದಿದ್ದರೂ, ಮಾನವಶಾಸ್ತ್ರದ ನೋಟದಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡಂತೆ ತೋರುತ್ತದೆ. ಹೀಗೇಕೆ?

 

ಮೇಲಿನ ಪ್ರಶ್ನೆಗಳೊಂದಿಗೆ ಗಂಭೀರವಾಗಿ ತೊಡಗಿಸಿಕೊಳ್ಳಲು ಪ್ರಾರಂಭಿಸಲು ಮುಖ್ಯವಾದ  ಮತ್ತು ಹಲವಾರು ಶೈಕ್ಷಣಿಕ ಯೋಜನೆಗಳನ್ನು ಪ್ರಾರಂಭಿಸುವ ಅಗತ್ಯವಿದೆ. ಬ್ರಾಹ್ಮಣ ಸಮಸ್ಯೆಯ ಸರಣಿಗಾಗಿ ನಾನು ಗಮನ ಕೊಡಲು  ಬಯಸುವ ಅಂಶಗಳು ಮತ್ತು ಪರಿಕಲ್ಪನೆಗಳು ಅವುಗಳನ್ನು ನಿರ್ದಿಷ್ಟ ಸಾಮಾಜಿಕ ಗುಂಪಿನಂತೆ ಪರಿಶೀಲಿಸುವ ಮಾರ್ಗದಲ್ಲಿವೆ.

 

ಬ್ರಾಹ್ಮಣರು ಒಂದು ಬುಡಕಟ್ಟು, ಜನಾಂಗ, ಜಾತಿ ಅಥವಾ ವರ್ಗವೇ?

 

ಮೇಲರಿಮೆ ಪ್ರಾಬಲ್ಯವು ನಿರ್ವಾತದಲ್ಲಿ  ಅಸ್ತಿತ್ವದಲ್ಲಿರುವುದಿಲ್ಲ , ಅವರು   ಅಸ್ತಿತ್ವದಲ್ಲಿರುವ ಮೇಲರಿಮೆ ಪ್ರಾಬಲ್ಯದ  ನಂಬಿಕೆ ವ್ಯವಸ್ಥೆ ಯನ್ನು ಹಂಚಿಕೊಂಡಿರುವ ಮಾನವರ ದೊಡ್ಡದೊಂದು  ಗುಂಪಿಗೆ  ಚಂದಾದಾರರಾಗಿರುತ್ತಾರೆ. ಮೇಲರಿಮೆ ಪ್ರಾಬಲ್ಯವಾದಿ ನಂಬಿಕೆ ವ್ಯವಸ್ಥೆಯು ತನ್ನ ಸದಸ್ಯರನ್ನು ಇತರರಿಂದ ನಿರ್ದಿಷ್ಟ ರೀತಿಯಲ್ಲಿ ಪ್ರತ್ಯೇಕಿಸುವ ಅಗತ್ಯವಿರುತ್ತದೆ. . ಆದ್ದರಿಂದ, ಈ ಪ್ರಶ್ನೆ:  ಬ್ರಾಹ್ಮಣರಿಗೆ ಮಾತ್ರ ಲಭ್ಯವಿರುವ  ಮತ್ತು ಬೇರೆ ಯಾರಿಗೂ ಇಲ್ಲದಿರುವ ಬ್ರಾಹ್ಮಣರು ಗುರುತಿಸುವ ಮೌಲ್ಯ ಗಳು  ಯಾವುದು ? ಅವು  ಜನಾಂಗೀಯ ಗುರುತುಗಳೆ, ಅಥವಾ ಸಾಂಸ್ಕೃತಿಕ, ಅಥವಾ ಪ್ರಾದೇಶಿಕ ಅಥವಾ ಈ ಅಂಶಗಳ ಸಂಯೋಜನೆಯೇ?

 

“ಕಾಲ, ಅಂತರಿಕ್ಷ ಮತ್ತು ಕಾರಣಗಳ ಉಪಧಿಗಳು ನಾಶವಾದಾಗ ಯಾವುದು ನಾಶವಾಗುವುದಿಲ್ಲವೋ ಅದು ಬ್ರಾಹ್ಮಣ, ಅಮರವಾದ ಸತ್ಯ.*”

Source: Library of Congress

 

ಬ್ರಾಹ್ಮಣರು ಉಳಿದ ಭಾರತೀಯರಿಂದ ಪ್ರತ್ಯೇಕವಾದ ಜನಾಂಗೀಯ ಗುಂಪು ಎಂದು ವರ್ಗೀಕರಿಸಲು ಯಾವುದೇ ಜನಾಂಗೀಯ ಭೇದವನ್ನು ಹೊಂದಿಲ್ಲ, ಅಥವಾ ಅವರು ಸಾಮಾನ್ಯ ಪೂರ್ವಜರು, ಅಥವಾ ಪ್ರದೇಶ ಅಥವಾ ಸಂಸ್ಕೃತಿಯಿಂದ ಹೊರಹೊಮ್ಮುವ ಜನಾಂಗೀಯ ಗುಂಪಲ್ಲ.   ಅವರು, ಉಳಿದ ಜಾತಿಗಳಂತೆ ಅನೇಕ ಉಪಜಾತಿಗಳಿಗೆ ಸೇರಿದ್ದಾರೆ, ಅನೇಕ ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅನೇಕ ಪ್ರದೇಶಗಳಿಂದ ಬಂದವರು ಮತ್ತು ಕಟ್ಟುನಿಟ್ಟಾಗಿ ತಮ್ಮ ಜಾತಿಯಲ್ಲೇ ಮದುವೆಯಾಗುತ್ತಾರೆ.  ಬೇರೆ ರೀತಿಯಲ್ಲಿ ಹೇಳುವುದಾದರೆ, ಎಲ್ಲಾ ಬ್ರಾಹ್ಮಣರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಯಾವುದೇ ಬಂಧುತ್ವ ಸಂಬಂಧಗಳಿಲ್ಲ.

ಹಾಗಾದರೆ ಬ್ರಾಹ್ಮಣರು ಒಂದು ವರ್ಗವೇ? ಬ್ರಾಹ್ಮಣರು ಒಂದು ಗುಂಪಾಗಿ ಆಳುವ ಸಾಮಾಜಿಕ ವರ್ಗವಾಗಿದೆ ಎಂಬುದಕ್ಕೆ ಸುಲಭವಾಗಿ ಪರಿಶೀಲಿಸಬಹುದಾದ ಪ್ರಾಯೋಗಿಕ ಪುರಾವೆಗಳು ಲಭ್ಯವಿವೆ.  ಅವರು ಉಪಖಂಡದೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಶಕ್ತಿಯುತ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅವರು ಪ್ರಬಲ ಸಾಮಾಜಿಕ ಸಂವಾದವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ.

ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯವು ಪ್ರಾದೇಶಿಕತೆಯಿಂದ ನಿರ್ಬಂಧಿತವಾಗಿದೆ

 

“ಆರಂಭದಲ್ಲಿ ಬ್ರಾಹ್ಮಣ  ಇದೆಲ್ಲವೂ ಆಗಿತ್ತು. ಅವನು ಒಬ್ಬ, ಮತ್ತು ಅನಂತ; ಪೂರ್ವದಲ್ಲಿ ಅನಂತ, ದಕ್ಷಿಣದಲ್ಲಿ ಅನಂತ, ಪಶ್ಚಿಮದಲ್ಲಿ ಅನಂತ, ಉತ್ತರದಲ್ಲಿ ಅನಂತ, ಮೇಲೆ ಮತ್ತು ಕೆಳಗೆ ಮತ್ತು ಎಲ್ಲೆಡೆ ಅನಂತ.*”

 

ನಂಬಿಕೆ ವ್ಯವಸ್ಥೆಯು ಕಾರ್ಯಗತವಾಗಿರುವ ಸಂದರ್ಭದಲ್ಲಿ ಮಾತ್ರ ಮೇಲರಿಮೆ   ಅಸ್ತಿತ್ವದಲ್ಲಿರುತ್ತದೆ, ಅಂದರೆ ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯವು ಅವಿರೋಧವಾಗಿ ಮತ್ತು ಅಡೆತಡೆಯಿಲ್ಲದೆ ಉಳಿಯಲು ಇತರ ಜಾತಿಗಳು ಅನಿರ್ದಿಷ್ಟವಾಗಿ ಕೆಳ ಸಾಮಾಜಿಕ ಗುಂಪುಗಳಾಗಿ ಅಸ್ತಿತ್ವದಲ್ಲಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ,  ಜಾತಿ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯಗತವಾಗಿಲ್ಲದ   ಸಮಾಜಗಳಲ್ಲಿ ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯವಿಲ್ಲ. ಬ್ರಾಹ್ಮಣ ಮೇಲರಿಮೆ ಪ್ರಾಬಲ್ಯವು ಉಪಖಂಡದೊಳಗೆ ಪ್ರಾದೇಶಿಕ ಮಿತಿಗಳನ್ನು ಹೊಂದಿದೆ. ಅದರ ಹೊರಗೆ, ಬ್ರಾಹ್ಮಣ ಕೇವಲ ಇನ್ನೊಬ್ಬ ಕಂದು ಬಣ್ಣದ  ವ್ಯಕ್ತಿ. ವಲಸಿಗರಲ್ಲಿ  ತನ್ನ ಉನ್ನತ ಸ್ಥಾನಮಾನವನ್ನು ಮರಳಿ ಪಡೆಯಲು ಅವರು ಎಲ್ಲಾ ಸಮಯದಲ್ಲೂ ದಕ್ಷಿಣ ಏಷ್ಯಾದ ಗುಂಪುಗಳಲ್ಲಿ ಇರಬೇಕು.. ಅವನು ಅಂತಹ ಭಾರತೀಯ/ ದಕ್ಷಿಣ ಎಷ್ಯಾದ  ಗುಂಪುಗಳ ಅಥವಾ ಕಂದು  ಬಣ್ಣದವರೊಂದಿಗೆ  ಆಕರ್ಷಿತರಾಗಿರುವ ಕೆಲವು ಬಿಳಿಯರ ಹೊರತಾದ  ಕ್ಷಣದಲ್ಲೇ  ಸ್ಥಾನಮಾನವನ್ನು  ಕಳೆದುಕೊಳ್ಳುತ್ತಾನೆ.  ತನ್ನ  ಮೇಲರಿಮೆಯಲ್ಲಿರುವ   ಜಾಗತಿಕ ನಿರಾಸಕ್ತಿಯೊಂದಿಗೆ ಅಲ್ಲದೆ  ಬಿಳಿಯ ಪ್ರಾಬಲ್ಯ ವ್ಯವಸ್ಥೆಯ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯಾಗಿ ಇರುವ ಚಹರೆಯೊಂದಿಗೆ  ತನ್ನನ್ನು ಸಮನ್ವಯಗೊಳಿಸುವುದು ಅವನಿಗೆ ಪ್ರಮುಖ ಅರಿವಿನ ಅಪಶ್ರುತಿಯನ್ನು ಉಂಟುಮಾಡಿರಬೇಕು . ಭಾರತದ ಗಡಿಯ ಹೊರಗೆ ಬ್ರಾಹ್ಮಣ ಪ್ರಾಬಲ್ಯಕ್ಕೆ ಅವಕಾಶ ನೀಡುವುದಕ್ಕಾಗಿ ಜಾಗತಿಕ ಕ್ರಮವಾಗಿ ಜಾತಿಯನ್ನು ಸಾಂಸ್ಥಿಕಗೊಳಿಸುವ ಅಸಂಭವನೀಯ ಕೆಲಸವನ್ನು ಅವರು ಎದುರಿಸುತ್ತಿದ್ದಾರೆ.

ಇನ್ನು ಮುಕ್ತಾಯ  ಮಾಡಲು, , ಬಂಧುತ್ವ ಸಂಬಂಧಗಳು, ಸಾಮಾನ್ಯ ಭಾಷೆ, ಪ್ರದೇಶ, ಸಂಸ್ಕೃತಿ ಮತ್ತು ಇತರ ಪರಂಪರೆಗಳ ಅನುಪಸ್ಥಿತಿಯಲ್ಲಿ ಬ್ರಾಹ್ಮಣರು ತಮ್ಮನ್ನು ಆಳುವ ಸಾಮಾಜಿಕ ವರ್ಗವಾಗಿ ಹೇಗೆ ರೂಪಿಸಿಕೊಂಡಿದ್ದಾರೆ ? ಬ್ರಾಹ್ಮಣನು ಆಳುವ ವರ್ಗವಾಗಲು ಸಾಧ್ಯವಾಗುವಲ್ಲಿ ಬ್ರಾಹ್ಮಣ ಮೇಲರಿಮೆ ಪ್ರಾಭಲ್ಯದ  ಚಿಂತನೆಯ ಪಾತ್ರವೇನು?

………………..

  1. Annihilation of Caste ನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್: ಜಾತಿಗಳ ಭೇದಗಳನ್ನು ನಿಜವಾಗಿಯೂ ಜನಾಂಗದ ಭೇದ ಎಂಬ ಆಲೋಚನೆ ಇಟ್ಟುಕ್ಕೊಂಡು ವಿಭಿನ್ನ ಜಾತಿಗಳನ್ನು ಹಲವಾರು ವಿಭಿನ್ನ ಜನಾಂಗಗಳಂತೆ  ಪರಿಗಣಿಸುವುದು ಸತ್ಯಾಂಶದ ಸಂಪೂರ್ಣ ವಿಕೃತಿಯಷ್ಟೇ . ಪಂಜಾಬಿನ ಬ್ರಾಹ್ಮಣ ಮತ್ತು ಮದ್ರಾಸಿನ ಬ್ರಾಹ್ಮಣರ ನಡುವೆ ಯಾವ ಜನಾಂಗೀಯ ಸಂಬಂಧವಿದೆ? ಬಂಗಾಳದ ಅಸ್ಪೃಶ್ಯ ಮತ್ತು ಮದ್ರಾಸಿನ ಅಸ್ಪೃಶ್ಯರ ನಡುವೆ ಯಾವ ಜನಾಂಗೀಯ ಸಂಬಂಧವಿದೆ? ಮದ್ರಾಸಿನ ಬ್ರಾಹ್ಮಣ ಮತ್ತು ಮದ್ರಾಸಿನ ಪರಯಾ ನಡುವೆ ಯಾವ ಜನಾಂಗೀಯ ವ್ಯತ್ಯಾಸವಿದೆ?ಪಂಜಾಬ್‌ನ ಬ್ರಾಹ್ಮಣ ಮತ್ತು ಪಂಜಾಬ್‌ನ ಚಮಾರ್  ನಡುವೆ ಯಾವ ಜನಾಂಗೀಯ ವ್ಯತ್ಯಾಸವಿದೆ?  ಪಂಜಾಬ್‌ನ ಬ್ರಾಹ್ಮಣನು ಪಂಜಾಬಿನ ಚಮಾರ್ ನಂತೆಯೇ ಜನಾಂಗೀಯವಾಗಿಯೂ, ಮದ್ರಾಸ್‌ನ ಬ್ರಾಹ್ಮಣನು ಜನಾಂಗೀಯವಾಗಿ ಪಂಜಾಬ್‌ನ ಪರಯಾ ನಂತೆಯೇ ಅದೇ ಜನಾಂಗದವನಾಗಿದ್ದಾನೆ ಮತ್ತು ಮದ್ರಾಸಿನ ಬ್ರಾಹ್ಮಣನು ಮದರಾಸಿನ ಪರಯಾ ತರಹ  ಅದೇ ಜನಾಂಗದವರು.
  2. Annihilation of Caste ನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್: ನನ್ನ ಪ್ರಾಂತ್ಯದಲ್ಲಿ ಗೋಲಕ್ ಬ್ರಾಹ್ಮಣರು, ದೇವುರುಖ ಬ್ರಾಹ್ಮಣರು, ಕರಡ ಬ್ರಾಹ್ಮಣರು, ಪಾಲ್ಶೆ ಬ್ರಾಹ್ಮಣರು ಮತ್ತು ಚಿತ್ಪಾವನ ಬ್ರಾಹ್ಮಣರು ಎಲ್ಲರೂ ಬ್ರಾಹ್ಮಣ ಜಾತಿಯ ಉಪವಿಭಾಗಗಳೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಡುವೆ ಚಾಲ್ತಿಯಲ್ಲಿರುವ ಸಮಾಜವಿರೋಧಿ ಮನೋಭಾವವು ಅವರ ಮತ್ತು ಇತರ ಬ್ರಾಹ್ಮಣೇತರ ಜಾತಿಗಳ ನಡುವೆ ಇರುವ ಸಮಾಜವಿರೋಧಿ ಮನೋಭಾವದಂತೆಯೇ ಸಾಕಷ್ಟು ಗುರುತಿಸಲ್ಪಟ್ಟಿದೆ ಮತ್ತು ಅಷ್ಟೇ ಕ್ರೂರವಾಗಿದೆ . ಇದರಲ್ಲಿ ವಿಚಿತ್ರವೇನೂ ಇಲ್ಲ. ಒಂದು ಗುಂಪು “ತನ್ನದೇ ಆದ ಹಿತಾಸಕ್ತಿಗಳನ್ನು” ಹೊಂದಿರುವಲ್ಲೆಲ್ಲಾ ಸಮಾಜ-ವಿರೋಧಿ ಮನೋಭಾವವು ಕಂಡುಬರುತ್ತದೆ, ತನಗೆ ಸಿಕ್ಕಿರುವುದನ್ನು  ರಕ್ಷಿಸಿಕೊಳ್ಳುವ ಉದ್ದೇಶದಿಂದ .ಅದು ಇತರ ಗುಂಪುಗಳೊಂದಿಗೆ ಸಂಪೂರ್ಣ ಸಂವಹನದಿಂದ ಮುಚ್ಚಿಕೊಳ್ಳುತ್ತದೆ.
  3. Annihilation of Caste ಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್: ಭಾರತದಲ್ಲಿ ಬುದ್ದಿ ಜೀವಿಗಳ ವರ್ಗವು ಕೇವಲ ಬ್ರಾಹ್ಮಣ ಜಾತಿಗೆ ಮತ್ತೊಂದು ಹೆಸರಾಗಿದೆ ಎಂದು ನೀವು ಅನುಕಂಪ ತೋರಬಹುದು. ಇವೆರಡೂ ಒಂದೇ ಎಂದು ನೀವು ವಿಷಾದಿಸಬಹುದು; ಬುದ್ದಿ ಜೀವಿಗಳ ಅಸ್ತಿತ್ವವನ್ನು ಒಂದೇ ಜಾತಿಯೊಂದಿಗೆ ಬಂಧಿಸಬೇಕು; ಈ ಬುದ್ದಿ ಜೀವಿಗಳ  ವರ್ಗವು ಆ ಬ್ರಾಹ್ಮಣ ಜಾತಿಯ ಹಿತಾಸಕ್ತಿ ಮತ್ತು ಆಕಾಂಕ್ಷೆಗಳನ್ನು ಹಂಚಿಕೊಳ್ಳಬೇಕು ಮತ್ತು ದೇಶದ ಹಿತಾಸಕ್ತಿಗಳಿಗಿಂತ ಆ ಜಾತಿಯ ಹಿತಾಸಕ್ತಿಯ ಪಾಲಕನೆಂದು ಪರಿಗಣಿಸಿದ ವರ್ಗವಾಗಬೇಕು. ಇದೆಲ್ಲವೂ ಬಹಳ ವಿಷಾದನೀಯವಾಗಿರಬಹುದು. ಆದರೆ ಬ್ರಾಹ್ಮಣರು ಹಿಂದೂಗಳ ಬುದ್ದಿ ಜೀವಿಗಳಾಗಿದ್ದರೆ  ಎಂಬುದು ಸತ್ಯ. ಇದು ಕೇವಲ ಬುದ್ದಿ ಜೀವಿಗಳ ವರ್ಗವಲ್ಲ, ಇದು ಉಳಿದ ಹಿಂದೂಗಳಿಂದ ಬಹಳ ಗೌರವದಿಂದ ಕಂಡುಕೊಳ್ಳುವ  ವರ್ಗವಾಗಿದೆ.

 

  1. * ಉಪನಿಷತ್ತುಗಳಿಂದ ಉಲ್ಲೇಖಗಳು.

…………………….

ಜಾತಿ ವಿರೋಧಿ ಚಳುವಳಿಗಳ ಬೌದ್ಧಿಕ ಸಂಪ್ರದಾಯಗಳು ಯಾವಾಗಲೂ ನನ್ನ ಸ್ಫೂರ್ತಿ. ನನ್ನ ಸಮಕಾಲೀನ ಜಾತಿ ವಿರೋಧಿ ಸ್ನೇಹಿತರು ಮತ್ತು ಬರಹಗಾರರಿಗೆ, ವಿಶೇಷವಾಗಿ ಕುಫೀರ್ ಗೆ  ಜಾತಿಯ ಬಗ್ಗೆ ವ್ಯಾಪಕವಾದ ಚರ್ಚೆಗಳಿಗಾಗಿ ನಾನು ಕೃತಜ್ಞನಾಗಿದ್ದೇನೆ.

ಅನು ರಾಮದಾಸ್ ( Anu Ramdas ) ಅನು ರಾಮದಾಸ್ ರೌಂಡ್ ಟೇಬಲ್ ಇಂಡಿಯಾ, ಸವಾರಿ ಮತ್ತು ಪ್ರಬುದ್ಧ (PJSE) ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು,  ಅವರು ಕಂಪ್ಯೂಟೇಶನಲ್ ಬಯಾಲಜಿಸ್ಟ್ ಆಗಿದ್ದಾರೆ.

ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya)