Features

ದಲಿತ –  ಸರಕು ಅಥವಾ ಚಹರೆ?

ದಲಿತ –  ಸರಕು ಅಥವಾ ಚಹರೆ? ಭಾಗ – ೧  ಗೌರವ್ ಸೋಮ್ ವಂಶಿ ( Gaurav Somwanshi ) ಕನ್ನಡ ಅನುವಾದ – ಶ್ರೀಧರ ಅಘಲಯ ( Sridhara Aghalaya) ನಾನೀಗ ಹೇಳಲು ಹೊರಟಿರುವುದು 2016 ರಲ್ಲಿ ನಾನು ಬರೆದ ಲೇಖನಗಳನ್ನು ಆಧರಿಸಿಕಟ್ಟಿರುವುದು. ಅಲ್ಲದೇ ಇನ್ನಿತರ ವಿಚಾರಗಳ ಮೇಲೂ ನಿರ್ಮಿಸಿದ್ದೇನೆ, ಆದರೆ ಇದರ ಸಾರ ಮುಂಚಿನಂತೆಯೇ ಇದೆ ಹಾಗು ನಾನು ಅವುಗಳಲ್ಲಿ ಹೆಚ್ಚಿನದನ್ನು ಇಲ್ಲಿ ನೇರವಾಗಿ ಉಲ್ಲೇಖಿಸುತ್ತೇನೆ.   ಈ ಲೇಖನಗಳನ್ನು ರೋಹಿತ್ ವೇಮುಲ ಸಾಂಸ್ಥಿಕ ಕೊಲೆಯ ನಂತರ ನಡೆದ ಘಟನೆಗಳನ್ನು ಆದ್ಧರಿಸಿ ಬರೆಯಲಾಗಿತ್ತು. ಆಗ ಹಲವಾರು ರೀತಿಯ ಪ್ರತಿಕ್ರಿಯೆಗಳು ಹೊರ ಹಮ್ಮಿದ್ದವು  ಹಾಗು ಅವುಗಳಲ್ಲಿ ಒಂದು ರೀತಿಯ ನಿರ್ಧಿಷ್ಟ ಪ್ರವೃತ್ತಿ ಇತ್ತು. ಇದು ನನಗೆ ಪ್ರಚೋದನೆಯಾಗಿತ್ತು, ಅಲ್ಲದೆ ಮುಖ್ಯವಾಹಿನಿ ದಲಿತ ಪದ ಮತ್ತು ಜಾತಿಯ  ಬಗ್ಗೆ ಪ್ರಶ್ನೆಗಳಿಗೆ ಸ್ವಾಗತಕ್ಕೆ ಸಿದ್ದವಾಗಿತ್ತು.  ನನ್ನ ಬಾಲ್ಯದಲ್ಲಿ  ಈ ಪದವನ್ನು ನನ್ನ ಕುಟುಂಬದಲ್ಲಿ ಆತ್ಮ ಚರಿತ್ರೆಯ ಬಗ್ಗೆ ಮಾತನಾಡುತ್ತಿದಾಗ  ಮಾತ್ರ ಕೇಳಿದ್ದೆ ಆದರೆ ಹೊರಗೆಲ್ಲೂ ಕೇಳಿರಲಿಲ್ಲ. ಆದರೆ ನಂತರ ಇದು ಸಾರ್ವತ್ರಿಕವಾಯಿತು.   ನಾನು ಈ ಪದವನ್ನು ಹೊರಗಡೆ ಕೇಳಿದಷ್ಟು ನನ್ನ ಮನೆಯಲ್ಲಾಗಲಿ ಅಥವಾ ಸಮುದಾಯದಲ್ಲಾಗಲಿ ಕೇಳಿಲ್ಲ. ಇದು  ನಾವು ಎದುರುಗೊಂಡಾಗ ಹೇಳುವ ಪದವಲ್ಲ.  ನಾವು ಎದುರುಗೊಂಡಾಗ ಹೇಳುವ ಪದ ಜೈ ಭೀಮ್. ಸಾಧಾರಣ ಮನುಷ್ಯರು ಅಂಬೇಡ್ಕರೈಟ್ ಪರಂಪರೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದು. ಹೊರಗಡೆ ದಲಿತ ಎಂದು ಕರೆಯುವುದು ಹೆಚ್ಚಾಗುತ್ತಿತ್ತು. ಹೀಗೆ ಹೊರಹಮ್ಮುತ್ತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಲೇಖನಗಳನ್ನು ಬರೆಯಲಾಗಿತ್ತು.  ಹಿಂದೆ ಮಾಡುತ್ತಿದ್ದ ವಾದಗಳನ್ನು ಹೆಚ್ಚಾಗಿ ಸಾರಂಶದೊಂದಿಗೆ ಮುಂದಿಡುತ್ತಿದ್ದೇನೆ.   ನಾವೆಲ್ಲರೂ ನೆನಪಿಸಿಕೊಳ್ಳಬೇಕಿದ್ದು…

Read More

ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಹೊಸ ವಿಚಾರಗಳು ವಿಮರ್ಶಾ ಕೃತಿಯ ಆಯ್ದ ಭಾಗಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಡಿಗ, ಅನಂತಮೂರ್ತಿ ರಿಲಿಜಿಯಸ್:   ಒಂದು ಕಾಜಾಣದ ಕೂಗು ಇಷ್ಟೆಲ್ಲ ಕೂಗುವಂತೆ ಮಾಡಿತು. “ಸಂದರ್ಶನ ತೀರಾ Formal ಆಗುವುದು ಬೇಡ. ನೀವೆ ಮಾತಾಡುತ್ತಾ ಹೋಗಿ ಸಾರ್” ಎಂದೆವು. ತೇಜಸ್ವಿ ವೈಚಾರಿಕತೆ, ವಿಜ್ಞಾನ ಕುರಿತು ಹೇಳಿದ್ದ ಹಿನ್ನೆಲೆಯನ್ನ ಮತ್ತಷ್ಟು…


ವಾಣಿವಿಲಾಸ ಸಾಗರ ಜಲಾಶಯ – ಡಾ.ವಡ್ಡಗೆರೆ ನಾಗರಾಜಯ್ಯ

ವಾಣಿವಿಲಾಸ ಸಾಗರ ಜಲಾಶಯ  ಡಾ.ವಡ್ಡಗೆರೆ ನಾಗರಾಜಯ್ಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಿಂದ ಪಶ್ಚಿಮ ದಿಕ್ಕಿಗೆ 18 ಕಿಲೋಮೀಟರ್ ದೂರದಲ್ಲಿ ವಾಣಿವಿಲಾಸ ಸಾಗರ ಜಲಾಶಯವಿದೆ. ಈ ಜಲಾಶಯವು 89 ವರ್ಷಗಳ ನಂತರದಲ್ಲಿ ಎರಡನೇ ಸಲ ಭರ್ತಿಯಾಗಿ ತುಂಬಿ ಕೋಡಿಬಿದ್ದು, ಕ್ರೆಸ್ಟ್ ಗೇಟನ್ನೂ ತೆರೆದು ಹರಿದ ನೀರಿನಿಂದ ಹಿರಿಯೂರು ಪಟ್ಟಣದ ಕೆಲವು…


ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ – ಸುಬ್ರಮಣ್ಯಮ್ ಕೆ ವಿ

ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ ಸುಬ್ರಮಣ್ಯಮ್ ಕೆ ವಿ ಪ್ರಶ್ನಿಸುವವರು ಇಲ್ಲವಾಗುತ್ತಿರುವ, ಪ್ರಶ್ನಿಸುತ್ತಿದ್ದವರೂ ನುಣುಚಿಕೊಳ್ಳುತ್ತಿರುವ ಸಂದರ್ಭ ಇದು. ದೃಶ್ಯ ಕಲೆಯಿಂದ ಸಾಮಾಜಿಕ ಬದಲಾವಣೆ ಆಗಬಲ್ಲದೇ? ಆಗಲಿ ಆಗದಿರಲಿ, ಆ ‘ ಆಗುವಿಕೆ ‘ ಯ ದೃಷ್ಟಿ ಧೋರಣೆಗಳ ಅಭಿವ್ಯಕ್ತಿ ಖಂಡಿತ ಸಾಧ್ಯ. ಕಲಾವಿದ, ಕಲಾವಿದೆಯರೆಂದರೆ ಅಭಿವ್ಯಕ್ತಿ : ಕಲಾಸೃಷ್ಟಿ….


ದನಿ: ಪರಮೇಶ್ ಜೋಲಾಡ್

ದೃಶ್ಯ ಕಲಾ  ಬಂಧುಗಳೇ, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ಈಗ ಪ್ರದರ್ಶನಕ್ಕೆ ಲಭ್ಯವಿದೆ. ನಮಸ್ಕಾರ, ವೆಂಕಟಪ್ಪ ಆರ್ಟ್ ಗ್ಯಾಲರಿಯ ಹೆಸರು ಕೇಳಿ ಸುಮಾರು ದಿನಗಳೇ ಆಗಿತ್ತು. ಈ ಗ್ಯಾಲರಿಯ ಮೇಲಿದ್ದ ಖಾಸಗಿಯವರ ಹದ್ದಿನ ಕಣ್ಣಿನಿಂದ ತಪ್ಪಿಸಲು ಕರ್ನಾಟಕದ ಪ್ರತಿಯೊಬ್ಬ ಕಲಾವಿದ ಪಟ್ಟ  ಶ್ರಮ ಶ್ಲಾಘನೀಯ. ಎಲ್ಲವು ಸರಿಯಾಗಿದೆ, ಕರೋನ ಕೂಡ…


ವಿಚಾರ ಕ್ರಾಂತಿಗೆ ಆಹ್ವಾನ – ಕುವೆಂಪು – ವಿಚಾರ ಕ್ರಾಂತಿಯ ಲೇಖನ ಮಾಲೆ

ವಿಚಾರ ಕ್ರಾಂತಿಗೆ ಆಹ್ವಾನ – ಕುವೆಂಪು ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯಲ್ಲಿ ಬರುವ ‘ಪ್ರಶ್ನೆಗೆ ಉತ್ತರಗಳು’ ಎಂಬ ಆಯ್ದ ಭಾಗ (ನನ್ನ ಉದ್ಘಾಟನ ಭಾಷಣವನ್ನು ತುಸು ಎಚ್ಚರಿಕೆಯಿಂದ ಅಧ್ಯಯನ ಮಾಡಿದರೆ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ) ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದ ವಿವಾದಗಳಲ್ಲಿ ಭಾಗವಹಿಸುವ…


ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ

ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಎಲುಬಿನ ಹಂದರದೊಳಗೆ ಕವನ ಸಂಕಲನದ ಮುನ್ನುಡಿಯ ಪೂರ್ಣಪಾಠ – ಸಬಿಹಾ ಭೂಮೀಗೌಡ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಪರಿಚಯವು ಅವರ ‘ನಾನೊಂದು ಮರವಾಗಿದ್ದರೆ’ ಎಂಬ ಕವನದ ಮೂಲಕ ನನಗಾಯಿತು. ಈಗಾಗಲೇ ಹಲವರು ಈ ಕವನದ ಮಹತ್ವವನ್ನು ವಿಶ್ಲೇಷಿಸಿದ್ದಾರೆ. ಹೀಗಾಗಿ ಅದರ ವಿವರಕ್ಕೆ…


ಅಮ್ಮಾ, ಅಂಬೇಡ್ಕರಾ….

ಅಮ್ಮಾ, ಅಂಬೇಡ್ಕರಾ…. ಕಾಗದಗಳ ಮೇಲೆ ಮಾತ್ರವಲ್ಲ ಪುಸ್ತಕಗಳಲ್ಲಿ ಮಾತ್ರವಲ್ಲ ಪಕ್ಕೆಲುಬಿನ ಕೆಳಗೆ ಪ್ರವಹಿಸುವ ಜೀವನದಿಗಳ ಮೇಲೆ ನಿನ್ನ ಹೆಸರನ್ನು ಬರೆದುಕೊಳ್ಳುತ್ತೇವೆ ಕಣ್ಣರೆಪ್ಪೆಗಳ ಕೆಳಗೆ ಅರಳುವ ಹೂವಿನಂತಹ ಆಕಾಂಕ್ಷೆಗಳ ಮೇಲೆ ನಿನ್ನ ಹೆಸರನ್ನೆ ಬರೆದುಕೊಳ್ಳುತ್ತೇವೆ ಸಜೀವ ದಹನವಾದ ದಲಿತಕೇರಿಗಳ ಬೂದಿಯೊಳಗಿಂದ ಜಿಗಿದು ಬರುವ ಫಿನಿಕ್ಸ್ ಪಕ್ಷಿಯ ಕೊರಳಿನ ಮೇಲೆ ನಿನ್ನ…